ನಾವು ಯಾವಾಗಲೂ ಹಿರಿಯರ ಕೆಲ ನಂಬಿಕೆ, ಪದ್ಧತಿಗಳನ್ನು ಪಾಲಿಸುತ್ತೇವೆ. ಹಿಂಧೂ ಧರ್ಮದಲ್ಲಿ ಹಲವು ಆಚರಣೆಗಳು, ಸಂಪ್ರದಾಯಗಳು ಹಾಗೂ ನಂಬಿಕೆಗಳು ಬೇರೂರಿವೆ. ಇವುಗಳ ಹಿಂದಿನ ವೈಜ್ಞಾನಿಕ ಕಾರಣ ಗೊತ್ತಿಲ್ಲದಿದ್ದರೂ, ಈ ನಂಬಿಕೆಗಳ ಹಿಂದೆ ಸದ್ದುದ್ದೇಶವಿದೆ ಎಂದು ಹಿರಿಯರು ನಂಬುತ್ತಾರೆ.

ಪಾದರಕ್ಷೆ ಊಲ್ಟಾ ಬಿದ್ದದ್ದರೆ ಸರಿಯಾಗಿ ಇಡಬೇಕು. ಊಟವಾದ ಮೇಲೆ ತಟ್ಟೆ ಒಣಗಿಸಬಾರದು, ರಾತ್ರಿ ಹೊತ್ತು ಮಹಿಳೆಯರು ಕೋಪ ಮಾಡಿಕೊಂಡು ಊಟ ಮಾಡದೇ ಮಲಗಬಾರದು. ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು. ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು. ಕಾಲು ಅಲುಗಾಡಿಸುತ್ತಾ ಕೂರಬಾರದು. ಇದ್ರಿಂದ ದರಿದ್ರ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕೈಯಲ್ಲಿ ಹಿಡಿದುಕೊಂಡು ಯಾವಾಗಲೂ ಉಪ್ಪು, ಪಲ್ಯವನ್ನು ಬಡಿಸಬಾರದು. ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಹಾಗೂ ಕುಂಬಳಕಾಯಿ ಒಡೆಯಕೂಡದು ಮತ್ತು ಒಡೆದ ಜಾಗದಲ್ಲಿ ಇರಕೂಡದು. ಅಲ್ಲದೇ ಸಂಜೆ ಹೊತ್ತು ಹೂಗಳನ್ನು ಕೀಳುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ ಸಂಜೆ ಸಮಯದಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಯಾಕೆ ಎಂದು ಯೋಚಿಸಿದ್ದೀರಾ.. ಸಂಜೆ ಹೊತ್ತಿನಲ್ಲಿ ಉಗುರು ಏಕೆ ಕತ್ತರಿಸಬಾರದು? ಇಲ್ಲಿದೆ ಮಾಹಿತಿ.
ಉಗುರುಗಳು ನಮ್ಮ ಬೆರಳುಗಳ ಮೇಲ್ಘಾಗದಲ್ಲಿ ಗಟ್ಟಿಯಾಗಿರುವ ಪದರವಿದ್ದಂತೆ. ಈ ಗಟ್ಟಿಯಾದ ಪದರವು ನಮ್ಮ ಬೆರಳುಗಳ ಮೃದುವಾದ ಚರ್ಮವನ್ನು ರಕ್ಷಿಸುತ್ತದೆ. ನಾವು ಉಗುರಗಳನ್ನು ಹೆಚ್ಚು ಎಚ್ಚರಿಕೆಯಿಂದ ಕತ್ತರಿಸುತ್ತೇವೆ. ಹಳ್ಳಿಗಳಲ್ಲಿ ಹಿಂದೆ ವಿದ್ಯುತ್ ಇರಲಿಲ್ಲ. ಮೇಣದಬತ್ತಿಯಿಂದಲೇ ಬೆಳಕನ್ನು ಪಡೆಯಲಾಗುತ್ತಿತ್ತು. ಸೂರ್ಯಸ್ತಕ್ಕೂ ಮುನ್ನವೇ ಹಳ್ಳಿಗಳಲ್ಲಿರುವ ಜನರು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸುತ್ತಿದ್ದರು. ಕಾರಣ, ಬೆಳಕಿನ ಸಮಸ್ಯೆಯಿಂದ ರಾತ್ರಿ ಹೊತ್ತು ಉಗುರನ್ನು ಕತ್ತರಿಸಿದರೆ ಹಾನಿಯಾಗುತ್ತದೆ ಎಂದು ಕತ್ತರಿಸಲಾಗುತ್ತಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಉಗುರು ಕತ್ತಿರಿಸುವುದಕ್ಕೆ ಹಲವು ವಿವಿಧ ರೀತಿಯ ಸಾಧನಗಳಿವೆ. ಹಳೆಯ ಕಾಲದಲ್ಲಿ, ಉಗುರಗಳನ್ನು ಚಾಕುವಿನಿಂದ ಕತ್ತರಿಸಲು ಬಳಸಲಾಗುತ್ತಿತ್ತು. ಹೀಗಾಗಿ ಹಿಂದಿನ ಕಾಲದ ಜನರು ಉಗುರಗಳನ್ನು ಗಾಯದಿಂದ ರಕ್ಷಿಸಲು ರಾತ್ರಿ ಹೊತ್ತು ಉಗುರುಗಳನ್ನು ಕತ್ತರಿಸುತ್ತಿರಲಿಲ್ಲ.

ಸಂಜೆ ಹೊತ್ತು ಉಗುರು ಕತ್ತಿರಿಸಿದರೆ ಆಹಾರದಲ್ಲಿ ಪದಾರ್ಥಗಲ್ಲಿ ಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ ಉಗುರ ಕತ್ತಿರಿಸುವಾಗ ಜಾಗ್ರತೆ ವಹಿಸಬೇಕಾಗುತ್ತದೆ.
ಇನ್ನು ರಾತ್ರಿ ಹೊತ್ತು ಉಗುರು ಕತ್ತರಿಸುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಉಗುರುಗಳನ್ನು ಕತ್ತರಿಸುವುದಿಲ್ಲ. ರಾತ್ರಿ ವೇಳೆ ಉಗುರು ಕತ್ತರಿಸುವುದು ಸಂಪತ್ತು ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ ವೇಳೆ ಉಗುರುಗಳನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಹಿಂದಿನ ಕಾಲದಲ್ಲಿ ಹಿರಿಯರು ರಾತ್ರಿ ಸಮಯದಲ್ಲಿ ಕೂದಲು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವ ಕೆಲಸ ಮಾಡುತ್ತಿರಲಿಲ್ಲ.
ಇನ್ನು ಮನೆಯ ಹೊರಗೆ ಉಗುರುಗಳನ್ನು ಕತ್ತರಿಸಲಾಗುತ್ತದೆ. ಮನೆಯ ಒಳಗೆ ನಿಂತು ಉಗುರುಗಳನ್ನು ಕತ್ತರಿಸಬಾರದು ಎಂಬ ನಂಬಿಕೆ ಇದೆ.
ಇನ್ನು ಜ್ಯೋತಿಷ್ಯ ಪ್ರಕಾರ, ಸೂರ್ಯ ಮುಳುಗಿದ ನಂತರ ಉಗುರುಗಳನ್ನು ಕತ್ತರಿಸಬಾರದಂತೆ. ಇದು ಶುಭವಲ್ಲ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ಮನೆಗೆ ಬರುವುದಿಲ್ಲ ಎಂದು ನಂಬಲಾಗಿದೆ. ಅನೇಕ ಜನರು ಹಗಲಿನಲ್ಲೇ ಉಗುರುಗಳನ್ನು ಕತ್ತರಿಸಬೇಕು, ಮನೆಯ ಹೊರಗೆ ನಿಂತು ಉಗುರುಗಳನ್ನು ಕತ್ತರಿಸಬೇಕು ಎಂದು ನಂಬುತ್ತಾರೆ.