ವೀಳ್ಯದೆಲೆಯ ಬಹೂಪಯೋಗಗಳೇನು ಗೊತ್ತಾ..?

Video Description

ವೀಳ್ಯದೆಲೆ ಎಂಬ ಹಸಿರು ಚಿನ್ನ ವೀಳ್ಯದೆಲೆಯ ಬಹೂಪಯೋಗಗಳೇನು ಗೊತ್ತಾ..? ವೀಳ್ಯದೆಲೆ ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಮೊದಲು ಎಲೆ ಅಡಿಕೆ ಮತ್ತು ಸುಣ್ಣವನ್ನು ಮಾತ್ರವೇ ಸೇವಿಸುತ್ತಿದ್ದಾಗ ವೀಳ್ಯ ಎಂದು ಪರಿಗಣಿಸಲ್ಪಡುತ್ತಿದ್ದ ಈ ಅಭ್ಯಾಸ ಬರಬರುತ್ತಾ ಹೊಗೆಸೊಪ್ಪು ಮತ್ತು ಇತರ ಸುಗಂಧಗಳನ್ನು ಸೇರಿಸಿಕೊಳ್ಳುವ ಮೂಲಕ ಅನಾರೋಗ್ಯಕರ ಆಹಾರವಾಗಿ ಬದಲಾಗಿದೆ. ವೀಳ್ಯದೆಲೆಯ ಸೇವನೆಗೆ ಕನಿಷ್ಠ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ಮಾತ್ರವಲ್ಲ, ಶ್ರೀಲಂಕಾದ ಮಹಾವಸ್ಮ ಎಂಬ ಪುರಾತನ ಐತಿಹಾಸಿಕ ಗ್ರಂಥದಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿದೆ. ಗರ್ಭಿಣಿಯರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಬಾಣಂತಿಯರು ಎಲೆಯನ್ನು ಸೇವಿಸುವ ಮೂಲಕ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ. ವಿಶೇಷವಾಗಿ ಬಾಯಿಯ ಆರೋಗ್ಯ ಎಲೆಯ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಬಾಯಿಯಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಬಾಯಿಯ ದುರ್ವಾಸನೆಯಿಂದ ಮುಕ್ತಿ ನೀಡುವುದು, ಒಸಡುಗಳಲ್ಲಿ ಒಸರುವ ರಕ್ತವನ್ನು ನಿಲ್ಲಿಸುವುದು ಮೊದಲಾದ ಪ್ರಯೋಜನಗಳಿವೆ. ಒಂದು ವೇಳೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ವೀಳ್ಯದೆಲೆಗಳನ್ನು ಸೇವಿಸಿ. ಇದೊಂದು ನೈಸರ್ಗಿಕ ಮೂತ್ರವರ್ಧಕವಾಗಿದೆ. ಸಮಪ್ರಮಾಣದಲ್ಲಿ ನೀರು ಬೆರೆಸಿದ ಒಂದು ಲೋಟ ಹಾಲಿಗೆ ಒಂದು ವೀಳ್ಯದೆಲೆ ಎಂಬ ಪ್ರಮಾಣದಲ್ಲಿ ಎಲೆಯನ್ನು ಅಗಿದು ನೀರುಹಾಲನ್ನು ಕುಡಿದರೆ ದೇಹದ ನಿರ್ಜಲೀಕರಣದ ತೊಂದರೆ ಇಲ್ಲವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಗಳನ್ನು ದೇಹದಿಂದ ನಿವಾರಿಸುವ ಮೂಲಕ ಹಲವು ಬಗೆಯ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ವೀಳ್ಯದೆಲೆ ಉತ್ತಮ ಮೂತ್ರವರ್ಧಕವಾಗಿರುವ ಜೊತೆಗೇ ಮಲವಿಸರ್ಜನೆಯೂ ಸುಲಭವಾಗಿಸುವ ಮೂಲಕ ಮಲಬದ್ಧತೆಯಿಂದಲೂ ರಕ್ಷಿಸುತ್ತದೆ. ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ತುಂಬಾ ಉತ್ತಮ. ಇದರ ಸೇವನೆಯಿಂದ ಒಸಡುಗಳಲ್ಲಿ ಒಸರುತ್ತಿರುವ ರಕ್ತ ತಕ್ಷಣವೇ ನಿಲ್ಲುತ್ತದೆ. ಒಂದು ವೇಳೆ ಹಲವು ಕಡೆಗಳಿಂದ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ಕೆಲವು ವೀಳ್ಯದೆಲೆಗಳನ್ನು ನೀರಿನಲ್ಲಿ ಬೇಯಿಸಿ, ತಣಿಸಿ ಅರೆದು ಲೇಪನವನ್ನು ರಕ್ತ ಜಿನುಗುತ್ತಿರುವೆಡೆ ದಪ್ಪನಾಗಿ ಹಚ್ಚಿಕೊಂಡು ರಾತ್ರಿಯಿಡೀ ಬಿಟ್ಟರೆ ಮರುದಿನ ಗುಣವಾಗಿರುತ್ತದೆ. ಉರಿಯೂತದ ಕಾರಣದಿಂದ ಉಂಟಾಗಿರುವ ನೋವಿನಿಂದ ಕೂಡಿದ ಮೊಡವೆ, ಸಂಧಿವಾತ ಮೊದಲಾದವುಗಳಿಗೆ ಎಲೆಯನ್ನು ಅರೆದು ಹಚ್ಚಿಕೊಳ್ಳುವ ಮೂಲಕ ಉತ್ತಮ ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲದ ನೈಸರ್ಗಿಕ ಉಪಶಮನ ದೊರಕುತ್ತದೆ. ಕೆಮ್ಮಿನ ನಿವಾರಣೆಗೆ ವೀಳ್ಯದೆಲೆ ಒಂದು ಉತ್ತಮವಾದ ಮನೆಮದ್ದಾಗಿದೆ. ಅಲ್ಲದೇ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೂ ಈ ಎಲೆಗಳು ಉತ್ತಮ ಪರಿಹಾರ ಒದಗಿಸುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.