ಪ್ರತಿಯೊಂದು ತಿನ್ನುವ ಆಹಾರದಲ್ಲಿ ಕೆಲವರು ಸಕ್ಕರೆಯನ್ನು ಇಷ್ಟಪಡುತ್ತಾರೆ. ವಾಸ್ತವವಾಗಿ ಕಾಫಿ, ಟೀಗಳಲ್ಲಿ ಹಾಗೂ ಸಿಹಿ ಪದಾರ್ಥಗಳಲ್ಲಿ ಹೆಚ್ಚಾಗಿ ಸಕ್ಕರೆಯನ್ನು ಬಳಸಲಾಗುತ್ತದೆ. ಆದ್ರೆ ಸಿಹಿ ಪದಾರ್ಥ, ಸಕ್ಕರೆಯನ್ನು ಹೆಚ್ಚಾಗಿ ಸೇವಿಸುವುದರಿಂದ ಅದು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡಬಲ್ಲದ್ದು. ಎಚ್ಚರ..!
ನಿಮ್ಮ ನೆಚ್ಚಿನ ಸಕ್ಕರೆ ಸಿಹಿ ತಿಂಡಿಗಳು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಲ್ಲವು. ಸಕ್ಕರೆ ಉರಿಯೂತ ಹೆಚ್ಚಿಸಬಹುದು. ನೀವು ಸಕ್ಕರೆಯನ್ನು ನೇರವಾಗಿ ಸೇವಿಸಿದಾಗ, ಸಕ್ಕರೆ ನೇರವಾಗಿ ನಿಮ್ಮ ಕರುಳಿಗೆ ಹೋಗುತ್ತದೆ. ಸಸ್ಕರಿಸಲ್ಪಡುತ್ತದೆ. ನಂತರ ಉರಿಯೂತಕ್ಕೆ ಕಾರಣವಾಗಬಹುದು. ಉರಿಯೂತದಿಂದ ನಿಮ್ಮ ಚರ್ಮ ಮತ್ತಷ್ಟು ಹದಗೆಡಬಹುದು. ಬಿಳಿ ಬ್ರೆಡ್, ಸೋಡಾ, ಸಲಾಡ್ , ಕ್ಯಾಂಡಿ, ಮತ್ತು ಇತರ ಬೇಯಿಸಿದ ಸರಕುಗಳು ಸಂಸ್ಕರಿಸಿದ ಸಕ್ಕರೆ ಮತ್ತು ಪಿಷ್ಟಗಳನ್ನು ಒಳಗೊಂಡಿರುತ್ತದೆ. ಅದು ನಿಮ್ಮ ಇನ್ಸುಲಿನ್ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ.
ಶೀರ್ಘದಲ್ಲೇ ದಣಿಯುವುದಕ್ಕೂ ವ್ಯತ್ಯಾಸವಿದೆ. ನೀವು ಬಹುತೇಕ ಆಯಾಸಗೊಳ್ಳುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟು ಹೆಚ್ಚಾಗಿದ್ದರೆ, ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆಹಾರ ಕಡೆ ಗಮನ ಹರಿಸಿ. ನೀವು ಪ್ರತಿ ದಿನ ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳನ್ನು ಸೇವಿಸಿ. ಯಾವುದೇ ವ್ಯಾಯಾಮ ಮಾಡದೇ ಇದ್ದರೆ , ಆರೋಗ್ಯದಲ್ಲಿ ಹಾನಿಯುಂಟಾಗುತ್ತದೆ.
ಸಕ್ಕರೆ ಅಂಶವಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಬಾರದು. ಕಾಲಕ್ರಮೇಣ ಇವು ಇಂದ್ರಿಯಗಳ ಮೇಲೆ ಪರಿಣಾಮ ಬೀರುತ್ತವೆ. ಅಲ್ಲದೇ ಮಧುಮೇಹ ರೋಗಕ್ಕೂ ಕಾರಣವಾಗುತ್ತವೆ. ಮೀತಿ ಮೀರಿದ ಸಕ್ಕರೆ ಸೇವನೆ ದೇಹದ ತೂಕವನ್ನು ಹೆಚ್ಚಿಸುತ್ತವೆ. ಇದರಲ್ಲಿ ಹೆಚ್ಚಾಗಿ ಕ್ಯಾಲೋರಿ ಹೆಚ್ಚಾಗಿದ್ದು, ಸ್ಥೂಲಕಾಯ ಸಮಸ್ಯೆಯನ್ನು ತಂದೊಡ್ಡುತ್ತವೆ.

ಅತಿಯಾದ ಸಕ್ಕರೆ ನಮ್ಮ ದೇಹ ಸೇರುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇದ್ರಿಂದ ಹಸಿವು ಕೂಡಾ ಹೆಚ್ಚಾಗುತ್ತದೆ. ಇದು ನಮ್ಮ ಇಮ್ಯೂನಿಟಿ ಮೇಲೆ ಪ್ರಭಾವ ಬೀರಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ದೇಹದ ಸಾಮರ್ಥ್ಯವನ್ನು ಕಂಗೊಳಿಸುತ್ತದೆ. ಇದ್ರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಹಲವರಲ್ಲಿ ಸಕ್ಕರೆ ಸೇವನೆಯಿಂದ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಮುಖ್ಯವಾಗಿ ಚರ್ಮ ಸುಕ್ಕುಗಟ್ಟುವುದು ಮತ್ತು ಡ್ರೈ ಸ್ಕಿನ್ ಸಮಸ್ಯೆಗಳು ಕಾಡುತ್ತವೆ. ಹೀಗಾಗಿಯೇ ಮೊಡವೆಗಳ ಸಮಸ್ಯೆ ಇರುವರಿಗೆ ವೈದ್ಯರು ಸಿಹಿ ತಿಂಡಿಗಳು ಸೇವನೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡುತ್ತಾರೆ. ಒಟ್ಟಿನಲ್ಲಿ ಬಾಯಿಗೆ ರುಚಿ ಎಂದು ಹೆಚ್ಚು ಸಿಹಿಸ ತಿಂದರೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಅತಿಯಾಗಿ ಸಕ್ಕರೆ ಸೇವನೆ ಮಾಡೋದ್ರಿಂದ ಬೊಜ್ಜು, ಮಧುಮೇಹ , ಹೃದಯದ ಕಾಯಿಲೆಯುವುದು ಹೆಚ್ಚಾಗುತ್ತದೆ. ಯಾವಾಗಲೊಮ್ಮೆಯಾದರೂ ಇದನ್ನು ಸೇವನೆ ಮಾಡಬಹುದು. ಆಧುನಿಕ ಸಂಶೋಧನೆ ಪ್ರಕಾರ, ಅಧಿಕ ಗ್ಲೈಸೆಮಿಕ್ ಆಹಾರ ಮತ್ತು ಮಧುಮೇಹ ಬರುವುದು. ದೇಹದಲ್ಲಿ ಸಕ್ಕರೆಯಂಶವಿದ್ದರೆ ಆಗ ಅದು ದೇಹದಲ್ಲಿ ಪರಿಣಾಮ ಬೀರುವುದು. ಪೋಷಕಾಂಶ ಮಟ್ಟವನ್ನು ನೋಡಿಕೊಳ್ಳುತ್ತದೆ.
ಹೆಚ್ಚಾಗಿ ಸಕ್ಕರೆ ಸೇವನೆ ಮಾಡುತ್ತಿದ್ದರೆ ಕ್ರೋಮಿಯಂ ಕೊರತೆ ಕಾಡಬಹುದು. ಕ್ರೋಮಿಯಂ ಎನ್ನುವುದು, ಮಾಂಸ ಕ್ರೋಮಿಯಂ. ಸಮುದ್ರಾಹಾರ, ಮತ್ತು ಕೆಲವೊಂದು ಸಸ್ಯಾಹಾರಗಳಲ್ಲಿ ಲಭ್ಯವಿದೆ. ಪಿಷ್ಠವನ್ನು ಸಂಸ್ಕರಣೆ ಮಾಡುವ ಕಾರಣದಿಂದಾಗಿ ಶೇ. ೯೦ ರಷ್ಟು ಅಮೇರಿಕಾದವರಿಗೆ ಈಗಲೂ ಸರಿಯಾಗಿ ಕ್ರೋಮಿಯಂ ಸಿಗುವುದಿಲ್ಲ. ಇತರ ಕಾರ್ಬೋಹೈಡ್ರೇಟ್ ಗಳು ಕೂಡಾ ಕ್ರೋಮಿಯಂ ಉಳ್ಳ ಆಹಾರವನ್ನು ಎಳೆಯುವುದು.
ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡೋದ್ರಿಂದ ದೇಹದ ಸಮತೋಲನ ಮೇಲೆ ಅದು ಪರಿಣಾಮ ಬೀರುತ್ತದೆ. ಚರ್ಮದಲ್ಲಿ ನೆರಿಗೆ ಮತ್ತು ಚರ್ಮವು ಜೋತು ಬೀಳುವಂತೆ ಮಾಡಿ ವ್ಯತಿರಿಕ್ತ ಪರಿಣಾಮ ಬೀರಬಹುದು.
ಸಕ್ಕರೆಯಿಂದ ಉಂಟಾಗುವಂತಹ ಕೆಲವೊಂದು ಪ್ರಾಣ ಹಾನಿಯಾಗುವಂತಹ ಅಪಾಯದ ಹೊರತಾಗಿ, ಕೆಲವೊಂದು ಸಾಮಾನ್ಯ ಹಾನಿಯೂ ಆಗಬಹುದು. ಬೇರೆ ಯಾವುದೇ ಆಹಾರಕ್ಕಿಂತ ಹೆಚ್ಚು ಹಾನಿ ಮಾಡುವುದು ಸಕ್ಕರೆ. ಹೀಗಾಗಿ ದಿನಕ್ಕೆ ೨ ಸಲ ಬ್ರಷ್ ಮಾಡಿದರೆ ಸಕ್ಕರೆಯಿಂದ ನಿರ್ಮಾಣವಾಗುವಂತಹ ಪದರ ಹಾಗೂ ಬ್ಯಾಕ್ಟೇರಿಯಾವನ್ನು ತೊಡೆದು ಹಾಕುತ್ತದೆ.

ಯಕೃತ ಕೆಲವರಲ್ಲಿ ಹಾನಿ ಉಂಟು ಮಾಡುತ್ತದೆ. ಯಕೃತಕ್ಕೆ ಮದ್ಯ ಮಾಡುವ ಹಾನಿಗಿಂತ ಎರಡು ಪಟ್ಟು ಸಕ್ಕರೆ ಮಾಡುತ್ತದೆ.
ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳಿಲ್ಲ. ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಚಮಚ ಸಕ್ಕರೆಯಿಂದ ಲಭ್ಯವಾಗುವ ಕ್ಯಾಲೋರಿಗಳು ಬಳಸಲ್ಪಡದೇ, ದೇಹದಲ್ಲಿಯೇ ಉಳಿದು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಅಂದಹಾಗೇ ಸಕ್ಕರೆ ಅತಿ ವ್ಯಸನಕಾರಿ ವಸ್ತುವಾಗಿದೆ. ಸಕ್ಕರೆಯನ್ನು ಜೀರ್ಣಿಸಿಕೊಂಡ ಬಳಿಕ ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಮೆದುಳಿಗೆ ಮುದ ನೀಡುವ ರಾಸಾಯನಿಕವಾಗಿದ್ದು, ಮೆದಳು ಹೆಚ್ಚು ಹೆಚ್ಚು ಇಷ್ಟಪಡತೊಡಗುತ್ತದೆ.
ಹಲ್ಲು ಹುಳುಕಿಗೆ ಸಕ್ಕರೆ ಕಾರಣವಾಗುತ್ತದೆ. ಮಕ್ಕಳ ಹಲ್ಲುಗಳು ಬೇಗನೇ ಏಕೆ ಗರಗುತ್ತವೆ ಎಂದರೆ ಮಕ್ಕಳು ಸಿಹಿಯನ್ನು ಹೆಚ್ಚು ಹೊತ್ತು ಬಾಯಿಯಲ್ಲಿಯೇ ಇಟ್ಟುಕೊಂಡಿರುತ್ತಾರೆ. ಹಿರಿಯರು ಚಾಕಲೇಟನ್ನ ಬಾಯಿಯಲ್ಲಿ ಇಟ್ಟುಕೊಳ್ಳದೇ ಇದ್ದರೂ ಸಿಹಿ ತಿನಿಸುಗಳನ್ನು ಸೇವಿಸುತ್ತಾರೆ. ಇದ್ರಿಂದ ಕ್ರಮೇಣ ಹಲ್ಲುಗಳು ಹುಳುಕಿಗೆ ಕಾರಣವಾಗಬಹುದು.