ಅಂಡಮಾನ್ ಗೆ ಒಂದು ಸುತ್ತು..!

Video Description

ಮನಸೆಳೆಯುವ ಅಂಡಮಾನ್ ದ್ವೀಪದಲ್ಲಿದೆ ಕಣ್ಮನ ಸೆಳೆಯುವ ವಿಶೇಷ ಅಂಡಮಾನ್: ವಿವಿಧ ಸಂಸ್ಕೃತಿ ಸಂಪ್ರದಾಯಗಳ ಆಗರ ಅಂಡಮಾನ್ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿರುವ ಭಾರತದ ಆಧೀನಕ್ಕೆ ಒಳಪಟ್ಟ ದ್ವೀಪ ಸಮೂಹ. ಈ ಸಮೂಹದಲ್ಲಿರುವ ಹೆಚ್ಚಿನ ದ್ವೀಪಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಎಂಬ ಹೆಸರಿನಲ್ಲಿ ಕೇಂದ್ರಾಧೀನ ಪ್ರದೇಶವಾಗಿ ಭಾರತಕ್ಕೆ ಸೇರಿದ್ದರೂ ಕೆಲವು ಸಣ್ಣ ದ್ವೀಪಗಳು ಮ್ಯಾನ್ಮಾರ್ ದೇಶಕ್ಕೆ ಸೇರಿವೆ. ಪುರಾತತ್ವ ಶಾಸ್ತ್ರದ ಅನುಸಾರ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಜನವಸತಿ ಸಾವಿರಾರು ವರ್ಷಗಳಿಂದಲೂ ಕಂಡುಬರುತ್ತದೆ.ಮಧ್ಯ ಶಿಲಾಯುಗದಿಂದ ದೇಶೀಯ ಅಂಡಮಾನ್ ಜನಾಂಗ 18 ನೆಯ ಶತಮಾನದವರೆಗೆ ಅಲ್ಲಲ್ಲಿ ಚದುರಿದಂತೆ ಬದುಕಿದ್ದರು. ಪ್ರಸಿದ್ಧ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಈ ದ್ವೀಪ ಸಮೂಹಗಳ ಅರಿತಿದ್ದು ತನ್ನ ಬರಹಗಳಲ್ಲಿ ಬೇರೊಂದು ಹೆಸರಿನಲ್ಲಿ ಉಲ್ಲೇಖಿಸಿದ್ದಾನೆ.10 ನೆಯ ಶತಮಾನದ ಪರ್ಷಿಯನ್ ನಾವಿಕ ಬುಜುರ್ಗ್ ಇಬಿನ್ ಶೆಹ್ರಿಯಾರ್ ತನ್ನ ಪ್ರವಾಸ ಕಥನ ಐಜಾಬ್ ಅಲ್ ಹಿಂದ್ (ಭಾರತದ ಅದ್ಭುತಗಳು) ಎಂಬ ಪುಸ್ತ್ರಕದಲ್ಲಿ ಈ ದ್ವೀಪ ಸಮೂಹಗಳಿಗೆ ಅಂಡಮಾನ್ ಎಂದೇ ಉಲ್ಲೇಖಿಸಿ ಇಲ್ಲಿ ನರಭಕ್ಷಕ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಬರೆದಿದ್ದಾನೆ. ಅಂಡಮಾನ್ ಮತ್ತು ನಿಕೋಬಾರ್ ಹಲವು ಚಿಕ್ಕ ಪುಟ್ಟ ದ್ವೀಪಗಳ ಸಮೂಹವಾಗಿದ್ದು, ಭಾರತದ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾಗಿದೆ. ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರದ ಸಂಗಮ ಸ್ಥಳದಲ್ಲಿರುವ ಈ ದ್ವೀಪಗಳ ಸಮೂಹವು ಇಂಡೋನೇಷಿಯಾ ದೇಶದ ಆಚೆ ಎಂಬ ಪ್ರದೇಶದಿಂದ ಕೇವಲ 150 ಕಿ.ಮೀ ದೂರದಲ್ಲಿದೆ. ಅಂಡಮಾನ್ ಹಾಗು ನಿಕೋಬಾರ್ ಎರಡು ಪ್ರತ್ಯೇಕವಾದ ದ್ವೀಪ ಸಮೂಹಗಳಾಗಿದ್ದು ಕ್ರಮವಾಗಿ ಉತ್ತರಕ್ಕೂ ಹಾಗು ದಕ್ಷಿಣಕ್ಕೂ ಸ್ಥಿತವಾಗಿವೆ. ಈ ದ್ವೀಪ ಸಮೂಹವನ್ನು ಹಡುಗು ಅಥವಾ ವಿಮಾನ ಪ್ರಯಾಣದ ಮೂಲಕ ಮಾತ್ರ ತಲುಪಬಹುದಾಗಿದೆ. ಉತ್ತರ ದಕ್ಷಿಣವಾಗಿ ಹಬ್ಬಿದ 300 ರಿಂದ 700 ಮೀಟರ್ ಎತ್ತರದ ಬೆಟ್ಟಗಳು ಮತ್ತು ಅದರಿಂದಾದ ಕಣಿವೆಗಳು ಇಲ್ಲಿಯ ಮೇಲ್ಮೈ ಲಕ್ಷಣ.ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ.ನದಿಗಳೆಲ್ಲವೂ ಸಣ್ಣವು.ಸಾಗರಿಕ ಉಷ್ಣವಲಯದ ಹವಾಮಾನ ಇಲ್ಲಿಯದು.ನಿತ್ಯಹರಿದ್ವರ್ಣದ ಕಾಡು ಗಳು, ಮ್ಯಾನ್‍ಗ್ರೋವ್ ಸಸ್ಯಗಳು ಇಲ್ಲಿಯ ಸಸ್ಯ ವೈವಿಧ್ಯಗಳು.ಇಲ್ಲಿ ನಾಟಾ ಮಾಡಬಹುದಾದ ಸುಮಾರು 200 ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು ಕಂಡು ಬರುತ್ತವೆ.ವಾಣಿಜ್ಯಿಕ ಬಳಕೆಯಲ್ಲಿರುವ ಪ್ರಭೇದಗಳಲ್ಲಿ ಗರ್ಜನ್, ಪಡೋಕ್ ಮುಖ್ಯವಾದರೆ ಇತರೆ ಮರಗಳಲ್ಲಿ ರುದ್ರಾಕ್ಷ, ಧೂಪ ಮರ ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಪುರಾತತ್ವ ದಾಖಲೆಯ ಪ್ರಕಾರ, ಇಲ್ಲಿ ಮೂಲನಿವಾಸಿಗಳು 2,200 ವರ್ಷಗಳ ಹಿಂದೆಯೆ ವಾಸಿಸುತ್ತಿದ್ದರೆನ್ನಲಾಗಿದೆ. ನಿಕೋಬಾರ್ ದ್ವೀಪ ಸಮೂಹದಲ್ಲಿ ವಿವಿಧ ಸಂಸ್ಕೃತಿ ಸಂಪ್ರದಾಯಗಳಿಂದ ಬಂದ ಮಿಶ್ರ ಜನರಿಂದ ರೂಪಿತವಾಗಿರುವುದನ್ನು ಕಾಣಬಹುದು. ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಭಾರತದ ಮಹತ್ತರ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಸುತ್ತಲೂ ಸಾಗರದ ಅಗರ್ಭ ಜಲಜೀವರಾಶಿಗಳಿಂದ ತುಂಬಿ ಹೋಗಿರುವ ಈ ಪ್ರದೇಶವು ಪ್ರವಾಸಿಗರಿಗೆ ರೋಮಾಂಚನವನ್ನುಂಟು ಮಾಡುವ ಅನುಭೂತಿಯನ್ನು ಕರುಣಿಸುತ್ತದೆ. ಇಲ್ಲಿ ಹಲವು ಉತ್ತಮವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.