ಅಲೋವೆರಾ ಕೇವಲ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ಮನೆಯ ಅದೃಷ್ಟವನ್ನು ತರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮನೆಯಲ್ಲಿ ಈ ಗಿಡ ಇರುವುದರಿಂದ ಅದೃಷ್ಟ ಬದಲಾಗುತ್ತದೆ. ಉದ್ಯೋಗ ಸಮಸ್ಯೆ ತುಂಬಾ ಜನರಿಗೆ ಕಾಡುತ್ತಿರುತ್ತದೆ. ಅಂಥವರು ಅಲೋವೆರಾ ಗಿಡವನ್ನು ಕೋಣೆಯೊಳಗೆ ಇಟ್ಟರೆ ಸಮಸ್ಯೆ ನಿವಾರಣೆಯಾಗುತ್ತದೆ.
ವಾಸ್ತು ಪ್ರಕಾರ ಅಲೋವೆರಾ ಮನೆಯಲ್ಲಿ ಏಕೆ ಇರಬೇಕು..?
ಅಲೋವೆರಾ ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲೋವೆರಾ ಸಸ್ಯಗಳಲ್ಲಿ ಹೆಚ್ಚಿನ ಇಂಗಾಲದ ಡೈ ಆಕ್ಸೈಡ್ ಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಅಲೋವೆರಾ ಉತ್ತಮ ಪ್ರಮಾಣದ ಆಮ್ಲಜನಕವನ್ನು ಬಿಡಗಡೆ ಮಾಡುತ್ತದೆ. ಮನೆಯಲ್ಲಿ ಅಲೋವೆರಾ ಸಸ್ಯ ನೆಡುವುದರಿಂದ ಅದೃಷ್ಟ , ಸಂತೋಷ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದ್ದು. ಅಲೋವೆರಾ ಗಿಡ ಇದ್ದರೆ, ನಿಮ್ಮ ಜೀವನ ಹೆಚ್ಚು ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ.

ವಾಸ್ತು ಪ್ರಕಾರ, ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಅಲೋವೆರಾ ಇರಬೇಕು ಎಂದು ಹೇಳಲಾಗುತ್ತದೆ.
ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ..!
ಇದರ ಜ್ಯೂಸ್ ಕೂದಲಿನ ತಲೆಹೊಟ್ಟು ಸಮಸ್ಯೆಗಳಿಗೆ ಇದು ರಾಮಬಾಣ ಎಂದು ಹೇಳಲಾಗುತ್ತದೆ. ಜಠರ ಕರುಳಿನ ಸಮಸ್ಯೆ ಗಳು, ಸಂಧಿವಾತ, ಮಧುಮೇಹ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲುಗಳು, ಮತ್ತು ಇನ್ನು ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಅಲೋವೆರಾ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ. ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ಒಣ ಚರ್ಮಕ್ಕೆ ಹಚ್ಚಿದಾಗ, ಚರ್ಮ ತೇವಾಂಶದಿಂದ ಕೂಡುತ್ತದೆ. ಚರ್ಮ ಬರ್ನ್ ಆಗುವುದನನ್ನು ತಡೆಗಟ್ಟುತ್ತದೆ.

ಸುಟ್ಟ ಗಾಯಕ್ಕೆ ಅಲೋವೆರಾ
ಅಡುಗೆ ಮನೆಯಲ್ಲಿರುವ ಹೆಚ್ಚು ಗೃಹಿಣಿಯರಿಗೆ ಕೈ ಸುಡುವುದು, ಸುಟ್ಟ ಗಾಯಗಳಾಗುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಅಲೋವೆರಾ ಜೆಲ್ ನ್ನು ಬಳಸಬಹುದು. ಸುಟ್ಟ ಗಾಯಗಳ ಮೇಲೆ ಅಲೋವೆರಾ ಜೆಲ್ ಹಚ್ಚಿದರೆ, ಕೆಲವೇ ಸೆಕೆಂಡ್ ಗಳಲ್ಲಿ ನೋವು ಮಾಯವಾಗುತ್ತದೆ.
ಸನ್ ಬರ್ನ್ ಸಮಸ್ಯೆಗೆ ಪರಿಹಾರ
ಬೇಸಿಗೆಕಾಲದಲ್ಲಿ ತ್ವಚೆ ಬಿಸಿಲಿಗೆ ಹಾಳಾಗುವುದಲ್ಲದೇ, ಬರ್ನ್ ಆಗುತ್ತದೆ. ಬಿಸಿಲಿನ ಬೇಗೆ ಕಡಿಮೆ ಮಾಡಲು ಉತ್ತಮ ಸನ್ ಸ್ಕ್ರೀನ್ ಲೋಷನ್ ಅಗತ್ಯವಿರುತ್ತದೆ. ಆದರೆ ಮಾರುಕಟ್ಟೆಯಿಂದ ಲೋಷನ್ ಮತ್ತು ಕ್ರೀಮ್ ಗಳನ್ನು ಖರೀದಿಸುವ ಬದಲು, ಅಲೋವೆರಾ ಸಸ್ಯಗಳಿಂದ ಜೆಲ್ ಅನ್ನು ಹಚ್ಚಬಹುದು.
ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುವಲ್ಲಿ ಅಲೋವೆರಾ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೋನ್ಸ್ ರೋಗ ಇತರ ಜೀರ್ಣಕಾರಿ ಕಾಯಿಲೆಗಳನ್ನು ಶಮನಗೊಳಿಸುತ್ತದೆ. ಮತ್ತು ಜೀರ್ಮಾಂಗದ ಸಾಮರ್ಥ್ಯ ಹೆಚ್ಚಿಸುತ್ತದೆ. ಮಲಬದ್ಧತೆ ಸೇರಿದಂತೆ ಅನೋಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ದೇಹದ ವಿಷ ಹೊರಹಾಕುತ್ತದೆ.ಅಲೋವೆರಾ ಜ್ಯೂಸ್ ನಲ್ಲಿ ಮಿನಿರಲ್ಸ್ , ವಿಟಮಿನ್, ಆಂಟಿ ಆಕ್ಸಿಡೆಂಟ್ ಕೆಲವು ಪೌಷ್ಟಿಕಾಂಶಗಳಿವೆ. ಇವು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ನೆರವಾಗುತ್ತವೆ.
ಮನೆಯಲ್ಲಿ ಅದೃಷ್ಟ ತರುವ ಇತರ ಸಸ್ಯಗಳು..!
ತುಳಸಿ ಸಸ್ಯಕ್ಕೆ ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿಗೆ ನಕಾರಾತ್ಮಕತೆಯನ್ನು ತೆಗೆದುಹಾಕುವ ಶಕ್ತಿ ಇದೆ. ಎಲ್ಲಾ ದೇವರುಗಳು ಅದರಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ.
ಇನ್ನು ಮನೆಯಲ್ಲಿ ಕ್ಯಾಕಟಸ್ ಅನ್ನು ಇಡುವುದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ ಮತ್ತು ಅಡ್ಡಪರಿಣಾಮಗಳು ಮನೆಯಲ್ಲಿ ಸಂಭವಿಸುವುದಿಲ್ಲ.
ಮಲ್ಲಿಗೆ ಸುಗಂಧಕ್ಕೆ ಹೆಸರುವಾಸಿ. ಇದಕ್ಕೆ ವಾಸ್ತ್ರು ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕುಟುಂಬ ಸದಸ್ಯರ ನಡುವೆ ಸಂಘರ್ಷವಿದ್ದರೆ, ಮನೆಯಲ್ಲಿ ಮಲ್ಲಿಗೆ ಗಿಡವನ್ನು ನೆಡಬೇಕು.