ಉಪ್ಪಿನಕಾಯಿ ಇಲ್ಲದೇ ಭೋಜನ ಪೂರ್ಣವಾಗುವುದಿಲ್ಲ. ಎಷ್ಟು ಬಗೆ ಬಗೆಯ ಅಡುಗೆ ಗಳಿದ್ದರೂ ಖಾದ್ಯಗಳಿಗೆ ರುಚಿ ಹೆಚ್ಚಿಸಲು ಉಪ್ಪಿನಕಾಯಿ ಬೇಕೇ ಬೇಕು. ನೀವು ಸಹ ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತೀರಾ. ಹೌದು ಎಂದರೆ. ಉಪ್ಪಿನಕಾಯಿಯನ್ನು ಹೆಚ್ಚಾಗಿ ಸೇವಿಸದೇ ಇದ್ರೆ ಹೆಚ್ಚು ಉಪಯುಕ್ತ. ಉಪ್ಪಿನಕಾಯಿ ಮಸಾಲೆಯುಕ್ತವಾದದ್ದು, ಆಹಾರದಲ್ಲಿ ರುಚಿ ಹೆಚ್ಚಿಸುತ್ತೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಹೆಚ್ಚು ಉಪ್ಪಿನಕಾಯಿ ಸೇವಿಸುವುದರಿಂದ ತೊಂದರೆ ಕಾದಿದೆ. ಹಾಗಾಗಿ ಉಪ್ಪಿನಕಾಯಿಯನ್ನು ಮಿತವಾಗಿ ಬಳಸುವುದರಿಂದ ಅಪಾಯ ತಪ್ಪಿಸಬಹುದು. ಈ ಟಿಪ್ಸ್ ಫಾಲೋ ಮಾಡಿ.

ಉಪ್ಪಿನಕಾಯಿ ಇಲ್ಲದೇ ಊಟ ಕಲ್ಪಿಸಿಕೊಳ್ಳುವುದಕ್ಕೆ ಅಸಾಧ್ಯ.. ವಿಶೇಷವಾಗಿ ಭಾರತದಲ್ಲಿ ಉಪ್ಪಿನಕಾಯಿ ಇಲ್ಲದೇ ಅಡುಗೆ ಮನೆಯೇ ಇರಲಾರದು. ಉಪ್ಪಿನಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಹಾನಿಯುಂಟಾಗುತ್ತದೆ ತಿಳಿದುಕೊಳ್ಳೋಣ.
ಉಪ್ಪಿನ ಕಾಯಿಯ ಸೈಡ್ ಎಫೆಕ್ಟ್..!
ಉಪ್ಪಿನಕಾಯಿಯಲ್ಲಿ ಖಾರ ಹೆಚ್ಚಾಗಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗಬಹುದು.
ಹಲವು ದಿನಗಳ ಕಾಲ ಉಪ್ಪಿನಕಾಯಿ ಶೇಖರಿಸಿ ಇಟ್ಟು ತಿನ್ನುವುದರಿಂದ ಹೊಟ್ಟೆ ಉರಿ, ಎದೆ ಉರಿಗೆ ಕಾರಣವಾಗುತ್ತದೆ.
ಉಪ್ಪಿನಕಾಯಿಯಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವುದರಿಂದ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುತ್ತದೆ.
ಇದ್ರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಅಜೀರ್ಣ ಸಮಸ್ಯೆ ಉಂಟಾಗಿ ಮಲಬದ್ಧತೆಗೂ ಕಾರಣವಾಗಬಹುದು.
ಉಪ್ಪಿನಕಾಯಿ ತುಂಬಾ ರುಚಿಯಾಗಿರುತ್ತದೆ. ಬಾಯಲ್ಲಿ ನೀರೂರಿಸುವ ರುಚಿಯ ಹೊರತಾಗಿಯೂ, ನಿಮ್ಮ ಉಪ್ಪಿನಕಾಯಿ ಆಯ್ಕೆ ಮಾಡಲು ಜಾಗರೂಕತೆ ವಹಿಸಬೇಕು. ಹೆಚ್ಚಾಗಿ ತಿನ್ನುವುದನ್ನು ತಪ್ಪಿಸಬೇಕು.
ಸಾಮಾನ್ಯವಾಗಿ ಉಪ್ಪಿನಕಾಯಿಯಲ್ಲಿ ಎಣ್ಣೆ ಹಾಗೂ ಮಸಾಲೆ ಪದಾರ್ಥ ಹೆಚ್ಚಾಗಿರುತ್ತದೆ. ಬಹಳಷ್ಟು ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ. ವಿನೆಗರ್, ಉಪ್ಪು, ಎಣ್ಣೆಗಳಿಂದ ಕೂಡಿರುತ್ತದೆ. ಇವೆಲ್ಲ ಆರೋಗ್ಯಕ್ಕೆ ಹಾನಿಕಾರಕ. ಮಧುಮೇಹದಿಂದ ಬಳಲುತ್ತಿರುವವರು ಉಪ್ಪಿನಕಾಯಿ ಸೇವಿಸಬಾರದು. ಯಾಕಂದ್ರೆ ಇದು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಟ್ರೈಗ್ಲಿಸರೈಡ್ ಮಟ್ಟಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಲವು ಆರೋಗ್ಯ ಸಮಸ್ಯಗಳು ಅಪಾಯಕ್ಕೆ ಕಾರಣವಾಗಬಹುದು.

ಪ್ರತಿ ದಿನ ಹೆಚ್ಚು ಉಪ್ಪಿನಕಾಯಿ ತಿನ್ನುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರಬಲ್ಲದ್ದು. ಅಸ್ವಸ್ಥತೆ, ನೋವು ಉಂಟು ಮಾಡಬಲ್ಲದ್ದು. ಹಾಗಾಗಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಕಡಿಮೆ ಉಪ್ಪಿನಕಾಯಿ ಸೇವಿಸುವುದು ಉತ್ತಮ. ಜೀರ್ಣಾಂಗ ವ್ಯವಸ್ಥೆ ಮೇಲೆ ಇದು ಪರಿಣಾಮ ಬೀರಬಹುದು. ಉಪ್ಪಿನಕಾಯಿಯಲ್ಲಿ ಹೆಚ್ಚಾಗಿ ಉಪ್ಪು ಇರುವುದರಿಂದ ನಿಮ್ಮ ಹೊಟ್ಟೆ ಉಬ್ಬಿಕೊಳ್ಳುವ ಅನುಭವ ಎದುರಾಗಬಹುದು.
ಹೆಚ್ಚಿನ ಪ್ರಮಾಣದ ಉಪ್ಪಿನಕಾಯಿ ಸೇವನೆ ಹೆಚ್ಚಾಗಿ ರಕ್ತದೋತ್ತಡವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಮಸಾಲೆಗಳು ಉಪ್ಪಿನಕಾಯಿಯಲ್ಲಿರುತ್ತವೆ. ಹಾಗಾಗಿ ಕಡಿಮೆ ಪ್ರಮಾಣದ ಎಣ್ಣೆ ಹಾಗೂ ಉಪ್ಪು, ಮಸಾಲೆ ಇರುವ ಉಪ್ಪಿನಕಾಯಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.
ಉಪ್ಪಿನಕಾಯಿಯಲ್ಲಿ ಹಲವು ಬಗೆಗಳಿಗೆ, ಮಾವಿನಕಾಯಿ ಉಪ್ಪಿನಕಾಯಿ, ಶುಂಠಿ, ನೆಲ್ಲಿಕಾಯಿ, ನಿಂಬೆಕಾಯಿ, ಎರಳಿಕಾಯಿ , ಬೆಳ್ಳುಳ್ಳಿ , ಹಾಗಲಕಾಯಿ, ಟೊಮೆಟೊ ಮುಂತಾದವುಗಳಿಂದ ತಯಾರಿಸುವ ಉಪ್ಪಿನಕಾಯಿ ರುಚಿ ಅನುಭವಿಸಿದವರಿಗಷ್ಟೇ ತಿಳಿಯುತ್ತದೆ. ಯಾವುದೇ ಉಪ್ಪಿನಕಾಯಿ ತಿಂದರೂ ಪರವಾಗಿಲ್ಲ. ಆದರೆ ಹಿತಮಿತವಾಗಿರಬೇಕು. ಅತಿಯಾಗಿ ತಿಂದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ.

ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಉಪ್ಪು, ಮಸಾಲೆಗಲಿರುತ್ತವೆ. ಉಪ್ಪಿನಕಾಯಿ ಮಸಾಲೆಗಳಿರುತ್ತವೆ. ಉಪ್ಪಿನಕಾಯಿ ತಯಾರಿಸುವಾಗ ಅದು ಬಹಳ ದಿನ ಕೆಡದಂತಿರಲು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಸುವುದುಂಟು. ಉಪ್ಪಿನಕಾಯಿ ಹೋಳುಗಳು ಎಣ್ಣೆಗಳು ಹೀರಿಕೊಳ್ಳುತ್ತವೆ. ಅತಿಯಾಗಿ ಉಪ್ಪಿನಕಾಯಿ ಸೇವಿಸಿದರೆ.. ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ದೇಹವನ್ನು ಸೇರಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಉಪ್ಪಿನಕಾಯಿಯಲ್ಲಿ ಉಪ್ಪಿನಾಂಶವು ಅಧಿಕವಾಗಿರುತ್ತದೆ. ಇದೂ ಕೂಡಾ ಹೃದಯದೋತ್ತಡಕ್ಕೆ ಕಾರಣವಾಗುತ್ತದೆ.
ಹೆಚ್ಚು ಉಪ್ಪು ದೇಹಕ್ಕೆ ಸೇರಿದಲ್ಲಿ ಉರಿಯೂತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಆಸ್ಪದ ಸೀಗುವುದಿಲ್ಲ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಉಪ್ಪಿನಕಾಯಿ ಸೇವನೆ ಕುರಿತು ಎಚ್ಚರದಿಂದರಬೇಕು. ಹೃದಯದ ಒತ್ತಡದ ಸಮಸ್ಯೆಗಳಿರುವವರು ಇದರ ಬಳಕೆ ಯಿಂದ ದೂರ ಉಳಿದರೂ ಒಳ್ಳೆಯದಾಗುತ್ತದೆ. ಉಪ್ಪಿನಕಾಯಿ ಯಲ್ಲಿರುವ ಸೋಡಿಯಂ ಲವಣ,. ಉಪ್ಪಿನಕಾಯಿ ಯಲ್ಲಿರುವ ಸೋಡಿಯಂ ಲವಣ, ಹೊಟ್ಟೆಯುಬ್ಬರಿಕೆಗೂ ದಾರಿ ಮಾಡಿಕೊಡುತ್ತದೆ. ಈ ಲವಣಾಂಶದಿಂದ ಹೊಟ್ಟೆಯಲ್ಲಿ ನೀರು ಉಳಿದು ಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಮೂತ್ರಪಿಂಡದ ಮೇಲೂ ಹೆಚ್ಚು ಪರಿಣಾಮ ಬೀರಬಹುದು. ಉಪ್ಪಿನ ಕಾಯಿಯಲ್ಲಿರುವ ಕೆಲವು ಲವಣಗಳು ಮೂತ್ರ ಪಿಂಡಗಳ ಕೆಲಸ ಹೆಚ್ಚುವಂತೆ ಮಾಡುವುದರಿಂದ ಅಡ್ಡ ಪರಿಣಾಮಗಳಾಗುತ್ತವೆ. ಆದ್ದರಿಂದ ಉಪ್ಪಿನಕಾಯಿಯನ್ನು ಮಿತವಾಗಿ ಸೇವಿಸಬೇಕು.