ಎಣ್ಣೆ ಸ್ನಾನದ ಮಹತ್ವ ನಿಮಗೆಷ್ಟು ಗೊತ್ತು..?

Video Description

ಎಣ್ಣೆ ಸ್ನಾನ ಮಾಡುವುದರ ಹಿಂದಿರುವ ಮಹತ್ವವೇನು? ಎಣ್ಣೆ ಸ್ನಾನದ ಮಹತ್ವ ದೇಹಕ್ಕೆ ಎಣ್ಣೆ ಹಚ್ಚುವದು ಒಂದು ಬಗೆಯ ಸ್ಪರ್ಷ ಚಿಕಿತ್ಸೆ. ದುಡಿದು ದಣಿದ ಶರೀರದ ಅಂಗಾಗಳನ್ನು ನೀವಿ ಬಿಸಿಯಾಗಿಸಿ ಒಂದು ಬಗೆಯ ತಾಡನ ಕ್ರಿಯೆಯ ಮೂಲಕ ನರನಾಡಿಗಳಿಗೆ ಪುನಶ್ಚೇತನ್ಯ ನೀಡುವ ಅತ್ಯುತ್ತಮ ವಿಧಾನ. ಇದು. ಅಭ್ಯಂಗ ಸ್ನಾನದ ಇಂದಿನ ಯಾಂತ್ರಿಕ ಜೀವನದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಉತ್ತಮ ಪರಿಹಾರ ದೊರೆತಂತಾಗುತ್ತದೆ. ಆಯುರ್ವೇದ ಪದ್ಧತಿಯ ಚಿಕಿತ್ಸೆಯಲ್ಲಿ ಎಣ್ಣೆ ಸ್ನಾನಕ್ಕೆ ವಿಶೇಷ ಮಹತ್ವ. ಆಯುರ್ವೇದದ ಪ್ರಮುಖ ಆಕರ ಗ್ರಂಥಗಳಾದ ಸುಶ್ರುತ ಸಂಹಿತ ಅಷ್ಟಾಂಗ ಹೃದಯ ಚರಕ ಸಂಹಿತೆಯ 'ಸೂತ್ರ ಸ್ನಾನ'ದಲ್ಲಿ ಎಣ್ಣೆ ಸ್ನಾನದ ಬಗ್ಗೆ ಪ್ರಸ್ತಾಪವಿದೆ. ಸ್ನಾನ ಮಾಡುವ ಮೊದಲು ಎಣ್ಣೆ ಹಚ್ಚಿಕೊಳ್ಳುವುದರಿಂದ ಪಿಂಡ ದಲ್ಲಿನ ಚೇತನದ ಪ್ರವಾಹಕ್ಕೆ ಅಭ್ಯಂಗತ್ವ ಅಂದರೆ ಅಖಂಡತ್ವವು ಪ್ರಾಪ್ತಿ ಯಾಗುತ್ತದೆ. ಸ್ನಾನ ಮಾಡುವ ಮೊದಲು ಶರೀರಕ್ಕೆ ಎಣ್ಣೆ ಹಚ್ಚುವುದರಿಂದ ನರನಾಡಿಗಳು ಹಾಗೂ ದೇಹದಲ್ಲಿನ ಟೊಳ್ಳು ಭಾಗಗಳು ಜಾಗೃತಾವಸ್ಥೆಗೆ ಬಂದು ಪಂಚಪ್ರಾಣಗಳನ್ನು ಕಾರ್ಯನಿರತಗೊಳಿಸುತ್ತವೆ. ಪಂಚಪ್ರಾಣಗಳ ಜಾಗೃತಿಯಿಂದ ದೇಹದಲ್ಲಿನ ನಿರುಪಯುಕ್ತ ವಾಯುವು ತೇಗು, ಆಕಳಿಕೆ ಮುಂತಾದ ಮಾಧ್ಯಮಗಳಿಂದ ಹೊರ ಬೀಳುತ್ತದೆ. ಇದರಿಂದಾಗಿ ದೇಹ ದಲ್ಲಿನ ನರನಾಡಿಗಳು ಅದೇ ರೀತಿ ಆಂತರಿಕ ಟೊಳ್ಳು ಭಾಗಗಳು ಚೈತನ್ಯವನ್ನು ಗ್ರಹಿಸಲು ಸಂವೇದನಾಶೀಲವಾಗುತ್ತವೆ. ಈ ನಿರುಪಯುಕ್ತ ವಾಯುವು ಅಥವಾ ಘನೀಕೃತವಾದ ಉಷ್ಣತೆಯು ನಿರುಪಯುಕ್ತ ವಾಯುವಿನ ರೂಪದಲ್ಲಿ ಕೆಲವೊಮ್ಮೆ ಲಹರಿಗಳ ರೂಪದಲ್ಲಿ ಕಣ್ಣು, ಕಿವಿ, ಮೂಗು ಅದೇ ರೀತಿ ಚರ್ಮದ ರಂಧ್ರಗಳ ಮಾಧ್ಯಮದಿಂದ ಹೊರಬರುತ್ತದೆ. ಆದುದರಿಂದ ಎಣ್ಣೆ ಹಚ್ಚಿದ ನಂತರ ಕೆಲವೊಮ್ಮೆ ಕಣ್ಣು ಮತ್ತು ಮುಖ ಕೆಂಪಾಗುತ್ತದೆ. ಎಣ್ಣೆಯನ್ನು ಹಚ್ಚುವಾಗ ಚರ್ಮದ ಮೇಲಾಗುವ ಘರ್ಷಣೆಯಿಂದ ದೇಹದಲ್ಲಿನ ಸೂರ್ಯನಾಡಿಯು ಜಾಗೃತವಾಗಿ ಪಿಂಡದಲ್ಲಿನ ಚೇತನವನ್ನೂ ಕಾಂತಿಯುಕ್ತವನ್ನಾಗಿಸುತ್ತದೆ. ಈ ಕಾಂತಿಯು ದೇಹದಲ್ಲಿನ ರಜತಮಾತ್ಮಕ ಲಹರಿಗಳನ್ನು ವಿಘಟಿಸುತ್ತದೆ. ಇದು ಒಂದು ವಿಧದ ಶುದ್ದೀಕರಣ ಪ್ರಕ್ರಿ ಯೆಯೇ ಆಗಿದೆ. ಚೈತನ್ಯದ ಸ್ತರದಲ್ಲಾದ ಶುದ್ದೀಕರಣ ಪ್ರಕ್ರಿಯೆಯಿಂದ ಪಿಂಡದಲ್ಲಿನ ಚೇತನದ ಪ್ರವಾಹಕ್ಕೂ ಅಭ್ಯಂಗತ್ತ್ವ ಪ್ರಾಪ್ತವಾಗುವುದರಿಂದ ಜೀವದ ಪ್ರತಿಯೊಂದು ಕೃತಿಯು ಸಾಧನೆಯೆಂದೇ ಆಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.