ಕಡಲೆ ಕಾಳಿನ ಹತ್ತು ಪ್ರಯೋಜನಗಳು..!

Video Description

ಅಬ್ಬಾ ಕಡಲೆಕಾಯಿಯಲ್ಲಿದೆ ಇಷ್ಟೆಲ್ಲಾ ಅದ್ಭುತ ಗುಣಗಳು ಕಡಲೆ ಕಾಳಿನ ಹತ್ತು ಪ್ರಯೋಜನಗಳು..! ಸಾಮಾನ್ಯವಾಗಿ ದೃಢಕಾಯರು ತಮ್ಮ ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆ ಹಾಗೂ ಮಾಂಸಾಹಾರವನ್ನು ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಮೊಟ್ಟೆಯಲ್ಲಿರುವ ಪ್ರೋಟೀನು ಇದಕ್ಕೆ ಪ್ರಮುಖ ಕಾರಣ. ಒಂದು ಮೊಟ್ಟೆಯಲ್ಲಿ ಸುಮಾರು ಆರು ಗ್ರಾಂ ಪ್ರೋಟೀನು ಇರುತ್ತದೆ ಹಾಗೂ ಉತ್ತಮ ಪ್ರಮಾಣದ ವಿವಿಧ ವಿಟಮಿನ್ನುಗಳು, ಖನಿಜಗಳು ಹಾಗೂ ಅವಶ್ಯಕ ಸಂಯುಕ್ತಗಳೂ ಇವೆ. ಈ ಎಲ್ಲಾ ಗುಣಗಳಿಂದಾಗಿಯೇ ಮೊಟ್ಟೆ ಒಂದು ಪರಿಪೂರ್ಣ ಆಹಾರವಾಗಿದೆ. ಒಂದು ವೇಳೆ ಸಸ್ಯಾಹಾರಿಗಳು ಸ್ನಾಯುಗಳನ್ನು ಹುರಿಗಟ್ಟಿಸಬೇಕೆಂದು ಇಚ್ಛಿಸಿದರೆ? ಮೊಟ್ಟೆ ಹಾಗೂ ಮಾಂಸಾಹಾರದ ಸೇವನೆಯ ಹೊರತಾಗಿ ಇದು ಸಾಧ್ಯವಾಗಬಲ್ಲುದೇ ಎಂಬ ಸಂಶಯ ಮೂಡುವುದು ಸಹಜ. ಆದರೆ ನಿಸರ್ಗ ಇವರಿಗೂ ಕೆಲವು ಆಹಾರಗಳ ಮೂಲಕ ಮೊಟ್ಟೆಯಿಂತಲೂ ಹೆಚ್ಚಿನ ಪ್ರೋಟೀನುಗಳನ್ನು ಒದಗಿಸುವ ಮೂಲಕ ಸ್ನಾಯುಗಳನ್ನು ಹುರಿಗಟ್ಟಿಸಲು ಸಮಾನವಾದ ಅವಕಾಶ ನೀಡಿದೆ. ಕಡಲೆ (ಸೈಸರ್ ಏರೀಟಿನಮ್) ಫ಼್ಯಾಬೇಸಿಯಿ ಕುಟುಂಬ, ಫ಼್ಯಾಬಾಯ್ಡಿಯಿ ಉಪಕುಟುಂಬದ ಒಂದು ದ್ವಿದಳ ಧಾನ್ಯ ಕಾಳು. ಅದರ ಬೀಜಗಳಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದು ಅತ್ಯಂತ ಮೊದಲು ಬೇಸಾಯ ಮಾಡಲ್ಪಟ್ಟ ಸಸ್ಯಗಳ ಪೈಕಿ ಒಂದು: 7,500 ವರ್ಷ ಹಳೆಯ ಅವಶೇಷಗಳು ಮಧ್ಯಪ್ರಾಚ್ಯದಲ್ಲಿ ಕಂಡುಬಂದಿವೆ. ಬಹುಸಂಖ್ಯಾತ ಶಾಕಾಹಾರಿಗಳೇ ಇರುವ ಭಾರತದಲ್ಲಿ, ಜನರ ಸಸಾರಜನಕದ (ಪ್ರೋಟೀನ್) ಪುರೈಕೆ ಮಾಡುವಲ್ಲಿ ದ್ವಿದಳ ಧಾನ್ಯಗಳಾದ ಕಡಲೆ ಮತ್ತು ತೊಗರಿಗಳ ಪಾತ್ರ ಬಹಳ ಹಿರಿದು. ಅತಿ ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಕಡಲೆಯನ್ನು, ಏಷ್ಯ ಮತ್ತು ಯುರೋಪ್ ಖಂಡಗಳ ಹಲವಾರು ಭಾಗಗಳಲ್ಲಿ ಬೆಳೆಯುತ್ತಾರೆ. ಇದರ ಮೂಲಸ್ಥಾನ ಬಹುಶಃ ಮೆಡಿಟರೇನಿಯನ್ ಪ್ರದೇಶ. ಕಡಲೆ ಕಾಳನ್ನು ನೆನೆಯಿಸಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದರ ನೀರು ಮತ್ತು ನೆನೆಸಿದ ಕಡಲೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸ್ನಾಯುಗಳು ಬಲವಾಗುತ್ತದೆ ಅದೂ ಅಲ್ಲದೆ ಮಲಬದ್ಧತೆ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಇನ್ನು ಪುರುಷರಲ್ಲಿ ವೀರ್ಯಗಳ ಸಂಖ್ಯೆ ವೃದ್ಧಿಯಾಗಲು ಮತ್ತು ಸಂತಾನಾಭಿವೃದ್ಧಿ ಕೊರತೆ ಇದ್ದಲ್ಲಿ ಕಡಲೆ ಕಾಳನ್ನು ಸೇವಿಸಬಹುದು. ಕಡಲೆ ಬಹಳ ಪುಷ್ಟಿಕರವಾದ ಆಹಾರ. ಇದರಲ್ಲಿ 20% ರಷ್ಟು ಸಾರಜನಕ ಮತ್ತು ಶೇ. 61ರಷ್ಟು ಶರ್ಕರ ಪಿಷ್ಟಾದಿಗಳಿವೆ. ಖನಿಜ ಪದಾರ್ಥಗಳಾದ ಕ್ಯಾಲ್ಸಿಯಂ (149 ಮಿಗ್ರಾಂ/100 ಗ್ರಾಂ) ಮತ್ತು ಕಬ್ಬಿಣ (7.2 ಮಿಗ್ರಾಂ/100 ಗ್ರಾಂ)ಗಳಲ್ಲದೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಕೂಡ ಇದೆ. ಈ ಕಾಳುಗಳಲ್ಲಿರುವ ಸಸಾರಜನಕದಲ್ಲಿ ಆವಶ್ಯಕವಾಗಿರುವ ಎಲ್ಲ ಅಮೈನೊ ಆಮ್ಲಗಳು ದೊರೆಯುತ್ತಿದ್ದರೂ ಟ್ರಿಪ್ಟೋಫೇನ್ ಮತ್ತು ಗಂಧಕಯುಕ್ತ ಅಮೈನೊ ಆಮ್ಲಗಳ ಪ್ರಮಾಣ ಮಾತ್ರ ಕಡಿಮೆಯಾಗಿದೆ. ಕಡಲೆಯ ಉಪಯೋಗ ಬಹಳ. ಗಿಡಗಳು ಇನ್ನೂ ಚಿಕ್ಕವಾಗಿರುವಾಗಲೇ ಅವುಗಳ ಚಿಗುರನ್ನು ಮುರಿದು ತೊಪ್ಪಲು ಪಲ್ಲೆಯಾಗಿ ಇಲ್ಲವೆ ಹಾಗೆಯೇ ಒಣಗಿಸಿ ಬಿಟ್ಟು ಕೆಲವು ದಿನಗಳ ಅನಂತರ ಉಪಯೋಗಿಸುತ್ತಾರೆ. ಕಾಳುಗಳು ಇನ್ನೂ ಪುರ್ತಿಯಾಗಿ ಬಲಿಯುವುದಕ್ಕೆ ಮೊದಲೇ ತಿಂದರೂ ರುಚಿಕರವಾಗಿರುವುದಲ್ಲದೇ ಪುಷ್ಟಿಕರವಾಗಿಯೂ ಇರುತ್ತವೆ. ಒಣಗಿದ ಬೀಜಗಳನ್ನು ನೆನೆಹಾಕಿ ತಿನ್ನುವುದು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದ ಮಾತು. ಹುರಿದು, ಹುರಿಗಾಳನ್ನಾಗಿ ತಿನ್ನುವುದಲ್ಲದೆ ಬೇಳೆಮಾಡಿ ಅಡಿಗೆ ಮಾಡುವುದೂ ಸಾಮಾನ್ಯವಾಗಿದೆ. ಕಡಲೆಯ ಹಿಟ್ಟಿನಿಂದ ಹಲವಾರು ಬಗೆಯ ಸಿಹಿ ಹಾಗೂ ಖಾರದ ತಿಂಡಿಗಳನ್ನು ತಯಾರಿಸುತ್ತಾರೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಕಡಲೆಯನ್ನು ಕುದುರೆ ಮೊದಲಾದ ಪ್ರಾಣಿಗಳಿಗೆ ತಿನ್ನಿಸಲೂ ಉಪಯೋಗಿಸುತ್ತಾರೆ. ಇದರ ಹೊಟ್ಟಂತೂ ದನಗಳಿಗೆ ಒಳ್ಳೆಯ ಮೇವು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.