ಉಬ್ಬಸದ ಸಮಸ್ಯೆ ಚಳಿಗಾಲದಲ್ಲಿ ಶುರು..!

  • by

ಉಬ್ಬಸ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದು
ಉಬ್ಬಸ ಸಮಸ್ಯೆಯುಳ್ಳ ರೋಗಿಗಳು ಸಾಮಾನ್ಯವಾಗಿ ಇನ್ಹೇಲರ್ ಬಳಕೆ ಮಾಡುತ್ತಾರೆ. ಅಥವಾ ವೈದ್ಯರ ಸಲಹೆ
ಮೇರೆಗೆ ಹಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇನ್ಹೇಲರ್ ಬಳಸದೆ ಮನೆಯಲ್ಲೇ ಉಬ್ಬಸದ
ತೊಂದರೆಯನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಈ ಪೈಕಿ, ಪ್ರಮುಖ ಅಥಾ ಸುಲಭವಾದ 6 ವಿಧಾನಗಳ
ಮೂಲಕ ಉಬ್ಬಸ ಸಮಸ್ಯೆಗೆ ನಿವಾರಣೆ ಮಾಡಿಕೊಳ್ಳಬಹುದು. ಅದು ಹೇಗೆ ಗೊತ್ತಾ? ಈ ಕೆಳಗಿನ ವಿವರ ನೋಡಿದರೆ
ನಿಮಗೆ ಗೊತ್ತಾಗುತ್ತದೆ.
ಉಸಿರಾಟದಲ್ಲಿ ಕಾಣಬರುವ ಯಾವುದೇ ಅಸಹಜತೆಯನ್ನು ಉಬ್ಬಸ ಎಂದು ಸುಲಭಪದಗಳಲ್ಲಿ
ಕರೆಯಬಹುದು. ಆದರೆ ಕೆಲವೊಮ್ಮೆ ಉಬ್ಬಸ ತೀವ್ರತರನಾಗಿದ್ದು ಪ್ರತಿ ನಿಃಶ್ವಾಸದ ಸದ್ದಿನಲ್ಲಿ ಚಿಕ್ಕದಾಗಿ ಸಿಳ್ಳೆ
ಹೊಡೆದ ಶಬ್ದವೂ ಮಿಳಿತವಾಗಿರುತ್ತದೆ. ತೀವ್ರ ಉಬ್ಬಸವಿದ್ದರೆ ಉಶ್ವಾಸ-ನಿಃಶ್ವಾಸಗಳಲ್ಲೆರಡಲ್ಲಿಯೂ ಸೀಟಿಯ
ಸದ್ದು ಕೇಳಿಬರಬಹುದು. ಇದಕ್ಕೆ ಪ್ರಮುಖ ಕಾರಣ ಶ್ವಾಸನಾಳಗಳು ಕಿರಿದಾಗುವುದು. ಈ ತೊಂದರೆಯನ್ನು
ನಿರ್ಲಕ್ಷಿಸಿದರೆ ಕಾಲಕ್ರಮೇಣ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಹಾಗೂ ಹೆಚ್ಚಿನ
ಪರೀಕ್ಷೆ ಮತ್ತು ಚಿಕಿತ್ಸೆಗಳ ಅಗತ್ಯತೆ ತಲೆದೋರಬಹುದು. ಉಬ್ಬಸ ಎದುರಾಗಲು ಕೆಲವಾರು ಕಾರಣಗಳಿವೆ.
ಇವುಗಳಲ್ಲಿ ಕೆಲವು ಅಲ್ಪಪ್ರಮಾಣದ ಉಬ್ಬಸಕ್ಕೆ ಕಾರಣವಾದರೆ ಕೆಲವು ತೀವ್ರತರದ ಉಬ್ಬಸಕ್ಕೆ
ಕಾರಣವಾಗಬಹುದು.
ಮೂಗಿನ ಮೂಲಕ ದ್ರವಾಹಾರದ ನಳಿಕೆಯನ್ನು ಅಳವಡಿಸಿದ ಬಳಿಕ ಮೂಗಿನೊಳಗಿನ ಗಡ್ಡೆಗಳು
ಉಸಿರಾಟದಲ್ಲಿ ಪರಕೀಯ ವಸ್ತುಗಳನ್ನು ಒಳಗೆಳೆದುಕೊಳ್ಳುವುದು ಸಾಮಾನ್ಯ ಆರೋಗ್ಯವಂತರು
ಬಲವಂತವಾಗಿ ಉಸಿರು ಎಳೆದುಕೊಳ್ಳುವುದು ಶ್ವಾಸನಾಳಗಳಲ್ಲಿ ಉಸಿರಾಟಕ್ಕೆ ತಡೆಯೊಡ್ದುವ
ಕಾರಣಗಳು, ಉದಾಹರಣೆಗೆ ಅಸ್ತಮಾ ಕ್ರೂಪ್ ಮತ್ತು ಲ್ಯಾರಿಂಜೈಟಿಸ್ ನಂತಹ ಸೋಂಕುಗಳು
ಶ್ವಾಸನಳಿಕೆಯ ದ್ವಾರ ಮುಚ್ಚುವುದು ಉಬ್ಬಸದ ಹಲವಾರು ಲಕ್ಷಣಗಳಿವೆ. ಪ್ರಮುಖವಾಗಿ ಉಸಿರಾಟದ
ಸಮಯದಲ್ಲಿ ಸೀಟಿ ಹೊಡೆದಂತೆ ಸದ್ದಾಗುವುದು ಹಾಗೂ ಉಸಿರಾಟ ಸರಾಗವಾಗಿರದೇ ಪ್ರತಿ ಉಸಿರನ್ನೂ
ಬಲವಂತವಾಗಿ ಎಳೆದುಕೊಳ್ಳುವುದು ಹಾಗೂ ಎದೆಯ ಭಾಗದಲ್ಲಿ ಒತ್ತಿಕೊಂಡುರುವ ಭಾವನೆ
ಮೂಡುತ್ತದೆ. ಅಚ್ಚರಿ ಎಂದರೆ ಉಸಿರಾಟದ ಸೀಟಿಯ ದನಿ ಕಿವಿ ಮುಚ್ಚಿಕೊಂಡಿದ್ದಾಗ ಈ ಸದ್ದು ಅತಿ
ಸ್ಪಷ್ಟವಾಗಿ ಕೇಳಿಸುತ್ತದೆ. ಉಸಿರಾಟದ ತೊಂದರೆ ರೋಗಿಯ ನೋಟ, ಹಸಿವು, ಉಸಿರಾಟದ ಗತಿ
ಹಾಗೂ ನಿದ್ದೆಯ ಗತಿಗಳು ಬದಲಾಗುತ್ತವೆ. ಉಸಿರಾಟ ಸದ್ದಿನಿಂದ ಕೂಡಿರುವ ಜೊತೆಗೇ ಎದೆಯಲ್ಲಿಯೂ
ದನಿ, ಸತತ ಕೆಮ್ಮು ಮತ್ತು ಜ್ವರ ಆವರಿಸುತ್ತದೆ. ಉಬ್ಬಸ ಯಾವುದೇ ವಯಸ್ಸಿನಲ್ಲಿ, ಯಾರಿಗೂ
ಕಾಣಿಸಿಕೊಳ್ಳಬಹುದು. ಆದರೆ ಕೆಲವು ಲಕ್ಷಣಗಳನ್ನು ಗಮನಿಸಿ ಸೂಕ್ತ ಎಚ್ಚರಿಕೆ ವಹಿಸುವ ಮೂಲಕ

ಮುಂದೆ ಇದು ಉಬ್ಬಸಕ್ಕೆ ತಿರುಗುವುದನ್ನು ತಪ್ಪಿಸಬಹುದು. ಅಸ್ತಮಾ ಸಹಾ ಉಸಿರಾಟಕ್ಕೆ ಸಂಬಂಧಿಸಿದ
ಕಾಯಿಲೆಯಾಗಿದೆ ಹಾಗೂ ವಂಶಪಾರಂಪರ್ಯವಾಗಿ ಬರುತ್ತದೆ. ಆದರೆ ಉಬ್ಬಸ ಅಲರ್ಜಿ, ಶ್ವಾಸಕೋಶದ
ಕ್ಯಾನ್ಸರ್ ಹಾಗೂ ಧೂಮಪಾನಿಗಳಲ್ಲಿ ಆವರಿಸುವ ಸಾಧ್ಯತೆ ಹೆಚ್ಚು. ಅಲ್ಲದೇ ಪುಟ್ಟ ಮಕ್ಕಳಿಗೆ ಕೆಲವು
ಸೋಂಕುಗಳ ಮೂಲಕವೂ ಎದುರಾಗಬಹುದು.
ಮೊದಲಾಗಿ ವೈದ್ಯರು ರೋಗಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ರೋಗಗ ವಿವರ ಪಡೆದುಕೊಳ್ಳುತ್ತಾರೆ.
ಮುಖ್ಯವಾಗಿ ಉಬ್ಬಸ ಎಂದಿನಿಂದ ಪ್ರಾರಂಭವಾಗಿದೆ ಎಂಬ ಪ್ರಶ್ನೆ ಮೊದಲಾಗಿ ಕೇಳಲಾಗುತ್ತದೆ. *ಬಳಿಕ
ಕೆಲವು ಪರೀಕ್ಷೆಗಳನ್ನು ನಡೆಸಿ ಇದು ಎಷ್ಟರ ಮಟ್ಟಿನ ತೀವ್ರತೆಗೆ ತಲುಪಿದೆ ಎಂಬುದನ್ನು
ಕಂಡುಕೊಳ್ಳಲಾಗುತ್ತದೆ. ಉಬ್ಬಸ ಸತತವಾಗಿದೆಯೇ ಅಥವಾ ಬಿಟ್ಟು ಬಿಟ್ಟು ಬರುತ್ತದೆಯೇ, ನಿಃಶ್ವಾಸದ
ಸಮಯದಲ್ಲಿ ಕಫ ಹೊರಬರುತ್ತದೆಯೇ ಮೊದಲಾದವುಗಳನ್ನು ಪ್ರಶ್ನಿಸಿ ವೈದ್ಯರು ರೋಗದ
ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಪುಟ್ಟ ಮಕ್ಕಳಿಗೆ ಈ ಪರೀಕ್ಷೆಗಳ ಹೊರತಾಗಿ ಇವರು ಅರಿವಿಲ್ಲದೇ
ಯಾವುದಾದರೂ ವಸ್ತುಗಳನ್ನು ನುಂಗಿದ್ದರೆ ಅಥವಾ ಉಸಿರಾಟದ ಮೂಲಕ ಶ್ವಾಸನಳಿಕೆಯಲ್ಲೇನಾದರೂ
ಸಿಕ್ಕಿಕೊಂಡಿದ್ದರೆ, ಉದಾಹರಣೆಗೆ ನಾಣ್ಯಗಳು, ಕಾಗದದ ಚೂರುಗಳು, ಪುಟ್ಟ ಆಟಿಕೆಯ ಬಿಡಿಭಾಗಗಳು,
ಮೊದಲಾದವು ಇವೆಯೇ ಎಂದು ಪರೀಕ್ಷಿಸಲಾಗುತ್ತದೆ. ಇವೂ ಉಬ್ಬಸಕ್ಕೆ ಕಾರಣವಾಗಬಹುದು.
ತೇವಭರಿತ ಗಾಳಿಯ ಸೇವನೆ – ಹಬೆಯನ್ನು ಉಸಿರಾಡುವ ಮೂಲಕ ಶ್ವಾಸನಾಳಗಳಲ್ಲಿ ಕಟ್ಟಿಕೊಂಡಿದ್ದ
ತಡೆ ತೆರವಾಗುವುದು ಮಾತ್ರವಲ್ಲ ಕಫವನ್ನೂ ಕರಗಿಸಿ ಶ್ವಾಸದ್ವಾರವನ್ನು ನಿರಾಳವಾಗಿಸುತ್ತದೆ ಹಾಗೂ
ಉಸಿರಾಟ ಸರಾಗವಾಗುತ್ತದೆ. ಉಗುರುಬೆಚ್ಚನೆಯ ನೀರು, ಗಿಡಮೂಲಿಕೆಗಳ ಟೀ ಅಥವಾ ಬಿಸಿ ಹಾಲು
ಯಾವುದಾದರೊಂದು ಪಾನೀಯವನ್ನು ಬಿಸಿಯಾಗಿಯೇ ಸೇವಿಸುವ ಮೂಲಕ ಉಸಿರಾಟ
ಸರಾಗವಾಗುತ್ತದೆ ಹಾಗೂ ಹಠಮಾರಿ ಕಫ ಕರಗಿ ನೀರಾಗುವ ಮೂಲಕ ತಡೆ ಇಲ್ಲವಾಗುತ್ತದೆ. ವಿಟಮಿನ್
ಡಿ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು ಉದಾಹರಣೆಗೆ ಎಣ್ಣೆಯುಕ್ತ ಮೀನುಗಳು
(ಸಾಲ್ಮನ್, ಬಂಗಡೆ, ಕೆಂಪು ಮಾಂಸ) ವಿಟಮಿನ್ ಇ ಹೆಚ್ಚಿರುವ ಆಹಾರಗಳು (ಪಾಲಕ್ ಸೊಪ್ಪು,
ಸೂರ್ಯಕಾಂತಿ ಹೂವಿನ ಬೀಜಗಳು, ಶೇಂಗಾಬೀಜದ ಬೆಣ್ಣೆ, ಬಾದಾಮಿ) ಮೊದಲಾದವುಗಳನ್ನು ಹೆಚ್ಚಾಗಿ
ಸೇವಿಸುವ ಮೂಲಕ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗುತ್ತವೆ. ಹಸಿಯಾಗಿ
ತಿನ್ನಬಹುದಾದ ತರಕಾರಿಗಳಾದ ಪಾಲಕ್, ಬ್ರೋಕೋಲಿ, ಟೊಮಾಟೋ, ಕೆಂಪು ದೊಣ್ಣೆಮೆಣಸು,
ಕಿತ್ತಳೆಹಣ್ಣು ಮೊದಲಾದವುಗಳ ಸೇವನೆಯೂ ಉತ್ತಮ. ವೈದ್ಯರು ನೀಡಿದ ಸೂಚನೆಗಳನ್ನು ಸರಿಯಾಗಿ
ಪಾಲಿಸುವುದು ಹಾಗೂ ಸಲಹೆ ಮಾಡಿದ ಔಷಧಿಗಳನ್ನು ತಪ್ಪದೇ ಸೇವಿಸುವುದು ಅಗತ್ಯವಗಿದೆ. ವೈದ್ಯರು

ಉಬ್ಬಸಕ್ಕೆ ನೀಡಿರುವ ಔಷಧಿಗಳಲ್ಲಿ ಕೆಲವು ನಿಯಮಿತವಾಗಿ ಸೇವಿಸಬೇಕಾಗಿದ್ದರೆ ಕೆಲವನ್ನು ಸದಾ
ತಮ್ಮೊಂದಿಗಿರಿಸಿ ತುರ್ತು ಸಮಯದಲ್ಲಿ ಸೇವಿಸಬೇಕಾಗುತ್ತದೆ. ಇದರ ಹೊರತಾಗಿಯೂ ಯಾವುದಾದರೂ
ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು. pursed lip breathing ಎಂಬ
ವಿಧಾನದ ಉಸಿರಾಟವನ್ನು ಕಲಿತು ಅಭ್ಯಾಸಮಾಡಿಕೊಳ್ಳಿ. (ಮೂಗಿನಿಂದ ನಿಧಾನವಾಗಿ ಪೂರ್ಣ ಉಸಿರು
ಒಳಗೆಳೆದುಕೊಳ್ಳುವುದು ಹಾಗೂ ಸೀಟಿ ಹೊಡೆಯುವಂತೆ ತುಟಿಗಳನ್ನು ವೃತ್ತಾಕಾರವಾಗಿಸಿ ನಿಧಾನವಾಗಿ
ಬಾಯಿಯಿಂದ ಉಸಿರನ್ನು ಪೂರ್ಣವಾಗಿ ಹೊರಬಿಡುವುದು). ಪ್ರಾರಂಭದಲ್ಲಿ ಈ ಕ್ರಿಯೆಯನ್ನು ನಿಧಾನವಾಗಿ
ಪ್ರಾರಂಭಿಸಿ ಅಭ್ಯಾಸವಾದಂತೆ ಕೊಂಚ ವೇಗ ಹೆಚ್ಚಿಸಬಹುದು. ಈ ಮೂಲಕ ಶ್ವಾಸಕೋಶದಿಂದ ಗರಿಷ್ಟ
ಮಟ್ಟಿನ ಆಮ್ಲಜನಕವನ್ನು ಪಡೆಯಬಹುದು. ಧೂಮಪಾನ ಯಾವತ್ತಿದ್ದರೂ, ಯಾರಿಗಾದರೂ
ಅಪಾಯಕಾರವೇ ಹೌದು. ಉಬ್ಬಸವಿರುವ ರೋಗಿ ಧೂಮಪಾನಿಯೂ ಆಗಿದ್ದರೆ ಈ ಸ್ಥಿತಿ ಗಂಭೀರ ಮಟ್ಟದ
ಬ್ರಾಂಖೈಟಿಸ್ ಹಾಗೂ ಎಂಫೈಸಿಮಾ ಎಂಬ ಕಾಯಿಲೆಗಳಿಗೆ ಪರಿವರ್ತಿತವಾಗಬಹುದು. ಹಾಗಾಗಿ
ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸುವತ್ತ ಧನಾತ್ಮಕ ಧೋರಣೆ ತಳೆಯಬೇಕು.
ಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಅದರ ಆವಿಯನ್ನು ಉಸಿರಾಟದ ಮೂಲಕ ದೇಹದೊಳಕ್ಕೆ ಎಳೆದುಕೊಂಡರೆ
ಉಬ್ಬಸ ಸಮಸ್ಯೆಗೆ ಉತ್ತಮ ಪರಿಣಾಮ ಬೀರುತ್ತದೆ. ಉಸಿರಾಡಲು ಕಷ್ಟವಾದಾಗ ಬಿಸಿ ನೀರಿನಿಂದ ಶವರ್‌ ಬಾತ್‌
ಮಾಡಿದರೆ ಉಬ್ಬಸದ ತೊಂದರೆಯಿಂದ ರಿಲ್ಯಾಕ್ಸ್‌ ಅನಿಸುತ್ತದೆ. ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ
ಕುಡಿದರೆ ಸಾಕು ಉಸಿರಾಟ ಸರಾಗವಾಗುತ್ತದೆ. ಇದರಿಂದ ಉಬ್ಬಸ ಸಮಸ್ಯೆಯಿಂದ ರಿಲೀಫ್‌ ನೀಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ