ಜೀವನ ಬದಲಾಯಿಸುವ ಮಾರ್ನಿಂಗ್ ಮಂತ್ರಗಳು..! – (Powerful morning mantras for change your life)

  • by


ಪ್ರತಿಯೊಬ್ಬರು ಬೆಳಿಗ್ಗೆ ಪ್ರಾರಂಭವಾಗುವ ಮೊದಲ ದಿನ ಚೆನ್ನಾಗಿರಬೇಕು ಎಂದು ಸಾಮಾನ್ಯವಾಗಿ ಬಯಸುತ್ತಾರೆ. ಕೆಲಸದ ಜತೆ ನಮ್ಮ ಬೆಳಿಗ್ಗಿನ ದಿನವನ್ನು ಪ್ರಾರಂಭ ಮಾಡುತ್ತೇವೆ. ಆದರೆ ಧನಾತ್ಮಕ ಚಿಂತನೆಯ ಮೇಲೆ ಕೇಂದ್ರಿಕರಿಸುವ ಮೂಲಕ ದಿನವನ್ನು ಪ್ರಾರಂಭಿಸಿದರೆ, ನಿಮ್ಮ ಒತ್ತಡವನ್ನು ನಿವಾರಿಸಬಹುದು. ಸಕಾರಾತ್ಮಕ ಜೀವನಕ್ಕಾಗಿ ಬೆಳಿಗ್ಗೆ ಈ ಮಂತ್ರಗಳನ್ನು ಅಳವಡಿಸಿಕೊಳ್ಳಿ.


powerful-morning-mantras-change-your-life, ಮಾರ್ನಿಂಗ್ ಮಂತ್ರಗಳು , ಲೈಫ್ ಟಿಪ್ಸ್

ನೀವು ಯಾವುದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ , ಚಿಂತೆಯಿಂದ ದೂರವಿರಿ.

ನೀವು ಎದುರಿಸುತ್ತಿರುವ ಯಾವುದೇ ಪರಿಸ್ಥಿತಿಯ ಬಗ್ಗೆ ಚಿಂತಿಸುವುದರಿಂದ ಅದರ ಬಗ್ಗೆ ಆರೋಗ್ಯಕರ ಮನಸ್ಸು ಹಾಗೂ ಆರೋಗ್ಯಕರ ದೇಹ ಮುಖ್ಯ. ಪ್ರತಿ ದಿನ ಆರೋಗ್ಯಕರ ನಿಯಮಗಳನ್ನು ಅನುಸರಿಸಿದರೆ, ಕೆಲವು ವಿಷಯಗಳನ್ನು ಅನುಸರಿಸಬಹುದು. ಆರೋಗ್ಯಕರ ಆಹಾರ, ಚುರುಕಾದ ನಡಿಗೆ, ಏರೋಬಿಕ್ಸ್. ಸೈಕ್ಲಿಂಗ್ , ಜಾಗಿಂಗ್ ವ್ಯಾಯಾಮ ಹೀಗೆ ನಿಯಮಗಳನ್ನು ಅನುಸರಿಸಿದರೆ ಆರೋಗ್ಯಕರವಾಗಿ ಇರಬಹುದು.

ಆರೋಗ್ಯಕರ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಟಿಪ್ಸ್

ಉಸಿರಾಡಲು ಕಲಿಯಿರಿ

ಪ್ರತಿ ದಿನ ಅರ್ಧಗಂಟೆಯವರೆಗೂ ಯೋಗಾ ಮಾಡಿ. ಆಸನ, ಧ್ಯಾನ ಮತ್ತು ಆಳವಾದ ಉಸಿರಾಟವಿರುವ ಯೋಗಾಸನಗಳನ್ನು ಅಭ್ಯಾಸ ಮಾಡುವುದು ಉತ್ತಮ. ಬೆಳಿಗ್ಗೆ 10 -15 ನಿಮಿಷಗಳ ವರೆಗೆ ಆಳವಾದ ಉಸಿರನ್ನು ತೆಗೆದುಕೊಳ್ಳುವುದರಿಂದ ಶೇ 70 ರಷ್ಟು ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಬೆಳಿಗ್ಗೆ ಮತ್ತು ಸಂಜೆ 10 ನಿಮಿಷಗಳ ಕಾಲ ಧ್ಯಾನ ಮಾಡಿ, ಇದು ದೇಹದಲ್ಲಿನ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ಬಿಪಿಯನ್ನು ಸಹ ನಿಯಂತ್ರಿಸುತ್ತದೆ. ನೀವು ಕೋಪಗೊಂದು ಅಸಮಾಧಾನದಿಂದ ಹಗೆತನ ,ದ್ವೇಷದಿಂದ ದಿನವನ್ನು ವ್ಯರ್ಥ್ಯ ಮಾಡುವ ಮೊದಲು, ಸಮಯ ಎಷ್ಚು ಅಮೂಲ್ಯ ಎಂಬ ಬಗ್ಗೆ ಯೋಚಿಸಿ.


80ರ ಫಾರ್ಮುಲಾ ಫಿಟ್ ಆಗಿರಲು ಸಹಾಯ ಮಾಡುತ್ತದೆ.

ಕಿಬ್ಬೊಟ್ಟೆಯ ಅಗಲ, ಹೃದಯ ಬಜಿತ, ಕೆಟ್ಟ ಕೊಲೆಸ್ಟ್ರಾಲ್ , ಸಕ್ಕರೆ ಅಂಶ, 80ಕ್ಕಿಂತ ಕಡಿಮೆ ಬಿಪಿ ಇರಿಸಿ. ಪ್ರತಿ ದಿನ 80 ಚಪ್ಪಾಳೆಗಳನ್ನು ಅಳವಡಿಸಿಕೊಳ್ಳಿ. ದಿನಕ್ಕೆ 80 ಬಾರಿ ನಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ದಿನಕ್ಕೆ 80 ಎಂಎಲ್ ಗಿಂತ ಹೆಚ್ಚು ತಂಪು ಪಾನೀಯಗಳನ್ನು ಕುಡಿಯಬೇಡಿ. ಈ 80 ಎಂಎಲ್ ಗೆ ಸೋಡಾ ಸೇರಿಸಿ. ಎರಡು ವಾರಗಳಲ್ಲಿ 80 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬೇಡಿ. ಇದು ರಕ್ತದೋತ್ತಡವನ್ನು ಹೆಚ್ಚಿಸುತ್ತದೆ. ಬಿಪಿ ರೋಗಿಗಳು ಕಡಿಮೆ ಉಪ್ಪು ತಿನ್ನಬೇಕು,
ವಾರದಲ್ಲಿ 80 ನಿಮಿಷಗಳ ಕಾಲ ಚುರುಕಾದ ನಡಿಗೆ ಮಾಡುವುದು ಉತ್ತಮ. 80 ನಿಮಿಷಗಳ ಕಾಲ ಏರೋಬಿಕ್ಸ್ , 80 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

ತೂಕ ಇಳಿಸಿ, ಜೀವನದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಿ

ನೀವು ತುಂಬಾ ವೇಗವಾಗಿ ತೂಕ ಇಳಿಸಿಕೊಂಡರೆ ನಂತರ ತೂಕ ಹೆಚ್ಚಾಗುವ ಸಾಧ್ಯತೆ ಗಳು ಹೆಚ್ಚಿರುತ್ತವೆ. ಏಕೆಂದರೆ ಹೆಚ್ಚಿನ ಆಹಾರವು ಚಯಾಪಚಯಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ 500 ಕ್ಯಾಲೋರಿಗಳನ್ನ ಸೇವಿಸುವ ಗುರಿ ಹೊಂದಬೇಕು, ಆದರೆ ಇದಕ್ಕಾಗಿ ಕಡಿಮೆ ತಿನ್ನುವುದು ಒಳ್ಳೆಯದು. ಆಹಾರದಿಂದ 250 ಕ್ಯಾಲೋರಿಗಳನ್ನು ಬರ್ನ್ ಮಾಡಿಯ 250 ಕ್ಯಾಲೋರಿಗಳನ್ನು ವ್ಯಾಯಾಮ ಮಾಡುವ ಮೂಲಕ ಬರ್ನ್ ಮಾಡಿ.

ತೂಕವನ್ನು ಕಳೆದುಕೊಳ್ಳುವಾಗ ಶೇ. 60 ರಷ್ಟು ಕಾರ್ಡಿಯೋ ಮತ್ತು ಶೇ 40 ರಷ್ಟು ಬಲಪಡಿಸುವ ವ್ಯಾಯಾಮ ಮಾಡಿ. ಕಾರ್ಡಿಯೋ, ಏರೋಬಿಕ್ಸ್. ಈಜು, ಸೈಕ್ಲಿಂಗ್, ಚುರುಕಾಗಿ ನಡಿಗೆ ಮಾಡುವುದು ಉತ್ತಮ.

ನಿಮ್ಮ ರಕ್ತದೋತ್ತಡವನ್ನು 80 ಎಂಎಂಹೆಚ್ ಜಿ ಗಿಂತ ಕಡಿಮೆ ಇರಿಸಿ. ನಿಮ್ಮ ಕಡಿಮೆ ರಕ್ತದೋತ್ತಡ 80 ಎಂಎಂಹೆಚ್ ಜಿಗಿಂತ ಹೆಚ್ಚಿದರೆ, ತಪಾಸಣೆಗಾಗಿ ಪ್ರತಿ ವರ್ಷ ವೈದ್ಯರ ಬಳಿಗೆ ಹೋಗುವುದು ಉತ್ತಮ.


powerful-morning-mantras-change-your-life, ಮಾರ್ನಿಂಗ್ ಮಂತ್ರಗಳು , ಲೈಫ್ ಟಿಪ್ಸ್

ಆರೋಗ್ಯಕರ ಆಹಾರ ಆರೋಗ್ಯದ ನಿಧಿ..!

ದಿನಕ್ಕೆ 5-6 ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ. ಹೃದಯ ಮತ್ತು ಯಕೃತ ಫಿಟ್ ಆಗಿರಲು ಫೈಬರ್ ಸಮೃದ್ಧವಾಗಿರುವ ಗೋಧಿ, ರಾಗಿ , ಓಟ್ಸ್ ಮುಂತಾದವುಗಳನ್ನು ಸೇವಿಸಿ. ಓಟ್ ಮೀಲ್ , ಮೊಳಕೆಕಾಳುಗಳು , ಬೇಳೆಕಾಳುಗಳು ನಾರಿನಿಂದ ಕೂಡಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ. ಹಸಿರು ತರಕಾರಿಗಳು, ಸೂರ್ಯಕಾಂತಿ ಬೀಜಗಳು, ಅಗಸೆ ಬೀಜಗಳು ಇತ್ಯಾದಿಗಳನ್ನು ಸೇವಿಸಿ. ಇವುಗಳಲ್ಲಿ ಫೋಲಿಕ್ ಆಮ್ಲವಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಅಗಸೆ ಬೀಜ, ಬಾದಾಮಿ, ಬೀನ್ಸ್ , ಮೀನು ಮತ್ತು ಸಾಸಿವೆ ಎಣ್ಣೆಯಲ್ಲಿ ಬಹಳಷ್ಟು ಒಮೆಗಾ 3 ಇದ್ದ, ಇದು ಹೃದಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಮೈದಾ ಹಿಟ್ಟು ಮತ್ತು ಸಕ್ಕರೆ ಅಪಾಯಕಾರಿ

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳು ಬಿಳಿ ಸಕ್ಕರೆ, ಬಿಳಿ ಅಕ್ಕಿ ಮತ್ತು ಮೈದಾ ಹಿಟ್ಟು ಕೊಬ್ಬುಗಿಂತ ಹೆಚ್ಚು ಹಾನಿಕಾರಕ. ನಿಮ್ಮ ಆಹಾರದಿಂದ ಅವುಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ಸಕ್ಕರೆಯ ಬದಲು ಬೆಲ್ಲ, ಬಿಳಿ ಅಕ್ಕಿ ಬದಲಾಗಿ ಕಂದು ಅಕ್ಕಿ ಬಳಸಿ. ಸಂಸ್ಕರಿಸಿದ ಎಣ್ಣೆ , ದೇಸಿ ತುಪ್ಪ, ಬೆಣ್ಣೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಬಳಸಬೇಡಿ.

ಜ್ವರ ಬಂದರೆ ಜಾಗರೂಕರಾಗಿರಿ

ಯಾವುದೇ ಜ್ವರದ ಬಂದರೆ ಔಷಧಿಯಾಗಿ ಪ್ಯಾರಸಿಟಮಾಲ್ ಔಷಧಿಯನ್ನು ಬಳಸಲಾಗುತ್ತದೆ. ಆದರೆ ಅತಿ ಹೆಚ್ಚು ಜ್ವರವಿರುವವರು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಒಳ್ಳೆಯದು. ಇದು ಕ್ರೋಸಿನ್, ಕ್ಯಾಲ್ಪೋಲ್ ಮುಂತಾದ ಬ್ರ್ಯಾಂಡ್ ಗಳ ಹೆಸರಗಳಲ್ಲಿ ಕಂಡು ಬರುತ್ತದೆ.
ಅಲರ್ಜಿ ಹೆಚ್ಚಾಗಿ ಇರುವವವರು ಮನೆಯಿಂದ ನಿರ್ಗಮಿಸುವ ಮೊದಲು ಮೂಗಿನ ಮೇಲೆ ಕರವಸ್ತ್ರವನ್ನು ಹಾಕಿಕೊಂಡು ಹೋಗಬೇಕು. ಸಾಕುಪ್ರಾಣಿಗಳನ್ನು ಮನೆಯೊಳಗೆ ಇರದಂತೆ ನೋಡಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ