ಸಂಬಂಧ ಎಂದ ತಕ್ಷಣ ಯಾವುದೇ ಸಂಬಂಧ ವಿರಲಿ ನಮಗೆ ಮುಖ್ಯ.ವೆನಿಸುವುದು ಸಹಜ. ಯಶಸ್ವಿ ಸಂಬಂಧಕ್ಕೆ ಪ್ರೀತಿ ಅಷ್ಟೇ ಸಾಕಾಗುವುದಿಲ್ಲ., ಇದರ ಜತೆಗೆ ನಿಮ್ಮ ಸಂಗಾತಿಗೆ ಮೇಲೆ ನಿಮ್ಮ ಗೌರವ ಎಷ್ಟಿದೆ ಎಂಬುದು ಮುಖ್ಯವಾಗುತ್ತದೆ. ಪರಸ್ಪರ ಇಬ್ಬರು ವ್ಯಕ್ತಿಗಳು ಸಂಬಂಧ ಬೆಳೆಸಲು ಏಕೆ ಬಯಸುತ್ತಾರೆ? ಯಾಕಂದ್ರೆ ಸಹಜವಾಗಿ ಅವರಿಬ್ಬರು ಪ್ರೀತಿಸುತ್ತಾರೆ.. ಇಬ್ಬರು ಒಟ್ಟಿಗೆ ಬದುಕುವುದು ಹೇಗೆ..? ಎಂದು ತಿಳಿಯಲು ಯತ್ನಿಸುತ್ತಾರೆ.

ಸಂಬಂಧದ ಬಗ್ಗೆ ಮಾತನಾಡುವಾಗ ಮೊದಲು ಪ್ರೀತಿಯ ಹೆಸರು ಬರುತ್ತದೆ. ಸಹಜವಾಗಿ, ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಎಸ್ಟಿದೆ ಎಂದು ತಿಳಿಯಲು ಅವರಿಬ್ಬರ ಸಂತೋಷದಿಂದಲೇ ಅಳೆಯಬಹುದು. ಆದರೆ ಸಂಬಂಧವನ್ನು ನಿಜವಾಗಿಯೂ ಗಟ್ಟಿಯಾಗಿ ಮತ್ತು ಯಶಸ್ವಿಗೊಳಿಸಲು ಬೇಕಾಗಿರುವುದು ಪರಸ್ಪರ ಗೌರವ. ನಿಮ್ಮ ಸಂಗಾತಿಯನ್ನು ನೀವು ಎಷ್ಟು ಪ್ರೀತಿಸುತ್ತೀರಿ ಅಥವಾ ಸಂಗಾತಿ ನಿಮ್ಮನ್ನು ಎಸ್ಟೇ ಪ್ರೀತಿಸಿದರೂ, ನೀವು ಪರಪ್ಸರ ಗೌರವ ಹೊಂದಿಲ್ಲದಿದ್ದರೆ ನಿಮ್ಮಿಬ್ಬರ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ. ಪರಸ್ಪರ ಗೌರವ ಕೊರತೆಯಿಂದ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚು. ಬರುಬರುತ್ತಾ ಇಬ್ಬರ ನಡುವಿನ ಅಂತರ ಕಹಿ.. ಕಹಿಯಾಗುತ್ತದೆ. ಪ್ರೀತಿಗಿಂತ ಮುಖ್ಯವಾದದ್ದು ಏನಾದರೂ ಇದ್ದರೆ, ಅದು ಗೌರವ ಎಂದು ಹೇಳಬಹುದು.

ನಿಮ್ಮ ಸಂಗಾತಿಯನ್ನು ನೀವು ಗೌರವಿಸಿದಾಗ , ನಿಮ್ಮ ಮೇಲೆ ಪ್ರೀತಿಯ ಭಾವನೆ ಹೆಚ್ಚುತ್ತದೆ. ಸಂಗಾತಿ ನಿಮ್ಮನ್ನೂ ಸಮಾನವಾಗಿ ಗೌರವಿಸುತ್ತಾರೆ. ಸಾಮಾನ್ಯವಾಗಿ ಬೇರೆಯವರು ಜತೆ ಇದೇ ರೀತಿ ಗೌರವ ತೊರಬೇಕು. ಹೀಗಾಗಿ ನಿಮ್ಮ ಸಂಗಾತಿಗೆ ನೀವು ಗೌರವ ನೀಡಿದರೂ, ಪ್ರೀತಿ ದುಪ್ಪಟ್ಟಾಗುತ್ತದೆ. ಸಂಬಂಧಗಳು ಯಶಸ್ವಿಗೊಳ್ಳುತ್ತವೆ.
ಭದ್ರತೆಯ ಭಾವನೆ..!
ಸಂಗಾತಿಯನ್ನು ನೀವು ಗೌರವ ನೀಡಿದ್ರೆ ನಿಮ್ಮಿಬ್ಬರ ನಡುವೆ ವಿಶ್ವಾಸ ಮತ್ತು ಸುರಕ್ಷತೆಯ ಭಾವ ಉಂಟು ಮಾಡುತ್ತದೆ. ಏಕೆಂದರೆ ಯಾವುದೇ ಪರಿಸ್ಥಿತಿಯಲ್ಲಿ ನೀವಿಬ್ಬರೂ ನಿಮ್ಮ ಮಾತುಗಳನ್ನು ಯಾವುದೇ ಸಂಕೋಚವಿಲ್ಲದೇ, ಪರಸ್ಪರ ಮುಂಡೆ ಚರ್ಚೆ ನಡೆಸಬಹುದು.
ಸಂಗಾತಿಗೆ ಏನಾದರೂ ತಪ್ಪು ಹೇಳಿದರೆ. ಅವರು ನಿಮ್ಮ ಬಾವನೆಗಳನ್ನು ಅರ್ಥ ಮಾಡಿಕೊಳ್ಳದೇ ತಲೆಕೆಳಗಾಗಿ ಮಾತನಾಡುತ್ತಿದ್ದರೆ, ಇದು ನಿಮ್ಮ ಅಭದ್ರತೆಗೆ ಕಾರಣವಾಗುತ್ತದೆ. ನಂತರ ನೀವು ಹೇಳಿಕೊಂಡಿರುವುದನ್ನು ನಿಮ್ಮ ಪಾರ್ಟನರ್ ಗೆ ತಿಳಿಸಲು ಸಾಧ್ಯವಾಗುವುದಿಲ್ಲ.

ಸಂಬಂಧ ಗಟ್ಟಿಗೊಳ್ಳಲು ತಾಳ್ಮೆಬೇಕು!
ದಂಪತಿಗಳ ಮಧ್ಯೆ ಜಗಳ, ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ.. ಅಂತಹ ಸಂದರ್ಭದಲ್ಲಿ ಇಬ್ಬರು ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಒಬ್ಬರನೊಬ್ಬರು ವಾಗ್ವಾದ ಮಾಡುತ್ತಾರೆ. ಇವೆಲ್ಲಾ ಸಂಬಂಧ ಹದಗೆಡಲು ಕಾರಣವಾಗುತ್ತದೆ. ಆದ್ರೆ ಪತಿ – ಪತ್ನಿ ಇಬ್ಬರಿಗೂ ಗೌರವವಿದ್ದರೆ, ಏನನ್ನಾದರೂ ನಿಮ್ಮ ಸಂಗಾತಿ ಜತೆ ಮಾತನಾಡುವ ಮೊದಲು ನೀವು ಯೋಚಿಸುವಿರಿ. ಹೀಗಾಗಿ ನಿಮ್ಮಲ್ಲಿ ತಾಳ್ಮೆ ಇರಬೇಕು.
ಪ್ರೀತಿ ಹೆಚ್ಚಲು ಗೌರವ ಕಾರಣನಾ?
ಯಾವುದೇ ಸಂಬಂಧವಿರಲಿ ಪ್ರಾರಂಭದಲ್ಲಿ ಕಪಲ್ಸ್ ತುಂಬಾ ಪ್ರೀತಿಸುತ್ತಾರೆ. ಆದ್ರೆ ಸಮಯಕ್ಕೆ ತಕ್ಕಂತೆ ಆ ಸಂಬಂಧ ಹೆಚ್ಚು ಕಾಲ ಇರುವುದಿಲ್ಲ. ನೀವು ಗೌರವಿಸುವ ಪ್ರೀತಿ ಪಾತ್ರರಲ್ಲಿ ಒಳ್ಳೆಯದನ್ನೇ ಕಾಣುತ್ತೀರಿ. ಅವರ ಅತ್ಯುತ್ತಮ ಗುಣಗಳನ್ನೇ ಅವರಲ್ಲಿ ಕಾಣುತ್ತೀರಿ. ಅವರ ದೌರ್ಬಲ್ಯಗಳನ್ನು ಬದಿಗಿರಿಸಲು ಇದು ಸಹಾಯ ಮಾಡುತ್ತದೆ. ಇವುಗಳನ್ನು ಸಾಧ್ಯವಾದಷ್ಟು ಅಳವಡಿಸಿಕೊಳ್ಳಬೇಕು..
ನೀವು ಪ್ರೀತಿಸುವವರ ಮೇಲೆ ಗೌರವವಿದ್ದರೆ ಆತನ ನ್ಯೂನತೆ ಗಳನ್ನು ಹಾಗೂ ಒಳ್ಳೆಯದು ಅಥವಾ ಕೆಟ್ಟದನ್ನು ಸ್ವೀಕರಿಸಲು ಮುಂದೆ ಬರುತ್ತೀರಿ. ಈ ಮನೋಭಾವ ಇದ್ದರೆ ಸಂಗಾತಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯುತ್ತೀರಿ. ಅಲ್ಲದೇ, ರಾಜಿ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಗೌರವ ನಿಮಗೆ ತಾಳ್ಮೆಯ ಮೌಲ್ಯವನ್ನು ಕಲಿಸುತ್ತದೆ. ಒಬ್ಬರನೊಬ್ಬರು ಗೌರವಿಸಿದಾಗ, ಉದ್ದೇಶಪೂರ್ವಕವಾಗಿ ನೋಯಿಸುವಂತಹ ಕೆಲಸಗಳನ್ನು ನೀವು ಎಂದಿಗೂ ಮಾಡುವುದಿಲ್ಲ.
ಸಂಗಾತಿ ಬಗ್ಗೆ ಗೌರವಿಲ್ಲದಿದ್ದರೆ ಟೀಕೆ, ವ್ಯಂಗ್ಯ ಮತ್ತು ತಿರಸ್ಕಾರ ಸಹ ಕಂಡು ಬರುತ್ತದೆ. ಇಂಥ ಗುಣಗಳೇ ಮುಂದೆ ಬ್ರೇಕ್ ಅಪ್ ಗೆ, ವಿಚ್ಛೇದನೆಗೆ ಕಾರಣವಾಗಬಹುದು. ನಿಮ್ಮ ಸಂಗಾತಿ ಬಗ್ಗೆ ಜೋಕ್ ಮಾಡುವುದು, ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಿಮ್ಮ ಮೇಲಿರುವ ಭರವಸೆಯನ್ನು ನುಚ್ಚು ನೂರು ಮಾಡುತ್ತದೆ. ನಿಮ್ಮ ಮದುವೆ ಬಂಧನಕ್ಕೆ ಕುತ್ತು ತರುತ್ತದೆ.

ನಿವೇನು ಮಾಡಬೇಕು..?
1 ನಿಮ್ಮ ಪಾರ್ಟನರ್ ಏನೇ ಹೇಳಲಿ, ಗೌರವ ನೀಡಬೇಕು.. ಸಂಗಾತಿಯನ್ನು ಟೀಕಿಸದೇ, ಪ್ರಶಂಸೆ ಮಾಡಬೇಕು.
2. ಸಂಗಾತಿಗೆ ಗೌರವ ತೋರಿಸಲು ನಾನು ಏನೆಲ್ಲಾ ಮಾಡಿದೆ.. ? ಎಂದು ಯೋಚಿಸಬೇಕು. ನಿಮ್ಮ ಮಾತು, ವರ್ತನೆ ಎಲ್ಲವನ್ನು ಪರಿಶೀಲಿಸಿ..
3. ನಿಮ್ಮ ಸಂಗಾತಿಯಲ್ಲಿ ನೀವು ತುಂಬಾ ಮೆಚ್ಚುವ ಗುಣಗಳನ್ನು ಪಟ್ಟಿ ಮಾಡಿ. ನಂತರ ಅವು ನಿಮಗೆಷ್ಟು ಇಷ್ಟ ಎಂದು ಅವರಿಗೆ ತಿಳಿಸಿ.
4. ನಿಮ್ಮ ಸಂಗಾತಿಯನ್ನು ಗೌರವಿಸುವುದರ ಅರ್ಥ ಅವರು ಅಮೂಲ್ಯ ಎಂದು ಪರಿಗಣಿಸುತ್ತೇನೆ. ಅವರ ಸಂತೋಷವನ್ನು ಬಯಸುತ್ತೇನೆ ಎಂದು ನೀವು ಮಾಡುವ ಕೆಲಸದಲ್ಲಿ ತೋರಿಸಬೇಕು. ದೊಡ್ಡ ಕೆಲಸ ಮಾಡಿದ್ರೆ ಗೌರವ ತೋರಿಸಬೇಕು ಎಂದೇನಿಲ್ಲ.. ಚಿಕ್ಕ ಚಿಕ್ಕ ಅನೇಕ ವಿಷಯಗಳನ್ನು ಮಾಡಿದಾಗಲೂ ಅವರ ಮೇಲೆ ನಿಜ ಗೌರವ ಇದೆ ಎಂದು ತೋರಿಸಬಹುದು.