ಜೀವನದ ಸುದೀರ್ಘ ಪ್ರಯಣದಲ್ಲಿ ನಾವೆಲ್ಲರೂ ಹೊಸ ಸಂಬಂಧವನ್ನು ಹುಡುಕುತ್ತೇವೆ.ಈ ಸಂಬಂಧವು ಕೆಲ ಹೊಸ ಭರವಸೆಗಳು ಮತ್ತು ನಿರೀಕ್ಷೆಗಳನ್ನು ಹೊತ್ತು ತರುತ್ತದೆ. ಮತ್ತು ಅವುಗಳನ್ನು ಪೂರೈಸುವ ಜವಾಬ್ದಾರಿಯನ್ನು ನಮಗೆ ನೀಡುತ್ತದೆ. ಆದ್ರೆ ಸಮಯ ಬದಲಾದಂತೆ ಸಂಬಂಧಗಳು ಮಸುಕಾಗಲು ಆರಂಭವಾಗುತ್ತವೆ. ಇದಕ್ಕೆ ಕಾರಣ ನಿಜ ಪ್ರೀತಿಯ ಕೊರತೆ ಇರಬಹುದು.
ಪ್ರೀತಿ, ಪ್ರೇಮ ಎಂಬ ಎರಡಕ್ಷರದಲ್ಲಿ ಎಷ್ಟೊಂದು ಶಕ್ತಿಯಿದೆ. ಮಾತುಗಳಲ್ಲಿ ಪ್ರೀತಿ, ಪ್ರೇಮವನ್ನ ವರ್ಣಿಸಲು ಅಸಾಧ್ಯ. ಅದನ್ನು ಅನುಭವಿಸಬೇಕು ಅಷ್ಟೇ. ನಿಜವಾದ ಪ್ರೀತಿ ಎಂದರೆ ಹೃದಯ ಬಡಿತ ಅಲ್ಲ, ನನ್ನ ಹೃದಯ ನಿನ್ನ ಹೆಸರನ್ನೇ ಹೇಳುತ್ತಿದೆ ಎಂದರೆ ಅದು ಕೂಡಾ ಅಲ್ಲ. ಲವ್ ಅಟ್ ಫಸ್ಟ್ ಸೈಟ್ ಎಂಬುದು ವ್ಯಾಮೋಹನಾ ಅಥವಾ ನಿಜ ಪ್ರೀತಿನಾ? ಕಣ್ಣಿಗೆ ಸುಂದರವಾಗಿ ಕಾಣಿಸುವುದು ಪ್ರೀತಿನಾ? ಬಣ್ಣ ಬಣ್ಣದ ಮಾತುಗಳನ್ನಾಡುವುದು ಪ್ರೀತಿನಾ? ಹೀಗೆ ರಿಯಲ್ ಪ್ರೀತಿನಾ ಗುರುತಿಸುವುದಾರೂ ಹೇಗೆ ಎಂಬ ಪ್ರಶ್ನೆ ಹಾಗೂ ಆತಂಕ ಸದಾ ಎಲ್ಲರನ್ನು ಕಾಡುತ್ತಿರುತ್ತದೆ. ಅಷ್ಟಕ್ಕೂ ನಿಜ ಪ್ರೀತಿನಾ ಗುರುತಿಸುವುದಾದರೂ ಹೇಗೆ.. ಸಲಹೆಗಳು ಇಲ್ಲಿವೆ.

ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆಯಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳಂತೂ ಅಲ್ಲ, ಅವಳ ಅಂತಸ್ತೂ ನೋಡಿ ಅಳೆಯುವಂಥದ್ದಲ್ಲ. ಅವಳ ಅಂಗಾಂಗಗಳನ್ನು ಪ್ರೀತಿಸುವುದಲ್ಲ. ಪ್ರೀತಿ ಎಂದರೆ ಎಂತಹ ಕಷ್ಟ, ಸುಖವೇ ಇರಲಿ. ಆಕೆಯ ಸೌಂದರ್ಯ ಮುಖ್ಯವಲ್ಲ. ಹಣ ಇಲ್ಲದಿದ್ದರೂ ಚಿಂತೆಯಿಲ್ಲ.. ವಯಸ್ಸು ಹೆಚ್ಚಾದರೂ ಚಿಂತೆಯಿಲ್ಲ.. ಅವಳನ್ನು ಕಣ್ಣರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ..!
ನಿಜ ಪ್ರೀತಿ ಹೇಗೆ ಕಂಡು ಹಿಡಿಯುವುದು..?
ಯಾರೊಟ್ಟಿಗಾದರೂ ಪ್ರೀತಿಯ ಸಂಬಂಧವನ್ನು ಬೆಳೆಸುವಾಗ ತುಂಬಾ ಜಾಗರೂಕತೆ ವಹಿಸಬೇಕಾಗುತ್ತದೆ. ಅದು ನಿಜ ಪ್ರೀತಿನಾ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ದುಡುಗಿ ನಿರ್ಧಾರ ತೆಗೆದುಕೊಳ್ಳಬಾರದು.
ಪ್ರೀತಿಯ ವಿಷಯದಲ್ಲಿ ಯೋಚಿಸಿ, ಮುಂದುವರೆಯಿರಿ..

ಯೆಸ್, ಪ್ರೀತಿಯಲ್ಲಿ ಬಿದ್ದಾಗ ಯಾವುದೂ ಸರಿ, ಯಾವುದು ತಪ್ಪು ಎಂದು ಹಲವರಿಗೆ ಗೊತ್ತೇ ಆಗಲ್ಲ. ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗಬಹುದು. ನೀವು ಬೇರೆಯವಿರಿಗೆ ಐ ಲವ್ ಯು ಅಂತ ಹೇಳಿ, ಅವರಿಂದ ರಿಪ್ಲೈ ಬರಿಲಿಲ್ಲ ಅಂದ್ರೆ ನಿಮಗೆ ನೋವಾಗಬಹುದು. ಆದ್ರ ನಿರಾಶರಾಗಬೇಕಿಲ್ಲ. ಪ್ರೀತಿಯ ವಿಷಯದಲ್ಲಿ ಯಾವಾಗಲೂ ಯೋಚಿಸಿ ಮುಂದುವರೆಯಬೇಕು.
ಮಾತಿನ ಆಕರ್ಷಣೆ!
ಕೆಲವು ವ್ಯಕ್ತಿಗಳು ನಿಮ್ಮ ಜತೆಗೆ ತುಂಬಾ ಕ್ಲೋಸ್ ಆಗಿ ಮಾತನಾಡಬಹುದು. ಅಂದ ಮಾತ್ರಕ್ಕೆ ಅದು ಪ್ರೀತಿಯಲ್ಲ. ಅವರು ನಿಮ್ಮೊಂದಿಗೆ ಮಾತನಾಡುವುದಕ್ಕ ಇಷ್ಟಪಡುತ್ತಿರಬಹುದು ಅಷ್ಟೇ. ಇದಕ್ಕಿಂದ ಹೆಚ್ಚಿನದೇನೂ ಇರುವುದಿಲ್ಲ.
ಮುಖದ ಮೇಲೆ ನಗು ಇದ್ದರೆ ಪ್ರೀತಿಯಲ್ಲ..!
ನಕ್ಕೋಡನೆ ಅದು ಪ್ರೀತಿಯಲ್ಲ. ಒಬ್ಬ ಹುಡುಗ ಅಥವಾ ಹುಡುಗಿ ನಕ್ಕರೆ, ಅದು ಕೇವಲ ಸ್ನೇಹ, ಪರಿಚಯ ಆಗಿರಬಹುದು, ಆದ್ರೆ ಪ್ರೀತಿಯಾಗಿರಲು ಸಾಧ್ಯವಿಲ್ಲ. ನೀವು ಆ ವ್ಯಕ್ತಿಯ ಕಡೆ ಭಾವನೆಗಳನ್ನು ಇಟ್ಟುಕೊಂಡರೆ ಸಮಯ ವ್ಯರ್ಥ ಮಾಡಿದಂತೆ.
ಬ್ರೇಕ್ ಅಪ್ ಆಗಿದ್ದರೆ ಖಂಡಿತ ಅದು ನಿಜವಾದ ಪ್ರೀತಿಯಲ್ಲ!
ನಿಮ್ಮ ಭಾವನೆಗಳನ್ನು ಬೇರೆಯವರೆ ಜತೆ ಹಂಚಿಕೊಳ್ಳುವಾಗ ಎಚ್ಚರಿಕೆ ಇಂದ ಇರಬೇಕು. ಒಂದು ದಿನಕ್ಕೆ ಬೇರೆಯವರ ಜತೆ ಡೇಟಿಂಗ್ ಮಾಡುವುದು ಪ್ರೀತಿಯಲ್ಲಲ. ಇನ್ನೊಬ್ಬರ ಬಗ್ಗೆ ನಿಜವಾದ ಪ್ರೂತಿ ಇದ್ದರೆ, ಅವರಿಗಾಗಿ ಮೂಲಭೂತ ಪ್ರವೃತ್ತಿಗಳನ್ನು ಬಿಟ್ಟು ಬಿಡಲು ಸಿದ್ಧರೀರುತ್ತಿರಿ. ಹಾಗಿದ್ದಾಗ ಲೈಂಗಿಕ ಆಕರ್ಷಣೆ, ವಾದ, ಜಗಳ ಕೋಪ ಇಬ್ಬರ ನಡುವೆ ನಡೆದು,ಬ್ರೇಕ್ ಆದ್ರೆ ಅದು ನಿಜವಾದ ಪ್ರೀತಿಯಲ್ಲ ಎಂಬುದು ಗಮನದಲ್ಲಿರಲಿ.

ಪ್ರೀತಿ ಒತ್ತಾಯಪೂರ್ವಕವಲ್ಲ,..!
ನಿಜವಾದ ಪ್ರೀತಿ, ಒತ್ತಾಯಪೂರ್ವಕವಾಗಿರುವುದಿಲ್ಲ. ಅದಲು ಬದಲು ಸ್ವಾಭಾವಿಕವಾಗಿರುತ್ತದೆ. ಹೃದಯ ಪೂರ್ವಕವಾಗಿರುತ್ತದೆ. ನಿಜವಾದ ಪ್ರೀತಿಯಲ್ಲಿ ಇಬ್ಬರು ಒಬ್ಬರನೊಬ್ರು ಗಾಢವಾಗಿ ಪ್ರೀತಿಸಲು ಆರಂಭಿಸುತ್ತಾರೆ. ಇಬ್ಬರ ಮಧ್ಯೆ ಮನಸ್ತಾಪ, ಸಂಬಂಧ ಮುರಿದು ಬೀಳದಂತಹ ಬಾಂಧವ್ಯ ಏರ್ಪಟ್ಟಿರುತ್ತದೆ. ಕಷ್ಟವಾದರೂ, ಸುಖವಾದರೂ ಜತೆಗಿರೋಣ ಎಂಬ ಭಾವನೆ ಇಬ್ಬರು ಮಧ್ಯೆ ಏರ್ಪಟ್ಟಿರುತ್ತದೆ.
ಕೊಡುವುದು, ಪಡೆದುಕೊಳ್ಳುವುದು ನಿಜವಾದ ಪ್ರೀತಿ.. !
ಪ್ರೀತಿ ಕೊಟ್ಟು ತೆಗೆದುಕೊಳ್ಳುವಂತಿರಬೇಕು. ಪ್ರೀತಿ ಕೇವಲ ದೈಹಿಕ ಆಕರ್ಷಣೆಯಾಗಿದ್ದರೆ, ಭಾವನಾತ್ಮಕ ವಾಗಿಲ್ಲದಿದ್ದರೆ ಅದು ರಿಯಲ್ ಪ್ರೀತಿಯ್ಲ. ಒತ್ತಡ ಹಾಗೂ ದೈಹಿಕ ಆಕರ್ಷಣೆಯ ಪ್ರೀತಿ ಕೆಲಸ ಮಾಡುವುದಿಲ್ಲ. ಮೊದಲು ಪ್ರೀತಿ ಮಾಡುವವರು ತಮ್ಮನ್ನು ತಾವು ಅರ್ಥಮಾಡಿಕೊಳ್ಳಬೇಕು.
ಭರವಸೆ ಮುರಿಯುವುದು..!
ಪ್ರೀತಿಯಲ್ಲಿ ಭರವಸೆಗಳನ್ನು ಎಂದಿಗೂ ಮುರಿಯಬೇಡಿ. ಪ್ರೀತಿ ಮಾಡುತ್ತಿರುವವರು ತುಂಬಾ ಸಲ ಪ್ರತಿಜ್ಞೆಗಳನ್ನು ಮಾಡುತ್ತಾರೆ. ಆದ್ರೆ ನೆರವೇರಿಸುವುದಿಲ್ಲ. ನಿಮ್ಮ ಪ್ರೀತಿಸುವವರಿಗೆ ನೀಡಿದ ಭರವಸೆಯನ್ನು ಮುರಿದರೆ, ನಿಮ್ಮ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಈ ಭರವಸೆಗಳನ್ನು ನಿಮ್ಮನ್ನು ಪ್ರೀತಿಸಿದವರು ಆಡೇರಿಸಿದರೆ ಅದು ನಿಜವಾದ ಪ್ರೀತಿಯಾಗಿರುತ್ತದೆ. ಭರವಸೆಗಳು ಈಡೇರಿದಾಗ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ನಂಬಿಕೆಯೇ ವೈವಾಹಿಕ ಜೀವನಕ್ಕೆ ಬುನಾದಿ ಎಂದೇ ಹೇಳಬಹುದು.
ತ್ಯಾಗ ಮಾಡಿದಾಗ,
ಕೆಲಮೊಮ್ಮೆ ನಾವು ಪ್ರೀತಿಯಿಂದ ಎಲ್ಲವನ್ನು ಪಡೆಯಲು ಬಯಸುತ್ತೇವೆ.. ಆದ್ರೆ ಏನನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆಗಾಗ್ಗೆ ವ್ಯಕ್ತಿ ಕುಟುಂಬ ಹಾಗೂ ಸಂಬಂಧ ಅಂತಾ ಬಂದಾಗ ಹಲವು ಬಾರಿ ತ್ಯಾಗ ಮಾಡುತ್ತಾನೆ. ಅದೇ ರೀತಿ ಪ್ರೀತಿಸುವವರು ಕುಟುಂಬಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡುವುದಿಲ್ಲ. ಪ್ರೀತಿ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ.
ಒಟ್ಟಿನಲ್ಲಿ ಪ್ರೀತಿಯನ್ನೇ ಹುಡುಕುತ್ತಾ ಹೋಗುವವರಿಗೆ ಅದು ಸೀಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ ಬದುಕನ್ನು ಹುಡುಕುತ್ತಾ ಹೋಗುವವರಿಗ ಪ್ರೀತಿ ಸಿಕ್ಕೇ ಸಿಗುತ್ತದೆ.