Attention Girls..! ಪೀರಿಯಡ್ಸ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

  • by

ಪಿರೀಯಡ್ಸ್ ಬಗ್ಗೆ ಹದಿಹರೆಯದ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳಿರುತ್ತವೆ.  ಪೀರಿಯಡ್ಸ್ ಆದಾಗ ಏನು ಮಾಡಬೇಕು. ನನ್ನ ಪೀರಿಯಡ್ಸ್ ಯಾಕೆ ಹೆಚ್ಚಾಗಿದೆ… ಪೀರಿಯಡ್ಸ್ ಎಷ್ಟು ದಿನಗಳವರೆಗೆ ಆಗುತ್ತದೆ… ಪೀರಿಯಡ್ಸ್ ಗೆ ಮೆಡಿಸಿನ್ ಇದ್ಯಾ, ಪೀರಿಯಡ್ಯ್ ಆಗದೇ ಇದ್ದಾಗ ಏನು ಮಾಡಬೇಕು… ಪೀರಿಯಡ್ಸ್ ಸಮಯದಲ್ಲಿ ನೋವು ಯಾಕೆ ಹೆಚ್ಚಿರುತ್ತದೆ..? ಹೀಗೆ ಅನೇಕ ಪ್ರಶ್ನೆಗಳಿರಬಹುದು. 

things should not do, during periods, 
ಪೀರಿಯಡ್ಸ್ ಸಮಯ, ಈ ತಪ್ಪುಗಳನ್ನು ಮಾಡಬೇಡಿ., ಆರೋಗ್ಯ

ಪೀರಿಯಡ್ಸ್ ( ಮುಟ್ಟಾಗುವುದು) ಹೆಣ್ಣು ಮಕ್ಕಳ ಜೀವನದಲ್ಲಿ ಮಹತ್ವದ ತಿರುವು. ಮೊದಲ ಬಾರಿಗೆ ಮುಟ್ಟಾದಾಗ ಹುಡುಗಿಯರ ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳಿರುತ್ತವೆ. ತಮ್ಮ ಸಂದೇಹಗಳನ್ನು ತಿಳಿದು ಕೊಳ್ಳಲು ಅನೇಕ ಹುಡುಗಿಯರು ತನ್ನ ತಾಯಿಗೆ ಈ ಬಗ್ಗೆ ಪ್ರಶ್ನಿಸು್ತತಾರೆ. ಮುಟ್ಟಿನ ಅವಧಿ ಪ್ರಾರಂಭವಾದ , ಗೊಂದಲ, ಆತಂಕ ಗಳಿರುವುದು ಸಹಜ. ತನ್ನ ಮಗಳಿಗೆ ಮುಟ್ಟಿನ ಬಗ್ಗೆ ಮಾಹಿತಿ ನೀಡುವುದು  ತಾಯಿಯ ಬಹುದೊಡ್ಡ ಜವಾಬ್ದಾರಿ. ಅನೇಕ ಕುಟುಂಬಗಳಲ್ಲಿ ಮಕ್ಕಳು ಈ ಬಗ್ಗೆ ಪ್ರಶ್ನಿಸಿದಾಗ ತಾಯಿ ಉತ್ತರಿಸಲು ಹಿಂಜರಿಯುತ್ತಾಳೆ. ಗೊಂದಲ ಮಾಹಿತಿಯನ್ನು ನೀಡುವರಿದ್ದಾರೆ. ಹದಿಹರೆಯದ ಮಕ್ಕಳಲ್ಲಿ ಇದೇ ರೀತಿಯ ಅನೇಕ ಪ್ರಶ್ನೆಗಳಿರುವುದು ಸಹಜ. ಮುಟ್ಟಾಗುವ ಸಮಯದಲ್ಲಿ ಹದಿಹರೆಯದ ಹೆಣ್ಣು ಮಕ್ಕಳು ಮಾಡಬಾರದ ಕೆಲವು ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ. 

1. ಮುಟ್ಟಾಗುವ ಸಮಯದಲ್ಲಿ ಕೆಲವು ಹುಡುಗಿಯರು ಉಪವಾಸವಿರುತ್ತಾರೆ. ತೂಕ ಇಳಿಸಿಕೊಳ್ಳಲು ಡಯೆಟ್ ಫಾಲೋ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಇದು ನಿಮಗೆ ಹೆಚ್ಚು ಸಮಸ್ಯೆ ತಂದೊಡ್ಡಬಹುದು. ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ಪೌಷ್ಟಿಕಭರಿತ ಆಹಾರವನ್ನು ಸೇವಿಸಬೇಕು ಎಂದು ನೆನಪಿನಲ್ಲಿಡಿ. 

things should not do, during periods, 
ಪೀರಿಯಡ್ಸ್ ಸಮಯ, ಈ ತಪ್ಪುಗಳನ್ನು ಮಾಡಬೇಡಿ., ಆರೋಗ್ಯ

2. ‘ಪ್ಯಾಡ್’ ಬದಲಿಸಲು ಸೋಮಾರಿಯಾಗಬೇಡಿ

ಪ್ಯಾಡ್ ಬದಲಿಸುವ ವಿಷಯದಲ್ಲಿ ಕೆಲವರು ಸೋಮಾರಿಗಳಾಗಿ ಬೀಡುತ್ತಾರೆ. ಕಡಿಮೆ ರಕ್ತಸ್ರಾವ ದಿಂದಾಗಿ ಕೆಲವರು ಒಂದೇ ಪ್ಯಾಡ್ ನ್ನು ದೀರ್ಘ ಸಮಯದವರೆಗೆ ಬಳಸುತ್ತಾರೆ. ಆದರೆ, ಇದು ಸೋಂಕಿಗೆ ಕಾರಣವಾಗಬಲ್ಲದ್ದು, ಪ್ಯಾಡ್ ಚೇಂಜ್ ಮಾಡಲು ನಿರ್ದಿಷ್ಟ ಸಮಯದ ವರೆಗೆ ಕಾಯುವ ಬದಲು, ಮಧ್ಯ ಸಮಯದಲ್ಲಿ ಬದಲಾಯಿಸಿ. ಇದು ನಿಮ್ಮನ್ನು ಸೋಂಕಿನಿಂದ ರಕ್ಷಿಸುತ್ತದೆ. 

3. ಮುಟ್ಟಿನ ಸಮಯದಲ್ಲಿ ತುಂಬಾ ಹುಡುಗಿಯರು ಕಿರಿ ಕಿರಿ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಕ್ಕರೆ ಅಥವಾ ಜಂಕ್ ಫುಡ್ ಸೇವಿಸುತ್ತಾರೆ. ಆದ್ರೆ ಮುಟ್ಟಿನ ಸಮಯದಲ್ಲಿ ಅನಾರೋಗ್ಯ ಉಂಟು ಮಾಡುವ ತಿಂಡಿಗಳಿಂದ ದೂರವಿರಿ. 

4. ವ್ಯಾಯಾಮ ನಿಮ್ಮ ದಿನಚರಿಯಾಗಲಿ

ಈ ಸಮಯದಲ್ಲಿ ಸರಳವಾಗಿರುವ ವ್ಯಾಯಾಮಗಳನ್ನು ಅನುಸರಿಸಬೇಕಾಗುತ್ತೆದೆ. ಭಾರ ವಿರುವ ಯೋಗಾಸನಗಳನ್ನು ಮಾಡಬೇಡಿ. ಸುಲಭವಾದ ವ್ಯಾಯಾಮ ಅಳವಡಿಸಿಕೊಳ್ಳಬಹುದು. 

5. ಅಸುರಕ್ಷಿತ ಸಂಬಂಧ

ನೀವು ಮುಟ್ಟಿನ ಅವಧಿಯಲ್ಲಿ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಯೋಚಿಸುವುದು ತಪ್ಪು. ಈ ಅವಧಿಯಲ್ಲಿಯೂ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ಸೋಂಕನ್ನು ತಪ್ಪಿಸಲು, ಈ ಸಮಯದಲ್ಲಿ ನಿಮ್ಮ ಸಂಗಾತಿ ಜತೆಗಿನ ಸಂಬಂಧವನ್ನು ತಪ್ಪಿಸಬೇಕಾಗುತ್ತದೆ. 

things should not do, during periods, 
ಪೀರಿಯಡ್ಸ್ ಸಮಯ, ಈ ತಪ್ಪುಗಳನ್ನು ಮಾಡಬೇಡಿ., ಆರೋಗ್ಯ

6. ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು

ಈ ಅವಧಿಯಲ್ಲಿ ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಈ ದಿನಗಳಲ್ಲಿ ನೀವು ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ, ಇದು ಕಿರಿಕಿರಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. 

7. ಪ್ಯಾಡ್, ಬಟ್ಟೆಗಳನ್ನು ಮರುಬಳಕೆ ಮಾಡಬೇಡಿ.

ಒಮ್ಮೆ ಬಳಸಿದ ಪ್ಯಾಡ್ ಗಳನ್ನು ಎಂದಿಗೂ ಮರುಬಳಕೆ ಮಾಡಬೇಡಿ. ಇಂದಿಗೂ ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಟ್ಟೆಗಳನ್ನು ಬಳಸುತ್ತಾರೆ. ಬಟ್ಟೆಯನ್ನು ಸರಿಯಾಗಿ ತೊಳೆಯುವುದಿಲ್ಲ, ಬಿಸಿಲಿನಲ್ಲಿ ಒಣಗಿಸುವುದಿಲ್ಲ. ಈ ಕಾರಣದಿಂದಾಗಿ ಬಟ್ಟೆಗಳಲ್ಲಿ ಬ್ಯಾಕ್ಟೇರಿಯಾ ಉತ್ಪತ್ತಿಯಾಗಬಹುದು. ಬಳಸಿದ ಬಟ್ಟೆಯನ್ನು ಮತ್ತೆ ಬಳಸುವುದು ಎಂದರೆ ಅನೇಕ ಗಂಭೀರ ಕಾಯಿಲೆಗಳನ್ನು ಆಹ್ವಾನಿಸುವುದು ಎಂದರ್ಥ. ಹೀಗಾಗಿ ಮುಟ್ಟಿನ ಸಮಯದಲ್ಲಿ ಪ್ಯಾಡ್, ಬಟ್ಟೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಪ್ರತಿ ತಿಂಗಳು ನೈರ್ಮಲ್ಯ ಕರವಸ್ತ್ರಗಳನ್ನು, ಟಿಶ್ಯೂ ಪೇಪರ್, ಹ್ಯಾಂಡ್ ಸ್ಯಾನಿಟೈಜರ್ ಗಳು , ಟವೆಲ್ ಜತೆಗಿಟ್ಟುಕೊಳ್ಳಬೇಕು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ