ತಮಿಳುನಾಡಿನ ಬೆಸ್ಟ್ ಟೂರಿಸ್ಟ್ ಸ್ಪಾಟ್..!

Video Description

ಕಣ್ಮನಸೆಳೆಯುವ ತಮಿಳು ನಾಡಿನ ಟೂರಿಸ್ಟ್ ಸ್ಪಾಟ್‌ಗಳು ತಮಿಳುನಾಡಿನ ಬೆಸ್ಟ್ ಟೂರಿಸ್ಟ್ ಸ್ಪಾಟ್..! ಇನ್ನೇನು ಹಬ್ಬಗಳ ಸೀಸನ್ ಆರಂಭವಾಗಿಬಿಟ್ಟಿದೆ ಜೊತೆಗೆ ರಜಾದಿನಗಳು ನಿಮ್ಮ ಖುಷಿಗೆ ಮತ್ತಷ್ಟು ಇಂಬು ಕೊಡುವುದು ಖಂಡಿತ. ನೀವು ರಜಾದಿನಗಳಲ್ಲಿ ಕುಟುಂಬ ಸಮೇತ ಯಾವುದಾದರೂ ಸ್ಥಳಗಳಿಗೆ ಭೇಟಿ ಕೊಡಬೇಕು ಎಂಬ ಯೋಜನೆ ಹಾಕಿದ್ದರೆ ನಮ್ಮ ಇಂದಿನ ಲೇಖನ ನಿಮಗೆ ಸಾಥ್ ನೀಡುವುದು ಖಂಡಿತ. ಹೌದು ಈ ಬಾರಿಯ ರಜಾದಿನದ ಪ್ರವಾಸವನ್ನು ನೀವು ತಮಿಳುನಾಡಿನ ಕಡೆಗೆ ಹಾಕಿದ್ದೇ ಆಗಿದಲ್ಲಿ ಅಲ್ಲೊಂದಿಷ್ಟು ಕಣ್ಮನ ಸೆಳೆಯುವ ಪ್ರೇಕ್ಷಣೀಯ ಸ್ಥಳಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡಲಿದ್ದೇವೆ. ತಮಿಳು ನಾಡು ಕೂಡ ಕಣ್ಣಿಗೆ ಆಕರ್ಷಣೀಯ ಎಂದೆನಿಸುವ ಕೆಲವೊಂದು ಪ್ರೇಕ್ಷಣೀಯ ಸ್ಥಳಗಳ ತವರೂರು ಎಂದೆನಿಸಿದ್ದು ನೀವು ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ತಾಣಗಳಿಗೆ ಭೇಟಿ ನೀಡಬಹುದು ಹಾಗಾದರೆ ಬನ್ನಿ ಆ ಜಾಗಗಳು ಯಾವುದು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ. ಪಾಂಡಿಚೇರಿ ಕಡಲ ತೀರವನ್ನು ಇಷ್ಟಪಡುವವರಿಗೆ ಪಾಂಡಿಚೇರಿ ಹೇಳಿ ಮಾಡಿಸಿದ ಸ್ಥಳವಾಗಿದೆ. ಫ್ರೆಂಚ್ ಸಂಸ್ಕೃತಿಯ ಆಳವಾದ ಬೇರು ಇಲ್ಲಿ ಬೀಡುಬಿಟ್ಟಿದೆ ಎಂದೇ ಹೇಳಬಹುದು. ಈ ಊರಿನ ವಿಶೇಷವೆಂದರೆ ಶುಚಿಯಾದ, ವಿಸ್ತಾರವಾದ ರಸ್ತೆಗಳು. ಮತ್ತೆ ಇಲ್ಲಿನ ರಸ್ತೆಗಳು ಈಗಲೂ ಫ್ರಾನ್ಸ್ ಹೆಸರುಗಳನ್ನು ಒಳಗೊಂಡಿದೆ ಎಂದರೆ ಅದರ ಪ್ರಭಾವ ಎಷ್ಟು ಅನ್ನೋದು ನಿಮಗೆ ತಿಳಿಯಬಹುದು. ಉದಾಹರಣೆಗೆ ಸೆಂಟ್ ಲೂಯಿಸ್ ಸ್ಟ್ರೀಟ್, ಸೆಂಟ್ ತೆರೇಸಾ, ಕ್ಯಾಥೆಡ್ರಲ್, ಮಿಷನ್, ಕ್ಸೇವಿಯರ್ ಸ್ಟ್ರೀಟ್, ರೂ ರೊಮನ್ ರೊಲ್ಯಾಂಡ್ ಸ್ಟ್ರೀಟ್, ರೂ ಡಿ ಲ ಮರೀನ್, ರೂ ಡಿ ಲ ಕ್ಯಾಸೆಮೆ, ಫ್ರಾನ್ಸಿಸ್ ಮಾರ್ಟಿನ್, ಡೂಮಾಸ್ ಮುಂತಾದವನ್ನು ಹೆಸರಿಸಬಹುದು. ಪುದುಚೇರಿ ಇಷ್ಟೊಂದು ನಿರ್ಮಲವಾಗಿರಲು ಕಾರಣ ಇಲ್ಲಿನ ಜನರ ಸೈಕಲ್ ಪ್ರೀತಿ ಅನಿಸುತ್ತದೆ. ಏಕೆಂದರೆ ಇಲ್ಲಿ ಸ್ಥಳೀಯರಂತೆ ವಿದೇಶೀಯರೂ ತಮ್ಮ ದಿನನಿತ್ಯದ ಸಂಚಾರಕ್ಕೆ ಸೈಕಲ್ಲನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಹಾಗಾಗಿ ಇಲ್ಲಿ ಪ್ರತಿಯೊಂದು ರಸ್ತೆ, ಗಲ್ಲಿಗಳಲ್ಲಿ ಸೈಕಲ್‌ಗಳದೇ ಕಾರುಬಾರು! ಮುದುಮಲೈ ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಅಭಯಾರಣ್ಯ ನಿಜವಾಗಿಯೂ ಸಂತಸ ನೀಡುವ ಒಂದು ಸುಂದರ ರಾಷ್ಟ್ರೀಯ ಉದ್ಯಾನವಾಗಿದೆ. ಇಲ್ಲಿ ಭೇಟಿ ನೀಡಿದಾಗ ಮಾತ್ರವೆ ಆ ಸಂತಸದ ಅನುಭೂತಿಯಾಗುವುದು ಖಂಡಿತ. ಅಲ್ಲದೆ, ಇದು ಸ್ಥಿತವಾಗಿರುವ ಸ್ಥಳವನ್ನು ಗಮನಿಸಿದಾಗ, ಇದು ಎಂತಹ ರೋಚಕ ಜಾಗದಲ್ಲಿ ನೆಲೆಸಿದೆ ಅನ್ನಿಸುವುದು ಸಹಜ. ಹಲವು ಪ್ರಾಣಿ-ಪಕ್ಷಿ, ಜೀವ-ಜಂತು ಹಾಗೂ ಸಸ್ಯ ಸಂಪತ್ತನ್ನೊಳಗೊಂಡ, ಪಶ್ಚಿಮಘಟ್ಟ ಹಾಗೂ ಪೂರ್ವಘಟ್ಟ ಒಂದಕ್ಕೊಂದು ಭೇಟಿ ಮಾಡುವ ಸ್ಥಳದಲ್ಲಿ ನೆಲೆಸಿರುವ, 1932 ರಲ್ಲಿ ಸ್ಥಾಪಿಸಲ್ಪಟ್ಟಿರುವ ಮುದುಮಲೈ ಅಭಯಾರಣ್ಯದ ಪ್ರವಾಸಿ ತಾಣವಾಗಿದೆ ಧನುಷ್ಕೋಟಿ ರಾಮೇಶ್ವರನಿಂದ 20. ಕಿಮೀ ದೂರದಲ್ಲಿರುವ ಪಂಬನ್ ದ್ವೀಪದಲ್ಲಿ ಧನುಷ್ಕೋಟಿ ಇದೆ. ಇದು ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಗಡಿ ಎಂದೆನಿಸಿದೆ. ಸಮಾರು ಐನೂರಕ್ಕೂ ಹೆಚ್ಚಿನ ಮೀನುಗಾರರು ಇಲ್ಲಿ ವಾಸವಾಗಿದ್ದಾರೆ. ಭಾರತ ಹಾಗೂ ಶ್ರೀಲಂಕಾದ ಅತಿ ಸಣ್ಣಗಡಿ ಪ್ರದೇಶವಿದು. 15 ಕಿ.ಮೀ ಉದ್ದದ ಕಡಲ ತಟವೂ ಇದೆ. ಪ್ರವಾಸಿಗರು ಲಾರಿ ಜೀಪುಗಳಲ್ಲಿ ಬಂದು ಇಲ್ಲಿಗೆ ಭೇಟಿ ನೀಡುತ್ತಾರೆ. ಹೊಗೇನಕಲ್ ಹೊಗೇನಕಲ್ ಜಲಪಾತವು ತಮಿಳುನಾಡಿನ ಧರ್ಮಪುರಿಜಿಲ್ಲೆಯ ಕಾವೇರಿ ನದಿಯ ಹತ್ತಿರ ಇದೆ, ಬೆಂಗಳೂರಿನಿಂದ ಸುಮಾರು 180 ಕಿ ಮೀ ದೂರದಲ್ಲಿದೆ. ಇದನ್ನು ಭಾರತದ ನಯಾಗರ ಜಲಪಾತವೆಂದೆ ಕರೆಯುತ್ತಾರೆ. ವಿಶೇಷ ಔಷಧೀಯ ಗುಣಗಳಿರುವ ಇಲ್ಲಿನ ನೀರು, ವಿಶೇಷ ಹಾಯಿದೋಣಿ ಸವಾರಿಗೂ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಕಾರ್ಬೊನೇಟ್ ಕಲ್ಲುಗಳು ಇಡೀ ಪ್ರಪಂಚದಲ್ಲಿ ತುಂಬಾ ಹಳೆಯದೆಂದು ವಿಶ್ಲೆಷಿಸಲಾಗಿದೆ. ಬೇಸಿಗೆಯ ಸಮಯದಲ್ಲಿ ಪ್ರಬಲವಾದ ನೀರಿನ ಪ್ರವಾಹ ಇಲ್ಲದಿರುವುದರಿಂದ ವಿಶೇಷ ಹಾಯಿದೋಣಿಯು, ಪ್ರವಾಸಿಗರನ್ನು ಸವಾರಿಗೆ ಕರೆದುಕೊಂಡು ಹೋಗುತ್ತದೆ. ಕನ್ಯಾಕುಮಾರಿ ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. 'ಕನ್ಯಾಕುಮಾರಿ' ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ವೇಲಂಗಣ್ಣಿ ವೇಲಾಂಕಣ್ಣಿ ಚರ್ಚ್ ಅಥವಾ 'ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್', ವೇಲಾಂಕಣ್ಣಿಯೆಂಬ ಪವಿತ್ರ ಪಟ್ಟಣದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಹದಿನಾರನೆಯ ಶತಮಾನದಲ್ಲಿ ಒಂದು ಹುಲ್ಲು ಗುಡಿಸಲಿನ ಚಾಪೆಲ್ ಆಗಿ ಆರಂಭಗೊಂಡ ಈ ಚರ್ಚ್ ಮುಂದೆ 1771ರಲ್ಲಿ ಪಾರಿಶ್ ಚರ್ಚ್ ಆಗಿ ರೂಪಾಂತರಗೊಂಡಿತು. ನಂತರ 1962 ರಲ್ಲಿ 23ನೇ ಪೋಪ್ ಜಾನ್ರ್ವರಿಂದ ಮೈನರ್ ಬೆಸಿಲಿಕಾದ ಸ್ಥಾನಮಾನವನ್ನು ಪಡೆದುಕೊಂಡಿತು. ಈ ಚರ್ಚ್ ಬೆಳಗ್ಗೆ ಐದರಿಂದ ರಾತ್ರಿ ಒಂಭತ್ತರವರೆಗೆ ತೆರೆದಿರುತ್ತದೆ. ಇಲ್ಲಿ ಪ್ರತಿದಿನವು ತಮಿಳು, ಮಲಯಾಳಂ ಮತ್ತು ಇಂಗ್ಲೀಷಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ನೊವೆನ ಪ್ರಾರ್ಥನೆಗಳು, ರೋಸರಿ ಮತ್ತು ಸಂಜೆ ಆರಕ್ಕೆ ಸಂಜೆ ಪ್ರಾರ್ಥನೆಗಳನ್ನು ಇಲ್ಲಿ ನಿರ್ವಹಿಸಲಾಗುತ್ತದೆ. ಊಟಿ ಊಟಿಯು ನೀಲ ಬೆಟ್ಟಗಳೆಂದೂ ಕರೆಯಲ್ಪಡುವ ನೀಲಗಿರಿ ಬೆಟ್ಟಗಳ ಮಧ್ಯೆ ವಿಶಾಲವಾಗಿ ಚಾಚಿಕೊಂಡಿದೆ. ಈ ಹೆಸರು ಆ ಪ್ರದೇಶದಲ್ಲಿ ಆವರಿಸಿರುವ ನೀಲಗಿರಿ ಮರಗಳಿಂದ ಉಂಟಾದ ನೀಲಿ ಹೊಗೆಯಂಥ ಮುಸುಕಿನಿಂದ ಬಂದಿರಬಹುದೇ ಅಥವಾ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ ಹೂಗಳಿಂದಾಗಿ ಬಂದಿರಬಹುದೇ ಎಂಬುದು ತಿಳಿದಿಲ್ಲ. ರಾಷ್ಟ್ರದ ಇತರ ಯಾವುದೇ ಪ್ರದೇಶದಂತಿಲ್ಲದೆ, ಊಟಿಯು ಯಾವುದೇ ರಾಜ್ಯದ ಅಥವಾ ಸಾಮ್ರಾಜ್ಯದ ಭಾಗವಾಗಿತ್ತು ಎಂದು ಸೂಚಿಸಲು ಯಾವ ಐತಿಹಾಸಿಕ ಆಧಾರಗಳೂ ಕಂಡುಬಂದಿಲ್ಲ. ಕೊಡೈಕನಾಲ್ ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿ ಬೆಟ್ಟದ ಮೇಲಿರುವ ಒಂದು ಊರು. ಸಮುದ್ರ ಮಟ್ಟದಿಂದ ಎತ್ತರದಲ್ಲಿರುವುದರಿಂದ ಗಿರಿಧಾಮವಾಗಿ ಪ್ರಸಿದ್ಧ. ತಮಿಳು ಭಾಷೆಯಲ್ಲಿ ಇದರ ಅರ್ಥ "ಕಾಡಿನ ಕೊಡುಗೆ" ಮಲಯಾಳಂ ಭಾಷೆಯಲ್ಲಿ ಕೊಡೈಕೆನಾಲ್ ಎಂದರೆ "ಬೆಟ್ಟ ತಾಣದ ರಾಜಕುಮಾರಿ" ಎಂದು ಅರ್ಥ. ಬೇಸಿಗೆಯ ಬಿಸಿಲು ಮತ್ತು ಆರೋಗ್ಯ ಸಂಬಂಧಿ ತೊಂದರೆಗಳಿಂದ ಪಾರಾಗುವ ಆಶ್ರಯ ತಾಣವಾಗಿ ಕೊಡೈಕೆನಾಲ್ ೧೮೪೫ ರಲ್ಲಿ ಸ್ಥಾಪನೆಗೊಂಡಿತು. ಸ್ಥಳೀಯ ಆರ್ಥಿಕ ಸ್ಥಿತಿಯು ಹೆಚ್ಚಾಗಿ ಪ್ರವಾಸಿಗರ ಆದರಾತಿಥ್ಯ ಉದ್ದಿಮೆಯನ್ನು ಅವಲಂಬಿಸಿದೆ. ವಾಲ್‌ಪರೈ ಆಕಾಶದೆತ್ತರ ಚಾಚಿಕೊಂಡ ಪರ್ವತಶ್ರೇಣಿ. ದಟ್ಟ ಹಸಿರಿನ ಅನನ್ಯ ಸೌಂದರ್ಯ, ಸ್ವಚ್ಛಂದವಾಗಿ ವಿಹರಿಸುವ ವೈವಿದ್ಯಮಯ ಪಕ್ಷಿಗಳು, ತಂಪುತಂಪಾದ ಕೊಳಗಳು ತಾಜಾತನದ ಅನುಭವ ನೀಡುತ್ತದೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿರುವ ವಾಲ್ಪರೈ ಗಿರಿಧಾಮ. ಸುತ್ತೆಲ್ಲ ಕಾಡು, ದಟ್ಟ ಮಂಜು, ಗಾಢ ಮೌನ, ಮುಸ್ಸಂಜೆಯ ತಂಪಿನ ಹವೆ, ನಡುನಡುವೆ ಸುಳಿಸುಳಿದು ಬರುವ ಮೋಡಮಾಲೆ ಮರೆಯಲಾಗದ ಅನುಭವ ನೀಡುತ್ತವೆ. ಮನಕ್ಕೆ ಮುದ ನೀಡುವ ಜಲಪಾತಗಳು, ಅಣೆಕಟ್ಟುಗಳ ವೀಕ್ಷಣೆ, ಬಾಲಾಜಿ ಮಂದಿರ, ಗಣಪತಿ ಮಂದಿರ ಕೂಡ ಇಲ್ಲಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.