ನೀವು ನಿಮ್ಮ ಸಂಗಾತಿಗೆ ಉತ್ತಮ ಪಾರ್ಟನರ್ ಆಗಿದ್ದೀರಾ..? ಎಂದು ಪ್ರಶ್ನಿಸಿದಾಗಲೆಲ್ಲಾ ಎಲ್ಲಾ ಜನರು ಹೌದು ಎಂದು ಉತ್ತರಿಸುತ್ತಾರೆ. ಆದ್ರೆ ರಿಲೇಷನ್ ಶಿಪ್ ವಿಚಾರಕ್ಕೆ ಬಂದಾಗ ನಿಮ್ಮ ಸಂಗಾತಿಗೆ ನೀವೂ ಉತ್ತಮ ಪಾರ್ಟನರ್ ಆಗಿರಬಹುದು ಅಥವಾ ಇಲ್ಲದೇ ಇರಬಹುದು. ಒಬ್ಬರ ಜತೆ ಸಂಬಂಧದಲ್ಲಿದ್ದಾಗ ಪ್ರೀತಿ ಅಷ್ಟೇ ಅಲ್ಲ, ಹಲವು ವಿಚಾರಗಳಿಗೆ ಸಮಸ್ಯೆ ಎದುರಿಸಬೇಕಾಗಬಹುದು. ಸಂಬಂಧದಲ್ಲಿ ನೀವು ಯಾವಾಗಲೂ ಸರಿಯಾಗಿದ್ದೀರಾ? ನಿಮ್ಮಸಂಗಾತಿ ಯಾವಾಗಲೂ ಹೆಚ್ಚು ತಪ್ಪಾಗಿದ್ದಾರೆ! ಎಂದು ಭಾವಿಸುವುದು ತಪ್ಪು. ಪರಸ್ಪರ ಅಸಮಾಧಾನವಿದ್ದರೆ, ನ್ಯೂನತೆಗಳಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು.

ಕೆಲವರು ಅನೇಕ ಬಾರಿ, ತಮ್ಮ ಸಂಬಂಧವನ್ನು ಹೇಗೆ ಮುನ್ನಡೆಸಬೇಕು ಮತ್ತು ಸಂಗಾತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಮರೆತು ಬೀಡುತ್ತಾರೆ. ಸ್ವಲ್ಪ ಸಮಯದ ಬಳಿಕ ಸಂಗಾತಿಯನ್ನು ನಿರ್ಲಕ್ಷಿಸಲು ಪ್ರಾರಂಭಿಸು್ತತಾರೆ. ಅವರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇಬ್ಬರ ಮಧ್ಯೆ ಅಸಮಾಧಾನ ಮೂಡುತ್ತದೆ. ಕೆಲವರು ತಾವು ಸರಿ ಅಥವಾ ಇಲ್ಲವೇ? ಎಂದು ನೋಡುವುದಕ್ಕಿಂತ ಹೆಚ್ಚಾಗಿ ತಮ್ಮ ಸಂಗಾತಿಯ ತಪ್ಪೆಂದು ಸಾಬೀತುಪಡಿಸುವುದನ್ನು ಮುಂದುವರಿಸುತ್ತಾರೆ. ಆದ್ರೆ ಇದೆಲ್ಲದಕ್ಕೂ ಮುನ್ನ , ನಿಮ್ಮ ಸಂಬಂಧ ನಿಭಾಯಿಸುವಲ್ಲಿ ನಿವೆಷ್ಟು ಒಳ್ಳೆಯವರು ಎಂದು ತಿಳಿದುಕೊಳ್ಳಬೇಕು. ನಿಮ್ಮ ಸಂಬಂಧ ದೀರ್ಘಕಾಲ ಮುಂದುವರಿಬೇಕಾದರೆ, ನಿಮ್ಮ ತಪ್ಪುಗಳು ಏನೆಂಬುದನ್ನು ತಿಳಿದುಕೊಳ್ಳಬೇಕು. ಮತ್ತು ಆ ತಪ್ಪುಗಳಿಂದ ತಿದ್ದಿಕೊಳ್ಳಲು ಮುಂದಾಗಬೇಕು. ತಪ್ಪನ್ನು ತಿದ್ದಿಕೊಳ್ಳುವುದರಲ್ಲಿ ಯಾವುದೇ ಅಹಂ ನಿಮ್ಮಗೆ ಅಡ್ಡಿಯಾಗಬಾರದು. ಸಂಗಾತಿ ವಿಷಯದಲ್ಲಿ ಎಲ್ಲಿ ಎಡವಿದ್ದೀರಿ ಎಂದು ತಿಳಿಯಲು ಈ ಕೆಳಗಿರುವ ಕೆಲವು ಸಲಹೆಗಳು ನಿಮ್ಗೆ ಸಹಾಯಕಾರಿಗುತ್ತದೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ!
ನಿಮ್ಮ ಪಾರ್ಟನರ್ ನಿಮ್ಮ ಜತೆಗೆ ಜಗಳವಾಡಿದಾಗ, ನಿಮ್ಮ ಅಭಿಪ್ರಾಯಗಳನ್ನು ಅವರಿಗೆ ಹೇಳುವ ಬದಲು, ಅವರನ್ನು ನಿಮ್ಮಿಂದ ದೂರವಿರಿಸಲು ಮುಂದಾಗುತ್ತೀರಿ . ನಿಮ್ಮ ಹಾಗೂ ಸಂಗಾತಿ ನಡುವೆ ಚರ್ಚೆ ನಡೆಯುತ್ತಿದ್ದರೆ, ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಬೇಕು. ಇದರಿಂದ ನಿಮ್ಮಿಬ್ಬರ ನಡುವಿನ ಅಸಾಮಾಧಾನ ಕೊನೆಗೊಳ್ಳಬಹುದು.
ನಿಮ್ಮ ಸಂಗಾತಿಯ ತಪ್ಪನ್ನು ಯಾವಾಗಲೂ ಹುಡಕಬೇಡಿ..!
ಅನೇಕ ಜನರು ತಮ್ಮ ಸಂಗಾತಿಯ ತಪ್ಪುಗಳನ್ನು ಪದೇ ಪದೇ ಹೇಳುತ್ತಿರುತ್ತಾರೆ. ಕೆಲವೊಮ್ಮೆ ನೀವು ಸಹ ತಪ್ಪುಗಳನ್ನು ಮಾಡುತ್ತೀರಿ. ಅದ್ರೆ ಇದು ನಿಮ್ಮ ಅರಿವಿಗೆ ಬಂದಿರುವುದಿಲ್ಲ. ನಿಮ್ಮ ಸಂಗಾತಿ ತಪ್ಪಿನ ಬಗ್ಗೆ ಪದೇ ಪದೇ ಕಂಪ್ಲೇಟ್ ಮಾಡಲು ಮುಂದಾಗುತ್ತೀರಿ. ಹೀಗೆ ಮಾಡಿದರೆ ಇಬ್ಬರ ಮಧ್ಯೆ ಮನಃಸ್ತಾಪ ಮತ್ತಷ್ಟು ಹೆಚ್ಚಾಗಬಹುದು.

ಸಮಯ ನೀಡದಿರುವುದು!
ನಿಮ್ಮ ಸಂಗಾತಿಗೆ ನಿಮಗಾಗಿ ಸರಿಯಾದ ಸಮಯವನ್ನು ನೀಡದಿದ್ದರೆ, ಅದು ದೊಡ್ಡ ತಪ್ಪು. ಇದ್ರಿಂದಾಗಿ ನಿಮ್ಮನ್ನು ಉತ್ತಮ ಸಂಗಾತಿ ಎಂದು ಕರೆಯಲಾಗುವುದಿಲ್ಲ. ಸಂಬಂಧದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು, ಸಮಯ ಮೀಸಲಿಡುವುದು, ಮತ್ತು ಆಲಿಸುವುದು ಬಹಳ ಮುಖ್ಯ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.
ಸಂಗಾತಿ ಜತೆಗಿದ್ದಾಗ ಹೆಚ್ಚು ಫೋನ್ ಬಳಸುವುದು!
ಸಂಗಾತಿ ಜತೆಗಿದ್ದಾಗ ಹೆಚ್ಚು ಫೋನ್ ಬಲಸುವುದು ಸಹ ನಿಮ್ಮ ಸಂಬಂಧಕ್ಕೆ ಕುತ್ತು ತರಬಹುದು. ಸಂಗಾತಿ ಜತೆಗಿದ್ದಾಗ ಅವರ ಜತೆ ಹೆಚ್ಚು ಸಮಯ ಕಳೆಯುವುದಕ್ಕಿಂತ , ಫೋನ್ ನಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಸಮಸ್ಯೆ ಉಂಟು ಮಾಡಬಲ್ಲದ್ದು, ಅಲ್ಲದೇ, ಇದು ನಿಮ್ಮ ಸಂಗಾತಿಗೆ ಇದು ಹೆಚ್ಚು ಕಿರಿ ಕಿರಿಯನ್ನಿಸಬಹುದು. ಇದರ ಅರ್ಥ ಅವರ ಜತೆ ಇದ್ದಾಗಲೂ, ನಿಮ್ಮ ಗಮನ ಬೇರೆಡೆಗೆ ಇದೆ ಎಂದು ತೋರಿಸುತ್ತದೆ. ಇದ್ರಿಂದ ಸಂಗಾತಿ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಬಹುದು. ಇಂತಹ ವರ್ತನೆಗಳನ್ನು ನಿಮ್ಮ ಸಂಗಾತಿ ಜತೆಗಿದ್ದಾಗ ಮಾಡಬೇಡಿ.