ಪೆಡಿಕ್ಯೂರ್ ಮೆನಿಕ್ಯೂರ್ ಪ್ರಯೋಜನಗಳೇನು?
ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಅನ್ನು ಸರಿಯಾಗಿ ಮಾಡದೆ ಇದ್ದ ಪಕ್ಷದಲ್ಲಿ ಅದು ಹಲವಾರು ಸೋಂಕುಗಳಿಗೆ ಮತ್ತು
ರೋಗಗಳಿಗೆ ಕಾರಣವಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?
ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಕೇವಲ ನಿಮ್ಮ ಕೈ ಮತ್ತು ಪಾದಗಳಿಗೆ ಸೌಂದರ್ಯವನ್ನಷ್ಟೇ ನೀಡುವುದಿಲ್ಲ. ಅವುಗಳು
ನಿಮ್ಮ ಆರೋಗ್ಯದ ಮೇಲೆ ಸಹ ಪ್ರಭಾವ ಬೀರುತ್ತದೆ. ಹಾಗಾಗಿ ನೀವು ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಮಾಡಿಕೊಳ್ಳಲು
ಪಾರ್ಲರಿಗೆ ಹೋಗುವ ಮೊದಲು ಈ ಕೆಲಕಂಡ ಸುರಕ್ಷಿತ ಸಲಹೆಗಳನ್ನು ತಪ್ಪದೆ ಗಮನಿಸಿ.
ಶುದ್ಧತೆ: ನೀವು ಭೇಟಿ ನೀಡುವ ಸೆಲೂನ್ ಸ್ವಚ್ಛವಾಗಿದೆಯೇ ಮತ್ತು ಅದರಲ್ಲಿ ಆರೋಗ್ಯಕರವಾದ ವಾತಾವರಣವನ್ನು
ಕಾಪಾಡಲಾಗಿದೆ ಯೇ ಎಂದು ಗಮನಿಸಿ. ಮೆನಿಕ್ಯೂರ್ ಮಾಡಿಸುವ ಟೇಬಲ್ ಯಾವುದೇ ಕತ್ತಿರಿಸಿದ ಉಗುರುಗಳಿಂದ
ಮುಕ್ತವಾಗಿರಬೇಕು ಎಂಬುದನ್ನು ಮರೆಯಬೇಡಿ. ಪೆಡಿಕ್ಯೂರ್ ಕುರ್ಚಿಗಳು ಸಹ ಕತ್ತರಿಸಿದ ಚರ್ಮದ ತುಂಡುಗಳಿಂದ
ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಮಾಡುವ ಸಾಧನಗಳನ್ನು ಯಾವ ರೀತಿ ಸಂಸ್ಕರಿಸುತ್ತಾರೆ ಎಂದು
ಪಾರ್ಲರ್ರವರನ್ನು ಕೇಳಲು ಸಂಕೋಚಪಡಬೇಡಿ. ಎಲ್ಲಾ ಸಾಧನಗಳನ್ನು ತೊಳೆಯಬೇಕು, ಸೋಂಕು
ಮುಕ್ತಗೊಳಿಸಬೇಕು ಮತ್ತು ಬಳಸುವ ಮೊದಲು ಸಂಸ್ಕರಿಸ ಬೇಕಾಗುತ್ತದೆ. ಮೆನಿಕ್ಯೂರ್ ಮತ್ತು ಪೆಡಿಕ್ಯೂರ್
ಟಬ್ಗಳನ್ನು ಸಹ ಬಳಸುವ ಮೊದಲು ಚೆನ್ನಾಗಿ ತೊಳೆದು, ಸೋಂಕು ಮುಕ್ತಗೊಳಿಸ ಬೇಕಾಗುತ್ತದೆ. ಒಂದು ವೇಳೆ
ನೀವು ಕೊಳೆಯಾದ ಪಾರ್ಲರ್ ಮತ್ತು ಸರಿಯಾಗಿ ಸಂಸ್ಕರಣೆ ಮಾಡದ ಸಾಧನಗಳನ್ನು ಕಂಡಲ್ಲಿ, ನೀವು
ಸೇವೆಯನ್ನು ಪಡೆಯಲು ಅದು ಹೇಳಿ ಮಾಡಿಸಿದ ಸ್ಥಳವಲ್ಲವೆಂದು ಪರಿಗಣಿಸಿ, ಬೇರೆ ಕಡೆಗೆ ಹೋಗಿ.
ಕೈಗಳ ಸ್ವಚ್ಛತೆ(ಮೆನಿಕ್ಯೂರ್ – Manicure):
ಕೈಗಳಲ್ಲಿ ನೈಜ ಸುಂದರತೆ ಮತ್ತು ಆರೋಗ್ಯ ಕಳೆ ಬರಬೇಕಾದರೆ ಕೈಗಳು ಸ್ವಚ್ಛವಾಗಿರಬೇಕು. ಚಳಿಗಾಲದಲ್ಲಿ ಕೈ ಚರ್ಮ
ಒಡೆದು ಸುಕ್ಕಾಗುತ್ತದೆ, ಬೇಸಿಗೆಯಲ್ಲಿ ಉರಿಯುತ್ತದೆ. ಇದಕ್ಕೆ ಪರಿಹಾರ ಮೆನಿಕ್ಯೂರ್. ನಿಮ್ಮ ಸುಂದರ ಕೈಗಳು ನಿಮ್ಮ
ವ್ಯಕ್ತಿತ್ವದ ಪ್ರತೀಕ. ಆದ್ದರಿಂದ ಕೈಗಳ ಸ್ವಚ್ಛತೆಯ ಬಗ್ಗೆ ಕ್ರಮವಾದ ವಿಧಾನ ಅಗತ್ಯ.
ವಿಧಾನ:
- ಉಗುರಿನ ಬಣ್ಣ ತೆಗೆಯಿರಿ.
- ನೈಲ್ ಫೈಲರ್ ಸಹಾಯದಿಂದ ಉಗುರಿಗೆ ಆಕಾರ ಕೊಡಿ.
- ಡೆಟಾಲ್, ಶ್ಯಾಮ್ಪೂ , ಅಮೋನಿಯಾ(10-15ಹನಿ) ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ ಬಿಸಿ ನೀರಿನಲ್ಲಿ
ಕೈಗಳನ್ನು 10- 15 ನಿಮಿಷ ನೆನೆಸಿ. - ನೆನೆದ ಕೈಗಳ ಮೇಲಿನ ಕೊಳೆಯನ್ನು ಪುಮಿಕ್ ಸ್ಟೋನ್ ನ ಸಹಾಯದಿಂದ ಉಜ್ಜಿ ತೆಗೆಯಿರಿ.
- ಉಗುರಿನ ಮೇಲೆ ಬೆಳೆದ ಚರ್ಮವನ್ನು ಪುಶರ್ ನ ಬಳಸಿ ಮೃದುವಾಗಿ ಹಿಂದಕ್ಕೆ ತಳ್ಳಿ.
- ತಳ್ಳಿದ ಚರ್ಮವನ್ನು ಕ್ಯುಟಿಕಲ್ ಕಟರ್ ನ ಬಳಸಿ ಕತ್ತರಿಸಿ.
- ಕ್ಲೆನ್ಸರ್ ನ್ನು ಉಗುರಿನ ಸುತ್ತಲೂ ಹಾಗೂ ಉಗುರಿನ ಕೆಳಗೆ ಇರುವ ಕೊಳೆಯನ್ನು ಸ್ವಚ್ಛಗೊಳಿಸಿ.
8.ಕೈಗಳನ್ನು ಕ್ರೀಮ್ ನಿಂದ ಮಸಾಜ್ ಮಾಡಿ.
ಮೆನಿಕ್ಯೂರ್ ಮಾಡಿಕೊಳ್ಳಲು ಬೇಕಾಗುವ ಸಲಕರಣೆಗಳು ಮತ್ತು ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯ. ಹೆಬ್ಬೆರಳಿನ
ಸಹಾಯದಿಂದ ಮೇಲ್ಮುಖವಾಗಿ ಮಸಾಜ್ ಮಾಡಿ.
b. ಪ್ರತಿ ಬೆರಳಿನ ಕೊನೆಗೆ ಒತ್ತಡ ಕೊಟ್ಟು ಮಸಾಜ್ ಮಾಡಿ.
c. 3-4 ನಿಮಿಷ ಮಸಾಜ್ ಮಾಡಿ.
- ಮುಲ್ತಾನಿ ಮಿಟ್ಟಿ ಗೆ 1 ಚ. ಹೈಡ್ರೋಜನ್ ಪೆರಾಕ್ಸೈಡ್, (10-15 ಹನಿ) ಅಮೋನಿಯಾ ಮತ್ತು ಮಿಕ್ಸ್ ಮಾಡಲು
ರೋಸ್ ವಾಟರ್ ಬಳಸಿ ಪ್ಯಾಕ್ ಹಾಕಿ ಒಣಗಿದ ನಂತರ ತೆಗೆಯಿರಿ. - ಬೇಕಾದ ನೈಲ್ ಪಾಲಿಶ್ ಹಚ್ಚಿಕೊಳ್ಳಿ.
ಮುಖ, ಕೈಗಳ ಸ್ವಚ್ಛತೆ ಹೇಗೆ ಮುಖ್ಯವೋ ಹಾಗೆ ಕಾಲುಗಳ , ಪಾದಗಳ ಸ್ವಚ್ಛತೆ ಮತ್ತು ರಕ್ಷಣೆಯ ಕಡೆ ಗಮನ ಹರಿಸಿದರೆ
ಸುಂದರ ಕಾಲುಗಳು ನಿಮ್ಮದಾಗಬಹುದು. ಕಾಲಿನ ಮಸಾಜ್ ಮಾಡುವುದರಿಂದ ಸಣ್ಣ ಪುಟ್ಟ ನೋವು
ನಿವಾರಣೆಯಾಗುತ್ತದೆ. ಹೀಗೆ ಕ್ರಮಬದ್ಧ ಮಸಾಜ್ ನಿಂದ ಬೆನ್ನು ಹಾಗೂ ಸೊಂಟದ ನೋವನ್ನು ನಿವಾರಿಸಬಹುದು.
ಪಾದಗಳ ಹಿಮ್ಮಡಿಗಳಲ್ಲಿ ಬಿರುಕು ಬಿಟ್ಟಿರುತ್ತದೆ. ಇಂಥ ಜಾಗಗಳಲ್ಲಿ ಕೊಳೆ ಸೇರಿಕೊಂಡು ಪಾದಗಳನ್ನು ನೆಲಕ್ಕೆ ಇಡಲು
ಆಗದಂತಹ ನೋವು ಉಂಟಾಗುತ್ತದೆ. ಆದ್ದರಿಂದ ಪಾದಗಳ ಸ್ವಚ್ಛತೆ ಬಹಳ ಮುಖ್ಯ. ಕೈಗಳಂತೆ ಕಾಲುಗಳನ್ನು ಸಹ
ಕ್ರಮವಾಗಿ ಕ್ಲೀನ್ ಮಾಡಬೇಕು.
ಉಗುರಿನ ಬಣ್ಣ ತೆಗೆಯಿರಿ.
ಡೆಟಾಲ್, ಶ್ಯಾಮ್ಪೂ , ಅಮೋನಿಯಾ(10-15ಹನಿ) ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ ಬಿಸಿ ನೀರಿನಲ್ಲಿ
ಕಾಲುಗಳನ್ನು 10- 15 ನಿಮಿಷ ನೆನೆಸಿ.
ಕಾಲುಗಳು ಹಿಮ್ಮಡಿಗಳಲ್ಲಿ ಬಿರುಕು ಬಿಟ್ಟಿದ್ದರೆ ಮೊದಲು ಸ್ಕ್ರಬರ್ ನಿಂದ ಡೆಡ್ ಸೆಲ್ಸ್ಅನ್ನು ಕೆಳಮುಖವಾಗಿ ಉಜ್ಜಿರಿ.
ನೆನೆದ ಕಾಲುಗಳ ಮೇಲಿನ ಕೊಳೆಯನ್ನು ಪುಮಿಕ್ ಸ್ಟೋನ್ ನ ಸಹಾಯದಿಂದ ಉಜ್ಜಿ ತೆಗೆಯಿರಿ.
ಉಗುರಿನ ಮೇಲೆ ಬೆಳೆದ ಚರ್ಮವನ್ನು ಪುಶರ್ ನ ಬಳಸಿ ಮೃದುವಾಗಿ ಹಿಂದಕ್ಕೆ ತಳ್ಳಿ.
ತಳ್ಳಿದ ಚರ್ಮವನ್ನು ಕ್ಯುಟಿಕಲ್ ಕಟರ್ ನ ಬಳಸಿ ಕತ್ತರಿಸಿ.
ಕ್ಲೆನ್ಸರ್ ನ್ನು ಉಗುರಿನ ಸುತ್ತಲೂ ಹಾಗೂ ಉಗುರಿನ ಕೆಳಗೆ ಇರುವ ಕೊಳೆಯನ್ನು ಸ್ವಚ್ಛಗೊಳಿಸಿ.
ಕಾಲುಗಳನ್ನು ಕ್ರೀಮ್ ನಿಂದ ಮಸಾಜ್ ಮಾಡಿ.
ಮಸಾಜ್ ಮತ್ತು ಪ್ಯಾಕ್:
ಹೆಬ್ಬೆರಳಿನ ಸಹಾಯದಿಂದ ಮೇಲ್ಮುಖವಾಗಿ ಮಸಾಜ್ ಮಾಡಿ.
ಪ್ರತಿ ಬೆರಳಿನ ಕೊನೆಗೆ ಒತ್ತಡ ಕೊಟ್ಟು ಮಸಾಜ್ ಮಾಡಿ.
3-4 ನಿಮಿಷ ಮಸಾಜ್ ಮಾಡಿ.
ಮುಲ್ತಾನಿ ಮಿಟ್ಟಿ ಗೆ 1 ಚ. ಹೈಡ್ರೋಜನ್ ಪೆರಾಕ್ಸೈಡ್, (10-15 ಹನಿ) ಅಮೋನಿಯಾ ಮತ್ತು ಮಿಕ್ಸ್ ಮಾಡಲು ರೋಸ್
ವಾಟರ್ ಬಳಸಿ ಪ್ಯಾಕ್ ಹಾಕಿ ಒಣಗಿದ ನಂತರ ತೆಗೆಯಿರಿ.
ಬೇಕಾದ ನೈಲ್ ಪಾಲಿಶ್ ಹಚ್ಚಿಕೊಳ್ಳಿ.
ಹೆಬ್ಬೆರಳಿನ ಸಹಾಯದಿಂದ ಒತ್ತಡ ಕೊಟ್ಟು ಮಸಾಜ್ ಮಾಡಿದರೆ ದೇಹದ ದಣಿವು ಕಡಿಮೆಯಾಗುತ್ತದೆ. ಚೆನ್ನಾಗಿ ನಿದ್ದೆ
ಬರುತ್ತದೆ. ಒಂದು ಹಂತದ ವರೆಗಿನ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಉಗುರಿನ ತಂತ್ರಙ್ಞರು ನಿಮ್ಮ
ಉಗುರುಗಳನ್ನು ಸ್ವಚ್ಛಗೊಳಿಸಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆಯೇ ಎಂಬುದನ್ನು
ಖಚಿತಪಡಿಸಿಕೊಳ್ಳಿ. ಆಕೆಯು ತನ್ನ ಸೇವೆಯನ್ನು ಆರಂಭಿಸುವ ಮೊದಲು ತನ್ನ ಕೈಗಳನ್ನು ಮೊದಲು
ತೊಳೆದುಕೊಳ್ಳುತ್ತಾರೆಯೇ ಎಂಬುದನ್ನು ಗಮನಿಸಿ. ನಿಮ್ಮ ಉಗುರುಗಳು, ತ್ವಚೆ, ಪಾದಗಳು ಮತ್ತು
ತ್ವಚೆಯ ಹೊರಪೊರೆಯು ಮೃದುವಾಗಲು ನಿಮ್ಮ ಕೈ ಮತ್ತು ಪಾದಗಳನ್ನು ಚೆನ್ನಾಗಿ ನೆನೆಸಿ. ನಿಮ್ಮ
ಉಗುರಿನ ತಂತ್ರಜ್ಞಾನ ಯು ತಾಳ್ಮೆಯಿಂದ ತನ್ನ ಸೇವೆಯನ್ನು ನೀಡಬೇಕಾಗುತ್ತದೆ. ನೀವು ನಿಮ್ಮ ಕಾಲಿನ ಕೆಳ
ಭಾಗವನ್ನು ಮತ್ತು ಕೈಗಳನ್ನು ಪೆಡಿಕ್ಯೂರ್ ಮತ್ತು ಮೆನಿಕ್ಯೂರ್ ಮಾಡಿಕೊಳ್ಳುವ ಮೊದಲು ಶೇವಿಂಗ್
ಮಾಡಿಕೊಳ್ಳಬಾರದು. ಒಂದು ವೇಳೆ ನೀವು ಶೇವಿಂಗ್ ಮಾಡಿಕೊಳ್ಳುವಾಗ ತ್ವಚೆಯನ್ನು ಕತ್ತರಿಸಿಕೊಂಡಲ್ಲಿ,
ಪೆಡಿಕ್ಯೂರ್ ಮತ್ತು ಮೆನಿಕ್ಯೂರ್ ಮಾಡಿಸಿಕೊಳ್ಳುವಾಗ ಸುಲಭವಾಗಿ ಸೋಂಕಿಗೆ ತುತ್ತಾಗುತ್ತೀರಿ.