ಅಜಿನಮೋಟೋ - ಒಂದು ನಿಧಾನ ವಿಷ..!

Video Description

ಅಜಿನಮೋಟೋ ಸ್ಲೊ ಪಾಯಿಸನ್ ಹೇಗೆ? ಅಜಿನಮೋಟೋ - ಒಂದು ನಿಧಾನ ವಿಷ..! ಸಾಮಾನ್ಯವಾಗಿ ಅಜಿನಮೋಟೋ ಎಂದು ಕರೆಸಿಕೊಳ್ಳುವ ಈ ರಾಸಾಯನಿಕ ಬಳಸದಿದ್ದರೆ ನಿಮ್ಮ ಚೈನೀಸ್ ಫಾಸ್ಟ್ ಫುಡ್‍ಗಳಿಗೆ ಆ ಟೇಸ್ಟ್ ಬರೋದೇ ಇಲ್ಲ ನಿಮ್ಮ ನಾಲಗೆಗೆ ಹಿಡಿಸೋ ಟೇಸ್ಟ್ ಬರಬೇಕಾದ್ರೆ ಫಾಸ್ಟ್‌ಫುಡ್‌ಗಳಲ್ಲಿ ಅಜಿನಮೋಟೋ ಇರಲೇ ಬೇಕು ಇಲ್ಲಾಂದ್ರೆ ನೀವು ಫಾಸ್ಟ್ ಫುಡ್ ತಿನ್ನೋದೇ ಇಲ್ಲ. ವೈಜ್ಞಾನಿಕವಾಗಿ ಮೋನೋ ಸೋಡಿಯಂ ಗ್ಲುಕಾಮೇಟ್ ಎಂದು ಕರೆಯಲ್ಪಡುವ ಅಜಿನಮೋಟೋವನ್ನು 1908ರಲ್ಲಿ ಜಪಾನಿ ಸಂಶೋಧಕ ಕಿಕುನೆ ಇಕೆಡಾ, ಎಂಬ ಸಂಶೋಧಕ ಕಂಡುಹಿಡಿದ , ಕಡಲ ಒಳಗೆ ದೊರೆಯುವ ಆಂಕ್ಸೆಂಟ್ ಎಂಬ ಸಸ್ಯದ ಬಳ್ಳಿಗಳ ರಸದಿಂದ ಆವಿಷ್ಕರಿಸಲಾದ ಟೇಸ್ಟ್ ಮೇಕರ್‍ಗೆ ಅಜಿನಮೋಟೋ ಎಂದು ಹೆಸರಿಸಿದ . ಇದರಲ್ಲಿ ಶೇ 78 ಗ್ಲುಟಾಮಿಕ್ ಆಸಿಡ್ ಮುಕ್ತ ರೂಪದಲ್ಲಿದೆ. ಶೇ. 21% ಸೋಡಿಯಂ ಮತ್ತು ಶೇ 1% ಕಲ್ಮಷಗಳಿವೆ. ನಮ್ಮೆಲ್ಲೆರ ಬಾಯಲ್ಲಿ ಎಂಎಸ್‍ಜಿ ಎಂದು ಕರೆಯಲ್ಪಟುವ ಈ ರಾಸಾಯನಿಕ ರುಚಿ ಹೆಚ್ಚಿಸುವ ಜೊತೆಯಲ್ಲಿ ನಿಮ್ಮ ದೇಹದ ಒಂದೊಂದೇ ಅಂಗಗಳನ್ನು ನುಂಗಿ ಬಲಿತೆಗೆದುಕೊಂಡು ಬಿಡುತ್ತದೆ ಮೋನೋ ಸೋಡಿಯಂ ಗ್ಲುಟಾಮೇಟ್ ಹೆಸರಿನಲ್ಲೇ ಸೂಚಿಸುವಂತೆ ಒಂದು ಎಕ್ಸೆಟೋ ಟಾಕ್ಸಿನ್ ಅಂದರೆ ವಿಷಕಾರಿ ಪದಾರ್ಥ. ವಿಶ್ವದ ಪ್ರಖ್ಯಾತ ನರತಜ್ಞರಾದ ಡಾ. ರಸ್ಸೆಲ್ ಬೆಲ್ಲಾಕ್ ಅವರ ಪ್ರಕಾರ ಎಂಎಸ್‍ಜಿ ಮೊದಲು ಎಲ್ಲಾ ನರಗಳ ಶಕ್ತಿಗಳನ್ನು ಕುಗ್ಗಿಸುತ್ತದೆ. ನಂತರ ಶರೀರದಲ್ಲಿ ನಾನಾ ರೀತಿಯ ಆರೋಗ್ಯದ ಏರುಪೇರಾಗಿ ಅನಾರೋಗ್ಯಕರ ಅವಕಾಶಗಳ್ನು ಮಾಡುತ್ತವೆ. ಅತಿಯಾದ ಫಾಸ್ಟ್‍ಫುಡ್ ಬಳಸುವ ಅಭ್ಯಾಸವುಳ್ಳವರು ಆದಷ್ಟು ಕಡಿಮೆ ಮಾಡುವುದು ಒಳಿತು. ಅಜಿನೊಮೋಟೋದಿಂದ ದೇಹದಲ್ಲಿ ಅತಿಯಾದ ಕೊಬ್ಬು ಶೇಖರಗೊಳ್ಳುತ್ತದೆ ಕೊಬ್ಬು ಕರಗದೇ ಸ್ಥೂಲಕಾಯದಂತಾಗಿ ದೇಹದ ಸ್ವಾಸ್ಥ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಅನಾರೋಗ್ಯಕರ ದೇಹದಿಂದ ಮಾನಸಿಕ ನೆಮ್ಮದಿಯು ಸಂಪೂರ್ಣವಾಗಿ ಹದಗೆಡುತ್ತವೆ. ಫಾಸ್ಟ್ ಫುಡ್‍ಗಳ ಅಧಿಕ ಬಳಕೆಯಿಂದಾಗಿ ಕಣ್ಣುನೋವು ಸಹಾ ಸಂಭವಿಸಬಹುದು. ಅನಾರೋಗ್ಯಕರ ಆಹಾರಶೈಲಿಗಳಿಂದಾಗಿ ಕಣ್ಣುಗಳಿಗೆ ದೊರಕಬೇಕಾದ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ದೊರಕದೇ ಕಣ್ಣುಗಳ ಆರೋಗ್ಯ ಹದಗೆಡಬಹುದು. ಅನೇಕ ರೀತಿಯ ತಲೆನೋವಿಗೂ ಅಜಿನಮೋಟೋ ಕಾರಣವಾಗುತ್ತಿದೆ. ದೇಹದ ಅಧಿಕ ಅನಾರೋಗ್ಯಕರ ಆಹಾರಗಳು ಶೇಖರಣೆಗೊಂಡು , ಇತ್ತ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರಕದೇ ಅತ್ತ ಸ್ವಾಸ್ಥಪೂರ್ಣ ಆರೋಗ್ಯವೂ ದೊರಕದೇ ,ಉತ್ತಮ ಆರೋಗ್ಯಶೈಲಿಗಳಿಲ್ಲದೇ ತಲೆನೋವಿನಂತಹಾ ರೋಗಕ್ಕೂ ಅಜಿನಮೋಟೋ ಕಾರಣವಾಗುತ್ತವೆ. ಇದರಲ್ಲಿರುವ ಸೋಡಿಯಂ ಅಥವಾ ಉಪ್ಪು ಅಧಿಕ ಪ್ರಮಾಣದಲ್ಲಿದ್ದು ,ಅಧಿಕ ಉಪ್ಪು ಮೆದುಳನ್ನು ಶಕ್ತಿಹೀನವನ್ನಾಗಿಸುತ್ತದೆ. ಜೊತೆಯಲ್ಲಿ ಮೆದುಳಿನ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಫಾಸ್ಟ್‍ಫುಡ್‍ಗಳ ಅಧಿಕ ಉಪಯೋಗಗಳಿಂದಾಗಿ ಸದಾ ಬೆವರುತ್ತಿರುತ್ತವೆ. ಬೆವರುವಿಕೆಯ ಪರಿಣಾಮದಿಂದಾಗಿ ದೇಹದಲ್ಲಿ ನೀರಿನ ಕೊರತೆಯಿಂದಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.