ಆತಂಕದಿಂದ ಹೊರಬರಬೇಕೇ? ಇಲ್ಲಿದೆ ಪರಿಹಾರ! (Here is the solution to overcome Anxiety)

  • by

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಎಂದರೆ ಅದು ಆತಂಕ, ಭಯ ಎಂದು ಹೇಳಬಹುದು, ಯುವಕರಲ್ಲಿ, ಉದ್ಯೋಗಸ್ಥರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕದ ಕಾಯಿಲೆಗಳು ಹೆಚ್ಚುತ್ತಿವೆ. ಜೀವನದಲ್ಲಿ ಇಕ್ಕಟ್ಟು, ಕಷ್ಟಗಳು, ಒತ್ತಡಗಳು, ವಿಷಾದ, ಅನಿರೀಕ್ಷಿತ ವಿಪತ್ತುಗಳು ಬಂದೊದಗುವುದು ಸಹಜ. ಇದ್ರಿಂದ ಖಿನ್ನತೆ, ಆತಂಕ ಭಯ ಉಂಟಾಗುವುದು ಸಹಜ. ಕೆಲಮೊಮ್ಮೆ ಚಿಕ್ಕ ನಿರ್ಲಕ್ಷ್ಯವೂ ದೊಡ್ಡ ವಿಷಾದ ಎಡೆ ಮಾಡಿಕೊಡುತ್ತದೆ. ಹಾಗಾಗಿ ನಮ್ಮಲ್ಲಿನ ಆತಂಕ ಕೆಲಮೊಮ್ಮೆ ಬರುಬರುತ್ತಾ ಹೆಮ್ಮರವಾಗಿ ಬೆಳೆಯಬಹುದು. ಆದ್ದರಿಂದ ಆತಂಕ, ಭಯ ನಿವಾರಿಸುವುದು ಹೇಗೆ.. ಈ ಸಮಸ್ಯೆಗೆ ಚಿಕಿತ್ಸೆಗಳೇನು..?ಇಲ್ಲಿದೆ ಡೀಟೆಲ್ಸ್.

solution-overcome-anxiety-health-benefits, ಪರಿಹಾರಗಳು,ಆತಂಕ , ಹೆಲ್ತ್ ಟಿಪ್ಸ್

ಸಾಮಾನ್ಯವಾಗಿ ಆತಂಕದ ಲಕ್ಷಣಗಳು ಯಾವವು ಹಾಗೂ ಕಾರಣಗಳು ಏನು ಎಂದು ನೋಡುವುದಾದರೆ.

ಆತಂಕದ ಲಕ್ಷಣಗಳು

ಉದ್ವಿಗ್ನ ಭಾವನೆ
ಬೀಹೆವಿಯರ್ ನಲ್ಲಿ ಬದಲಾವಣೆ
ಭೀತಿಯನ್ನು ಹೊಂದಿರುವುದು
ಹೃದಯ ಬಡಿತ ಹೆಚ್ಚಾಗುವುದು
ವೇಗವಾಗಿ ಉಸಿರಾಡುವುದು
ಬೆವರುವುದು, ನಡಗುವುದು
ದಣಿದ ಭಾವನೆ, ಗಮನ ಕೇಂದ್ರಿಕರಿಸಲು ಕಷ್ಟವಾಗಬಹುದು
ಜಠರ ಕರುಳಿನ ಸಮಸ್ಯೆಗಳು
ನಿದ್ರೆಯ ಸಮಸ್ಯೆ

ಹೀಗೆ ಆತಂಕಕ್ಕೆ ಹಲವು ಕಾರಣಗಳಿರಬಹುದು. ಆತಂಕವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಸಮಸ್ಯೆ ತೀವ್ರ ಸ್ವರೂಪ ಪಡೆದು ಖಿನ್ನತೆಗೆ ದೂಡಬಹುದು. ಆತಂಕ ಹೊಂದಿರುವ ವ್ಯಕ್ತಿ ತುಂಬಾ ಪ್ಯಾನಿಕ್ ಅಟ್ಯಾಕ್ ನ ಲಕ್ಷಣಗಳನ್ನು ಹೊಂದಿರಬಹುದು. ಹಾಗಾಗಿ ಈ ಸಮಸ್ಯೆಯನ್ನು ತುಂಬಾ ಲಘುವಾಗಿ ಸ್ವೀಕರಿಸಬೇಡಿ. ನೀವು ಆತಂಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಸಮಸ್ಯೆಗೆ ಚಿಕಿತ್ಸೆ ಹಾಗೂ ಪರಿಹಾರ ಕಂಡುಕೊಳ್ಳಬಹುದು.


solution-overcome-anxiety-health-benefits, ಪರಿಹಾರಗಳು,ಆತಂಕ , ಹೆಲ್ತ್ ಟಿಪ್ಸ್

ಆತಂಕ ಕಾಯಿಲೆಗೆ ಕಾರಣವೇನು..?

ಕುಟುಂಬದ ಇತಿಹಾಸ ಕೂಡಾ ಆತಂಕಕ್ಕೆ ಕಾರಣವಾಗಬಹುದ. ಕುಟುಂದಲ್ಲಿ ಮಾನಸಿಕ ಸಮಸ್ಯೆಗಳ ಇತಿಹಾಸ ಹೊಂದಿರುವ ವ್ಯಕ್ತಿಗಳು ಕೆಲಮೊಮ್ಮೆ ಆತಂಕದ ಕಾಯಿಲೆಯ ಸಮಸ್ಯೆ ಎದುರಿಸಬಹುದು. ಒತ್ತಡ ಸಹ ಕಾರಣವಾಗಬಹುದು. ಕೆಲಸದಲ್ಲಿನ ಒತ್ತಡ, ಪ್ರೀತಿಪಾತ್ರರ ಸಾವು, ಬ್ರೇಕ್ ಅಪ್ ಇತ್ಯಾದಿ. ಥೈರಾಯ್ಡ್ ಸಮಸ್ಯೆ, ಅಸ್ತಮಾ, ಮಧುಮೇಹ ಹಾಗೂ ಹೃದ್ರೋಗದ ಸಮಸ್ಯೆ ಕಾಯಿಲೆಗೆ ಕಾರಣವಾಗಬಹುದು. ಖಿನ್ನತೆಯಿಂದ ಬಳಲುತ್ತಿರುವ ಜನರಲ್ಲಿ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಮಾದಕ ವಸ್ತುಗಳ ಬಳಕೆಯೂ ಸಹ ಆತಂಕದ ಕಾರಣಗಳಲ್ಲಿ ಒಂದು. ಆತಂಕ ಕಾಯಿಲೆಗೆ ಧೂಮಪಾನ ಹಾಗೂ ಅಲ್ಕೋಹಾಲ್ ಪರಿಹಾರವಲ್ಲ. ಬದಲಿಗೆ ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸರಿಯಾದ ಸಮಯದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದರೆ ಆತಂಕ ನಿವಾರಣೆಯಾಗಲಿದೆ.

ಸಮಸ್ಯೆಗೆ ಚಿಕಿತ್ಸೆಯೇನು..?

ಆತಂಕ ಸಮಸ್ಯೆಯನ್ನು ನಿವಾರಿಸಬಹುದು. ಈ ಸಮಸ್ಯೆ ಎದುರಿಸುವ ವ್ಯಕ್ತಿಯಲ್ಲಿ ಮೊದಲು ಆತ್ಮವಿಶ್ವಾಸ ವಿರಬೇಕು. ಸಮಸ್ಯೆಯ ತೀವ್ರತೆಯನ್ನು ನೋಡಿ ಮನಃಶಾಸ್ತ್ರಜ್ಞರು ಚಿಕಿತ್ಸೆ ನೀಡುತ್ತಾರೆ. ಸಮಸ್ಯೆ ಇರುವ ವ್ಯಕ್ತಿ ಜತೆ ವೈದ್ಯರು ಸಮಾಲೋಚನೆ ಮಾಡಿ, ಆತನ ಅಥವಾ ಆಕೆಯ ಸಮಸ್ಯೆಯನ್ನು ಪರೀಕ್ಷಿಸುತ್ತಾರೆ. ಔಷಧಿಗಳ ಬಳಕೆಗೆ ವೈದ್ಯರು ಶಿಫಾರಸು ಮಾಡಬಹುದು. ಈ ಸಮಸ್ಯೆಯನ್ನು ಶೀರ್ಘದಲ್ಲೇ ಗುಣಪಡಿಸಬಹುದು.

ನಮ್ಮ Spark.Live ಎಕ್ಸ್ ಪರ್ಟ್ ಡಾ. ಗೀತಾ ಅಪ್ಪಚ್ಚು ಅವರೊಂದಿಗೆ ಸಮಗ್ರ ಆರೋಗ್ಯದ ಬಗ್ಗೆ ಮಾಹಿತಿ, ಸಲಹೆ ಪಡೆಯಿರಿ. ಪ್ರತಿದಿನ: ಸಮಯ- ಬೆಳಿಗ್ಗೆ 10.30 ರಿಂದ ಸಂಜೆ 7ಗಂಟೆಯವರೆಗೆ Spark.Live.ನಲ್ಲಿ ಬುಕ್ ಮಾಡಿ, ವೈದ್ಯರ ಜತೆ ಮಾತನಾಡಬಹುದು. ಡಾ. ಗೀತಾ ಹೋಲಿಸ್ಟಿಕ್ ಹೀಲಿಂಗ್ ವಿಧಾನದ ಮೂಲಕ ಜೀವನ ಮತ್ತು ಸಂಬಂಧಗಳ ಬಗ್ಗೆ ಸಲಹೆ ನೀಡುತ್ತಾರೆ.

ವೈದ್ಯರ ಬಗ್ಗೆ ಪರಿಚಯ
ಡಾ.ಗೀತಾ ಅಪ್ಪಚ್ಚು
ಮನಃಶಾಸ್ತ್ರಜ್ಞರು, ಕೌಶಲ್ಯ ಅಭಿವೃದ್ಧಿಯ ತರಬೇತುದಾರರು,

ಡಾ ಗೀತಾ, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ phd ಪದವಿ ಪಡೆದಿದ್ದಾರೆ. ಇವರು ತಮ್ಮ ವೃತ್ತಿಯಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿದ್ದಾರೆ. ನಿಮ್ಮ ಅಭದ್ರತೆ , ಆತಂಕಗಳು, ಭಯಗಳು ಅಥವಾ ಸಾಮಾನ್ಯ ಯೋಗಕ್ಷೇಮದ ಕುರಿತು ನೀವು ಗೀತಾ ಅವರಿಗೆ ಯಾವುದೇ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ