ಸಂಪೋಟಾ (ಚಿಕ್ಕು) ಒಂದು ಪ್ರಮುಖ ಹಣ್ಣುಗಳಲ್ಲಿ ಒಂದು. ಕರ್ನಾಟಕದ ಕರಾವಳಿ ಹಾಗೂ ಒಳನಾಡಿನ ಪ್ರಮುಖ ತೋಟಗಾರಿಕೆ ಬೆಳೆಯಾಗಿದೆ. ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವು ಹಣ್ಣುಗಳ ಬೀಜಗಳನ್ನು ತಂದು ನೆಟ್ಟರು. ಅವುಗಳಲ್ಲಿ ಮಾವಿನ ಹಣ್ಣು, ಅನಾನಸ್, ಆಲುಗಡ್ಡೆ, ಮಾವಿನಕಾಯಿ , ಸಪೋಟ ಮುಖ್ಯವಾದವುಗಳು. ಮಧ್ಯಮಗಾತ್ರವಿರುವ ಈ ಮರ. ತಿಳಿ ಹಸಿರು ಬಣ್ಣದ ಎಲೆಗಳಿಂದ ಕೂಡಿದೆ. ಈ ಹಣ್ಣಿನಲ್ಲಿ ೨ ರಿಂದ ೬ರವರೆಗೆ ಕಪ್ಪು ಬಣ್ಣದ ಬೀಜಗಳಿರುತ್ತವೆ. ಒಳಗಿನ ಹಣ್ಣು ತಿಳಿ ಹಳದಿ ಬಣ್ಣದಿಂದ ಕಂದು ಬಣ್ಣದಾಗಿರುತ್ತದೆ.

ಒಂದು ಸಂಪೋಟ ಹಣ್ಣು ಹತ್ತು ರೋಗಗಳ ನಿವಾರಕ ಎಂದು ಹೇಳಲಾಗುತ್ತದೆ. ರುಚಿಗೆ ಅಷ್ಟೇ ಅಲ್ಲ. ಆರೋಗ್ಯಕ್ಕೂ ಸಪೋಟಾ (ಚಿಕ್ಕು) ಹೆಚ್ಚು ಸಹಕಾರಿ. ಇದರ ಎಲೆ , ಬೀಜ , ತೊಗಟೆ ಇತ್ಯಾದಿಗಳು ಔಷಧಿ ಬಳಕೆಯಲ್ಲಿ ಬಳಸಲಾಗುತ್ತದೆ. ಚಿಕ್ಕು ಹಣ್ಣಿನಲ್ಲಿ ಆರೋಗ್ಯಕರ ಅಂಶಗಳಿವೆ. ಕ್ಯಾಲ್ಸಿಯಂ, ಸಸಾರಜನಕ, ಕೊಬ್ಬು, ಕಬ್ಬಿಣ , ಕೆರೋಟಿನ್ , ಥಯಾಮಿನ್ , ನಿಯಾಸಿಸ್, ಮಿಥಿನ್ಯೋನೈನ ಅಂಶಗಳಿವೆ.
ಔಷಧೀಯ ಗುಣಗಳನ್ನು ಒಳಗೊಂಡಿದೆ ಚಿಕ್ಕು..
ಬಾಣಂತಿಯರು ಈ ಹಣ್ಣು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ. ಇದರಲ್ಲಿ ಕಬ್ಬಿಣ , ಸತ್ವ , ಕ್ಯಾಲ್ಸಿಯಂ ಇತ್ಯಾದಿಗಳು ಇರುವುದರಿಂದ ಬಾಣಂತಿಯರಿಗೆ ಹೆಚ್ಚು ಪೂರಕ ಎನ್ನಬಹುದು, ನಿಮಗೆ ಪ್ರತಿದಿನ ದಣಿವು ಉಂಟಾಗುತ್ತಿದ್ದರೆ ಮತ್ತು ಕಣ್ಣುಗಳ ಸಮ,ಸ್ಯೆ ನಿಮ್ಮಗೆ ಭಾಧಿಸಿದರೆ ಪ್ರತಿ ದಿನ ಚಿಕು ತಿನ್ನಲು ಪ್ರಾರಂಭಿಸಿ. ಇದರಲ್ಲಿರುವ ಜೀವಸತ್ವಗಳು, ಮಿಲ್ಲರ್ ಗಳು ಮತ್ತು ಫೈಬರ್ ದೇಹದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕಜ್ಜಿ ತುರಿಕೆ ಸಮಸ್ಯೆಗೆ ಸಪೋಟ ಹಣ್ಣಿನ ಬೀಜದ ಪೊಪ್ಪನ್ನು ಕೊಬ್ಬರಿ ಎಣ್ಣೆಯ ಜತೆಗೆ ಬೆರೆಸಿ ಹಚ್ಚಿದರೆ ನಿವಾರಣೆ ಕಾಣಬಹುದು. ಅಷ್ಟೇ ಅಲ್ಲದೇ, ಸಪೋಟಾ ಹಣ್ಣಿನ ಬೀಜದಿಂದ ತಯಾರಿಸಿದ ಕಷಾಯವನ್ನು ತೆಗೆದುಕೊಂಡು ತೊಳೆದರೆ ಕಣ್ಣಿನ ನವೆ , ಉರಿ, ಇತ್ಯಾದಿ ಗುಣವಾಗುವುದು. ಸಪೋಟಾ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ವೀರ್ಯಾಣಉ ವೃದ್ಧಿಯಾಗುತ್ತದೆ. ಜತೆಗೆ ದೇಹದಲ್ಲಿ ರಕ್ತ ವೃದ್ಧಿಯಾಗಲು ಸಹಕಾರಿಯಾಗುತ್ತದೆ. ಸಪೋಟ ಹಣ್ಣಿನ ರಸಕ್ಕಕೆ ಹಾಲು ಬೆರೆಸಿ ಕುಡಿದರೆ ಹೊಟ್ಟೆ ಉರಿ ನಿವಾರಣೆಯಾಗುತ್ತದೆ.
ಸಪೋಟಾ ವಿಟಮಿನ್ A ಮತ್ತು C ಯಿಂದ ಸಮೃದ್ಧವಾಗಿದೆ
1. ನಿಮಗಿದು ಗೊತ್ತೆ.
ದಿನಕ್ಕೆ 1 ಸಪೋಟಾ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಸಮಸ್ಯೆಗಳಿಂದ ದೂರವಿಡಬಹುದು. ವಿಟಮಿನ್ ಎ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ವಿಟಮಿನ್ ಸಿ ಹೆಚ್ಚಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ. ಚರ್ಮವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ. ಹೃದಯದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
2. ಎನರ್ಜಿ ಒದಿಗಿಸುತ್ತದೆ
ಸಪೋಟಾ ಹಣ್ಣಿನಲ್ಲಿ ನೈಸರ್ಗಿಕ ಫ್ರಕ್ಟೋಸ ಹಾಗೂ ಸುಕ್ರೋಸ್ ಅಂಶ ಇರುವುದರಿಂದ ಇದು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ನೀವು ಮುಂದೆ ಬಿಡುವಿಲ್ಲದ ದಿನವನ್ನು ಹೊಂದಿದ್ದರೆ, ಶಕ್ತಿಯ ವರ್ಧನೆಗಾಗಿ ನೀವು ಮನೆಯಿಂದ ಹೊರಡುವ ಮೊದಲು ಚಿಕ್ಕು ಹಣ್ಣನ್ನು ಸೇವಿಸಿ.
3. ಉರಿಯೂತ ದೂರಮಾಡುತ್ತದೆ

ಚಿಕ್ಕು ಹಣ್ಣಿನಲ್ಲಿ ಟ್ಯಾನಿನ್ ಹೆಚ್ಚಿನ ಅಂಶವಿದೆ. ಇದು ನೈಸರ್ಗಿಕವಾಗಿ ಉರಿಯೂತ ನಿವಾರಕವಾಗಿ ಕಾರ್ಯವಿರ್ವಹಿಸುತ್ತದೆ. ಇದು ಅನ್ನನಾಳದ ಉರಿಯೂತ , ಕರುಳಿನ ಉರಿಯೂತ ಮತ್ತು ಜಠರದ ಉರಿಯೂತಗಳಂತಹ ರೋಗಗಳನ್ನು ತಡೆಗಟ್ಟಿ ಜೀರ್ಣಾಂಗದ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಇದು ಯಾವುದೇ ಊತ ಹಾಗೂ ನೋವುಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ ಮತ್ತು ಬಿ ಗಳು ಅಧಿಕವಾಗಿರುವುದರಿಂದ ಚರ್ಮದ ರಚನೆಯ ಆರೋಗ್ಯವನ್ನು ಕಾಪಾಡುವುದಲ್ಲದೇ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆಂಟಿ ಆ್ಯಕ್ಸಿಡೆಂಟ್ , ನಾರಿನಾಂಶಗಳು, ಪೋಷಕಾಂಶಗಳು ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತವೆ.
4 ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಸಪೋಟಾ ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಣದಲ್ಲಿರುಸುತ್ತದೆ.ಮಲಬದ್ಧತೆ ಸಮಸ್ಯೆ ಹಾಗೂ ಕರುಳಿಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
5. ಮೂಳೆಗಳ ಆರೋಗ್ಯ ವೃದ್ಧಿ

ಚಿಕ್ಕು ಹಣ್ಣಿನಲ್ಲಿ ಕ್ಯಾಲ್ಸಿಯಂ , ರಂಜಕ ಮತ್ತು ಕಬ್ಬಿಣ ಅಂಶಗಳು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತವೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ , ಕಬ್ಬಿಣ ಮತ್ತು ರಂಜಕಾಂಶಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಮೂಳೆಗಳ ಸಹಿಷ್ಣುತೆ ಮತ್ತು ಬಲವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಸಪೋಟಾದಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಈ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಿದ್ದರೆ, ವೈದ್ಯರು ಹಾಗೂ ಮಾತ್ರೆಗಳ ಅಗತ್ಯವಿರುವುದಿಲ್ಲ. ಅಲ್ಲದೇ ಸರಿಯಾದ ಮೂಳೆಗಳ ಬೆಳವಣಿಗೆ ಸೇರಿದಂತೆ ವಿವಿಧ ಕಾರ್ಯಗಳನ್ನು ಸುಗಮಗೊಳಿಸಲು ಸಪೋಟಾ ತಿನ್ನುವುದು ತುಂಬಾ ಅಗತ್ಯವಾಗಿದೆ.
6. ರಕ್ತದೋತ್ತಡ ನಿಯಂತ್ರಣ
ಸಪೋಟಾದಲ್ಲಿ ಮೆಗ್ನೇಶಿಯಮ್ ಹೆಚ್ಚಾಗಿರುವುದರಿಂದ ರಕ್ತನಾಳಗಳನ್ನು ಮೆಲೆಕ್ಕೆತ್ತುವ ಸಾಮರ್ಥ್ಯ ಪಡೆದಿವೆ. ಪೊಟ್ಯಾಶಿಯಂ ರಕ್ತದೋತ್ತಡ ಮತ್ತು ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ. ರಕ್ತಹೀನತೆಗೆ ಚಿಕಿತ್ಸೆ ನೀಡುವುದು ಸಹ ಒಳ್ಳೆಯದು.
7. ಅಮ್ಮಂದಿರಿಗೆ ಉತ್ತಮವಾದದ್ದು
ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಎ, ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಸಹ ಪ್ರಯೋಜನಾಕಾರಿ. ಇದು ವಾಕರಿಕೆ, ತಲೆ ನೋವು, ದೌರ್ಬಲ್ಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನೀವು ಗರ್ಭಿಣಿಯಾಗಿದ್ದರೆ, ಬೆಳಿಗ್ಗೆ ಕಾಯಿಲೆ ಮತ್ತು ತಲೆ ತಿರುವಿಕೆಯ ಸಮಸ್ಯೆ ನಿವಾರಿಸಲು ಸಪೋಟಾ ತಿನ್ನಿ.
8. ತೂಕವನ್ನು ನಿಂಯತ್ರಿಸುತ್ತದೆ

ನಿಯಮಿತವಾಗಿ ಈ ಹಣ್ಣನ್ನು ಸೇವಿಸುತ್ತಾ ಬಂದರೆ , ನಿಮ್ಮ ದೇಹವನ್ನು ನೀರಿನ ಸುಸ್ಥಿತಿಯಲ್ಲಿಡುವುದಲ್ಲದೇ, ನಿಮ್ಮ ಚಯಾಪಚಯಕ್ರಿಯೆವನ್ನು ನಿಯಮಿತಗೊಳಿಸುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಇದು ಪರೋಕ್ಷವಾಗಿ ತೂಕ ನಷ್ಟ ಮಾಡುತ್ತದೆ. ಜಠರದ ಕಿಣ್ವಗಳ ಸ್ರವಿಸುವಿಕೆ ನಿಯಂತ್ರಿಸುವ ಮೂಲಕ ಬೊಜ್ಜು ಬರುವುದನ್ನು ತಡೆಯುತ್ತದೆ.
9 ಸೌಂದರ್ಯ ಪ್ರಯೋಜನಗಳು
ಸಪೋಟಾವನ್ನು ನಿಯಮಿತವಾಗಿ ತಿನ್ನುವುದರಿಂದ ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಇದು ನಿಮ್ಮ ಚರ್ಮ ಹಾಗೂ ಕೂದಲಿಗೆ ಅದ್ಭುತವಾಗಿದೆ. ಇವುಗಳನ್ನು ಆರೋಗ್ಯಕರವಾಗಿರುಸುತ್ತದೆ. ಮುಖದ ಸುಕ್ಕುಗಳ ಬೆಳವಣಿಗೆಯನ್ನು ಸಪೋಟಾ ತಡೆಗಟ್ಟುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡಲು ಸಪೋಟಾ ಸಹಕಾರಿಯಾಗಿದೆ. ಕೂದಲನ್ನು ಮೃದು ಮಾಡುವುದಲ್ಲದೇ, ಎಣ್ಣೆಯ ಕೂದಲಿಗೆ ತೇವಾಂಶ ಮತ್ತು ಮೃದುತ್ವಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಕೂದಲಿಗೆ ಕಾಂತಿ ನೀಡಿ, ಜಿಡ್ಡಿನಂಶವನ್ನು ಹೀರಿಕೊಳ್ಳುವ ಶಕ್ತಿ ಸಪೋಟಾದಲ್ಲಿದೆ.