ಇವತ್ತಿನ ದಿನಗಳಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರು ಉದ್ಯೋಗಸ್ಥರು. ಇಬ್ಬರಿಗೂ ತಮ್ಮದೇ ಆದ ಖರ್ಚು ವೆಚ್ಚಗಳು ಇರುತ್ತವೆ. ಹಣಕಾಸಿನ ವಿಷಯ ಬಂದಾಗ ಸಮನ್ವಯದ ಕೊರತೆ, ಜಗಳ, ಮನಸ್ತಾಪ ಇವೆಲ್ಲಾ ಸಾಮಾನ್ಯವಾಗಿ ಕಂಡು ಬರುತ್ತದೆ. ಇದು ಹೀಗೆ ಮುಂದುವರಿದರೆ ಬರು ಬರುತ್ತಾ ಗಂಡ ಹೆಂಡತಿ ಸಂಬಂಧ ವಿಚ್ಛೇದನೆಯಲ್ಲಿ ಕೊನೆಗೊಳ್ಳಬಹುದು. ಆದ ಕಾರಣ ಮದುವೆಗೂ ಮೊದಲೇ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಹಣಕಾಸಿನ ಬಗ್ಗೆ ಚರ್ಚಿಸುವುದು ಸೂಕ್ತ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಂಗಾತಿ ಹಾಗೂ ನೀವು ಇಬ್ಬರು ಸಂತೋಷದಿಂದ ಇರಬಹುದು. ಹಣದ ವಿಷಯಕ್ಕೆ ನಿಮ್ಮ ಸಂಬಂಧ ಹಾಳಾಗಬಾರದು.. ನೀವೇನು ಮಾಡಬೇಕು.. ಇಲ್ಲಿದೆ ಉಪಾಯಗಳು!
ಖರ್ಚು ಮಾಡುವ ಮೊದಲು ಯೋಚಿಸಿ.!
ಆರಂಭದಲ್ಲಿ ಎಲ್ಲರೂ ಖರ್ಚು ಮಾಡುವ ಬಗ್ಗೆ ಯೋಚಿಸುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ವಿಮ್ಮ ಮಿತಿಗಿಂತ ಹೆಚ್ಚಿನದನ್ನು ಖರೀದಿಸುತ್ತೀರಿ. ದುಬಾರಿ ರೆಸ್ಟೋರೆಂಟ್ ಗೆ ಹೋಗಿ ಹಣ ಖರ್ಚು ಮಾಡುತ್ತೀರಿ. ಇದೆಲ್ಲ ಮಾಡುವುದು ತಪ್ಪಲ್ಲ. ಆದರೆ ಕೆಲಮೊಮ್ಮೆ ಈ ವೆಚ್ಚಗಳು ಅನಾವಶ್ಯಕ ವೆನಿಸಿ ಬೀಡುತ್ತವೆ. ಹಾಗಾಗಿ ನಿಮ್ಮ ಬಜೆಟ್ ಎಷ್ಟು.. ಹೇಗೆ ಖರ್ಚು ಮಾಡಬೇಕು ಎಂದು ನೀವು ಮೊದಲೇ ನಿರ್ಧರಿಸಿದರೆ ಒಳ್ಳೆಯದು.

ಒಟ್ಟಿಗೆ ಬಜೆಟ್ ಬಗ್ಗೆ ಚರ್ಚಿಸಿ.!
ಗಂಡ, ಹೆಂಡತಿ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದರೂ ಸಹ, ಒಟ್ಟಿಗೆ ಕುಳಿತು ನೀವು ಬಜೆಟ್ ಬಗ್ಗೆ ಚರ್ಚೆ ಮಾಡುವುದು ಉತ್ತಮ. ಮನೆಯ ಖರ್ಚು ಎಷ್ಟು, ಹೇಗೆ ಖರ್ಚು ಮಾಡಬೇಕೆಂಬುದನ್ನು ಪರಸ್ಪರ ಒಪ್ಪದದೊಂದಿಗೆ ನಿರ್ಧರಿಸಿ. ಮನೆಯ ಖರ್ಚಿನ ವಿಚಾರದಲ್ಲಿ ಇಬ್ಬರ ಅಭಿಪ್ರಾಯಗಳು ಮುಖ್ಯವಾಗುತ್ತದೆ. ನಿಮ್ಮ ಹಣದ ಪರಿಸ್ಥಿತಿ ಚೆನ್ನಾಗಿಲ್ಲದೇ ಇರಬಹುದು. ಅಂಥ ಸಮಯದಲ್ಲಿ ನಿಮ್ಮ ಸಂಗಾತಿಗೆ ಈ ಬಗ್ಗೆ ತಿಳಿಸಿ. ಸಂಗಾತಿಯಿಂದ ಈ ವಿಚಾರಗಳನ್ನು ಮರೆ ಮಾಚುವುದು ಸರಿಯಲ್ಲ. ಒಟ್ಟಿನಲ್ಲಿ ಹಣದ ಪರಿಸ್ಥಿತಿ ಹೇಗೆ ಸರಿಪಡಿಸಬೇಕು ಎಂದು ಗಂಡ, ಹೆಂಡತಿ ಚರ್ಚೆ ನಡೆಸಬೇಕು.

ನಿಮ್ಮ ಖರ್ಚಿನ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳಿ!?
ಗಂಡ ಹೆಂಡತಿ ಕೆಲವೊಂದು ಸಂದರ್ಭದಲ್ಲಿ ಪರಸ್ಪರರ ಮೇಲೆ ಅವಲಂಬಿತರಾಗಿರುತ್ತಾರೆ. ನಿಮ್ಮ ವೈಯಕ್ತಿಕ ಖರ್ಚನ ಜವಾಬ್ದಾರಿ ನೀವೇ ತೆಗೆದುಕೊಳ್ಳಬೇಕು, ಮನೆಯ ಖರ್ಚು ಹೆಚ್ಚಾಗಿದೆ ಎಂದು ಸಂಗಾತಿಯಿಂದ ಹಣ ಕಾಸಿನ ಸಹಾಯ ಕೇಳುವುದು ಸರಿಯಲ್ಲ. ನೀವು ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ. ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಿಮ್ಮ ಸಂಗಾತಿ ನಿಮ್ಮ ಖರ್ಚನ್ನು ನೋಡಿಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಬೇಡಿ.
ಹಣ ಖರ್ಚಾಗುತ್ತಿರುವ ಬಗ್ಗೆ ಮಾತನಾಡಿ, ಬಗೆಹರಿಸಿಕೊಳ್ಳಿ!
ನೀವು ಕಷ್ಟದಿಂದ ದುಡಿದ ಹಣವನ್ನು ನಿಮ್ಮ ಪಾಟರ್ನರ್ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದರೆ, ಅದು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಮನಸ್ತಾಪಕ್ಕೆ ಕಾರಣವಾಗಬಹುದು. ಆದ್ದರಿಂದ ಈ ಸಮಸ್ಯೆ ಬಗೆಹರಿಸಲು ನೇರವಾಗಿ ಅವರ ಜತೆ ಕುಳಿತು ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ. ಒಂದು ವೇಳೆ ಮಾತಾನಾಡುವುದಿಲ್ಲ ಎಂದರೆ ಅದು ನಿಮ್ಮ ಸಂಬಂಧ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು.
ಜಗಳದಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು!
ಹಣದ ವಿಷಯಕ್ಕೆ ಜಗಳ ವಾಡುವುದು ಉತ್ತಮ ವಿಚಾರವಲ್ಲ. ಜಗಳದಲ್ಲಿ ಹಣವನ್ನು ಮಧ್ಯೆ ತರುವುದು, ಸಂಬಂಧವನ್ನು ಹಾಳು ಮಾಡಬಹುದು. ಪತಿ, ಪತ್ನಿಯರ ಮಧ್ಯೆ ಅರ್ಥಮಾಡಿಕೊಳ್ಳುವ ಮನೋಭಾವ ವಿದ್ದರೆ ಇಂತಹ ಸಮಸ್ಯೆಗಳನ್ನು ತಡೆಗಟ್ಟಬಹುದು.
ಆದಾಯದ ಬಗ್ಗೆ ಸ್ಪರ್ಧೆ ಮಾಡಬೇಡಿ..!
ಆದಾಯದ ವಿಚಾರಕ್ಕೆ ಬಂದರೆ ಪತಿ ಹಾಗೂ ಪತ್ನಿಯ ಮಧ್ಯೆ ಅಹಂ ಇರುತ್ತದೆ. ನಾನು ಹೆಚ್ಚಾಗಿ ಸಂಪಾದನೆ ಮಾಡೋದು ಎನ್ನುವ ಮನೋಭಾವ ಕಂಡು ಬರುತ್ತದೆ. ಆದರೆ ಸ್ಪರ್ಧೆಯ ಮನೋಭಾವ ದಾಂಪತ್ಯದಲ್ಲಿ ಇರಬಾರದು. ಆದಾಯದ ವಿಚಾರಕ್ಕೂ ಅಷ್ಟೇ ಮುಖ್ಯವಾಗುತ್ತದೆ. ಪರಸ್ಪರ ಉಳಿತಾಯ ಮಾಡುವ ಬಗ್ಗೆ ನೀವಿಬ್ಬರು ಸ್ಪರ್ಧೆಯಲ್ಲಿ ತೊಡಗಬೇಕು. ಆದ್ರೆ ನಿಮ್ಮ ಆದಾಯದ ಬಗ್ಗೆ ಸ್ಪರ್ಧೆ ಮಾಡಲು ಹೋಗಬೇಡಿ. ಇದರಿಂದ ಜಗಳ ಹೆಚ್ಚಾಗಬಹುದು.

ಹಣಕ್ಕಾಗಿ ಸಂಗಾತಿ ಆಯ್ಕೆ ಮಾಡುವುದು ತಪ್ಪು
ಹಣದಿಂದ ಎಲ್ಲವನ್ನು ಖರೀದಿಸಬಹುದು. ಆದ್ರೆ ಪ್ರೀತಿಯನಲ್ಲ. ಹಣಕ್ಕಾಗಿ ಸಂಗಾತಿ ಆಯ್ಕೆ ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಹಣವಿರುವಂತಹ ಸಂಗಾತಿ ಆಯ್ಕೆ ಮಾಡಿದರೆ ಅದರಿಂದ ಖಂಡಿತವಾಗಿಯೂ ನಿಮ್ಮ ಸಂಸಾರದಲ್ಲಿ ಬಿರುಗಾಳಿ ಎದುರಾಗಬಹುದು. ನಿಮ್ಮ ಖರ್ಚಿಗಾಗಿ ಸಂಗಾತಿ ಆಯ್ಕೆ ಮಾಡುವುದು ತಪ್ಪು. ಅವರಿಂದ ಹಣ ಬಯಸುವುದು ಅವರ ಮುಂದೆ ಕೀಳು ಭಾವನೆ ಉಂಟು ಮಾಡುತ್ತದೆ.
ಆದರೆ ಕೆಲವೊಂದು ಸಲ ಹಣ ನಮ್ಮ ಜೀವನದ ಮೇಲೆ ಕೂಡ ಗಾಢ ಪರಿಣಾಮ ಬೀರುವುದು. ಅದರಲ್ಲೂ ಇದು ಸಂಬಂಧದ ಮೇಲೆ ಪರಿಣಾಮ ಉಂಟು ಮಾಡಬಹುದು. ಸಂಬಂಧದಲ್ಲಿ ಹಣವ ಪ್ರಾಮುಖ್ಯತೆಯು ಇದೆ. ಯಾಕೆಂದರೆ ಸಂಬಂಧವೆಂದ ಮೇಲೆ ಅಲ್ಲಿ ಹಲವಾರು ರೀತಿಯ ಸಮಸ್ಯೆಗಳು, ಖರ್ಚುಗಳು ಬಂದೇ ಬರುವುದು. ಹೀಗಾಗಿ ಹಣವಿಲ್ಲದೆ ಇದ್ದರೆ ಆಗ ಸಂಬಂಧದಲ್ಲಿ ಬಿರುಕು ಕಾಣಿಸಬಹುದು. ಕೆಲವೊಂದು ಸಲ ಅತಿಯಾದ ಹಣದ ಲಾಲಸೆಯಿಂದಲೂ ಸಂಸಾರವು ಮುರಿದು ಬಿದ್ದಿರುವುದು ಇದೆ.