ಬೆಣ್ಣೆ ಆಹಾರದ ರುಚಿಯಷ್ಟೇ ಹೆಚ್ಚಿಸುವುದಿಲ್ಲ. ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಕಾಣಬಹುದು. ರುಚಿ ರುಚಿಕರವಾದ ಪ್ಯಾನ್ ಕೇಕ್, ಟೋಸ್ಟ್ ತಯಾರಿಸಲು ನಾವು ಬೆಣ್ಣೆಯನ್ನು ಹೆಚ್ಚು ಬಳಸುತ್ತೇವೆ. ಭಾರತೀಯ ಪಾಕಪದ್ಧತಿಯಲ್ಲಿ ಬೆಣ್ಣೆ ಆಕರ್ಷಿಯ ಸುಹಾಸನೆ ಹಾಗೂ ರುಚಿ ಅನನ್ಯವಾದದ್ದು. ಬ್ರೆಡ್ ಟೋಸ್ಟ್ ಇಂದ ಹಿಡಿದು, ಚಿಕನ್ ಟಿಕ್ಕಾ , ನೂಡಲ್ಸ್ ವರೆಗೂ ವಿವಿಧ ಖಾದ್ಯಗಳಲ್ಲಿ ಬೆಣ್ಣೆ ರಾರಾಜಿಸುತ್ತದೆ. ಹಲವು ಗ್ರೇವಿಗಳಲ್ಲಿ ಬೆಣ್ಣೆ ನಮ್ಮ ಅಡುಗೆಯಲ್ಲಿ ಬೇರ್ಪಡಿಸಲಾಗದ ಒಂದು ಪದಾರ್ಥವಾಗಿ ಕಂಡು ಬರುತ್ತದೆ.

ಬದಲಾದ ತಾಪಮಾನಕ್ಕೆ ತಕ್ಕಂತೆ ಬೆಣ್ಣೆ ಗಟ್ಟಿಯಾಗುವುದನ್ನು ನೋಡಿದ್ದೇವೆ. ಅಡುಗೆ ಖಾದ್ಯಗಳಲ್ಲಿ ಗಟ್ಟಿಯಾಗಿರುವ ಬೆಣ್ಣೆ ಉಪಯೋಗಿಸುವುದು ಕಷ್ಟದ ಸಂಗತಿ. ಆದ್ದರಿಂದ ಬೆಣ್ಣೆಯನ್ನು ಮೃದುಗೊಳಿಸುವ ಸರಳ ವಿಧಾನಗಳು ಇಲ್ಲಿವೆ.
ಬೆಚ್ಚಗಿನ ನೀರಿನಲ್ಲಿ ಕರಗಿಸಿ
ಯೆಸ್, ಬೆಣ್ಣೆಯನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಬೇಕು. ಒಂದು ಬಟ್ಟಲು ಗಟ್ಟಿಯಾದ ಬೆಣ್ಣೆ ತೆಗೆದು ಕೊಂಡು , ಇದನ್ನು ಬೆಚ್ಚಗಿನ ನೀರಿನ ಮೇಲೆ ಇಡಬೇಕು. ಇದು ಸುಲಭವಾಗಿ ಬೆಣ್ಣೆಯನ್ನು ಕರಗಿಸುತ್ತದೆ.
ಬೆಣ್ಣೆಯನ್ನು ಸಾಫ್ಟ್ ಮಾಡಲು ಮತ್ತೊಂದು ಉಪಾಯವೆಂದರೆಸ ಅಡುಗೆ ಒಲೆ ಬಳಿ ಟ್ರೇ ನಲ್ಲಿ 2.3 ನಿಮಿಷಗಳ ಕಾಲ ಬೆಣ್ಣೆ ಇಡಬೇಕು. ನಂತರ ಚಾಕುವಿನಿಂದ ಸಣ್ಣ ಸಣ್ಣ ಪೀಸ್ ಗಳನ್ನು ಕತ್ತರಿಸಬಹುದು. ಈ ಮೂಲಕ ಬೆಣ್ಣೆಯನ್ನು ಕೆಲವೇ ನಿಮಿಷಗಳಲ್ಲಿ ಮೃದುವಾಗಿಸಬಹುದು. ಹೆಪ್ಪುಗಟ್ಟಿದ ಬೆಣ್ಣೆ ಕತ್ತರಿಸುವ ಚಾಕುವನ್ನು ಜ್ವಾಲೆಯ ಮೇಲೆ ಇಟ್ಟು, ಬಿಸಿ ಮಾಡುವುದು ಮತ್ತೊಂದು ತಂತ್ರವಾಗಿದೆ.
ಕೆಲವು ಖಾದ್ಯಗಳನ್ನು ತಯಾರಿಸಲು ಬೆಣ್ಣೆ ಆಗಾಗ್ಗೆ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಗಟ್ಟಿಯಾದ , ಹೆಪ್ಪುಗಟ್ಟಿದ ಬೆಣ್ಣೆಯನ್ನು ಉಪಯೋಗಿಸಲು ಆಗುವುದಿಲ್ಲ. ಒಂದು ತೆಳುವಾದ ಪ್ಲಾಸ್ಟಿಕ್ ಕವರ್ ನಲ್ಲಿ ಬೆಣ್ಣೆಯನ್ನು ಇಟ್ಟು, ಗಾಳಿ ಹೋಗದೇ ಹಾಗೇ ರೋಲಿಂಗ್ ಮಾಡಬೇಕು. ಇದ್ರಿಂದ ಬೆಣ್ಣೆ ಸಾಫ್ಟ್ ಆಗುತ್ತದೆ.

ಮಕ್ಕಳ ಮೆದುಳಿನ ಬೆಳವಣಿಗೆ ಬೆಣ್ಣೆ ಉಪಯುಕ್ತವಾದದ್ದು.
ಹೆಚ್ಚಿಸುವಲ್ಲಿ ಬೆಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕೊಬ್ಬು ಶಕ್ತಿಯಾಗಿ ಪರಿವರ್ತಿತವಾಗುತ್ತದೆ.
ಬೆಣ್ಣೆಯಲ್ಲಿ ಆಂಟಿ ಆಕ್ಸಿಡೆಂಟ್ ಅಧಿಕವಾಗಿದ್ದು, ಮೆದುಳಿನ ಗಡ್ಡೆ ಉಂಟಾಗದಂತೆ ತಡೆಯುತ್ತದೆ. ಇದು ದೇಹದಲ್ಲಿ ಬೇಗನೆ ಸುಕ್ಕು ಬೀಳುವುದನ್ನು ತಡೆಗಟ್ಟುತ್ತದೆ.
ಮುಖದ ಕಾಂತಿಗೆ ಬೆಣ್ಣೆ ಹೆಚ್ಚು ಸಹಕಾರಿ ಎಂದು ಹೇಳಬಹುದು. ಮಾಯಿಶ್ಚರೈಸರ್ ನಂತೆ ಬೆಣ್ಣೆ ಸಹಾಯ ಮಾಡುತ್ತದೆ. ತ್ವಚೆಯ ಹೊಳಪು ಹೆಚ್ಚಿಸುತ್ತದೆ. ಅಕಾಲಿಕ ನೆರಿಗೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದರಲ್ಲಿ ವಿಟಮಿನ್ ಕೆ ಹೆಚ್ಚಾಗಿರುವುದರಿಂದ ರಕ್ತ ಬೇಗನೆ ಹೆಪ್ಪುಗಟ್ಟಿ ಅಧಿಕ ರಕ್ತ ಹರಿಯನ್ನು ತಡೆಗಟ್ಟುತ್ತದೆ.
ಥೈರಾಯ್ಡ್ ಸಮಸ್ಯೆ ಇರುವವರು ಬೆಣ್ಣೆ ತಿಂದರೆ ಒಳ್ಳೆಯದು. ಬೆಣ್ಣೆ ತಿಂದರೆ ದಪ್ಪಗಾಗುತ್ತೇವೆ ಎಂದು ಬಹಳ ಜನ ಇದ್ರಿಂದ ದೂರವಿರುತ್ತಾರೆ. ಆದ್ರೆ ಥೈರಾಯ್ಡ್ ಸಮಸ್ಯೆ ನಿವಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.