ಬಾಲಿವುಡ್ ನ ಭಾಯ್ ಜಾನ್ ಎಂದೇ ಹೆಸರುವಾಸಿಯಾಗಿರುವ ಖ್ಯಾತ ನಟ ಸಲ್ಮಾನ ಖಾನ್ ಖ್ಯಾತಿ ಇಂದಿಗೂ ಕಮ್ಮಿಯಾಗಿಲ್ಲ. ಸುಲ್ತಾನ್ ಇವತ್ತಿಗೂ ಬೇಡಿಕೆ ನಟ. ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಬಾಲಿವುಡ್ ನ ಸಿನಿಮಾ ದಬ್ಬಾಂಗ್ 3 ನಲ್ಲಿ ಸಲ್ಮಾನ್ ಖಾನ್ ಎದುರು ಖಳನಾಯಕನಾಗಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಅಭಿನಯ ಚಕ್ರವರ್ತಿ ಸುದೀಪ್ ಕೂಡಾ ನಟಿಸಿದ್ದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಸಲ್ಮಾನ್ ಖಾನ್ ಮೊದಲ ಚಿತ್ರ ‘ಬಿವಿ ಹೋ ತೊ ಐಸಿ’, ‘ಮೈನೆ ಪ್ಯಾರ್ ಕಿಯಾ’ ಭರ್ಜರಿಯಾಗಿ ಯಶಸ್ವಿ ಕಂಡು, ಸಲ್ಲುಗೆ ಫಿಲ್ಮ್ ಫೇರ್ ಪ್ರಶಸ್ತಿ ತಂದುಕೊಟ್ಟಿತ್ತು. ಸದ್ಯಕ್ಕೀಗ ಸಲ್ಮಾನ್ ಖಾನ್ ಜನತೆಗೆ ಒಂದು ಕರೆ ಕೊಟ್ಟಿದ್ದಾರೆ. ಅದೇನು ಅಂದ್ರೆ? ಇಲ್ಲಿದೆ ಡೀಟೇಲ್ಸ್.

‘ಯೇ ಜಿಂದಗಿ ಕಾ ಸವಾಲ್ ಹೈ ‘ – ಸಲ್ಮಾನ್ ಖಾನ್
ಕೊರೊನಾ ವೈರಸ್ ಬಿಕ್ಕಟ್ಟನ್ನು ತುಂಬಾ ಗಂಭೀರವಾಗಿ ಪರಿಗಣಿಸುವಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಕೊರೊನಾ ವೈರಸ್ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲ್ಮಾನ್ ಖಾನ್ ಅಭಿಮಾನಿಗಳನ್ನು ಕರೆ ನೀಡಿದ್ದಾರೆ. ‘ಯೇ ಜಿಂದಗಿ ಕಾ ಸವಾಲ್ ಹೈ ‘ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
‘ಎಲ್ಲರಿಗೂ ನಮಸ್ತೆ.. ನೀವೆಲ್ಲರೂ ಹೇಗಿದ್ದೀರಿ.. ನಾನು ಸಲ್ಮಾನ್ ಖಾನ್, ಮೊದಲನೇಯದಾಗಿ ನಾನು ಆರೋಗ್ಯ ವೃತ್ತಿಪರರು ವೈದ್ಯರಿಂದ ಹಿಡಿದು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಮಯ ಮೀಸಲಿಟ್ಟ ಪೊಲೀಸ್ ಅಧಿಕಾರಿಗಳವರೆಗೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಬಿಕ್ಕಟ್ಟನು ಗಂಭೀರವಾಗಿ ಪರಿಗಣಿಸುವಂತೆ ನಾನು ಎಲ್ಲರಿಗೂ ಮನವಿ ಮಾಡ್ತೇನೆ. ದಯವಿಟ್ಟು ಫೇಕ್ ಸುದ್ದಿಗಳನ್ನು ಹರಡಬೇಡಿ. ದಯವಿಟ್ಟು ಅಗತ್ಯವಿರುವುದನ್ನೇ ಮಾಡಿ’ ಎಂದು ಸಲ್ಮಾನ್ ಖಾನ್ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
‘ನಮಸ್ತೆ ಹೇಳುವುದು ನಮ್ಮ ಸಂಸ್ಕೃತಿ’
ಇನ್ನು ಮತ್ತೊಂದು ಫೊಟೋದಲ್ಲಿ ಸಲ್ಮಾನ್ ಖಾನ್, ಜಿಮ್ ನಲ್ಲಿ ತಮ್ಮ ಕಟ್ಟು ಮಸ್ತಾದ ದೇಹವನ್ನು ಪ್ರದರ್ಶಿಸುತ್ತಾ, ಎರಡೂ ಕೈಗಳನ್ನು ಜೋಡಿಸಿ ನಮಸ್ತೆ ಹೇಳಿರುವ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಸಲಾಂ ಅಥವಾ ನಮಸ್ತೆ ಹೇಳುವುದು ನಮ್ಮ ಸಂಸ್ಕೃತಿ. ಕೈ ಮುಗಿದು ನಮಸ್ಕಾರ ಹೇಳೋಣ. ಕೊರೊನಾ ಹೋದ ಮೇಲೆ ಶೇಕ್ ಹ್ಯಾಂಡ್ ಮಾಡಲು ಅಡ್ಡಿಯಿಲ್ಲ ಎಂದು ಕರೆ ನೀಡಿದ್ದು, ಈ ಮೂಲಕ ಸಲ್ಮಾನ್ ಖಾನ್ ಪೋಸ್ಟ್ ಗೆ ಲಕ್ಷಾಂತರ ಜನ ಸ್ಪಂದಿಸಿದ್ದಾರೆ.

‘ಮುನ್ನೇಚ್ಚರಿಕೆ ಕ್ರಮಗಳನ್ನು ಅನಸುರಿಸಿ’
ಇದೊಂದು ದೊಡ್ಡ ಸಮಸ್ಯೆ. ಪ್ರತಿಯೊಬ್ಬರು ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಹೇಳುವ ಮೂಲಕ ಸಲ್ಮಾನ್ ಗಮನ ಸೆಳೆದಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮತ್ತೊಂದು ವೀಡಿಯೋ ವನ್ನು ಅಪಲೋಡ್ ಮಾಡಿರುವ ಸಲ್ಮಾನ್, ಕೊರೊನಾ ವೈರಸ್ ಬಗ್ಗೆ ಮುನ್ನೇಚ್ಚರಿಕೆ ಕ್ರಮಗಳನ್ನು ಹೇಗೆ ಅನುಸರಿಸಬೇಕು..? ಮತ್ತು ಮಾರಣಾಂತಿಕ ಕಾಯಿಲೆಗೆ ಸಂಬಂಧಿಸಿದ ಫೇಕ್ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಬಾರದು ಎಂದು ವೀಡಿಯೋ ಮೂಲಕ ಅಭಿಮಾನಿಗಳಿಗೆ ವಿನಂತಿ ಮಾಡಿದ್ದಾರೆ.
54 ವರ್ಷದ ನಟ ಸಲ್ಮಾನ್ ಖಾನ್, ಸ್ಕೆಚಿಂಗ್ ಸೇಷನ್ ನಲ್ಲಿ ಪಾಲ್ಗೊಂಡಿರುವ ಸ್ವಂತಃ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಲಕ್ಷಾಂತರ ಸಲ್ಮಾನ್ ಖಾನ್ ಗೆ ಲಕ್ಷಾಂತರ ಅಭಿಮಾನಿಗಳು, ಫಾಲೋವರ್ಸ್ ಇದ್ದಾರೆ. ಇನ್ ಸ್ಚಾಗ್ರಾಂ ನಲ್ಲಿ ಸುಮಾರು 3 ಕೋಟಿಗಿಂತಲೂ ಸಲ್ಮಾನ್ ಖಾನ್ ಅವರನ್ನು ಫಾಲೋ ಮಾಡುತ್ತಾರೆ.

ಏತನ್ಮಧ್ಯೆ, ಕೊರೊನಾ ವೈರಸ್ ಭೀತಿ ಸೃಷ್ಟಿಸಿರುವ ಬೆನ್ನಲ್ಲೇ, ಚಲನಚಿತ್ರೋದ್ಯಮವನ್ನು ಸ್ಥಗಿತಗೊಳಿಸಲಾಗಿದೆ. ಬಾಲಿವುಡ್ ನ ಖ್ಯಾತನಾಮರು ಚಿತ್ರೀಕರಣದಿಂದ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಸಮಯವನ್ನು ಕಳೆಯಲು ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ. ಅದೇ ರೀತಿ ಸಲ್ಲು ಕೂಡಾ ಸ್ಕೆಚಿಂಗ್ ನಲ್ಲಿ ತೊಡಗಿರುವುದು ಕಂಡು ಬಂದಿದೆ.
ಮುಂಬರುವ ಚಿತ್ರ ರಾಧೆ ಚಿತ್ರದಲ್ಲಿ ಸಲ್ಮಾನ್ ಖಾನ್ ಕಾರ್ಯನಿರತರಾಗಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು. ಈ ಹಿಂದೆ ಸಲ್ಮಾನ್ ಚಿತ್ರಗಳಾದ ವಾಟೆಂಡ್ ಮತ್ತು ದಬ್ಬಾಂಗ್ 3 ಚಿತ್ರಗಳನ್ನು ಕಂಪ್ಲೀಟ್ ಮಾಡಿರುವುದನ್ನು ಕಾಣಬಹುದು. ಕಳೆದ ವರ್ಷ ‘ಭಾರತ್ ‘ಮೂವೀಯಲ್ಲಿ ಸಲ್ಮಾನ್ ಮತ್ತು ದಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದರು.