ಜಂಕ್ ಫುಡ್ ಆರೋಗ್ಯಕರವೂ ಹೌದು..!

Video Description

ಜಂಕ್ ಫುಡ್ ಆರೋಗ್ಯಕ್ಕೆ ಉತ್ತಮವಾಗಿದೆ ಜಂಕ್ ಫುಡ್ ಆರೋಗ್ಯಕರವೂ ಹೌದು..! ನೀವು ದಪ್ಪಗಾಗುತ್ತಿದ್ದೀರಿ ಎಂದಾದಲ್ಲಿ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿ ಎಂದೇ ಪ್ರತಿಯೊಬ್ಬರೂ ಸಲಹೆ ನೀಡುತ್ತಾರೆ. ನಿಮ್ಮ ದೇಹದ ತೂಕ ಬೆಳೆದು ಕೊಬ್ಬು ಶೇಖರವಾಗುತ್ತಿದೆ ಎಂದಾದಲ್ಲಿ ನೀವು ಹೆಚ್ಚಿನ ಜಿಡ್ಡು ಮತ್ತು ಅನಾರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದೀರಿ ಎಂದೇ ಅರ್ಥ ಎಂಬುದು ನ್ಯೂಟ್ರಿಶಿಯನ್‌ಗಳಿಂದ ಹಿಡಿದು ತಜ್ಞರವರೆಗಿನ ಅಭಿಪ್ರಾಯವಾಗಿರುತ್ತದೆ. ಆದರೆ ಜಂಕ್ ಫುಡ್‌ನಿಂದ ಕೂಡ ನಿಮ್ಮ ದೇಹಕ್ಕೆ ಲಾಭವಿದೆ ಎಂದರೆ ನೀವು ನಂಬುತ್ತೀರಾ? ಜಂಕ್ ಫುಡ್ ಎಂದಾಕ್ಷಣ ತಕ್ಷಣ ನಿಮ್ಮ ಮನಸ್ಸಲ್ಲಿ ಮೂಡುವ ಐಟಂಗಳು ಪಿಜ್ಜಾ ಮತ್ತು ಬರ್ಗರ್. ಇದರಲ್ಲಿ ಬಳಕೆಯಾಗುವ ಚೀಸ್ ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಚೀಸ್ ನಿಮ್ಮ ಹಲ್ಲುಗಳಿಗೆ ಕೂಡ ಉತ್ತಮ ದೃಢತೆಯನ್ನು ಒದಗಿಸುತ್ತದೆ ಸ್ನಾಯುಗಳನ್ನು ಬಲಪಡಿಸುತ್ತದೆ ಚೀಸ್‌ನಲ್ಲಿ ವಿಟಮಿನ್ ಬಿ ಇರುವುದರಿಂದ ನಿಮ್ಮ ತ್ವಚೆಗೆ ಇದು ಅತ್ಯುತ್ತಮ ಎಂದೆನಿಸಿದೆ. ಚೀಸ್‌ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ರಂಜಕ, ಸತು, ವಿಟಮಿನ್ ಎ, ವಿಟಮಿನ್ ಬಿ 12, ಪೋಷಕಾಂಶಗಳು ಇರುವುದರಿಂದ ಇದು ನಿಮ್ಮನ್ನು ದೃಢಕಾಯರನ್ನಾಗಿಸುತ್ತದೆ. ಚೀಸ್‌ನಲ್ಲಿರುವ ಕ್ಯಾಲ್ಶಿಯಂ ಅಂಶ ಮುಟ್ಟಿನ ಮೊದಲು ಕಾಣಿಸಿಕೊಳ್ಳುವ ಸೊಂಟನೋವು ಅಥವಾ ಹೊಟ್ಟೆನೋವಿನ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಹೀಗೆ ಪಿಜ್ಜಾ ಬರ್ಗರ್ ಮೊದಲಾದ ಜಂಕ್ ಫುಡ್‌ನಲ್ಲಿರುವ ಚೀಸ್ ನಿಮ್ಮ ದೇಹಕ್ಕೆ ಇಷ್ಟೆಲ್ಲಾ ಉಪಯೋಗಕಾರಿ ಅಂಶಗಳನ್ನು ಒದಗಿಸುತ್ತವೆ. ಜಂಕ್ ಫುಡ್‌ಗಳಲ್ಲಿ ಬಳಕೆಯಾಗುವ ಟೊಮ್ಯಾಟೊ ಕೆಚಪ್ ಕೂಡ ಬಹಳಷ್ಟು ಆರೋಗ್ಯಕಾರಿ ಅಂಶಗಳನ್ನು ಹೊಂದಿವೆ. ನಿಮ್ಮ ಸುಂದರ ತ್ವಚೆಗಾಗಿ, ಮೂಳೆಗಳ ಅಭಿವೃದ್ಧಿಗಾಗಿ ಟೊಮೇಟೊ ಸಹಕಾರಿಯಾಗಿದೆ. ತೂಕ ಇಳಿಕೆಯಲ್ಲೂ ಇದು ಪರಿಣಾಮಕಾರಿ ಪ್ರಭಾವವನ್ನು ಬಿರುತ್ತದೆ ಎಂಬುದು ಸಾಬೀತಾಗಿದ್ದು ವಿಟಮಿನ್ ಮಿನರಲ್ಸ್ ಯುಕ್ತವಾಗಿದೆ. ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಇದನ್ನು ಹಸಿಯಾಗಿ ತಿಂದಷ್ಟು ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ. ನಿಮ್ಮ ತ್ವಚೆಯನ್ನು ಟೊಮ್ಯಾಟೊ ಸುಂದರಗೊಳಿಸುತ್ತದೆ. ಮೂಳೆಗಳ ಅಭಿವೃದ್ಧಿಯನ್ನು ಇದು ಸುಧಾರಿಸುತ್ತದೆ ಅದೇ ರೀತಿ ಉತ್ಕರ್ಷಣ ಶಕ್ತಿಯನ್ನು ಒದಗಿಸುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಬೀಟಾ ಕ್ಯಾರಟಿನ್ ಇದರಲ್ಲಿದೆ. ಇದರಲ್ಲಿರುವ ವಿಟಮಿನ್ ಬಿ ಮತ್ತು ಪೊಟ್ಯಾಶಿಯಂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಇಳಿಸುತ್ತದೆ. ಹೃದಯಾಘಾತವನ್ನು ಕಡಿಮೆ ಮಾಡುವ ಗುಣ ಕೂಡ ಟೊಮ್ಯಾಟೊದಲ್ಲಿದೆ. ಅದೇ ರೀತಿ ವಿಟಮಿನ್ ಎ ನಿಮ್ಮ ಕಣ್ಣು ಮತ್ತು ತ್ವಚೆಗೆ ಅತ್ಯಂತ ಉತ್ತಮವಾಗಿದೆ. ನಿಮ್ಮ ದೃಷ್ಟಿ ಅಂಶವನ್ನು ಸುಧಾರಿಸುವ ಗುಣ ಕೂಡ ಟೊಮ್ಯಾಟೊದಲ್ಲಿದೆ. ಇದರಿಂದ ಇರುಳುಗುರುಡುತನ ಕೂಡ ನಿವಾರಣೆಯಾಗುತ್ತದೆ. ಹೀಗೆ ಜಂಕ್ ಫುಡ್‌ಗಳಲ್ಲಿ ಬಳಸುವ ಚೀಸ್ ಮತ್ತು ಟೊಮ್ಯಾಟೊ ನಿಮ್ಮ ದೇಹಕ್ಕೆ ವರದಾನವಾಗಿ ಕಾರ್ಯನಿರ್ವಹಿಸುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.