ನಿಷ್ಕಿೃಯತೆ ಕ್ರಿಯೆಗಿಂತ ಹೆಚ್ಚು ಮಹತ್ವಾದಾಗಿರುವ ಸಂದರ್ಭಗಳಿವೆ. ಏಕೆಂದರೆ ನಾವು ಅನೇಕ ಸಾಂಕ್ರಾಮಿಕ ರೋಗಗಳನ್ನು ನೋಡಿದ್ದೇವೆ. ಕೊರೊನಾ ವೈರಸ್ ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ತಡೆಗಟ್ಟುವಿಕೆಯ ತಂತ್ರಗಳನ್ನು ಅನುಸರಿಸುತ್ತಿವೆ. ರಾಷ್ಟ್ರ, ಪ್ರಪಂಚ ಅಗಾಧವಾದ ಆರ್ಥಿಕ ಹೊಡೆತ ವನ್ನು ಎದುರಿಸುತ್ತಿದೆ ಎಂದು ಈಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯ ಪಟ್ಟಿದ್ದಾರೆ.

‘ಇದೊಂದು ರಿಯಾಲಿಟಿ ಚೆಕ್ ಇದ್ದಂತೆ’…!- ಸದ್ಗುರು
ಇದು ನಮ್ಮೆಲ್ಲರಿಗೂ ರಿಯಾಲಿಟಿ ಚೆಕ್ ಇದ್ದಂತೆ. ಇದೀಗ ಸಂದರ್ಭ ಎಷ್ಟು ದುರ್ಬಲ ಹಾಗೂ ಅಸ್ಥಿರವಾಗಿದೆ ಎಂದು ತಿಳಿದುಕೊಂಡು ಅರ್ಥ ಮಾಡಿಕೊಳ್ಳಬೇಕು. ಮತ್ತು ಬದುಕಲು ನಾವು ನಮ್ಮನ್ನೇ ಸಂಘಟಿಸಿಕೊಳ್ಳಬೇಕು. ನಾವು ಅಂತಹ ಜೀವನಕ್ಕಾಗಿ ಯೋಚಿಸಿದ್ದೇವೆಯೇ..? ನಾವು ಯಾರೆಂಬುದು, ಹೇಗೆ ಮುನ್ನೇಚ್ಚರಿಕೆ ಕ್ರಮ ತೆಗೆದುಕೊಳ್ಳ ಬೇಕು ಎಂಬುದು ರಿಯಾಲಿಟಿ ಚೆಕ್ ಆಗಿದೆ. ಇಂಥ ಸಂದರ್ಭದಲ್ಲಿ ನೀವು ಸ್ವಲ್ಪ ಕಾಲ ನಿಮ್ಮ ಪ್ರೀತಿ ಪಾತ್ರರ ಜತೆ ನಿಕಟ ಸಂಪರ್ಕವನ್ನು ತಪ್ಪಿಸಿಕೊಳ್ಳಬೇಕು.ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು.
ಪ್ರೀತಿಯನ್ನು ಹೃದಯದಲ್ಲಿ ಪೋಷಿಸಬೇಕು. ನಿಮ್ಮ ಸುತ್ತಮುತ್ತಲಿನ ಜನರು, ಪ್ರೀತಿ ಪಾತ್ರರು ಯಾರೊಬ್ಬರೂ ವೈರಸ್ ಗೆ ಬಲಿಯಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ಅಥವಾ ಯಾರನ್ನೂ ಅಪಾಯಕ್ಕೆ ಸಿಲುಕಿಸಿದಂತೆ ನೀವು ಕಾಳಜಿ ವಹಿಸಬೇಕು. ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ , ನೀವು ಬದ್ಧತೆಯಿಂದ ಬದುಕಬೇಕು. ನಿಮಗೆ ಕೆಮ್ಮು ಇದ್ದರೆ, ಇತರರಿಂದ ದೂರವಿರಿ. ಸಂವೇದನಾಶೀಲರು ಈ ಸಂದರ್ಭಗಳಿಗೆ ತಕ್ಕಂತೆ ಬದುಕುತ್ತಾರೆ. ಪ್ರಜ್ಞಾಶೂನ್ಯರು ಧೈರ್ಯಶಾಲಿಗಳಾಗಿರುತ್ತಾರೆ.

ನಿಮಗಾಗಿ ಜವಾಬ್ದಾರಿ ತೆಗೆದುಕೊಳ್ಳಿ…!
ಕೊರೊನಾ ವೈರಸ್ ಬಗ್ಗೆ ಭೀತಿ ಉಂಟು ಮಾಡುವ ಅಗತ್ಯವಿಲ್ಲ. ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ಯಾನಿಕ್ ಅಥವಾ ಭಯ ಎಂದರೆ ನೀವು ಎಲ್ಲಾ ತಪ್ಪು ಕೆಲಸಗಳನ್ನು ಮಾಡುತ್ತೀರಿ. ಮುನ್ನೇಚ್ಚರಿಕೆ ಎಂದರೆ ನೀವು ಸರಿಯಾದ ಕೆಲಸಗಳನ್ನು ಮಾಡುತ್ತಿದ್ದೀರಿ ಎಂದರ್ಥ. ನೀವು ಮಾಡಬಹುದಾದ ಸರಳ ವಿಷಯವೆಂದರೆ, ಎಲ್ಲರಿಂದ ದೂರವಿರುವುದು. ನಿಮ್ಮ ಹೊರಗಿನ ಚಟುಗಳಿಂದ ದೂರವಿರುವುದು.. ಪ್ರಪಂಚದೊಂದಿಗೆ ಇದು ಪಯಣಿಸುವ ಸಮಯ ಅಲ್ಲ. ನಿಮ್ಮಲ್ಲಿ ಹಲವರು ತುಂಬಾ ಕಾರ್ಯನಿರತರಾಗಿರುತ್ತಾರೆ. ಧ್ಯಾನ ಮಾಡಲು ಸಮಯವಿರುವುದಿಲ್ಲ. ಈ ಸಮಯ ಒದಗಿ ಬಂದಿದೆ. ನೀವೇ ಬೆಳೆಸಿಕೊಳ್ಳಬಹುದಾದ ಸಮಯವನ್ನು ನೀವು ಬಳಸಬಹುದು. ಜೀವನ ನಮ್ಮ ಮೇಲೆ ಏನು ಎಸೆಯುತ್ತದೆ ಎಂಬುದು ಮುಖ್ಯವಲ್ಲ.. ಅದರಿಂದ ನಾವು ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯ ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯ ಪಟ್ಟಿದ್ದಾರೆ.
ಇದೀಗ ಕೆಲವು ಕಾರಣಗಳಿಂದಾಗಿ, ಪ್ರಕೃತಿ ನಮ್ಮ ಮೇಲೆ ಮಾರಕ ವೈರಸ್ ಎಸೆದಿದೆ. ಅದರಿಂದ ಉತ್ತಮಮಾದದ್ದನ್ನು ಮಾಡೋಣ. ಬೇಸಿಗೆ ಆ ವೈರಸ್ ನ್ನು ಕೊಲ್ಲುತ್ತದೆಯೋ, ಅಥವಾ ಸ್ವತಃ ಸಾಯುತ್ತದೆಯೋ ಅಥವಾ ಬೇರೆ ಯಾವುದಾದರಿಂದಲೂ ಹೋಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಈ ನಡುವೆ , ಈ ವೈರಸ್ ಅದೃಶ್ಯ ಶತೃವಾಗಿದೆ. ಹಾಗಾಗಿ ಕೆಲ ದಿನಗಳ ಕಾಲ ನಾವು ತಲೆ ಬಾಗಿಸಿ ಕುಳಿತುಕೊಳ್ಳಬೇಕು.
ಸಮತೋಲಿತ ಮತ್ತು ಬುದ್ಧಿವಂತಿಕೆ ಹೆಚ್ಚು ಅಗತ್ಯ ..!
ಸದ್ಗುರು ಹೇಳುವಂತೆ, ವೈರಸ್ ಬಗ್ಗೆ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಜನ ಬಿಕ್ಕಟ್ಟಿನಲ್ಲಿದ್ದಾಗ, ನಿಮ್ಮ ಬುದ್ಧಿವಂತಿಕೆ, ನಿಮ್ಮ ದೈಹಿಕ ಆರೋಗ್ಯ, ನಿಮ್ಮ ಸಮತೋಲಿತ ಪ್ರಜ್ಞೆ ಎಲ್ಲವು ಅತ್ಯಂತ ಮೌಲ್ಯಯುತವಾಗಿವೆ ಎಂದು ಹೇಳಿದ್ದಾರೆ.