ಬೇವಿನೆಲೆ ಬಳಸಿ ರೋಗದಿಂದ ದೂರವಿರಲು ಇಲ್ಲಿದೆ ಟಿಪ್ಸ್..!

Video Description

ಬೇವಿನೆಲೆ ಬಳಸಿ ರೋಗದಿಂದ ದೂರವಿರಲು ಇಲ್ಲಿದೆ ಟಿಪ್ಸ್..! ಆಯುರ್ವೇದದಲ್ಲಿ ಬೇವು ಜನಪ್ರಿಯ ಮೆಡಿಸಿನ್ ಇದ್ದಂತೆ.. ಸುಮಾರು 5೦೦ ವರ್ಷಗಳ ಹಿಂದಿನ ಸಾಂಪ್ರದಾಯಿಕ ಪರಿಹಾರಗಳಲ್ಲಿ ಬೇವು ಕೂಡಾ ಒಂದು. ಬೇವಿನ ಎಲೆ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ವ್ಯಕ್ತಿಯ ದೈಹಿಕ, ಮಾನಸಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವಿನ ಗುಣ, ಇದರಿಂದಾಗುವ ಪ್ರಯೋಜನಗಳನ್ನು ಅರಿತರೆ ಅಚ್ಚರಿ ಪಡುತ್ತೀರಾ. ಬೇವಿನ ಎಲೆ, ಬೇವಿನ ಹೂ, ಬೇವಿನ ಎಣ್ಣೆಯಲ್ಲಿ ಹಲವು ರೋಗ ನಿರೋಧಕ ಅಂಶಗಳಿವೆ. 1. ಬೇವಿನ ಎಲೆಗಳ ರಸಗಳನ್ನು ಸಕ್ಕರೆ ಜತೆಗೆ ಸೇವಿಸುವುದರಿಂದ ಅತಿಸಾರ ಗುಣಮುಖವಾಗುತ್ತದೆ.. ಪ್ರತಿ ದಿನ ಬೆಳಿಗ್ಗೆ ೧೦- ೧೨ ರಿಂದ ಎಳೆ ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗೆದು, ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತದೆ. 2. ಗಾಯಗಳನ್ನು ಗುಣಪಡಿಸುವಲ್ಲಿ ಬೇವು ಪ್ರಮುಖ ಪಾತ್ರವಹಿಸುತ್ತದೆ. ಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ, ಅದನ್ನು ನಿಮ್ಮ ಗಾಯದ ಮೇಲೆ ಹಚ್ಚಿದರೆ ನಿಧಾನವಾಗಿ ಗುಣಮುಖವಾಗುತ್ತದೆ. 3. ತಲೆಹೋಟ್ಟು ಸೇರಿದಂತೆ ಕೂದಲಿನ ಸಮಸ್ಯೆಗಳಿದ್ದರೆ ಬೇವು ಉಪಯೋಗಿಸಿ, ಬೇವಿನ ಎಲೆಗಳನ್ನು ಕುದಿಸಿ, ನೀರು ಹಸಿರು ಬಣ್ಣ ಬರುವರೆಗೆ ಕುದಿಸಬೇಕು. ನಿಮ್ಮ ಕೂದಲನ್ನು ಶಾಂಪು ಬಳಸಿ ತೊಳೆದ ನಂತರ ಅದನ್ನು ಬೇವಿನ ನೀರಿನಿಂದ ಸ್ವಚ್ಛಗೊಳಿಸಕೊಳ್ಳಬೇಕು. ಅಲ್ಲದೇ ಬೇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವು ಬೇವಿನ ಎಲೆಗಳನ್ನು ಪುಡಿ ಮಾಡಿ, ಒಂದು ಲೋಟ ನೀರಿನ ಜತೆಗೆ ಸೇವಿಸಿ. 4. ಬೇವಿನ ಹೂಗಳನ್ನು ಅನೋರೆಕ್ಸಿಯಾ ನರ್ವೋಸಾ (ಹಸಿವಿನ ಕೊರತೆ) ಹಾಗೂ ಕರುಳಿನಲ್ಲಾಗುವ ಹುಳುಗಳನ್ನು ನಿವಾರಿಸಲು ಬೇವಿನ ಹೂಗಳನ್ನು ಬಳಸಲಾಗುತ್ತದೆ, ಕಣ್ಣುಗಳನ್ನು ಇದು ಉತ್ತಮವಾದದ್ದು, ಬೇವಿನ ಹೂಗಳನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ. 5. ಭಾರತದಲ್ಲಿ ಹೆಚ್ಚಿನ ಜನರು ಬೇವಿನ ಕಡ್ಡಿಯಿಂದ ಟೂತ್ ಬ್ರಷ್ ಆಗಿ ಬಳಸುತ್ತಾರೆ. ಇದು ಸೂಕ್ಷ್ಮಜೀವಿಗಳಿಂದ ಹೋರಾಡುತ್ತದೆ. ನಿಮ್ಮ ಲಾಲಾರಸದಲ್ಲಿ ಕ್ಷಾರೀಯ ಮಟ್ಟವನ್ನು ಕಾಪಾಡುತ್ತದೆ. ಬ್ಯಾಕ್ಟೇರಿಯಾಗಳಿಂದ ನಿಮ್ಮನ್ನು ದೂರವಿರಿಸಿ. ರೆಂಬೆ ಎಳೆಗಳನ್ನು ದೂರವಿರಿಸುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.