ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಕಾಯಿ ಅಥವಾ ಶೇಂಗಾ ರುಚಿಕರವಾದ, ಎಣ್ಣೆಕಾಳುಗಳಲ್ಲಿ ಒಂದು. ಇದು ಸ್ವಾಸ್ಥಕ್ಕೆ ಅಗತ್ಯವಾದ ಗಮನಾರ್ಹ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಿಸ್ತಾ, ಬಾದಾಮಿಗಿಂತಲೂ ಎಲ್ಲಾ ಗುಣಗಳು ಕಡಲೆಕಾಯಿಯಲ್ಲಿವೆ. ಪ್ರತಿ ನಿತ್ಯ ಕಡಲೆ ಬೀಜವನ್ನು ಸೇವನೆ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಕಾಣಬಹುದು. ದಿನ ನಿತ್ಯ ೧೦ ಗ್ರಾಂ ನಷ್ಟು ಕಡಲೆ ಕಾಯಿ ಬೀಜ ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ಉಂಟಾಗುವ ಅಪಾಯವನ್ನು ತಡೆಗಟ್ಟಬಹುದು. ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ಕಡಲೆ ಬೀಜವನ್ನು ಸೇವಿಸಲಾಗುತ್ತದೆ. ಇದರಲ್ಲಿ ಜೀವಸತ್ವಗಳು. ಖನಿಜಗಳು , ಕೊಬ್ಬಿನಾಂಶಗಳು ಮತ್ತು ಪೋಷಕಾಂಶಗಳು ಹೆಚ್ಚಾಗಿದ್ದು, ಆದ್ದರಿಂದ ಕಡಲೆಕಾಯಿ ಸೇವನೆಯು ಆರೋಗ್ಯಕ್ಕೆ ಮಾತ್ರವಲ್ಲದೇ , ಸೌಂದರ್ಯ ವರ್ಧನೆಗೆ ಸಹಾಯಕಾರಿಯಾಗಿದೆ. ಇದರ ಆರೋಗ್ಯ ಪ್ರಯೋಜನಗಳು ಇಲ್ಲಿವೆ.

ಕಡಲೆಕಾಯಿ ಕಬ್ಬಿಣ, ನಿಯಾಸಿನ್. ಫೋಲೇಟ್, ಕ್ಯಾಲ್ಸಿಯಂ ಮತ್ತು ಸತುಗಳ ಉತ್ತಮ ಮೂಲವಾಗಿದೆ. ಹುರಿದ ಕಡಲೆಕಾಯಿಯ ಕೆಲವು ಧಾನ್ಯಗಳಲ್ಲಿ ೪೨೬ ಕ್ಯಾಲೋರಿಗಳು. ೫ ಗ್ರಾಂ ಕಾರ್ಬೋಹೈಡ್ರೇಟ್, ೧೭ ಗ್ರಾಂ ಪ್ರೋಟೀನ್, ಮತ್ತು ೩೫ ಗ್ರಾಂ ಕೊಬ್ಬು ಇರುತ್ತದೆ. ವಿಟಮಿನ್ ಇ, ಕೆ, ಮತ್ತು ಬಿ ೬ ಸಹ ಇದರಲ್ಲಿ ಸಾಕಷ್ಟು ಕಂಡು ಬರುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ
ಕಡಲೆಕಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಕಡಲೆಕಾಯಿಯಲ್ಲಿ ಅಗತ್ಯವಾದ ಪೋಷಕಾಂಶಗಳಿದ್ದು, ೧೫ ರಿಂದ ೩೦ ದಿನಗಳವರೆಗೆ ನಿರಂತರವಾಗಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
ಪ್ರೋಟೀನ್ ಗಳ ಮೂಲ..
೧೦೦ ಗ್ರಾಂ ಕಡಲೆಬೀಜದಲ್ಲಿ ೨೫.೮ ಗ್ರಾಂ ಪ್ರೋಟೀನ್ ಇದ್ದು, ದೇಹಕ್ಕೆ ಪ್ರೊಟೀನ್ ಬಹಳ ಅಗತ್ಯವಿರುತ್ತದೆ. ಚಳಿಗಾಲದಲ್ಲಿ ಕಡಲೆ ಬೀಜ ತಿನ್ನುವುದರಿಂದ ಹೆಚ್ಚು ಪ್ರೊಟೀನ್ ದೊರೆಯುತ್ತದೆ.
೧. ನೆಲಗಡಲೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಸಂಬಂಧಿತ ಕಾಯಿಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಇದರಲ್ಲಿ ಹೆಚ್ಚಿನ ಪ್ರೋಟೀನ್ ಇರುವುದರಿಂದ ಸ್ನಾಯುಗಳು ಹಾಗೂ ಮೂಳೆಗಳಿಗೆ ತುಂಬಾ ಒಳ್ಳೆಯದು. ವಿಟಮಿನ್ ಡಿ, ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಕಡಲೆಕಾಯಿ ತಿನ್ನುವುದರಿಂದ ಮೂಳೆಗಳು ಬಲಪಡಿಸಬಹುದು.
ಕಡಲೆಬೀಜದಲ್ಲಿ ವಿಟಮಿನ್ ಬಿ ೩ ಕಂಡು ಬರುತ್ತದೆ. ಇದರಲ್ಲಿರುವ ನಿಯಾಸಿಸ್ ಎಂಬ ಅಂಶ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಖಿನ್ನತೆ, ಉದ್ವೇಗ ಕಡಿಮೆ ಮಾಡಬಹುದು. ಕಡಲೆಕಾಯಿಯಲ್ಲಿ ಒಮೆಗಾ ೬ ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಆರೋಗ್ಯಕರ ಕೋಶಗಳನ್ನು ಹೊಂದಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಉತ್ತಮವಾದದ್ದು. ಆದ್ದರಿಂದ ಕಡಲೆಕಾಯಿ ಸೇವಿಸಬೇಕು.
ಕಿಡ್ನಿಯಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಕಡಲೆಬೀಜ ನಿವಾರಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ
ವಿಟಮಿನ್, ಆಂಟಿ ಆಕ್ಸಿಡೆಂಟ್ , ಮಿನಿರಲ್ಸ್ , ಫೈಬರ್ ಹೆಚ್ಚಾಗಿದ್ದು, ಕಡಲೆ ಬೀಜದಲ್ಲಿ ಬಿ ಜೀವಸತ್ವ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಚರ್ಮಕ್ಕೆ ನೈಜ ಹೊಳಪು ಹೆಚ್ಚಿಸುತ್ತದೆ.
ಖಿನ್ನತೆಗೆ ಒಳಗಾಗಿದ್ದರೆ ಕಡಲೆಕಾಯಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಶೇಂಗಾದಲ್ಲಿ ವಿಟಮಿನ್ ಇ ಅಧಿಕವಾಗಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಉತ್ತಮ ಚರ್ಮವನ್ನು ಪಡೆಯಲು ಹಾಗೂ ಕುದಲನ್ನು ಆರೋಗ್ಯಕರವಾಗಿರಸಲು ಇದು ಸಹಾಯ ಮಾಡುತ್ತದೆ.
೧೦೦ ಗ್ರಾಂ ಕಡಲೆಕಾಯಿಯಲ್ಲಿ ೫೬೭ ಕ್ಯಾಲೋರಿಗಳು ಇದ್ದು, ಸಾಕಷ್ಟು ಪ್ರಮಾಣದ ಮೆನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿವೆ. ಇದು ರಕ್ತದಲ್ಲಿ ಎಚ್ ಡಿಎಲ್ ಹಾಗೂ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅದಲ್ಲದೇ ಪಾರ್ಶ್ವವಾಯು ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ?
ಕಡಲೆಕಾಯಿಯಲ್ಲಿ ಕೊಬ್ಬು ಹಾಗೂ ಕ್ಯಾಲೋರಿಗಳು ಹೆಚ್ಚಾಗಿದ್ದರು ಇದು ತೂಕ ಹೆಚ್ಚಳವನ್ನುಂಟು ಮಾಡುವುದಿಲ್ಲ. ಕಡಲೆಕಾಯಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ತೂಕ ಇಳಿಕೆಯಾಗಬಲ್ಲದ್ದು, ಕಡಲೆಕಾಯಿಯನ್ನು ಸೇವಿಸಿದ ನಂತರ ನಿಮಗೆ ಹಸಿವು ಉಂಟಾಗುವುದಿಲ್ಲ. ನಿಯಂತ್ರಿತ ಪ್ರಮಾಣದಲ್ಲಿ ತಿನ್ನಿರಿ.
ಸೌಂದರ್ಯ ಪ್ರಯೋಜನಗಳು..!
ಪ್ರತಿದಿನ ಕಡಲೆಕಾಯಿ ಸೇವಿಸುವುದರಿಂದ ಚರ್ಮವು ಸುಂದರವಾಗಿರುತ್ತದೆ. ಕಡಲೆಕಾಯಿಯಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ದೇಹದಿಂದ ವಿಷವನ್ನು ತೆಗೆದುಹಾಕಿ ಚರ್ಮವನ್ನು ಸುಂದರ ಮತ್ತು ನಿಷ್ಕಳಂಕವಾಗಿಸುತ್ತದೆ.
ಕಡಲೆಕಾಯಿಯನ್ನು ಸೇವಿಸುವುದರಿಂದ ಸುಕ್ಕುಗಳು ಉಂಟಾಗುವುದಿಲ್ಲ. ಕಡಲೆಕಾಯಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಆಂಟಿ-ಆಕ್ಸಿಡೆಂಟ್ಗಳು ದೊರೆಯುತ್ತವೆ, ಇದರಿಂದಾಗಿ ಚರ್ಮದ ಮೇಲಿನ ಸೂಕ್ಷ್ಮ ರೇಖೆಗಳು, ಕಪ್ಪು ಕಲೆಗಳು ಮತ್ತು ಸುಕ್ಕುಗಳು ನಿವಾರಣೆಯಾಗುತ್ತವೆ. ಕಡಲೆಕಾಯಿಯ ಸೇವನೆಯು ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಒದಗಿಸುತ್ತದೆ, ಇದು ಚರ್ಮದ ಬಿಗಿತಕ್ಕೆ ಕಾರಣವಾಗುತ್ತದೆ.
ಕಡಲೆಕಾಯಿಯನ್ನು ಸೇವಿಸುವುದರಿಂದ ಚರ್ಮಕ್ಕೆ ಆರೋಗ್ಯಕರ ಕೊಬ್ಬುಗಳು ದೊರೆಯುತ್ತವೆ, ಇದರಿಂದ ಚರ್ಮದ ಶುಷ್ಕತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಒಣ ಚರ್ಮಕ್ಕೆ ಕಡಲೆಕಾಯಿಯನ್ನು ಆರೋಗ್ಯಕರ ಆಹಾರವಾಗಿ ತೆಗೆದುಕೊಳ್ಳಬಹುದು.
ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಕಡಲೆಕಾಯಿ ತಿನ್ನುವುದು ಪ್ರಯೋಜನಕಾರಿ. ಕಡಲೆಕಾಯಿಯಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ಕೂದಲನ್ನು ಅಕಾಲಿಕ ಬಿಳಿಮಾಡುವಿಕೆಯಿಂದ ರಕ್ಷಿಸುತ್ತದೆ ಮತ್ತು ಕೂದಲು ಒಣಗದಂತೆ ತಡೆಯುತ್ತದೆ.