ಪ್ರೀತಿ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಅನುಭವ. ಆದ್ರೆ ಪ್ರೀತಿಯಲ್ಲಿ ಬೀಳುವ ಕಲ್ಪನೆ ಕೆಲವು ಜನರನ್ನು ಭಯಭೀತರನ್ನಾಗಿ ಮಾಡುತ್ತದೆ. ಆದಾಗ್ಯೂ, ಕೆಲವೊಂದು ಸಲ ಪ್ರೀತಿಯ ಬಗ್ಗೆ ಭಯ ಪಡುವುದು ಫಿಲೋಫೋಬಿಯಾ ಸಮಸ್ಯೆ ಉದ್ಭವಿಸಬಹುದು. ಸಾಮಾನ್ಯವಾಗಿ ಫಿಲೋಫೋಬಿಯಾ ಎನ್ನುವುದು ಇತರ ಜನರೊಂದಿಗೆ ಪ್ರೀತಿ ಮಾಡುವುದಕ್ಕೆ ಸಂಬಂಧಿಸಿದ ಒಂದು ರೀತಿಯ ಭಯ ಅಂತಲೇ ಹೇಳಬಹುದು.

ಪ್ರೀತಿಯಲ್ಲಿ ಬೀಳುವ ಭಯದ ಹಿಂದೆ ಅನೇಕ ಕಾರಣಗಳಿವೆ. ಈ ಹಿಂದೆ ಮೋಸ ಹೋದ ಅಥವಾ, ಪ್ರೀತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಜನರಲ್ಲಿ ಈ ಭಯ, ಆತಂಕ ಕಾಡಬಹುದು. ಆದ್ದರಿಂದ ಭಾವನೆಯು ವ್ಯಕ್ತಿಯನ್ನು ಒಬ್ಬಂಟಿಯಾಗಿರಲು ಒತ್ತಾಯಿಸುತ್ತದೆ. ಫಿಲೋಫೋಬಿಯಾ ಖಿನ್ನತೆ, ಮತ್ತು ಆತ್ಮಹತ್ಯೆಗೂ ಕೂಡಾ ಕಾರಣವಾಗಬಹುದು. ಫಿಲೋಫೋಬಿಯಾ ಬರು ಬರುತ್ತಾ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಇದಕ್ಕೆ ಚಿಕಿತ್ಸೆಯ ಅಗತ್ಯವಿರುತ್ತದೆ. ಅಷ್ಟಕ್ಕೂ, ಫಿಲೋಫೋಬಿಯಾ (ಪ್ರೀತಿಯಲ್ಲಿ ಬೀಳುವ ಭಯ) ಎಂದರೇನು, ಈ ಕಾಯಿಲೆಯ ಲಕ್ಷಣಗಳು ಏನು.. ಚಿಕಿತ್ಸೆ ಹೇಗೆ… ಇದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.
ಫಿಲೋಫೋಬಿಯಾ ಎಂದರೇನು..?
ಫಿಲೋಫೋಬಿಯಾ ಎಂದರೆ ಆಡುಮಾತಿನಲ್ಲಿ ‘ಪ್ರೀತಿಯ ಭಯ’ ಎಂದು ಕರೆಯಲಾಗುತ್ತದೆ. ಯಾರನ್ನಾದರೂ ಪ್ರೀತಿಸುವ ಭಯವನ್ನು ಫಿಲೋಫೋಬಿಯಾ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಗಳು ಮತ್ತೊಬ್ಬರ ಜತೆ ಪ್ರೀತಿ ಮಾಡುವುದನ್ನು ತಡೆಗಟ್ಟುತ್ತದೆ. ಈ ಭಯ ಇನ್ನೊಬ್ಬ ವ್ಯಕ್ತಿಯ ಜತೆ ಭಾವನಾತ್ಮಕ ಸಂಪರ್ಕವನ್ನು ರೂಪಿಸುವುದಕ್ಕೆ ಸಂಬಂಧಿಸಿದೆ. ಇದಕ್ಕೆ ಚಿಕಿತ್ಸೆ ನೀಡದೇ ಇದ್ದರೆ, ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಪ್ರೀತಿಯ ಜೀವನದ ಅತ್ಯಂತ ಸುಂದರವಾದ ಮತ್ತು ಅದ್ಭುತವಾದ ಅನುಭವಾದರೆ, ಮತ್ತೆ ಕೆಲವರಿಗೆ ಇದು ನೋವಿನಿಂದ ಕೂಡಿರುತ್ತದೆ ಅಥವಾ ಭಯಾನಕವಾಗಿರುತ್ತದೆ. ಕೆಲರಿಗೆ ಆನಂದದಾಯಕವಾಗುತ್ತದೆ. ಫಿಲೋಫೋಬಿಯಾಗೆ ಒಳಗಾಗಿರುವ ವ್ಯಕ್ತಿಗಳು ಪ್ರೀತಿ ಅಂದಾಕ್ಷಣ, ಇದರ ಹೆಸರು ಹೇಳಿದಾಕ್ಷಣ ಓಡಿ ಹೋಗುತ್ತಾರೆ.
ಇನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳಿಂದಲೂ ಈ ಭಯ ಬೆಳೆಯಬಹುದು. ಕೆಲವು ಸಂದರ್ಭಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಹತ್ತಿರವಿರುವ ಜನರು ಪ್ರೀತಿಯೊಂದಿಗೆ ಶಾಶ್ವತ ಮತ್ತು ಸ್ಥಿರವಾದ ಸಂಬಂಧ ಹೊಂದಿದ್ದರೂ,ಇದು ಫಿಲೋಫೋಬಿಯಾಗೆ ಒಳಗಾಗಿರುವ ವ್ಯಕ್ತಿಗೆ ತೊಂದರೆಯಾಗುತ್ತದೆ.
ಫಿಲೋಫೋಬಿಯಾ ಲಕ್ಷಣಗಳು ಏನು..?
ಪ್ರೀತಿಯಲ್ಲಿ ಬೀಳುವ ವ್ಯಕ್ತಿಯ ಆಲೋಚನೆಯನ್ನು ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಇಲ್ಲಿ ಭಯದ ವಾತಾವರಣ ಎಷ್ಟು ತೀವ್ರವಾಗಿರುತ್ತದೆ ಎಂದರೆ, ಅದು ವ್ಯಕ್ತಿಯ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸುತ್ತದೆ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ಭಯವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

ಇದರ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಫಿಲೋಫೋಬಿಯಾ ಲಕ್ಷಣಗಳು ಪ್ರೀತಿಯಲ್ಲಿ ಬೀಳುವ ಕಲ್ಪನೆಯಿಂದ ಉಂಟಾಗುವ ಭಾವನಾತ್ಮಕ ಮತ್ತು ದೈಹಿಕ ಪ್ರತಿಕ್ರಿಯೆಗಳು, ಆದ್ದರಿಂದ ಫಿಲೋಫೋಬಿಯಾ ಸಾಮಾನ್ಯ ಲಕ್ಷಣಗಳು ಈ ರೀತಿಯಾಗಿ ಗುರುತಿಸಬಹುದು.
- ಪ್ರೀತಿಯ ಭಾವನೆ ಇದ್ದರೂ, ಅದನ್ನು ವ್ಯಕ್ತಪಡಿಸಲು ಹಿಂಜರಿಕೆ
- ಮದುವೆ ಮತ್ತು ಇತರ ಸಮಾರಂಭಗಳಿಗೆ ಹೋಗುವುದುನ್ನು ತಪ್ಪಿಸುವುದು
- ಪ್ರೀತಿಯಲ್ಲಿ ಬೀಳುವ ತೀವ್ರ ಆತಂಕ ಮತ್ತು ಹೆದರಿಕೆ ಕಾಡಬಹುದು
- ಭಯವನ್ನು ನಿಯಂತ್ರಿಸಲು ಅಸಮರ್ಥತೆ
ಫಿಲೋಫೋಬಿಯಾದ ದೈಹಿಕ ಲಕ್ಷಣಗಳು..!
ಫಿಲೋಫೋಬಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಈ ಕೆಳಗಿನ ದೈಹಿಕ ಲಕ್ಷಣಗಳು ಕಂಡು ಬರುತ್ತವೆ.
ದೇಹ ನಡುಗುವುದು
ತೀವ್ರವಾದ ಭಯ, ಅಥವಾ ಹೆದರಿಕೆಯ ಭಾವನೆ
ಬೆವರು
ಉಸಿರಾಟದ ತೊಂದರೆ
ಕೆಲಸ ಮಾಡಲು ಕಷ್ಟವಾಗಬಹುದು
ವಾಕರಿಕೆ ಇತ್ಯಾದಿ ಲಕ್ಷಣಗಳು ಕಂಡು ಬರುವ ಸಾಧ್ಯತೆ ಇರುತ್ತದೆ.

ಫಿಲೋಫೋಬಿಯಾದ ಕಾರಣಗಳು?
ಹಿಂದಿನ ಆಘಾತಕಾರಿ ಘಟನೆಗಳು
ಫಿಲೋಫೋಬಿಯಾ ಈ ಹಿಂದೆ ನಡೆದ ಘಟನೆ ಮತ್ತು ಆಘಾತಕಾರಿ ಅನುಭವಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಮೋಸ , ಮುಜುಗರ ಇತ್ಯಾದಿಗಳಲ್ಲಿ ವೈಫಲ್ಯ ಕಂಡಿರಬಹುದು. ಇಂಥ ವ್ಯಕ್ತಿ ಫಿಲೋಫೋಬಿಯಾದಿಂದ ಬಳಲುತ್ತಿರಬಹುದು. ಅಷ್ಟೇ ಅಲ್ಲದೇ, ಫಿಲೋಫೋಬಿಯಾ ದಿಂದ ಬಳಲುತ್ತಿರುವವರು ಕಾಳಜಿ, ಪಾಲನೆಯಿಂದ ವಂಚಿತರಾಗಿರಬಹುದು. ಮಗು ತನ್ನ ಪೋಷಕರ ಹಾಗೂ ತನ್ನ ಸಂಬಂಧದಲ್ಲಿ ಏರಿಳಿತಗಳನ್ನು ನೋಡುತ್ತದೆ. ಮತ್ತು ಪೋಷಕರು ಮಗುವಿನ ಬಗ್ಗೆ ಅತಿಯಾದ ಕಾಳಜಿ ಹೊಂದಿರಬಹುದು. ಆದ್ದರಿಂದ ಇವೆಲ್ಲವುಗಳು ಫಿಲೋಫೋಬಿಯಾಗೆ ಕಾರಣವಾಗಬಹುದು.
ಸಾಮಾಜಿಕ ಕಾರಣಗಳು
ಫಿಲೋಫೋಬಿಯಾಗೆ ಕಾರಣ, ಕೆಲವು ಧರ್ಮಗಳಲ್ಲಿ ಹಾಗೂ ಸಂಸ್ಕೃತಿಯಲ್ಲಿ ಪ್ರೀತಿ ಎಂದರೆ ಮಡಿ, ಮೈಲಿಗೆ ಎಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಒಬ್ಬ ವ್ಯಕ್ತಿ ಇಂತಹ ಕಟ್ಟಳೆಗಳನ್ನು ಉಲ್ಲಂಘಿಸಿದರೆ, ಆತನಿಗೆ ಶಿಕ್ಷೆ ನೀಡಲಾಗುತ್ತದೆ. ಆದ್ದರಿಂದ ಧರ್ಮ ಹಾಗೂ ಸಂಸ್ಕ್ಡತಿಕ ಕಾರಣಗಳು ವ್ಯಕ್ತಿಗಳಲ್ಲಿ ವಿಪರೀತ ಭಯ, ಆತಂಕಕ್ಕೆ ಕಾರಣವಾಗುತ್ತವೆ.
ಖಿನ್ನತೆ
ಖಿನ್ನತೆ ಹೆಚ್ಚಿರುವ ವ್ಯಕ್ತಿಗಳಲ್ಲಿ ಫಿಲೋಫೋಬಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ. ಖಿನ್ನತೆ ವ್ಯಕ್ತಿಯ ಪ್ರೀತಿ, ವಿಶ್ವಾಸ, ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಖಿನ್ನತೆ ಮನಸ್ಸನ್ನು ದುರ್ಬಲಗೊಳಿಸುತ್ತದೆ. ಜನರಿಂದ ದೂರವಿರಲು ಪ್ರೇರೆಪಿಸುತ್ತದೆ. ವ್ಯಕ್ತಿಯಲ್ಲಿ ಖುಣಾತ್ಮಕ ಭಾವನೆ ಮೂಡಿಸುತ್ತದೆ. ಪ್ರೀತಿಯಲ್ಲಿ ಬೀಳುವ ಭಯವನ್ನು ಹೆಚ್ಚಿಸುತ್ತದೆ.

ಕೌಟುಂಬಿಕ ಕಾರಣಗಳು ಕೆಲವೊಬ್ಬ ಫಿಲೋಫೋಬಿಯಾಗೆ ಕಾರಣವಾಗುತ್ತವೆ. ಯಾರಾದರೂ ನನ್ನ ಪ್ರೀತಿಯನ್ನು ತಿರಸ್ಕರಿಸಿದರೆ ಹೇಗೆ ಎನ್ನುವ ಆತಂತ, ಪ್ರೀತಿಯನ್ನು ಸ್ವೀಕರಿಸದೇ ಇರುವುದು ಜೀವನದಲ್ಲಿ ಮುಜುಗರ ಉಂಟು ಮಾಡುತ್ತದೆ. ಈ ಮುಜುಗರ ಭಾವನೆ ಬೇರೆಯವರನ್ನು ಪ್ರೀತಿಸುವುದನ್ನು ತಡೆಗಟ್ಟುತ್ತದೆ. ಇನ್ನು ಪೋಷಕರ ವಿಚ್ಛೇದನೆ ಸಹ ಇದಕ್ಕೆ ಕಾರಣ ಎನ್ನಲಾಗುತ್ತದೆ.
ಚಿಕಿತ್ಸೆಗಳೇನು..?
ಸೈಕೋ ಥೆರಪಿ!
ಸೈಕೋಥೆರಪಿ ಫಿಲೋಫೋಬಿಯಾ ನಿವಾರಿಸುವಲ್ಲಿ ಸಹಾಯಕವಾಗುತ್ತದೆ. ಫೋಬಿಯಾ ತೀವ್ರತೆಯನ್ನು ಅವಲಂಬಿಸಿ ಚಿಕಿತ್ಸೆ ವಿಧಾನಗಳು ಬದಲಾಗುತ್ತವೆ. ಈ ಚಿಕಿತ್ಸಾ ವಿಧಾನದಲ್ಲಿ ಜೀವನಶೈಲಿಯಲ್ಲಾಗುವ ಬದಲಾವಣೆಗಳನ್ನು ಒಳಗೊಂಡಿರುತ್ತವೆ.
ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT)..!
ಫಿಲೋಫೋಬಿಯಾ ಚಿಕಿತ್ಸೆಯಲ್ಲಿ ಕಾಗ್ನಿಟಿವ್ ಬಿಹೇರಿಯಲ್ ಥೆರಪಿ ಕೂಡಾ ಒಂದು. ಇದು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ. ವಿಶೇಷವಾಗಿ, ಸಿಬಿಟಿ ಥೆರಪಿ, ವ್ಯಕ್ತಿಯ ಪ್ರೀತಿಯಲ್ಲಿ ಬೀಳುವ ಭಯ, ಹಾಗೂ ಆಲೋಚನೆಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಸಿಬಿಟಿ ಥೆರಪಿ, ಫಿಲೋಫೋಬಿಯಾದ ಮೂಲವನ್ನು ಗುರುತಿಸುತ್ತದೆ. ಈ ಥೆರಪಿಯಲ್ಲಿ ಚಿಕಿತ್ಸಕರು ನಿಯಮಿತವಾಗಿ ಪ್ರೀತಿಯ ಬಗ್ಗೆ ವ್ಯಕ್ತಿಯ ಮನೋಭಾವನನ್ನು ಬದಲಾಯಿಸುತ್ತಾರೆ.ಇದು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಗಳಲ್ಲಿ ಒಂದು. ಚಿಕಿತ್ಸೆ ನೀಡುವವರು ವ್ಯಕ್ತಿಯ ಮುಂದೆ ಅದ್ಭುತ ಚಿತ್ರಗಳನ್ನು ತೋರಿಸಿ, ಆ ದೃಶ್ಯಗಳಿಗೆ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಪರೀಕ್ಷಿಸುತ್ತಾರೆ. ಈ ಚಿಕಿತ್ಸೆ ನಿಧಾನವಾಗಿ ವ್ಯಕ್ತಿಯ ಆತಂಕವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.
ಔಷಧಿಗಳು..!
ವ್ಯಕ್ತಿಯ ಕಾಯಿಲೆಯ ತೀವ್ರತೆ ಹೆಚ್ಚಾದಾಗ ಔಷಧಿಗಳು ನೆರವಾಗಬಲ್ಲವು. ವ್ಯಕ್ತಿಯ ನೋವನ್ನು ನಿಯಂತ್ರಿಸಲು ಔಷಧಿಗಳನ್ನು ನೀಡಲಾಗುತ್ತದೆ. ಖಿನ್ನತೆಗೆ ಒಳಗಾಗಿರುವ ವ್ಯಕ್ತಿಯ ಭಾವನೆಗಳನ್ನು ನಿಯಂತ್ರಿಸಲು, ಫಿಲೋಫೋಬಿಯಾಗೆ ಸಾಮಾನ್ಯವಾಗಿ ಔಷಧಿಗಳನ್ನು ಆಂಟಿ ಡಿಪ್ರೆಸೆಂಟ್, ಆಂಟಿಆಕ್ಸಿಡೆಂಟ್ ಔಷಧಿಗಳನ್ನು ನೀಡಲಾಗುತ್ತದೆ.