ಗೂಗಲ್ ಪೇ ಹಾಗೂ ಪೋನ್ ಪೇ ಬಳಸೋವಾಗ ಎಚ್ಚರಿಕೆ..!

Video Description

ಗೂಗಲ್ ಪೇ ಹಾಗೂ ಪೋನ್ ಪೇ ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ ಗೂಗಲ್ ಪೇ ಹಾಗೂ ಪೋನ್ ಪೇ ಬಳಸೋವಾಗ ಎಚ್ಚರಿಕೆ..! ನೀವು ಗೂಗಲ್ ಪೇ ಅಥವಾ ಫೋನ್ ಪೇಯಂತಹ ಮೊಬೈಲ್ ವ್ಯಾಲೆಟ್ ಆ್ಯಪ್‌ಗಳನ್ನು ಬಳಸುತ್ತೀರಿ ಎಂದಾದಲ್ಲಿ ಕೊಂಚ ಎಚ್ಚರವಹಿಸಿ. ಈಗ ಕಾಲ ಬದಲಾದ ಹಾಗೇ ಇಡೀ ಜಗತ್ತೇ ಒಂದು ಸಣ್ಣ ಮೊಬೈಲ್ ಸೇರಿದೆ. ಗೂಗಲ್ ಪೇ ಮತ್ತು ಫೋನ್ ಪೇ ಹೀಗೆ ಅನೇಕ ರೀತಿಯ ಆಪ್‌ಗಳು ಬ್ಯಾಂಕಿಂಗ್ ವ್ಯವಹಾರಕ್ಕೆ ಸಹಾಯವಾಗುತ್ತಿವೆ. ಇವುಗಳ ಬಗ್ಗೆ ನಾವು ಸ್ವಲ್ಪ ಯಾಮಾರಿದರೂ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತದೆ. ಗೂಗಲ್ ಪೇ ಅಥವಾ ಫೋನ್ ಪೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ನಿಮ್ಮ ಖಾತೆಯಲ್ಲಿ ಇರೋ ಬರೋ ಎಲ್ಲ ಹಣ ಒಂದೇ ನಿಮಿಷದಲ್ಲಿ ಖಾಲಿ ಆಗುತ್ತದೆ. ಏಕೆಂದರೆ, ಗೂಗಲ್ ಪೇ ಅಥವಾ ಫೋನ್ ಪೇ ಸಂಸ್ಥೆಗಳು ಸಹಾಯವಾಣಿ ಕೇಂದ್ರಗಳನ್ನೇ ಹೊಂದಿಲ್ಲ. ಹಾಗಾಗಿ ಈ ಆ್ಯಪ್‌ಗಳನ್ನು ಬಳಸುವಾಗ ಹೆಚ್ಚಿನ ಜಾಗರೂಕತೆಗಳನ್ನು ನಾವು ವಹಿಸಬೇಕಾಗುತ್ತದೆ. ಫೋನ್ ಪೇ ಅಥವ ಗೂಗಲ್ ಪೇ ಸರ್ವರ್ ಬ್ಯುಸಿ ಆಗೋಗಿ ನಿಮ್ಮ ಖಾತೆಯಿಂದ ಹಣ ಕಟ್ ಆದರು ಸಹ ಸ್ನೇಹಿತರಿಗೆ ಹೋಗಿರೋದಿಲ್ಲ ಅಂತ ಸಮಯದಲ್ಲಿ ಕೆಲವು ಜನರು ಕಾದು ನೋಡೋಣ ಎನ್ನುತ್ತಾರೆ. ಮತ್ತಷ್ಟು ಜನ ಒಂದೆರಡು ತಾಸು ನೋಡಿ ಗೂಗಲ್ ನಿಂದ ಫೋನ್ ಪೇ ಅಥವ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಕಾಲ್ ಮಾಡೋಣ ಅಂತ ನಂಬರ್ ಹುಡುಕಿ ಕಾಲ್ ಕಾಡ್ತಾರೆ. ಇಂತಹ ಸಮಯದಲ್ಲಿ ವಂಚಕರು ನಕಲಿ ವೆಬ್‌ಸೈಟ್ ಸೃಷ್ಟಿಸಿ ಅವರ ನಂಬರ್ ನೀಡುತ್ತಾರೆ. ನಂತರ ನಿಮ್ಮ ಖಾತೆಯಲ್ಲಿನ ಹಣ ಖಾಲಿಯಾಗುತ್ತದೆ. ಗೂಗಲ್ ಪೇ ಮತ್ತು ಫೋನ್ ಪೇಗೆ ಯಾವುದೇ ರೀತಿಯ ವಾಯ್ಸ್ ಕಸ್ಟಮರ್ ಕೇರ್ ಇಲ್ಲವೇ ಇಲ್ಲ ಎಂಬುದನ್ನು ತಿಳಿಯಿರಿ. ಗೂಗಲ್ ನಲ್ಲಿ ನಕಲಿ ಫೋನ್ ಕಸ್ಟಮರ್ ಕೇರ್ ನಂಬರ್ ಹಾಕಿದ್ದಾರೆ. ಇತ್ತೇಚೆಗೆ ನಮ್ಮ ಸ್ನೇಹಿತರು ಒಬ್ಬರು ಗೂಗಲ್ ಪೇ ನಿಂದ 300 ರೂಪಾಯಿ ಕಟ್ ಆಗಿದೆ ಅಂತ ಗೂಗಲ್ ನಲ್ಲಿ ಹುಡುಕಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ ಹೀಗೆ ಆಗಿರುವ ಎರಡೇ ನಿಮಿಶದಲ್ಲಿ ಅಕೌಂಟ್ ನಲ್ಲಿ ಇರುವ ಒಂದೂವರೆ ಲಕ್ಷ ಹಣ ಕಟ್ ಆಗೋಗಿದೆ. ಗೂಗಲ್ ಪೇ ಮತ್ತು ಫೋನ್ ಪೇ ಗೆ ಯಾವುದೇ ರೀತಿಯ ಕಸ್ಟಮರ್ ಸೇವೆ ಇಲ್ಲವೇ ಇಲ್ಲ. ನೀವು ಬಳಸುತ್ತಿರುವ ಬಹುತೇಕ ಮೊಬೈಲ್ ವಾಲೆಟ್ ಆಪ್‌ಗಳೆಲ್ಲವೂ ಯುಪಿಐ ಆಧಾರದಲ್ಲಿ ಕೆಲ ಮಾಡುತ್ತವೆ. ಈ ಆಪ್‌ಗಳ ಜೀವಾಳವೇ ಯುಪಿಐ ನಂಬರ್ ಎಂದು ಹೇಳಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಯುಪಿಐ ನಂಬರ್ ಅನ್ನು ಮತ್ತೊಬ್ಬರಿಗೆ ಶೇರ್ ಮಾಡಬೇಡಿ. ಯುಪಿಐ ನಂಬರ್ ಎಷ್ಟು ಸೇಫ್ ಆಗಿ ಇರಬೇಕೆಂದರೆ, ನಿಮ್ಮ ಸಂಗಾತಿಗೂ ಅದು ತಿಳಿಯಬಾರದು.! ಇದು ನಿಮಗೆ ತಮಾಷೆಯಂತೆ ಕಂಡರೂ ನಿಜ. ಏಕೆಂದರೆ, ಅವರು ಕೂಡ ನಿಮ್ಮ ಹಣವನ್ನು ನಿಮಗೆ ತಿಳಿಯದಂತೆ ತೆಗೆದುಕೊಳ್ಳಬಹುದಾದ ಸಾಧ್ಯತೆ ಇದೆ. ಬ್ಯಾಂಕಿನ ಲಿಂಕ್‌ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್‌ ಯುಆರ್‌ಎಲ್‌ ಟೈಪ್‌ ಮಾಡಿ ಮುಂದುವರಿಸಿ. ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್‌ ಕೆಫೆಗಳಲ್ಲಿ) ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟು ನಡೆಸಬೇಡಿ. ವಂಚಕರು ತಕ್ಷ ಣಕ್ಕೆ ಸಿಕ್ಕಿ ಬೀಳುವುದರಿಂದ ತಪ್ಪಿಸಲು, ಬ್ಯಾಂಕ್‌ ರಜಾದಿನಗಳಲ್ಲೋ ಅಥವಾ ಬ್ಯಾಂಕ್‌ ತೆರೆಯುವ ಮುನ್ನವೋ ಚಾಕಚಕ್ಯತೆ ಮೆರೆಯುತ್ತಾರೆಂಬುದು ನೆನಪಿರಲಿ. ಈ ಕುರಿತು ನಿಮಗೆ ಸಾಕಷ್ಟು ಎಚ್ಚರವಿರಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.