ಆಹಾರದಲ್ಲಿ ನೀವು ಸೋಯಾಬೀನ್ ಎಣ್ಣೆ ಬಳಸುತ್ತಿದ್ದೀರಾ.. ಹೌದು ಎಂದಾದರೆ ಎಚ್ಚರವಹಿಸಿ. ಕ್ಯಾಲಿಫೋರ್ನಿಯಾ ರಿವರ್ಸೈಡ್ ವಿಶ್ವವಿದ್ಯಾಲಯದ ಸಂಶೋಧಕರ ಇತ್ತೀಚಿನ ವರದಿ ಪ್ರಕಾರ, ಸೋಯಾಬೀನ್ ಎಣ್ಣೆಯನ್ನು ವ್ಯಾಪಕವಾಗಿ ಸೇವಿಸುವುದರಿಂದ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ. ಅಲ್ಲದೇ, ಮಾನಸಿಕ ಕಾಯಿಲೆಗಳಾದ, ಖಿನ್ನತೆ, ಆತಂಕ ನರಗಳು ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಥ್ಯತೆ ಹೆಚ್ಚು.. ಇಲಿಗಳ ಮೇಲೆ ನಡೆಸಿದ ಈ ಸಂಶೋಧನೆ ಎಂಡೋಕ್ರೈನಾಲಜಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.

ಹೈಪೋಥಾಲಮಸ್ ನಿಮ್ಮ ಚಯಾಪಚಯ ಕ್ರಿಯೆಯ ಮೂಲಕ ದೇಹದ ತೂಕವನ್ನು ನಿಯಂತ್ರಿಸುತ್ತದೆ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಸಂತಾನೋತ್ಪತ್ತಿ ಮತ್ತು ದೈಹಿಕ ಬೆಳವಣಿಗೆಗೆ ಹಾಗೂ ಒತ್ತಡಕ್ಕೆ ನಿರ್ಣಾಯಕ ಪಾತ್ರವಹಿಸುತ್ತದೆ.
ಬೇರೆ ಭಾಷೆಗಳಲ್ಲಿ ಸೋಯಾಗೆ ಇರುವ ಹೆಸರುಗಳೇನು..?
ಹಿಂದಿ- ಬಾಟ್ (ಸೋಯಾಬೀನ್ )
ಮರಾಠಿ, ಗುಜರಾತಿ- ಯೋಯಾಬೀನ್
ಕನ್ನಡ, – ಸೋಯಾಬೀನ್
ತಮಿಲಉ- ಸೀಯಾ ಪಯರ್
ಬೆಂಗಾಲಿ,- ಗಾರಿಕಲೈ
ಅಸ್ಸಾಂ- ಗರಿಮಹ್ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಸೂರ್ಯಕಾಂತಿ ಎಣ್ಣೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ..
ಸೋಯಾಬಿನ್ ನಿಂದ ತೈಲ ತಯಾರಿಸಿ, ಬಳಸಿದರೆ , ಮೈಗ್ರೇನ್ ಸಮಸ್ಯೆ ಹೆಚ್ಚುತ್ತೆ ಎನ್ನಲಾಗುತ್ತದೆ.
ಸೋಯಾಬೀನ್ ನಿಂದ ಅಲರ್ಜಿ ಸಂಭವಿಸಬಹುದು.ಅಲರ್ಜಿಗೆ ಸೋಯಾ ಕಾರಣ ಎನ್ನಲಾಗುತ್ತದೆ. ಸಾಮ್ನಯವಾಗಿ ಸೋಯಾ ನಲ್ಲಿ ಕಾಂಗ್ಲಿಸಿನಿನ್ ಮತ್ತು ಗ್ಲೈಸಿನಿನ್ ಅಂಶ ಇರುವುದರಿಂದ ಹೆಚ್ಚು ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು.
ಸೋಯಾ ಕರಗದ ನಾರಿನಾಂಶವನ್ನು ಹೊಂದಿರುತ್ತದೆ. ಇದು ಸುಲಭವಾಗಿ ಅತಿಸಾರವನ್ನು ಉಂಟು ಮಾಡಬಹುದು. ಸಹಜವಾಗಿ, ಈ ಅಡ್ಡಪರಿಣಾಮಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಬಹುದು.
ಈ ಎಣ್ಣೆಯನ್ನು ದೀರ್ಘಕಾಲದವರೆಗೆ ಸೇವಿಸಿದರೆ, ಕೆಲವು ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಸರ್ವೇ ಸಾಮಾನ್ಯವಾದದ್ದು ಬೊಜ್ಜು.

ಮಧುಮೇಹ
ಸೋಯಾಬೀನ್ ಎಣ್ಣೆ ಸೇವಿಸುವುದರಿದಂ ಟೈಪ್ ೨ ಮಧುಮೇಹ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಪರಿಣಾಮವಾಗಿದೆ. ನಂತರ ಇನ್ಸುಲಿನ್ ಪ್ರತಿರೋಧ ಹಾಗೂ ದುರ್ಬಲ ಇನ್ಸುಲಿನ್ ಸ್ರವಿಸುವಿಕೆ ಕಾರಣವಾಗಬಹುದು. ಟೈಪ್ ೨ ಮಧುಮೇಹ ಹೊಂದಿರುವವರು ಸುಮಾರು ೯೦ ರಷ್ಟು ಬೊಜ್ಜನ್ನು ಹೊಂದಿರುತ್ತಾರೆ. ಸೋಯಾಬೀನ್ ಎಣ್ಣೆ ನೇರವಾಗಿ ಕೊಬ್ಬಿಗೆ ಕಾರಣವಾಗುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸೋಯಾಬಿನ್ ಎಣ್ಣೆ ಸೇವನೆ ಕಡಿಮೆ ಗೊಳಿಸುವುದು ಉತ್ತಮ.
ಲೀವರ್ ಗೆ ಹಾನಿ
ಸೋಯಾಬೀನ್ ಎಣ್ಣೆ ಸೇವನೆಯಿಂದ ಲೀವರ್ ಗೆ ಹೆಚ್ಚು ಹಾನಿಯಾಗುವ ಸಂಭವ ಹೆಚ್ಚು. ಈ ಎಣ್ಣೆ ಹೆಚ್ಚು ಕೊಬ್ಬಿನ ಪಿತ್ತಜನಕಾಂಗವನ್ನು ಪ್ರಚೋದಿಸುತ್ತದೆ.
ವಯಸ್ಸಿಗೆ ಸಂಬಂಧಿತ ಹಲವು ಕಾಯಿಲೆಗಳನ್ನು ಸೋಯಾಬೀನ್ ಎಣ್ಣೆಯಿಂದ ಉಂಟಾಗುವ ಸಾಧ್ಯತೆ ಹೆಚ್ಚು. ಸೂರ್ಯಕಾಂತಿ ಎಣ್ಣೆ ಕೊಬ್ಬಿನಾಂಶದ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಲ್ಲದೇ, ಅಸ್ತಮಾ ಹೆಚ್ಚಾಗುವ ಸಾಧ್ಯತೆಯು ಹೆಚ್ಚಾಗುತ್ತದೆ. ಶಿಶುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಸೋಯಾ ಎಣ್ಣೆ ಸೇವನೆಯಿಂದ ನೆಗೆಟಿವ್ ಆಗುವ ಸಾಧ್ಯತೆ ಹೆಚ್ಚು,

ಸೋಯಾ ಎಣ್ಣೆ ಮಾನಸಿಕ ಅಸ್ವಸ್ಥತೆಯ ಅಪಾಯ ಹೆಚ್ಚಿಸುವಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ. ಕೆಲವೊಂದು ಬಾರಿ ದೈಹಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಖಿನ್ನತೆಯಂತಹ ಸಮಸ್ಯೆಗಳು ಉದ್ಭವಿಸಬಹುದು.
ಸೋಯಾ ಸೇವಿಸುವುದರಿಂದ ಮುಟ್ಟಿನ ವೇಳೆ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು. ಮುಚ್ಚಿನ ಚಕ್ರದ ಅನಗತ್ಯ ಬದಲಾವಣೆಗಳು ಮಹಿಳೆಯರಲ್ಲಿ ಕಂಡು ಬರುತ್ತವೆ. ಸೋಯಾ ಸೇವಿಸುವುದರಿಂದ ಖುತು ಚಕ್ರದಲ್ಲಿ ವಿಳಂಬವಾಗಬಹುದು.