ಮದುವೆ ಎಂಬುದು ಜೀವನದ ಬಹುದೊಡ್ಡ ಕಮಿಟ್ ಮೆಂಟ್ ಇದ್ದಂತೆ. ಬದ್ಧತೆಯಿಂದ ಪ್ರೀತಿ ಬೆಳೆಯುತ್ತದೆ. ಪ್ರತಿ ಹೆಜ್ಜೆಯ ಸುಖ ದುಃಖದಲ್ಲೂ ಸಂಗಾತಿಯನ್ನು ಬೆಂಬಲಿಸುವುದು ಬದ್ಧತೆಯನ್ನು ಒಳಗೊಂಡಿರುತ್ತದೆ. ಎಲ್ಲವೂ ಸರಿಯಾಗಿ ನಡೆದರೇ, ವಿವಾಹ ಬಾಂಧವ್ಯ ಯಶಸ್ವಿಯಾಗುತ್ತದೆ. ಆದ್ರೆ ಏನಾದರೂ ತಪ್ಪಾದರೆ, ಈ ಸಮಸ್ಯೆ ಜೀವನದ ದೀರ್ಘಕಾಲದವರೆಗೆ ಎದುರಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ಮೂರಕ್ಷರದ ಪದದ ಅರ್ಥ ಬದಾಲಾಗುತ್ತಿದೆ. ಮದುವೆ ಮೊದಲಿನಂತೆಯೇ ಇಂದು ಪ್ರಸ್ತುತವಾದರೂ, ಕಾಲ ನಂತರದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ.

ವಧು – ವರರಿಬ್ಬರು ಮದುವೆಗೆ ತಯಾರಿರುತ್ತಾರೆ. ಮದುವೆಗೂ ಮುನ್ನ ಯುವಕ ಅಥವಾ ಯುವತಿ ತಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಬೇಕು. ಅವರ ಜತೆ ಮಾತುಕತೆ ನಡೆಸಬೇಕು. ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನೀವು ಸಹ ಶೀರ್ಘದಲ್ಲೇ ಮದುವೆಯಾಗಲು ಯೋಚಿಸುತ್ತಿದ್ದರೆ. ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗಲು, ಸಂಗಾತಿ ಜತೆಗೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿ. ಇದು ಭವಿಷ್ಯದಲ್ಲಿ ಇಬ್ಬರು ಸಂತೋಷದಿಂದ ಇರಲು ಸಹಾಯ ಮಾಡುತ್ತದೆ.
ನೀವು ಮದುವೆಯಾಗ ಬಯಸುವ ಹುಡಗಿಗೆ ಈ ಪ್ರಶ್ನೆಗಳನ್ನು ಕೇಳಿ…
ಮದುವೆಗೂ ಮುನ್ನ ಹೆಚ್ಚು ವಿಷಯಗಳನ್ನು ನಿಮ್ಮ ಸಂಗಾತಿ, ಮದುವೆಯಾಗ ಬಯಸುವ ಹುಡಗಿಯ ಜತೆ ಪ್ರಸ್ತಾಪಿಸುವುದರಿಂದ ವಿಷಯಗಳಲ್ಲಿ ಗೊಂದಲ ಇರುವುದಿಲ್ಲ, ಎಲ್ಲಾ ವಿಚಾರಗಳು ಸ್ಪಷ್ಟವಾಗುತ್ತವೆ. ಮದುವೆಗೂ ಮುಂಚೆ ನಿಮ್ಮ ಜೀವನಸಂಗಾತಿಗೆ ಕೆಲವು ವಿಷಯಗಳನ್ನ ಕೇಳುವುದು ಉತ್ತಮ, ಮದುವೆಗೆ ಮುನ್ನ, ಹುಡುಗರು ಕೇಳಬೇಕಾದ ಪ್ರಶ್ನೆಗಳನ್ನು ಮತ್ತು ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

1.ನೀವೂ ಯಾವುದೇ ಒತ್ತಡದಲ್ಲಿ ಮದುವೆಯಾಗುತ್ತಿಲ್ಲವೇ..?
ಮ್ಯಾರೇಜ್ ಎಂಬುದು 2-3 ವರ್ಷದ ಸಂಬಂಧ ಅಲ್ಲ. ಜೀವನಪೂರ್ತಿ ಕಮಿಟ್ ಮೆಂಟ್ ಆಗಿದೆ. ಹಾಗಾಗಿ ಯಾವುದೇ ವಿಷಯವನ್ನು ಮೆರೆಮಾಚುವುದು ಸರಿಯಲ್ಲ. ಸಂಗಾತಿ ಜತೆ ಜೀವನಪೂರ್ತಿ ಜತೆಗಿರಬೇಕು. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಗೊಂದಲಗಳನ್ನು ನಿವಾರಿಸಕೊಳ್ಳಬೇಕು. ಸಾಮಾನ್ಯವಾಗಿ ಅನೇಕ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಮದುವೆಗೆ ಒತ್ತಡ ಹೇರುವುದು ಕಂಡು ಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿಯರು ಮದುವೆಗೆ ಒಪ್ಪುವ ಅನಿವಾರ್ಯತೆ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಮದುವೆಯಾಗ ಹುಡುಗಿಗೆ ಈ ವಿಷಯವನ್ನು ಕೇಳಬೇಕು. ಇದ್ರಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗವುದನ್ನು ತಡೆಯುತ್ತದೆ.
2 ಈ ಮದುವೆ ಬಗ್ಗೆ ಯಾವ ರೀತಿ ನಿರೀಕ್ಷೆ ಇಟ್ಟುಕೊಂಡಿದ್ದೀರಾ?
ಅನೇಕ ಜನರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿವುದಿಲ್ಲ. ಪ್ರತಿಯೊಬ್ಬರಿಗೆ ಮದುವೆ ಬಗ್ಗೆ ನಂತರದ ಜೀವನದ ಬಗ್ಗೆ ಹಲವು ನಿರೀಕ್ಷೆಗಳಿರುವುದು ಸಹಜ. ಆದ್ರೆ ನಿರೀಕ್ಷೆಯನ್ನು ತಿಳಿಯಲು ವಿಫಲವಾದರೆ, ನಂತರದಲ್ಲಿ ಕೌಟಂಬಿಕ ಕಲಹ ಗಳು ಉದ್ಭವಿಸಬಹುದು. ಅತಿಯಾದ ನಿರೀಕ್ಷೆಗಳು ತುಂಬಾ ಅಪಾಯಕಾರಿ.ಮದುವೆಗೂ ಮುಂಚಿತವಾಗಿಯೇ ತಿಳಿದರೆ, ಭವಿಷ್ಯದಲ್ಲಿ ಸಂತೋಷವಾಗಿರಬಹುದು.

3. ನಿಮ್ಮ ಜೀವನದ ಗುರಿ ಏನು?
ಪ್ರತಿಯೊಬ್ಬರು ತಮ್ಮ ಜೀವನದ ಬಗ್ಗೆ ಗುರಿ ಹೊಂದಿರು್ತತಾರೆ. ಆದ್ರೆ ಪ್ರತಿಯೊಬ್ಬರ ಆದ್ಯತೆಗಳು ವಿಭಿನ್ನವಾಗಿರಬಹುದು. ಕೆಲವರು ಬೇಗನೆ ಶ್ರೀಮಂತರಾಗಲು ಬಯಸುತ್ತಾರೆ. ಕೆಲವರು ತಮ್ಮ ಗುರಿಗಳನ್ನು ಆಧರಿಸಿ ಮುಂದುವರೆಯುತ್ತಾರೆ. ಆದ್ರೆ ಹಾಗಾಗಿ ಒಂದೇ ಗುರಿಗಳನ್ನು ಹೊಂದಿರುವ ಜನರು ಒಗ್ಗೂಡಿದರೆ ಏನಾಗುತ್ತದೆ ಎಂದು ಯೋಚಿಸಿ. ಒಂದೇ ಗುರಿ ಹೊಂದಿರುವ, ಸಮಾನ ಮನಸ್ಕರು ಜತೆಗೂಡಿದರೆ, ಸುಲಭವಾಗಬಹುದು.
ದೃಷ್ಟಿಕೋನ ಯಾವುದು..?
ಪ್ರತಿಯೊ್ಬಬರ ವಿಭಿನ್ನ ಆಲೋಚನೆಗಳು, ದೃಷ್ಟಿಕೋನಗಳು ವಿಭಿನ್ನವಾಗಿರುತ್ತವೆ. ಇಂತಹ ಆಲೋಚನೆಗಳು ವಿಭಿನ್ನ ದೃಷ್ಟಿಕೋನಗಳು
ಪ್ರತಿಯೊಬ್ಬರಿಗೂ ಆಲೋಚನೆಗಳು ಇರುತ್ತವೆ. ಇರುವ ವಾತಾವರಣದಲ್ಲಿ ನಾವು ವಾಸಿಸುತ್ತೇವೆ. ಇದು ದೊಡ್ಡ ವಿಷಯವಲ್ಲ, ರಾಜಕೀಯ ದೃಷ್ಟಿಕೋನ ಬಗ್ಗೆ ಹಠ ಮಾಡುವ ಜನರಿರುತ್ತಾರೆ. ಏನೇ ಇರಲಿ, ಆದ್ರೆ ಕೆಲವರು ದೃಷ್ಟಿಕೋನಗಳನ್ನ ಫಾಲೋ ಮಾಡುವರಿದ್ದಾರೆ. ನಿಮ್ಮ ಸಂಗಾತಿ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಬೇಕು.
ನಿಮ್ಗೆ ಮಕ್ಕಳು ಅಂದ್ರೆ ಇಷ್ಟನಾ?
ಇದು ಯಾವ ರೀತಿಯ ಪ್ರಶ್ನೆ ಅಂತಾ ನಿಮಗೆ ಆಶ್ಚರ್ಯವಾಗಬಹುದು. ಇಂದಿನ ದಿನಗಳಲ್ಲಿ ಮಕ್ಕಳನ್ನು ಬಯಸದ ಅನೇಕ ಜೋಡಿಗಳಿದ್ದಾರೆ. ಕೆಲವರು ಮದುವೆಯಾದ ಮೇಲೆ ಮಗುವನ್ನು ಪಡೆಯಲು ಬಯಸುತ್ತಾರೆ. ಕೆಲವರಿಗೆ ಇಷ್ಟವಿರುವುದಿಲ್ಲ. ಈ ವಿಚಾರವನ್ನು ಮದುವೆಗೂ ಮುನ್ನ ನೀವು ಮದುವೆಯಾಗ ಬಯಸುವ ಹುಡುಗಿ ಮುಂದೆ ಪ್ರಸ್ತಾಪಿಸಬೇಕು. ಕೆಲವು ಕುಟುಂಬವು ಮಗುವನ್ನು ದತ್ತು ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಹೊಂದಿರುತ್ತಾರೆ. ಮಕ್ಕಳ ಬಗ್ಗೆ ಹುಡುಗಿಯ ಅಭಿಪ್ರಾಯ ಏನು ಎಂದು ಮುಂಚಿತವಾಗಿ ತಿಳಿದರೆ, ಮುಂದೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.