ಬಹುಪಯೋಗಿ ಒಂದೆಲಗ

Video Description

ಹಿತ್ತಲು ಗಿಡ ಮದ್ದೆಲ್ಲ' ಎನ್ನುವಂತೆ ಹೆಚ್ಚುಕಮ್ಮಿ ಪ್ರತಿಯೊಂದು ಗಿಡದಲ್ಲೂ ಒಂದಲ್ಲ ಒಂದು ಔಷಧೀಯ ಮಹತ್ವ ಇದ್ದೇ ಇರುತ್ತದೆ. ಅಂತಹ ಔಷಧೀಯ ಗುಣಧರ್ಮವನ್ನು ಹೊಂದಿರುವ ಸಸ್ಯಗಳ ಪೈಕಿ ಒಂದೆಲಗವೂ ಒಂದು. ಭಾರತದಾದ್ಯಂತ ಕಂಡುಬರುವ ಈ ಸಸ್ಯ ನದಿ ತೀರ,ತೊರೆಯ ಪಕ್ಕದಲ್ಲಿ,ಕೃಷಿ ಭೂಮಿಯಲ್ಲಿ ಒದ್ದೆ ಮಣ್ಣಿನಲ್ಲಿ ವಿಶೇಷವಾಗಿ ಬೆಳೆಯುತ್ತದೆ. ನೆಲದ ಮೇಲೆ ಹರೆಯುತ್ತಾ ಹೋಗುವ ಈ ಸಸ್ಯ ಮಾತೃ ಸಸ್ಯದಿಂದ ಸ್ವಲ್ಪ ದೂರ ಹೋದ ನಂತರ ಕಾಂಡದ ಗೆಣ್ಣಿನ ಭಾಗದಲ್ಲಿ ಚಿಗುರೊಡೆದು ಹೊಸ ಸಸ್ಯವಾಗಿ ಬೆಳೆಯುತ್ತದೆ. ಎಲೆಗಳು ಅಗಲವಾಗಿ ಕಿಡ್ನಿ ಆಕಾರದಲ್ಲಿ ಇದ್ದು ಅಂಚು ಹಲ್ಲುಗಳಿಂದ ಕೂಡಿರುತ್ತದೆ. ಕಾಂಡ ರಸಭರಿತವಾಗಿರುತ್ತದೆ. ಬೇರಿನಲ್ಲಿ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವ ಈ ಸಸ್ಯದ ಎಲೆ, ಕಾಂಡ, ಬೇರು(ಗಡ್ಡೆ) ಪ್ರತಿಯೊಂದೂ ಔಷಧೀಯ ವಸ್ತುವಾಗಿದೆ. ಇದರ ವೈಜ್ಞಾನಿಕ ಹೆಸರು ಹೈಡ್ರೋಕೊಟೈಲ್ ಏಸ್ಸಿಯಾಟಿಕಾ. ಈ ಸಸ್ಯದಲ್ಲಿ ಏಸ್ಸಿಯಾಟಿಕೋಸೈಡ್, ಟ್ರೈ ಟರ್ಪಿನಾಯ್ಡ್ ರಾಸಾಯನಿಕಗಳು ಇರುವುದರಿಂದ ಬಹಳಷ್ಟು ಔಷಧೀಯ ಗುಣವನ್ನು ಹೊಂದಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.