ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ತಡೆಗಟ್ಟಲು ವಿಶ್ವದ ಹಲವೆಡೆ ಲಾಕ್ ಡೌನ್ ಘೋಷಿಸಲಾಗಿದೆ. ಈ ದಿನಗಳಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿ ನೆಲೆಸಿದ್ದಾರೆ. ಕೊರೊನೊ ಬಿಕ್ಕಟ್ಟಿನ ಹೋರಾಟದಲ್ಲಿ, ಪ್ರತಿಯೊಬ್ಬರ ದಿನಚರಿಯೂ ಬದಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ನೀವು ಸಧೃಡವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅಡುಗೆಯಿಂದ ಹಿಡಿದು ವ್ಯಾಯಾಮದವರೆಗೂ ಜನರು ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ. ಆನ್ ಲೈನ್ ವೈದ್ಯರನ್ನು ಸಂಪರ್ಕಿಸುವುದು, ಆನ್ ಲೈನ್ ನಲ್ಲೇ ಫಿಟ್ನೆಸ್ ತರಬೇತಿ ಪಡೆಯುವುದು ಹೆಚ್ಚುತ್ತಿದೆ. ಅನೇಕ ಯೋಗ ತರಗತಿಗಳು ಮತ್ತು ಜಿಮ್ ಸಂಸ್ಥೆಗಳು ಫೇಸ್ ಬುಕ್ ನಿಂದ ಹಾಗೂ ಯೂಟ್ಯೂಬ್ ನಂತಹ ಆನ್ ಲೈನ್ ಫಾಟ್ ಫಾರ್ಮ್ ಗಳಲ್ಲಿ ನೇರ ಪ್ರಸಾರವಾಗುತ್ತಿವೆ. ಮತ್ತು ತರಬೇತಿ, ಗ್ರಾಹಕರಿಗೆ ಆನ್ ಲೈನ್ ತರಗತಿಗಳಿಗೆ ಅವಕಾಶ ನೀಡಲಾಗುತ್ತಿದೆ.
ಯೋಗಾ ದೇಹಕ್ಕೆ ಯಾಕೆ ಬೇಕು..?
ದೇಹವನ್ನು ಸದೃಢವಾಗಿರಲು ಹಾಗೂ ಆರೋಗ್ಯ ಕಾಪಾಡಲು ಯೋಗವನ್ನು ಮಾಡಲಾಗು್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚು ಯೋಗಾ ಸಹಾಯಕಾರಿಯಾಗಬಲ್ಲದ್ದು. ನಿಯಮಿತವಾಗಿ ಯೋಗ ಮಾಡಿದರೆ, ಒತ್ತಡ ನಿವಾರಣೆಯಾಗುವುದಲ್ಲದೇ, ಉರಿಯೂತ ಸೇರಿದಂತೆ ಅನೇಕ ರೋಗಗಳನ್ನು ನಿವಾರಿಸಬಹುದಾಗಿದೆ.ಆದ್ದರಿಂದ ಯೋಗ ಮನಸ್ಸಿನ ಸ್ವಾಸ್ಥ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು.
ಪ್ರಾಣಾಯಾಮ
ಪ್ರಾಣಾಯಾಮವು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನಿಮ್ಮ ದೇಹಕ್ಕೆ ಚೈತನ್ಯ ನೀಡುವುದಲ್ಲದೇ, ಸಕಾರಾತ್ಮಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿ ಮಾರ್ಗಗಗಳಲ್ಲಿ ಪ್ರಾಣಾಯಾಮ ಒಂದಾಗಿದೆ. ಸುಖಾಸನ ಅಥವಾ ಪ್ರಾಣಾಯಾಮ ಎರಡೂ ಆಳವಾದ ಉಸಿರಾಟವನ್ನು ಉತ್ತೇಜಿಸುತ್ತವೆ. ಒತ್ತಡವನ್ನುಂಟು ಮಾಡುವ ಹಾರ್ಮೋನ್ ನನ್ನು ನಿಯಂತ್ರಿಸಲು ಪ್ರಾಣಾಯಾಮ ಸಹಾಯ ಮಾಡುತ್ತದೆ. ಹೃದಯ ಬಡಿತ ಯಾವುದೇ ತೊಂದರೆಗಳನ್ನು ನಿವಾರಿಸುತ್ತದೆ.

ಮೀನು ಭಂಗಿ
ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಮತ್ಸ್ಯಾಸನವು (ಮೀನು ಭಂಗಿ) ಯೋಗಾಸನ ಸಹಾಯಕಾರಿಯಾಗಬಲ್ಲದ್ದು, ಈ ಯೋಗಾ ಅಭ್ಯಾಸದಿಂದ ಕುತ್ತಿಗೆ, ಹೊಟ್ಟೆ, ಮತ್ತು ಅನೇಕ ವಿಕಾರಗಳು ದೂರವಾಗುತ್ತವೆ. ಕತ್ತಿನ ಭಾಗಕ್ಕೆ ಆ ಆಸನದಿಂದ ಹೆಚ್ಚು ಲಾಭ ದೊರೆಯುತ್ತದೆ. ಥೈರಾಯ್ಡ್ ಕಾರ್ಯ ನಿರ್ವಹಣೆಯನ್ನು ಸಮತೋಲಗೊಳಿಸಲು ಈ ಭಂಗಿಯು ಸಹಾಯ ಮಾಡುತ್ತದೆ. ಥೈರಾಯ್ಡ್ ಕಡಿಮೆಯಾಗಿ ಉಂಟಾಗುವ ತೊಡಗುಗಳನ್ನು ನಿವಾರಿಸುತ್ತದೆ.

ಗೋಡೆಯ ಮೇಲೆ ಕಾಲುಗಳನ್ನಿಡುವ ಭಂಗಿ
ಹೆಸರೇ ಸೂಚಿಸುವಂತೆ ಗೋಡೆಗಳ ಮೇಲೆ ಕಾಲುಗಳನ್ನಿಡುವ ಭಂಗಿಯನ್ನು ವಿಪರಿಟಾ ಕರಣಿ ಎಂದು ಕರೆಯಲಾಗುತ್ತದೆ. ಇದು ನರಗಳ ಸಂಪರ್ಕ ಹೆಚ್ಚಿಸುತ್ತದೆ. ರಕ್ತದ ಹರಿವನ್ನು ಸುಧಾರಿಸಲು ನೆರವಾಗುತ್ದೆ. ನಿಮ್ಮ ದೇಹಕ್ಕೆ ಚೈತನ್ಯ ನೀಡುವುದಲ್ಲದೇ, ಸಂತಾನೋತ್ಪತ್ತಿ ಮತ್ತು ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ಒಳ್ಳೆಯದು ಎಂದು ಹೇಳಬಹುದು.

ಉತ್ತನಾಸನ ಭಂಗಿ
ಈ ಯೋಗ ಭಂಗಿ ಸೈನಸ್ ನಿಂದ ರಕ್ಷಣೆ ನೀಡುತ್ತದೆ. ಲೋಳೆಯ ಪೊರೆಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಲು ಸಹಾಯ ಕಾರಿಯಾಗಿದೆ. ಈ ಭಂಗಿಯಲ್ಲಿ ಹೊಟ್ಟೆಯ ಸ್ನಾಯುಗಳು ಒಳಮುಖವಾಗಿ ಸೆಳೆಯಲ್ಪಡುವ ಕಾರಣ ಕೊಬ್ಬು ಶೀರ್ಘವಾಗಿ ಕರಗಲು ಸಾಧ್ಯವಾಗುತ್ತದೆ.
