ರಾಗಿ ಮುದ್ದೆ ನಿಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ಏನು ಗೊತ್ತ ?

Video Description

ರಾಗಿಯಲ್ಲಿದೆ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಅತ್ಯುನ್ನತ ಗುಣಗಳು ರಾಗಿಯ ಬಹುಗುಣಗಳೇನು..? ರಾಗಿಯ ಕಾಳು ಉಳಿದ ಆಹಾರ ಧಾನ್ಯಗಳಿಗಿಂತ ಸಣ್ಣದಾಗಿರುತ್ತದೆ ಮತ್ತು ಗಟ್ಟಿಯಾಗಿರುತ್ತದೆ. ಕೆಂಪು ಇಲ್ಲವೇ ಕಂದು ಬಣ್ಣದಿಂದ ಕೂಡಿರುವ ರಾಗಿಯಲ್ಲಿ ಪ್ರೊಟೀನಗ್ .ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ನಾರು, ಸೋಡಿಯಂ . ಪೊಟ್ಯಾಶಿಯಂ. ಗಂಧಕ ಅಂಶಗಳು ಇವೆ. ಈ ರಾಗಿ ಹೆಚ್ಚಿನವರಿಗೆ ಇಷ್ಟ ವಾಗುವುದಿಲ್ಲ ಏಕೆಂದರೆ ಅದು ಸಪ್ಪೆಯಾಗಿರುತ್ತದೆ.ಕಪ್ಪು ಬಣ್ಣದಲ್ಲಿ ಇದೆ ಎಂದು ಯಾರು ಅಷ್ಟು ಇಷ್ಟ ಪಡುವುದಿಲ್ಲ ಆದರೆ ಹಿಂದಿನ ಕಾಲದ ಜನರಿಗೆ ರಾಗಿ ಬಿಟ್ಟರೆ ಬೇರೆ ಆಹಾರಗಳೇ ಬೇಡವಾಗಿತ್ತು.ಅದಕ್ಕಾಗಿ ಅವರು ತುಂಬಾ ಗಟ್ಟಿಮುಟ್ಟಾಗಿ. ಯಾವುದೇ ರೋಗಗಳು ಇಲ್ಲದೆ ತುಂಬಾ ಆರೋಗ್ಯವಾಗಿದ್ದರು. ರಾಗಿ ಹಿಟ್ಟು ಮತ್ತು ಅರಿಶಿನವನ್ನು ಬೆರೆಸಿ ಸ್ವಲ್ಪ ಸ್ವಲ್ಪ ಕೆಂಡದ ಮೇಲೆ ಹಾಕುವಾಗ ಹೊಗೆ ಹೇಳುತ್ತದೆ ಈ ಹೊಗೆಯನ್ನು ತೆಗೆದುಕೊಂಡರೆ ನೆಗಡಿ ಕಡಿಮೆಯಾಗುತ್ತದೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ ರಾಗಿ.ಇದು ತುಂಬಾ ವಿಟಮಿನ್ಗಳನ್ನು ಒಳಗೊಂಡಿರುವ ಆಹಾರ. ಇದನ್ನು ಬಳಸಿ ಒಟ್ಟರಾಗಿಹಿಟ್ಟು ತಾಯಾರಿಸಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.ಮಕ್ಕಳು ತುಂಬಾ ಗಟ್ಟಿಯಾಗಿ ಶಕ್ತಿಯಿಂದ ಇರುತ್ತಾರೆ. ಒತ್ತಡಗಳಿಂದ ಮನಸ್ಸು ನೊಂದಿದರೆ ಮನಸ್ಸಿಗೆ ನೆಮ್ಮದಿ ಸಿಗಲು ನಿಮ್ಮ ಆಹಾರಗಳ ಜೊತೆ ರಾಗಿಯನ್ನು ಮಿಶ್ರಣ ಮಾಡಿಕೊಳ್ಳಿ. ರಾಗಿಯೂ ಬೇಸಿಗೆಯಲ್ಲಿ ಉತ್ತಮ ಆಹಾರ ಇದರಲ್ಲಿ ತಂಪು ಮಾಡುವ ಎಲ್ಲ ಶಕ್ತಿಯು ಇದೆ ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚು ರಾಗಿ ಸೇವಿಸಿ. ರಾಗಿಯಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಗಳು ಇದ್ದು ಇದು ದೇಹವನ್ನು ಬಲಪಡಿಸುತ್ತದೆ.ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ದಿನನಿತ್ಯ ರಾಗಿಯ ಗಂಜಿ ಮಾಡಿಕೊಂಡು ಮಜ್ಜಿಗೆ ಅಥವಾ ಮೊಸರು ಸೇರಿಸಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ ಜೊತೆಗೆ ಯಾವುದೇ ರೀತಿಯ ರೋಗಗಳು ಹತ್ತಿರ ಸುಳಿಯುವುದಿಲ್ಲ. ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆ ಹೆಚ್ಚಿಸಿಕೊಳ್ಳಲು ತಾಯಂದಿರಿಗೆ ಉತ್ತಮ ಆಹಾರವಿದು. ರಾಗಿಯಲ್ಲಿರುವ ಫೈಬರ್ ಗುಣ ಮಲಬದ್ಧತೆ ಸಮಸ್ಯೆಯನ್ನು ದೂರಮಾಡುತ್ತದೆ. ರಾಗಿಯಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಗಳು ಇದ್ದು ಇದು ದೇಹವನ್ನು ಬಲಪಡಿಸುತ್ತದೆ.ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಇದು ಮೂಳೆಗಳನ್ನು ಬಲಿಷ್ಠ ಗೊಳಿಸುವುದು. ನಿಯಮಿತವಾಗಿ ರಾಗಿ ಮುದ್ದೆ ತಿಂದರೆ ಅದರಿಂದ ಅಸ್ಥಿರಂಧ್ರತೆ ತಡೆಯಬಹುದು. ವಿಟಮಿನ್ ಗಳು ಮತ್ತು ಅಮಿನೊ ಆಮ್ಲವು ಚಯಾಪಚಯ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುವುದು. ಸರಿಯಾದ ಆರೋಗ್ಯಕ್ಕಾಗಿ ಅದು ಹಾರ್ಮೋನ್ ಗಳು ಬೆಳೆಯಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಸರಿಯಾದ ರೀತಿಯಲ್ಲಿ ಜೀರ್ಣಕ್ರಿಯೆಗೆ ಸಹಕಾರಿ ಆಗುವುದು. ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಲು ನೆರವಾಗುವುದು. ಇದರೊಂದಿಗೆ ಕರುಳಿನ ಕ್ರಿಯೆಗಳನ್ನು ಸರಾಗವಾಗಿಸುವುದು ಮತ್ತು ಚಯಾಪಚಯ ಉತ್ತಮ ಪಡಿಸುವುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.