ಭಾರತದಲ್ಲಿ 100 ಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಇರುವುದು ಧೃಡಪಟ್ಟಿದೆ. ವಿಶ್ವಆರೋಗ್ಯ ಸಂಸ್ಥೆ ಪ್ರಕಾರ, ನಿಮ್ಮ ಸುತ್ತ ಮುತ್ತ ತುಂಬಾ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ. ಇದರ ಜತೆಗೆ ಸೀನಿದಾಗ ಹಾಗೂ ಕೆಮ್ಮುವಾಗ ಟಿಶ್ಯೂ ಬಳಸುವಂತೆ ಸಲಹೆ ನೀಡಲಾಗುತ್ತಿದೆ. ಇದಲ್ಲದೇ, ಕಣ್ಣು, ಮೂಗು, ಹಾಗೂ ಮುಖ ಪದೇ ಪದೇ ಮುಟ್ಟಬಾರದು. ಇತ್ತೀಚಿನ ವರದಿ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು 16 ಬಾರಿ ತನ್ನ ಮುಖವನ್ನು ಮುಟ್ಟಿಕೊಳ್ಳುತ್ತಾನೆ ಎಂಬ ವರದಿಯಾಗಿದೆ. ಹೀಗಾಗಿ ಈ ಅಭ್ಯಾಸವನ್ನು ಹೇಗೆ ನಿಯಂತ್ರಣದಲ್ಲಿಡುವುದು ಬನ್ನಿ ತಿಳಿಯೋಣ.

2008 ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 16 ಬಾರಿ ತನ್ನ ಮುಖವನ್ನು ಮುಟ್ಟಿಕೊಳ್ಳುವ ಅಭ್ಯಾಸ ಹೊಂದಿರುತ್ತಾನೆ, ಮತ್ತೊಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ 1 ಗಂಟೆಗೊಮ್ಮೆ ಏನಿಲ್ಲ ಅಂದ್ರೂ 23 ಬಾರಿ ತನ್ನ ಮೂಗು. ಕಣ್ಣು ಹಾಗೂ ಬಾಯಿಯನ್ನು ಸ್ಪರ್ಶಿಸುತ್ತಾನೆ ಎಂದು ಆಘಾತಕಾರಿ ಮಾಹಿತಿ ಹೊರ ಬಂದಿದೆ. ಅಲ್ಲದೇ, ಒಬ್ಬ ವ್ಯ್ಕತಿ 2 ಗಂಟೆಗೆ ಸುಮಾರು 19 ಬಾರಿ ತನ್ನ ಮುಖವನ್ನು ಮುಟ್ಟಿಕೊಳ್ಳುತ್ತಾನೆ ಎಂದು ತಿಳಿದು ಬಂದಿದೆ.
ಈ ಅಭ್ಯಾಸವನ್ನು ನಿಯಂತ್ರಿಸುವುದು ಹೇಗೆ…?
ಕೊರೊನಾ ವೈರಸ್ ಭೀತಿ ಎಲ್ಲೆಡೆ ಹೆಚ್ಚುತ್ತಿದೆ. ಪ್ರತಿ ಸಾರಿ ಮುಖವನ್ನು ಮುಟ್ಟಿಕೊಳ್ಳುವ ಅಭ್ಯಾಸ ವಿರುವವರಿಗೆ ಮನಃಶಾಸ್ತ್ರಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ನಿಮ್ಮ ಕೈಗಳನ್ನು ಮುಖದ ಕಣ್ಣು, ಬಾಯಿ, ಹಾಗೂ ಮೂಗಿನಿಂದ ಕಾಯ್ದುಕೊಳ್ಳಬೇಕಾದರೆ, ಮೊದಲು ನಾವು ಯಾವಾಗಲೂ ಅಲರ್ಟ್ ಆಗಿರಬೇಕು. ಮೊದಲು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.ನೀವು ಮನೆಯಲ್ಲಿದ್ದರೆ ನಿಮ್ಮ ಮನೆಯಲ್ಲಿರುವ ವೆಸ್ಟ್ ಬಟ್ಟೆಗಳನ್ನು ತುಂಡು ಗಳನ್ನಾಗಿ ಫೋಲ್ಡ್ ಮಾಡಿ. ಟಿವಿ ನೋಡುವಾಗ ರಿಮೋರ್ಟ್ ನ್ನು ನಿಮ್ಮ ನಿಮ್ಮ ಕೈಲಿಟ್ಟುಕೊಳ್ಳಿ. ಅಥವಾ ನೀವು ಯಾವುದಾದರೂ ಮೀಟಿಂಗ್ ನಲ್ಲಿದ್ದರೆ. ನಿಮ್ಮ ಎರಡು ಕೈಗಳನ್ನು ಜೋಡಿಸಿ, ಕಾಲಿನ ಹತ್ತಿರ ಇಟ್ಟಿಕೊಳ್ಳಿ. ಅಲ್ಲದೇ, ಕೈಗಳಿಗೆ ಗ್ಲೌಸ್ ಗಳನ್ನು ಸಹ ನೀವು ಬಳಕೆ ಮಾಡಬಹುದಾಗಿದೆ. ಗ್ಲೌಸ್ ಹಾಕಿಕೊಳ್ಳುವುದರಿಂದ ಪದೇ ಪದೇ ಮುಖ ಮುಟ್ಟಿಕೊಳ್ಳುವುದನ್ನು ನಿಯಂತ್ರಿಸಬಹುದಾಗಿದೆ.

ಪದೇ ಪದೇ ಮುಖ ಮುಟ್ಟುವುದರಿಂದ ಆಗುವ ಹಾನಿಗಳೇನು..?
ಮುಖವನ್ನು ಪದೇ ಪದೇ ಮುಟ್ಟಿಕೊಳ್ಳುವುದರಿಂದ ರೆಸ್ಪೆರೆಟರಿ ಇನ್ಫೇಕ್ಶನ್ ತಗಲುವ ಸಾಧ್ಯತೆ ಹೆಚ್ಚು. ವೈರಸ್ ಇರುವ ಯಾವುದೇ ವಸ್ತುಗಳನ್ನು ವ್ಯಕ್ತಿ ಮುಟ್ಟಿ, ಮುಖ , ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳುವುದರಿಂದ ಕೊರೊನಾ ವೈರಸ್ ಜತೆಗೆ ಶೀತ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ಕಣ್ಣು, ಮೂಗು, ಹಾಗೂ ಬಾಯಿ ಮೂಲಕ ವೈರಸ್ ನಮ್ಮ ದೇಹದೊಳಗೆ ಪ್ರವೇಶಿಸಲು ಸುಲಭವಾಗುತ್ತದೆ.
ಕೈ ತೊಳೆಯುವುದು ಮುಖ್ಯ!
ನಿಮ್ಮ ಕೈಗಳನ್ನು ಕನಿಷ್ಠ 20 ಸೆಕೆಂಡ್ ಗಳ ವರೆಗೂ ತೊಳೆಯಿರಿ. ಅಲ್ಲದೇ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸಿದರೆ ಮಾತ್ರ ಸಹಾಯ ವಾಗಬಲ್ಲದ್ದು. ಏಕೆಂದರೆ ಒಂದು ಸಣ್ಣ ತಪ್ಪು ಮಾರಣಾಂತಿಕ ಸಮಸ್ಯೆಯನ್ನು ತಂದೊಡ್ಡಬಹುದು. ಕೈ ತೊಳೆಯುವ ಐದು ಸರಳ ವಿಧಾನಗಳನ್ನು ಅನುಸರಿಸಬೇಕು.
ಸೊಳ್ಳೆಗಳಿಂದ ಕೊರೊನಾ ವೈರಸ್ ಹರಡಬಹುದಾ..?
ಕೊರೊನಾ ವೈರಸ್ ಸೊಳ್ಳೆಗಳ ಮೂಲಕ ಹರಡುತ್ತದೆಯೇ ಎಂಬುದರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊರೊನಾ ಏನಿದ್ದರೂ ರೋಗ ಪೀಡಿತ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ ಅಷ್ಟೇ. ಆದ್ರೆ ಎಚ್ಚರಿಕೆ ವಹಿಸುವುದು ಮುಖ್ಯ. ಏಕೆಂದರೆ, ಸೊಳ್ಳೆಗಳು, ನೊಣಗಳು ಇತರೆ ಹಲವು ರೋಗಕಾರಕ ಸೂಕ್ಷ್ಮಾಣುಜೀವಿಗಳ ವಾಹಕಗಳಾಗಿದ್ದರಿಂದ ಅವುಗಳಿಂದ ಮುಕ್ತಿ ಪಡೆಯುವುದೇ ಮಾರ್ಗ. ನಿಮ್ಮ ಸುತ್ತ ಮುತ್ತಲು ನೀರು ಜಮೆಯಾಗದಂತೆ ನೋಡಿಕೊಳ್ಳಬೇಕು. ನಿಮ್ಮ ಕೈಗಳನ್ನು ಮುಖದಿಂದ ದೂರವಿರಿಸಲು ಪರಿಮಳ ಯುಕ್ತ , ಸ್ಯಾನಿಟೈಸರ್ ಬಳಸಿ.
ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆಯೇನು..?
ಕೊರೊನಾ ವೈರಸ್ ಸೋಂಕಿಗೆ ಯಾವುದೇ ಚಿಕಿತ್ಸೆಗಳಿಲ್ಲ. ಕೆಲವು ಜನರು ಅವರಾಗಿಯೇ ಚೇತರಿಸಿಕೊಳ್ಳುವರು. ಆದ್ರೆ ರೋಗ ಲಕ್ಷಣಗಳನ್ನು ಈ ರೀತಿಯಾಗಿ ಕಡಿಮೆ ಮಾಡಬಹುದಾಗಿದೆ. ನೋವು , ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವುದರ ಮೂಲಕ, ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡಿಮೆ ಔಷಧಿ ನೀಡಬೇಡಿ. ಕೆಮ್ಮು, ಗಂಟಲು ನೋವು ಕಡಿಮೆ ಮಾಡಲು ಬಿಸಿ ನೀರಿನ ಸ್ನಾನ ಮಾುಡುವುದು ಉತ್ತಮ. ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಕೊರೊನಾ ವೈರಸ್ ಪತ್ತೆ ಹಚ್ಚುವುದು ಹೇಗೆ
ಕೊರೊನೊ ವೈರಸ್ ಪತ್ತೆಗೆ ವೈದ್ಯಕೀಯ ಇತಿಹಾಸ ಮುಖ್ಯ. ದೈಹಿಕ ಪರೀಕ್ಷೆ ಮಾಡಲಾಗುತ್ತದೆ. ರಕ್ತ ಪರೀಕ್ಷೆ ಮಾಡಬಹುದು. ಕಫ, ಗಂಟಲಿನ ಸ್ವಾಬ್ ನ ಮಾದರಿ ಮತ್ತು ಉಸಿರಾಟದ ಪರೀಕ್ಷೆ ಮಾಡಿಸಬಹುದು.