ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ಎಲ್ಲಾ ಕಡೆ ಹೇರಳವಾಗಿ ದೊರೆಯುವ ಹಣ್ಣು. ವಿಟಮಿನ್ ಎ ಹಾಗೂ ಬಿಗಳ ಆಗರವಾಗಿರುವ ಪಪ್ಪಾಯಿ ಹಣ್ಣು ಹೊಟ್ಟೆಯ ಜಂತು ಹಾಗೂ ಅಜೀರ್ಣ ಸಮಸ್ಯೆಗೆ ರಾಮಬಾಣ ಅಂತಲೇ ಹೇಳಬಹುದು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಪಪ್ಪಾಯಿ ಹಣ್ಣಿನಲ್ಲಿದೆ. ಇದರಲ್ಲಿರುವ ನಾರಿನ ಅಂಶವು ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಅಜೀರ್ಣ ಸಮಸ್ಯೆ, ಹೊಟ್ಟೆ ಮತ್ತು ಎದೆಯೂರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಪಪ್ಪಾಯಿ ಹಣ್ಣನ್ನು ಬಳಸಲಾಗುತ್ತದೆ. ಅಲ್ಲದೇ ಟೈಪ್ 2 ಮಧುಮೇಹದ ಕಾಯಿಲೆಯನ್ನು ಪಪ್ಪಾಯಿ ಹಣ್ಣು ನಿಧಾನಗೊಳಿಸುತ್ತದೆ. ಪಪ್ಪಾಯಿ ತಿಂದರೆ ಆರೋಗ್ಯಕಾರಿ ಚರ್ವನ್ನು ಪಡೆಯಬಹುದು. ಬೀಟಾ ಕ್ಯಾರೋಟಿನ್ ಅಂಶಗಳು, ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಲಾಡ್ ರೂಪದಲ್ಲಿ ಆಹಾರದಲ್ಲಿ ಪಪ್ಪಾಯಿಯನ್ನು ಬಳಸಬಹುದು.
ದೇಹದ ತೂಕ ಕಡಿಮೆ ಮಾಡುತ್ತೆ ಪಪ್ಪಾಯಿ..!
ದೇಹದ ತೂಕ ಅಧಿಕವಿರುವವರು ಪಪ್ಪಾಯಿ ಹಣ್ಣು ತಿಂದರೆ ತೂಕ ವನ್ನು ಕಡಿಮೆ ಮಾಡಿಕೊಳ್ಳಬಹುದು. ಏಕೆಂದರೆ ಪಪ್ಪಾಯಿಯಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೇರಿಯಾ ಗುಣಗಳು ಹೆಚ್ಚಾಗಿರುವುದರಿಂದ ಅನೇಕ ಔಷಧೀಯ ಗುಣಗಳು ಇದರಲ್ಲಿವೆ.ಸಂಶೋಧನೆ ಪ್ರಕಾರ, ಕ್ಯಾನ್ಸರ್ ಅಪಾಯವನ್ನು ಇದು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮೂಳೆಗಳು ಬಲೆಗೊಳ್ಳಲು
ಮೊಳೆಗಳು ಬಲಪಡಿಸಲು ಪಪ್ಪಾಯಿ ಸೇವಿಸುವುದು ಉತ್ತಮ ಎಂದು ಹೇಳಬಹುದು. ಕೀಲು ನೋವು ಹಾಗೂ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಪಪ್ಪಾಯಿಯಲ್ಲಿರುವ ಫೈಬರ್, ಪ್ರೋಟೀನ್ ಹಾಗೂ ಕಬ್ಬಿಣವು ದೇಹದ ದೌರ್ಬಲ್ಯವನ್ನು ನಿವಾರಿಸುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ಇದ್ದರೆ ಪಪ್ಪಾಯಿ ಸೇವಿಸುವುದರಿಂದ ಸಮಸ್ಯೆ ನಿವಾರಿಸಬಹುದಾಗಿದೆ.

ಪಪ್ಪಾಯಿಯಲ್ಲಿ ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ಇದ್ರಿಂದ ಕಣ್ಣುಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಕಣ್ಣಿನ ದೃಷ್ಟಿಗೆ ಒಳ್ಳೆಯದು ಎಂದು ಹೇಳಬಹುದು. ಇದರಲ್ಲಿ ಕ್ಯಾಲ್ಸಿಯಂ ಹಾಗೂ ಪೋಟ್ಯಾಶಿಯಂ ಅಧಿಕವಾಗಿದೆ.
ಮಾಗಿದ ಪಪ್ಪಾಯಿ ಹಣ್ಣನ್ನು ತ್ವಚೆಗೆ ಹಚ್ಚುವುದರಿಂದ ಮೊಡವೆಗಳನ್ನು ಹಾಗೂ ಕಲೆಗಳನ್ನು ನಿವಾರಿಸಬಹುದು. ಇದು ಚರ್ಮದ ಶುಷ್ಕತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಪಪ್ಪಾಯಿ ಎಲೆಯ ರಸವೂ ಡೆಂಗ್ಯೂ ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದು ಹೇಳಬಹುದು.
ಒಂದು ಪಪ್ಪಾಯಿ ಹಣ್ಣಿನಲ್ಲಿರುವ ಪೋಷಕಾಂಶಗಳೆಷ್ಟು?
ಕ್ಯಾಲೋರಿಗಳು 59 ಗ್ರಾಂ
ಕಾರ್ಬೋಹೈಡ್ರೇಟ್ ಗಳು – 15 ಗ್ರಾಂ
ಫೈಬರ್ – 3 ಗ್ರಾಂ
ಪ್ರೋಟೀನ್ – 1 ಗ್ರಾಂ
ವಿಟಮಿನ್ ಸಿ- ಶೇ 33
ಫೋಲೇಟ್ ಶೇ – 14
ಪೊಟ್ಯಾಶಿಯಂ ಶೇ – 11
ಕ್ಯಾಲ್ಸಿಯಂ , ಮೆಗ್ನೇಶಿಯಂ ಮತ್ತು ವಿಟಮಿನ್ ಬಿ 1 , ಬಿ 3 , ಬಿ 5 ಹಾಗೂ ಇ ಮತ್ತು ಕೆ ಪ್ರಮಾಣ ಒಳಗೊಂಡಿರುತ್ತದೆ.
ಪಪ್ಪಾಯಿ ಹಣ್ಣನ್ನು ಹೇಗೆ ಬಳಸಬಹುದು..?
ಬೆಳಗಿನ ಉಪಹಾರಕ್ಕೆ ಇದನ್ನು ಸೇವಿಸಬಹುದು. ಸ್ಮೂಥಿಯನ್ನು ತಯಾರಿಸಿ ಪಪ್ಪಾಯಿ ಹಣ್ಣನ್ನು ಸೇವಿಸಬಹುದು.

ಚರ್ಮದ ಹಾಗೂ ಕೂದಲಿನ ಆರೈಕೆಗೆ ಪಪ್ಪಾಯಿ!ಅಜೀರ್ಣ
ಪ್ರತಿಯೊಬ್ಬ ಮಹಿಳೆ ಹೊಳೆಯುವ ಚರ್ಮ ಪಡೆಯಲು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸೀಗುವ ಕ್ರೀಮ್, ಫೇಸ್ ವಾಶ್ ಹಾಗೂ ನೈಟ್ ಕ್ರೀಮ್ ಗಳ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಈ ಎಲ್ಲಾ ಪ್ರೊಡೆಕ್ಟ್ ಗಳು ಅಡ್ಡಪರಿಣಾಮ ಬೀರಬಹುದು. ನೈಸರ್ಗಿಕವಾಗಿ ಸೀಗುವ ಪಪ್ಪಾಯಿ ಹಣ್ಣನ್ನು ಉಪಯೋಗಿಸಬಹುದು. ಪ್ಪಪಾಯಿ ಹೇರ್ ಮಾಸ್ಕ್ ಮನೆಯಲ್ಲೇ ತಯಾರಿಸಬಹುದು.
ಪ್ರತಿ ದಿನ ಪಪ್ಪಾಯಿಯನ್ನು ಸೇವಿಸುವುದರಿಂದ ನೀವು ಆರೋಗ್ಯದ ಜತೆಗೆ ಚರ್ಮದ ಹೊಳೆಪನ್ನು ಹೆಚ್ಚಿಸಿಕೊಳ್ಳಬಹುದು. ನೈಸರ್ಗಿಕ ಚರ್ಮದ ಮಾಯಿಶ್ಚರೈಸರ್ ಆಗಿ ಪಪ್ಪಾಯಿ ಹಣ್ಣು ಕೆಲಸ ಮಾಡುತ್ತದೆ. ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಹೆಚ್ಚಾಗಿರುವುದರಿಂದ ತ್ವಚೆಯ ಸುಂಕನ್ನು ತಡೆಗಟ್ಟಲು ನೆರವಾಗುತ್ತದೆ. ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.