ದೇಹಕ್ಕೆ ನೀರು ಅಮೃತವಿದ್ದಂತೆ. ಮಾನವನ ದೇಹ ಶೇ 70ರಷ್ಟು ನೀರನ್ನು ಒಳಗೊಂಡಿದೆ. ಇದು ದೇಹದ ಭಾಗಗಳನ್ನು ಹೈಡ್ರೇಡ್ ಮಾಡುತ್ತದೆ. ದಿನಕ್ಕೆ 6-7 ಗ್ಲಾಸ್ ನೀರು ಸೇವನೆ ಮಾಡುವುದು ಒಳ್ಳೆಯದು, ಈ ಹಿಂದೆ ಬಿಸಿ ನೀರು ಕುಡಿವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ನಾವು ಕೇಳಿದ್ದೇವೆ. ಆದ್ರೆ ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಕೆಲವು ಅಡ್ಡಪರಿಣಾಮಗಳಾಗಬಹುದು ಎಂದು ನಿಮಗೆ ತಿಳಿದಿದ್ದೇಯಾ?.. ಯೆಸ್ ,ಬಿಸಿನೀರನ್ನು ಸೇವಿಸುವುದರಿಂದ ಏನೆಲ್ಲಾ ಅಡ್ಡ ಪರಿಣಾಮಗಳಿವೆ ಎಂದು ನೋಡೋಣ.

ಬಾಯಾರಿಕೆ ಅಲ್ಲದಿದ್ದರೂ ಸಹ ಹೆಚ್ಚು ನೀರನ್ನು ಸೇವಿಸುವುದರಿಂದ ದೇಹದಲ್ಲಿನ ನೀರಿನ ಸಾಂದ್ರತೆಯಲ್ಲಿ ಅಸಮತೋಲನ ಉಂಟಾಗುತ್ತದೆ ಎಂದು ಹೇಳಬಹುದು. ಅಲ್ಲದೇ, ಒಂದು ಸಮಯದಲ್ಲಿ ಹೆಚ್ಚು ನೀರು ಮೆದುಳಿನ ಕೋಶಗಳ ಊತಕ್ಕೆ ಕಾರಣವಾಗಬಹುದು, ಇದು ವ್ಯಕ್ತಿಗೆ ಅಪಾಯಕಾರಿ.
ಬಿಸಿ ನೀರಿನ ಸೇವನೆಯಿಂದ ತುಟಿ, ನಾಲಿಗೆ ಸುಡುವ ಸಾಧ್ಯತೆ!
ಬಿಸಿ ನೀರನ್ನು ಸೇವನೆಯಿಂದ ನಾಲಿಗೆ, ತುಟಿ ಅಥವಾ ಬಾಯಿಯ ಒಳ ಪದರ ಸುಲಭವಾಗಿ ಸುಡುತ್ತದೆ. ಕೆಲವು ದಿನಗಳವರೆಗೂ ಅಗಿಯಲು ಮತ್ತು ಕುಡಿಯಲು ಕಷ್ಟವಾಗಬಹುದು. ಆದ್ದರಿಂದ ಯಾವಾಗಲೂ ನೀರಿನ ತಾಪಮಾನವನ್ನು ಪರಿಶೀಲಿಸಿ.
ನಿದ್ರೆಯಲ್ಲಿ ಅಡಚಣೆ ಮತ್ತು ರಕ್ತದ ಪ್ರಮಾಣದಲ್ಲಿ ಬದಲಾವಣೆ!
ಅನಗತ್ಯವಾಗಿ ಬಿಸಿ ನೀರನ್ನು ಸೇವಿಸುವುದರಿಂದ ರಾತ್ರಿಯಲ್ಲಿ ನಿದ್ರೆಗೆ ಅಡಚಣೆಯಾಗಬಹುದು.ಇದು ನಿಮಗೆ ಹೆಚ್ಚು ಮೂತ್ರ ವಿಸರ್ಜಿಸಲು ಕಾರಣವಾಗಬಹುದು. ಬಿಸಿ ನೀರು ರಾತ್ರಿಯಲ್ಲಿ ಚಯಾಪಯಚ ಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಂಡು ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಇನ್ನು ಹೆಚ್ಚು ಬಿಸಿ ನೀರು ಸೇವಿಸುವುದರಿಂದ ಹೃದಯ ಹಾಗೂ ರಕ್ತನಾಳಗಳ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ನೇರವಾಗಿ ಟ್ಯಾಪ್ ನಿಂದ ಬರುವ ಬಿಸಿ ನೀರು ಹೆಚ್ಚು ಮಾಲಿನ್ಯಕಾರಕವಾಗಿರುತ್ತದೆ. ಕೊಳವೆಗಳು ತುಕ್ಕು ಹಿಡಿದಿದ್ದರೆ, ಅಥವಾ ಹಳೆಯದಾಗಿದ್ದರೆ ಅಂಥ ಸಂದರ್ಭದಲ್ಲಿ ವಿಷ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೇರವಾಗಿ ಟ್ಯಾಪ್ ನಿಂದ ಬರುವ ಬಿಸಿ ನೀರನ್ನು ಬಳಸಬಾರದು. ಬದಲಾಗಿ ನೀವು ತಣ್ಣೀರನ್ನು ಕುದಿಸಿ ಸೇವಿಸಬೇಕು,
ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ..!
ಬಾಯಾರಿಕೆ ಇಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಅಡ್ಡ ಪರಿಣಾಮ ಬೀರಬಹುದು. ಹಾಗಾಗಿ ಬಾಯಾರಿಕೆ ಯಾದಾಗ ಮಾತ್ರ ಬಿಸಿ ನೀರನ್ನು ಬಳಕೆ ಮಾಡಿ. ಹೆಚ್ಚು ನೀರು ಕುಡಿಯುವುದರಿಂದ ಮೆದುಳಿನ ಕೋಶಗಳಲ್ಲಿ ಉರಿಯೂತ ಉಂಟಾಗುತ್ತದೆ. ಇತರೆ ಸಮಸ್ಯೆಗಳು ಕಾಡಬಹುದು.
ಮೂತ್ರಪಿಂಡದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ!
ಮೂತ್ರಪಿಂಡವು ಬಲವಾದ ಕ್ಯಾಪಿಲ್ಲರಿಯನ್ನು ಹೊಂದಿದ್ದು, ಇದು ದೇಹದ ವಿಷ ಹಾಗೂ ಹೆಚ್ಚುವರಿ ನೀರನ್ನು ಹೊರಹಾಕಲು ನೆರವಾಗುತ್ತದೆ. ಇದರರ್ಥ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ನೀರು ಕುಡಿಯುವುದರಿಂದ ನಿಮ್ಮ ಜೀವಾಣುಗಳ ಕಾರ್ಯವೈಖರಿ ಸುಧಾರಿಸುತ್ತದೆ. ಹೆಚ್ಚುವರಿ ನೀರಿನಿಂದಾಗಿ ಮೂತ್ರಪಿಂಡದ ಮೇಲೆ ಒತ್ತಡ ಹೆಚ್ಚಾಗಬಹುದು.

ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದಾಗ ರಕ್ತದಲ್ಲಿರುವ ಎಲೆಕ್ಟ್ರೋಲೈಟ್ ದುರ್ಬಲಗೊಳ್ಳುುತ್ತದೆ. ರಕ್ತ ಹಾಗೂ ಕೋಶಗಳ ದುರ್ಬಲತೆಯಿಂದಾಗಿ ಕೋಶಗಳು ಉಬ್ಬಿಕೊಳ್ಳಬಹುದು.
ಉಗುರು ಬೆಚ್ಚಗಿನ ನೀರಿನ ಪ್ರಯೋಜನಗಳೇನು?
ಉಗುರು ಬೆಚ್ಚಗಿನ ನೀರು ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ದೇಹವು ವಿಷವನ್ನು ವೇಗವಾಗಿ ತೊಡೆದು ಹಾಕಲು ಸಹಾಯ ಮಾಡುತ್ತದೆ. ಆದರೆ ಬೆಚ್ಚಗಿನ ನೀರನ್ನು ಆಗಾಗ ಕುಡಿಯುವುದರಿಂದ ನಿಮಗೆ ಕಡಿಮೆ ಬಾಯಾರಿಕೆಯಾಗಬಹುದು. ಶೀತ , ಜ್ವರ ಬಂದಾಗ ತಣ್ಣೀರು ಕುಡಿಯಬಾರದು. ಇದರಿಂದ ನೀವು ನಿಧಾನವಾಗಿ ಗುಣ ಮುಖರಾಗುತ್ತೀರಿ. ಹಾಗೆಯೇ ಚೆನ್ನಾಗಿ ಜೀರ್ಣಕ್ರಿಯೆ ಆಗಬೇಕಾದರೆ ತಣ್ಣೀರನ್ನು ಕುಡಿಯುವುದು ಅಷ್ಟು ಸೂಕ್ತವಲ್ಲ. ಸಂಶೋಧನೆಯ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಅದರಿಂದ ಹಲವು ರೀತಿಯ ಆರೋಗ್ಯ ಲಾಭಗಳಿವೆ.
ಬಿಸಿ ನೀರು , ತಣ್ಮೀರು ಯಾವುದು ಉತ್ತಮ..
ನಿಯಮಿತವಾಗಿ ವ್ಯಾಯಾಮ ಹಾಗೂ ತಾಲೀಮು ಮಾಡುತ್ತಿದ್ದರೆ ದೇಹದ ತಾಪಮಾನ ಕಡಿಮೆ ಮಾಡಲು ತಣ್ಮೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ ವಿಷಯ ಬಂದಾಗ ಬಿನಿ ನೀರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ತಣ್ಣೀರು ಕುಡಿಯುವುದರಿಂದ ತೂಕ ನಷ್ಟವಾಗುವುದಿಲ್ಲ.