ಹುಳುಕು ಹಲ್ಲು - ಏನು ಮಾಡೋದು..?

Video Description

ನಾವು ಸತ್ತ ನಂತರ ದೇಹ ಮಣ್ಣಿನಲ್ಲಿ ಕೊಳೆತಾಗಲೂ ದೀರ್ಘಕಾಲೀನವಾಗಿ ಉಳಿಯುವ ಅಂಗ ಹಲ್ಲು ಮಾತ್ರ . ಅಷ್ಟೊಂದು ಗಟ್ಟಿತನ ಇರುವ ಹಲ್ಲನ್ನು ಕೇವಲ 2-3 ವರ್ಷಗಳ ಅಂತರದೊಳಗೇ ನಿಮ್ಮ ಹಲ್ಲನ್ನು ನಿಮಗೆ ಗೊತ್ತಿಲ್ಲದೇ ಕರಗಿಸಿ ಬಿಡುವ ರೋಗವೇ ಹುಳುಕು. ಹಾಗಾದ್ರೆ ಹುಳುಕು ಹಲ್ಲಿಗೆ ಪರಿಹಾರವೇನು ..? ಇಲ್ಲಿದೆ ನೋಡಿ ಟಿಪ್ಸ್... * ಜಾಯಿಕಾಯಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಹಲ್ಲುಗಳ ನಡುವೆ ಇಟ್ಟುಕೊಂಡರೆ ಹುಳುಗಳು ನಾಶವಾಗುತ್ತವೆ. *ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪು ಸೇರಿಸಿ ಜಗಿದರೆ ಹಲ್ಲು ನೋವು ಕಡಿಮೆಯಾಗಿ ಹುಳುಗಳು ನಿವಾರಣೆಯಾಗುತ್ತದೆ. *ಬೇವಿನ ಎಲೆಗಳ ಕಷಾಯಕ್ಕೆ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಹುಳುಕು ಹಲ್ಲು ಕಡಿಮೆಯಾಗುತ್ತದೆ. *ಪ್ರತಿ ದಿನ ಬೆಳಗ್ಗೆ ಸ್ವಲ್ಪ ಬಿಸಿ ನೀರಿಗೆ ಎಳ್ಳೆಣ್ಣೆ ಸೇರಿಸಿ ಬಾಯಿ ಮುಕ್ಕಳಿಸಿದರೆ ಎಲ್ಲಾ ತರಹದ ಹಲ್ಲು ಮತ್ತು ಒಸಡಿನ ಸಮಸ್ಯೆಯಿಂದ ದೂರವಿರಬಹುದು .

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.