ಕಾಡಾ ಕೋಳಿ ಮೊಟ್ಟೆಯಿಂದಾಗೋ ಲಾಭಗಳೇನು ಗೊತ್ತಾ..?

Video Description

ಕಾಡಾ ಕೋಳಿ ಮೊಟ್ಟೆಯಿಂದ ಆರೋಗ್ಯಕ್ಕಾಗುವ ಲಾಭ ಹಲವಾರು ಕಾಡಾ ಕೋಳಿ ಮೊಟ್ಟೆಯಿಂದಾಗೋ ಲಾಭಗಳೇನು ಗೊತ್ತಾ..? ನೆರೆ ರಾಜ್ಯ ಕೇರಳದಲ್ಲಿ ಹೆಚ್ಚಾಗಿ ಮಾಂಸಕ್ಕಾಗಿ ಉಪಯೋಗಿಸುವ ಕಾಡಾ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದೆ. ಮಂಗಳೂರು ನಗರದಲ್ಲೂ ಕಾಡಾ ಮಾಂಸ ಇದೀಗ ಲಭ್ಯ. ಈಗಾಗಲೇ ಅನೇಕರು ಕಾಡಾ ರುಚಿ ಸವಿದಿದ್ದಾರೆ. ನಾಟಿ ಕೋಳಿಯಂತಿರುವ ಈ ಕಾಡಾ ( ಕೋಳಿ) ಬಗ್ಗೆ ಹೆಚ್ಚಿನ ಜನರಿಗೆ ಪರಿಚಯವಿಲ್ಲ. ನಾಟಿ ಕೋಳಿ, ಬಾಯ್ಲರ್, ಟೈಸನ್, ಗಿರಿರಾಜ ಕೋಳಿ ನೋಡಿ ಅದರ ಮಾಂಸವನ್ನು ಸವಿದಿರುವ ಕರಾವಳಿ ಜನರು ಕಾಡಾ ರುಚಿ ನೋಡಿರುವುದು ಬಾರಿ ಕಡಿಮೆ. ಮೊಟ್ಟೆ ಯೊಂದಕ್ಕೆ ಎರಡು ರೂಪಾಯಿನಿಂದ 3 ರೂಪಾಯಿಗಳ ವರೆಗೂ ಮಾರಾಟವಾಗುತ್ತಿದೆ. “ಒಂದು ಕಾಡಾ ದಿನವೂ ಮೊಟ್ಟೆ ಇಡುವುದರಿಂದ ಇದು ಲಾಭದಾಯಕವೂ ಆಗಿದೆ. 100 ಕೋಳಿಗಳಲ್ಲಿ ಶೇಕಡ 80 ರಷ್ಟು ಮೊಟ್ಟೆ ಇಡುತ್ತವೆ. ಕಾಡಾ ಕೋಳಿಯನ್ನು ಮಾರುಕಟ್ಟೆ ಅಂಗಡಿಗಳಲ್ಲಿ ತೂಕದ ಆಧಾರದಲ್ಲಿ ಮಾರಾಟ ಮಾಡುವುದು ಭಾರಿ ಕಡಿಮೆ ಬದಲಿಗೆ ಕೋಳಿ ಒಂದಕ್ಕೆ 60 ರೂಪಾಯಿಯಂತೆ ಮಾರಾಟವಾಗುತ್ತದೆ. ಕಾಡಾ ಕೋಳಿಯ ಮೊಟ್ಟೆಗೂ ಬಹಳ ಬೇಡಿಕೆಯಿದ್ದು, ಔಷಧೀಯ ಗುಣಗಳಿದೆ ಎಂದು ಕಾಡಾ ಮೊಟ್ಟೆ ಬೇಯಿಸಿ ಮಾರಾಟ ಮಾಡಲಾಗುತ್ತದೆ. ಕೇರಳದಲ್ಲಿ ಇದನ್ನು ಕೋಳಿ ಸಾಕುವ ರೀತಿಯಲ್ಲೇ ಸಾಕಣೆ ಮಾಡಲಾಗುತ್ತದೆ. ಕೇರಳದಲ್ಲಿ ಒಂದೊಂದು ಫಾರ್ಮ್ ನಲ್ಲಿ ಲಕ್ಷಗಟ್ಟಲೆ ಕಾಡಾ ಕೋಳಿ ಸಾಕಣೆ ಮಾಡುತ್ತಾರೆ. ಇದರಿಂದ ಅಲ್ಲಿಯ ಫಾರ್ಮ್ ಮಾಲೀಕರು ಉತ್ತಮ ಆದಾಯ ಕೂಡ ಪಡೆಯುತ್ತಿದ್ದಾರೆ. ಈ ಕಾಡಾಕೋಳಿ ಹೆಚ್ಚಾಗಿ ಕೇರಳದಲ್ಲಿ ಸಾಕಣೆ ಮಾಡುವ ಕಾಡುಕೋಳಿ ಜಾತಿಗೆ ಸೇರಿದ ಹಕ್ಕಿಯಾಗಿದೆ.ನಾಟಿ ಕೋಳಿಗಿಂತ ಗಾತ್ರದಲ್ಲಿ ಗಿಡ್ಡ ಹಾಗೂ ಕಾಡು ಕೋಳಿಗಿಂತ ತುಸು ಎತ್ತರ ಇರುವ ಕಾಡಾ ತೂಕ ಕಡಿಮೆ ಇದ್ದರೂ ಭಾರಿ ರುಚಿಕರ ಎಂದು ಹೇಳಲಾಗುತ್ತದೆ. ಒಂದು ಕಾಡಾ ಸರಾಸರಿ 250 ಗ್ರಾಂ ನಿಂದ 400 ಗ್ರಾಂ ವರೆಗೆ ತೂಕ ಬರುತ್ತಿದೆ. ಕಾಡ ಮಾಂಸದಲ್ಲಿ ಹೆಚ್ಚು ಪ್ರೋಟಿನ್ ಇದ್ದು ರುಚಿಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದೆ. ಇದಕ್ಕೆ ಯಾವುದೇ ರೀತಿಯ ರೋಗ ನಿರೋಧಕ ಚುಚ್ಚು ಮತ್ತು ಅಥವಾ ಔಷಧಿ ನೀಡುವ ಅಗತ್ಯವಿಲ್ಲದರಿಂದ ಸಾಕಣಿಕೆ ವೆಚ್ಚಕೂಡ ತೀರ ಕಡಿಮೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.