Relationship tips: ಮದುವೆಗೂ ಮುನ್ನ ಕಪಲ್ಸ್ ಗೆ ಕೌನ್ಸಲರ್ ಸಲಹೆ ಅಗತ್ಯವಿದೆಯೇ!?

  • by

ಮದುವೆ ಜೀವನದ ಪ್ರಮುಖ ಘಟ್ಟ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತೆಗೆದುಕೊಳ್ಳುವ ದೊಡ್ಡ ನಿರ್ಧಾರ ಅಂತಲೇ ಹೇಳಬಹುದು. ಭಾರತೀಯರ ದೃಷ್ಟಿಯಲ್ಲಿ ಮದುವೆ ಎಂದರೆ ಪವಿತ್ರವಾದದ್ದು, ಒಂದು ಬಾರಿ ಒಬ್ಬರ ಜತೆ ವಿವಾಹವಾದರೆ ಕಡೆಯವರೆಗೂ ಅವರ ಜತೆನೇ ಇರಬೇಕು. ಸುಖಕರವಾಗಿ ದಾಂಪತ್ಯ ಜೀವನ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಹೆಚ್ಚುತ್ತಿವೆ. ಮದುವೆಯಾಗೋ ಬಯಸುವ ಪ್ರತಿಯೊಬ್ಬ ಯುವಕ-ಯುವತಿಯರು ಮ್ಯಾರೇಜ್ ಅಂದಾಕ್ಷಣ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಮದುವೆಗೂ ಮುಂಚೆ ಸಂಗಾತಿಯನ್ನು ತಿಳಿದು ಕೊಳ್ಳಲು ಪ್ರಯತ್ನಿಸುತ್ತಾರೆ. ಭೇಟಿ ಮಾಡುತ್ತಾರೆ. ಆದ್ರೆ ನೀವು ಸಹ ಶೀರ್ಘದಲ್ಲೇ ಮದುವೆಯಾಗಲು ಯೋಚಿಸುತ್ತಿದ್ದರೆ, ನಿಮ್ಮ ಸಂಗಾತಿಯ ಈ ಚಿಹ್ನೆಗಳನ್ನು ಗುರುತಿಸಿ. ವಿವಾಹಪೂರ್ವ ಸಮಾಲೋಚನೆ ಪಡೆದುಕೊಳ್ಳಿ. ಮದುವೆಗೂ ಮುನ್ನ ಮ್ಯಾರೇಜ್ ಕೌನ್ಸಲರ್ ಭೇಟಿಯಾಗಿ, ಅವರಿಂದ ಸಲಹೆ ಪಡೆಯಿರಿ.  

pre marriage, counseling ,helps couples, 
ವಿವಾಹಪೂರ್ವ ಸಮಾಲೋಚನೆ. ಕಪಲ್ಸ್, ಸಹಕಾರಿ

ಇನ್ನು ಕೆಲವರಿಗೆ ನಿಶ್ಛಿತಾರ್ಥವಾಗಿರುತ್ತದೆ. ಅಂಥವರು ಸಂಗಾತಿ ಬಗ್ಗೆ ಬೇರೆ ರೀತಿಯಲ್ಲೇ ಯೋಚಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಸಂಗಾತಿ ಬಗ್ಗೆ ನೀವು ಗೊಂದಲಕ್ಕೀಡಾಗಿದ್ದರೆ, ನೀವು ಮದುವೆಗೂ ಮುನ್ನ ನಿಮ್ಮ ಸಂಗಾತಿ ಜತೆಗೆ ಸಲಹೆಗಾರರನ್ನು ಸಂಪರ್ಕಿಸಬೇಕು. 

ನಿಮ್ಮ ಕುಟುಂಬದ ವಿರುದ್ಧವಾಗಿ ಮದುವೆಯಾಗಲು ನಿರ್ಧರಿಸಿದ್ದರೆ…!

ಅನೇಕ ಪ್ರೇಮ ವಿವಾಹಗಳು ಕೆಲಮೊಮ್ಮೆ ಕುಟುಂಬಸ್ಥರ ವಿರೋಧಗಳ ಮಧ್ಯೆ ನಡೆದು ಹೋಗುವುದನ್ನು ನೋಡಿದ್ದೇವೆ.  ಪ್ರೇಮ ವಿವಾಹ ಎಂದಾಕ್ಷಣ ಕುಟುಂಬಸ್ಥರು ಒಪ್ಪಿಗೆ ಸೂಚಿಸುವುದಿಲ್ಲ. ಆದ್ದರಿಂದ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ ಅನೇಕರು ಮದುವೆಯಾಗಲು ನಿರ್ಧರಿಸುತ್ತಾರೆ. ಹಾಗಾಗಿ ಮದುವೆಯಾಗುವವರು ಇದಕ್ಕೂ ಮುನ್ನ ಕೌನ್ಸಲರ್ ರನ್ನು ಸಂಪರ್ಕಿಸಿ. ಇದ್ರಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಮತ್ತು ನಿಮ್ಮ ವೈವಾಹಿಕ ಜೀವನವನ್ನು ಮತ್ತಷ್ಟು ಹೆಚ್ಚು ಸುರಕ್ಷಿತಗೊಳಿಸಬಹುದು ಎಂಬುದನ್ನು ಕೌನ್ಸಲರ್ ನಿಮಗೆ ತಿಳಿಸುತ್ತಾರೆ. 

ಮಾತುಕತೆ ಸಮಸ್ಯೆಗಳು 

ಯಾವುದೇ ಸಂಬಂಧವನ್ನು ಬೆಳೆಸಬೇಕಾದರೆ ಅಥವಾ ಪ್ರಾರಂಭಿಸಬೇಕಾದರೆ ಮೊದಲು ಮಾತುಕತೆ ಉತ್ತಮ ಮಾರ್ಗ ಎಂದು ಹೇಳಬಹುದು. ದೀರ್ಘಕಾಲದವರೆಗೂ ಸಂಬಂಧದಲ್ಲಿರುವ ಕಪಲ್ಸ್ , ಒಬ್ಬರಿಗೊಬ್ಬರು ಪರಚಿತವಾಗಿರುವವವರು , ಪ್ರೀತಿಸುವವರ ಜತೆ ಮದುವೆಯಾಗ ಬಯಸುವವರ ಜತೆ ನಿಮ್ಮ ಸಂಭಾಷಣೆ ಸ್ಪಷ್ಟವಾಗಿಲ್ಲದಿದ್ದರೆ, ಹಾಗೂ ಸಂಗಾತಿ ಎದುರು ಅನಿಸಿಕೆ, ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗಗಿದ್ದರೆ, ನೀವು ಅಥವಾ ನಿಮ್ಮ ಸಂಗಾತಿ ಸಂವಹನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಅದೇ ರೀತಿ ನಿಮ್ಮ ಸಂಗಾತಿ, ನಿಮ್ಮ ಎದುರು ಏನನ್ನಾದರೂ ಹೇಳಲು, ಮರೆಮಾಚಲು, ಅಥವಾ ಸುಳ್ಳು ಹೇಳುವ ಸಂಬಂಧ ಹೆದರುತ್ತಿದ್ದರೆ, ನೀವು ಮದುವೆಗೂ ಮುನ್ನ ಕೌನ್ಸಲರ್ ಸಹಾಯ ಪಡೆದುಕೊಳ್ಳಬೇಕು. 

pre marriage, counseling ,helps couples, 
ವಿವಾಹಪೂರ್ವ ಸಮಾಲೋಚನೆ. ಕಪಲ್ಸ್, ಸಹಕಾರಿ

ಕುಟುಂಬಗಳ ಮಧ್ಯೆ ವ್ಯತ್ಯಾಸಗಳಿದ್ದಾಗ..!

ಅನೇಕ ಬಾರಿ , ಮದುವೆ ಇತ್ಯರ್ಥವಾದ ನಂತರ ಕಪಲ್ಸ್ ನಡುವೆ ಯಾವುದೇ ಸಮಸ್ಯೆ ಇಲ್ಲದಿದ್ದರೂ,ಎರಡು ಕುಟುಂಬಗಳ ಮಧ್ಯೆ ಕೆಲವು ವಿಷಯಗಳಲ್ಲಿ ಕುಟುಂಬಸ್ಥರು ಭಿನ್ನಾಭಿಪ್ರಾಯ ಹೊಂದಿರುವ ಸಾಧ್ಯತೆ ಇದೆ. ಇಬ್ಬರ ಮೇಲೂ ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಅವರ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ ಇಬ್ಬರ ವೈವಾಹಿಕ ಜೀವನದ ಮೇಲೂ ಹೆಚ್ಚು ಪರಿಣಾಮ ಬೀರಬಹುದು. ಎರಡು ಕುಟುಂಬಗಳ ಮಧ್ಯೆ ಜಗಳ, ಘರ್ಷಣೆ ಇದ್ದರೆ, ನೀವೊಮ್ಮೆ ಮ್ಯಾರೇಜ್ ಕೌನ್ಸಲರ್ ಸಲಹೆ ತೆಗೆದುಕೊಳ್ಳಬೇಕು. ಇದ್ರಿಂದ ಭವಿಷ್ಯದಲ್ಲಿ ಅಂತಹ ಯಾವುದೇ ಭಿನ್ನಾಭಿಪ್ರಾಯ, ಜಗಳ ಗಳು ನಡೆಯದಂತೆ ತಡೆಗಟ್ಟಬಹುದು. 

ನಂಬಿಕೆ ಕೊರತೆ..!

ಅನೇಕ ಬಾರಿ ಅನೇಕರು ತಮ್ಮ ಸಂಗಾತಿ ಬಗ್ಗೆ ನಂಬಿಕೆ ಹೊಂದಿರುವುದಿಲ್ಲ. ಪರಸ್ಪರ ಇಬ್ಬರಲ್ಲೂ ನಂಬಿಕೆಯ ಕೊರತೆ ಎದ್ದು ಕಾಣುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಅನುಮಾನಿಸುತ್ತಿದ್ದರೆ, ನೀವು ಈ ಬಗ್ಗೆ ಗಮನ ಹರಿಸಬೇಕು. ಸಂಗಾತಿಯನ್ನು ಸಂಪೂರ್ಣವಾಗಿ ನಂಬಲು ನಿಮಗೆ ಸಾಧ್ಯವಾಗದಿದ್ದರೆ. ಅಥವಾ ನಿಮ್ಮ ಪಾರ್ಟನರ್ ಸುಳ್ಳು ಹೇಳುತ್ತಾರೆ. ಅಲ್ಲದೇ ಏನನ್ನಾದರೂ ಮರೆ ಮಾಚುತ್ತಾರೆ ಎಂದು ನೀವು ಭಾವಿಸಿದರೆ, ಕೌನ್ಸಲರ್ ಸಂಪರ್ಕಿಸಿ. 

pre marriage, counseling ,helps couples, 
ವಿವಾಹಪೂರ್ವ ಸಮಾಲೋಚನೆ. ಕಪಲ್ಸ್, ಸಹಕಾರಿ

ನಿಮ್ಮ ಸಂಗಾತಿಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದರೆ!

ಅರೇಜ್ ಅಥವಾ ಪ್ರೇಮ ವಿವಾಹದಲ್ಲಿ ಅನೇಕ ಬಾರಿ, ಅನೇಕರು ತಮ್ಮ ಸಂಗಾತಿಯನ್ನು ತಿಳಿದುಕೊಳ್ಳಲು ಹುಡುಗ ಅಥವಾ ಹುಡುಗಿ ಬಯಸುತ್ತಾರೆ. ಪರಸ್ಪರ ಭೇಟಿಯಾಗುತ್ತಾರೆ. ಆಗ ನಿಮ್ಮ ಸಂಗಾತಿಯ ನಿರೀಕ್ಷೆಗಳು ನಿಮಗಿಂತ ಹೆಚ್ಚು ಎಂದು ತಿಳಿದರೆ,  ಅಂತಹ ಸಂದರ್ಭದಲ್ಲಿ ಮದುವೆ ಪ್ರಸ್ತಾಪವನ್ನು ಮೌನವಾಗಿ ಒಪ್ಪಿಕೊಳ್ಳಬಾರದು. ನಂತರ ಅನೇಕ ತೊಂದರೆ ಗಳನ್ನು ಎದುರಿಸಬೇಕಾಗುತ್ತದೆ.ಆದ್ದರಿಂದ ಅಂತಹ ಸಂದರ್ಭದಲ್ಲಿ ಮದುವೆ ಸಲಹೆಗಾರರನ್ನು ಒಮ್ಮೆ ಭೇಟಿಯಾಗಿ. ಅವರು ನಿಮ್ಮ ಗೊಂದಲವನ್ನು ನಿವಾರಿಸಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ