ಕೆಲವರು ಸಣ್ಣ ತಲೆನೋವು, ಮೈಕೈ ನೋವು, ಹಲ್ಲುನೋವು, ಎದೆ ನೋವು ಇದ್ದರೆ ಸಾಕು ಎಲ್ಲದಕ್ಕೂ ಪೇನ್ ಕಿಲ್ಲರ್ ಮಾತ್ರೆಯನ್ನೇ ಅವಲಂಬಿಸಿರುತ್ತಾರೆ. ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೋವು ತಾಳಲಾರದೇ, ತೀವ್ರ ತೊಂದರೆ ಎದುರಿಸುವರಿದ್ದಾರೆ. ಹೀಗೆ ಮಾಡುವುದರಿಂದ ಕೆಲವೊಂದು ಬಾರಿ ಪೇನ್ ಕಿಲ್ಲರ್ ಗಳಿಂದ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯಕ್ಕೆ ಹಾನಿಯಾಗಬಹುದು. ಹಾಗಾಗಿ ನೋವು ನಿವಾರಕ ಮಾತ್ರೆಗಳ ಹೊರತಾಗಿ, ಆಹಾರ ಹಾಗೂ ಯಾವ ವಸ್ತುಗಳ ಮೂಲಕ ನೋವಿನಿಂದ ಪರಿಹಾರ ಪಡೆಯಬಹುದು ಎಂದು ಇಲ್ಲಿ ತಿಳಿಸಲಾಗಿದೆ.

ಬಾದಾಮಿ
ಬಾದಾಮಿಯಲ್ಲಿ ವಿಟಮಿನ್ ಇ, ಸತು , ಕ್ಯಾಲ್ಸಿಯಂ ಮೆಗ್ನೇಶಿಯಂ , ಮತ್ತು ಒಮೆಗಾ – 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು ಸ್ನಾಯು ನೋವನ್ನು ನಿವಾರಿಸುತ್ತದೆ.
ಅರಶಿಣ
ಅರಶಿಣದಲ್ಲಿ ಇರುವ ಬ್ಯಾಕ್ಟೇರಿಯಾ ವಿರೋಧಿ ಗುಣಗಳು ನೋವಿನಿಂದ ಪರಿಹಾರವನ್ನು ನೀಡುತ್ತವೆ. ಅರಶಿಣ ಹಾಲು ಕುಡಿಯುವುದು ನೋವಿನಲ್ಲಿ ಬಹಳ ಪರಿಣಾಮಕಾರಿ ಎಂದು ಹೇಳಬಹುದು.
ಶುಂಠಿ
ತಲೆ ನೋವಿನ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ಶುಂಠಿ ತುಂಬಾ ಪ್ರಯೋಜನಕಾರಿಯಾದದ್ದು ಎಂದು ಹೇಳಲಾಗಿದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ.

ಲವಂಗ
ಹಲ್ಲುನೋವಿಗೆ ಲವಂಗ ಪ್ರಯೋಜನಕಾರಿ ಅಂತಲೇ ಹೇಳಬಹುದು. ನೀವು ಲವಂಗವನ್ನು ಹಲ್ಲುಗಳ ನಡುವೆ ಇಟ್ಟುಕೊಂಡರೆ, ಅಥವಾ ಲವಂಗ ಎಣ್ಣೆಯನ್ನು ಹಚ್ಚಿದರೆ, ನಿಮಗೆ ನೋವಿನಿಂದ ಪರಿಹಾರ ಸೀಗುತ್ತದೆ. ಉರಿಯೂತವನ್ನು ಕಡಿಮೆ ಮಾಡುವಲ್ಲಿ ಅರಶಿಣ ನೆರವಾಗುತ್ತದೆ. ಪ್ರತಿ ದಿನ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದು.
ಚೆರ್ರಿಗಳು
ಚೆರ್ರಿಗಳಲ್ಲಿ ಆಂಥೋಸಯಾನಿನ್ ಎಂದು ಕರೆಯಲ್ಪಡುವ ಸಂಯುಕ್ತಗಳಿವೆ. ನೋವು ನಿವಾರಿಸಲು ಇದು ಉತ್ಕರ್ಷಣ ನಿರೋಧಗಳನ್ನು ಹೊಂದಿದೆ. ಚೆರ್ರಿ ಜ್ಯೂಸ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ಸಂಧಿವಾತದಂತಹ ನೋವು ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ. ಚೆರ್ರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.

ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಹೆಚ್ಚಾಗಿದ್ದು, ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮತ್ತು ಸಂಧಿವಾತದಿಂದ ಬಳಲುತ್ತಿರುವರ ನೋವನ್ನು ಕಡಿಮೆ ಮಾಡುತ್ತದೆ.
ತರಕಾರಿ
ಕೀಲು ನೋವು ಸಮಸ್ಯೆ ಇದ್ದರೆ, ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಪಾಲಕ ಸೊಪ್ಪು, ಈರುಳ್ಳಿ, ಶುಂಠಿ, ಕೋಸುಗಡ್ಡೆ ಮುಂತಾದ ಹಸಿರು ತರಾಕಾರಿಗಳನ್ನು ಸೇವಿಸಿ. ಕಾರ್ಬೋಡೈಡ್ರೇಟ್ ಆಹಾರಗಳಾದ ಪಾಸ್ಟಾ, ಬ್ರೆಡ್, ಫ್ರೈ ಫುಡ್ ನಿಂದ ದೂರವಿರಿ.
ಆಲಿವ್ ಎಣ್ಣೆಯಲ್ಲಿ ಕಡಿಮೆ ಕೊಬ್ಬು ಹಾಗೂ ಉತ್ಕರ್ಷಣ ನಿರೋಧಕಗಳಿವೆ. ಇದು ಮೂಳೆಗಳ ಮತ್ತು ಹೃದಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ ಉರಿಯೂತವನ್ನು ಕಡಿಮೆ ಮಾಡುವುದಲ್ಲದೇ, ಬೊಜ್ಜು ನಿವಾರಿಸುತ್ತದೆ.
ಕಿತ್ತಳೆ ರಸ ವಿಟಮಿನ್ ಸಿ ಹೊಂದಿರುವುದರಿಂದ ಇದರಿಂದ ಮೂಳೆಗಳು ದುರ್ಬಲಗೊಳ್ಳುವುದಿಲ್ಲ. ಹಾಗಾಗಿ ಕೀಲು ನೋವು ಸಮಸ್ಯೆ ಎದುರಾಗಬಹುದು. ಆದ್ದರಿಂದ ಮೂಳೆ ಮತ್ತು ಚರ್ಮ ಎರಡೂ ಉತ್ತಮವಾಗಿರಲು ಕಿತ್ತಳೆ ರಸ ವನ್ನು ಪ್ರತಿ ದಿನ ಕುಡಿಯಿರಿ.
ಟೀ ಬ್ಯಾಗ್ ಸಹ ನೋವಿನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಟೀ ಬ್ಯಾಗ್ ನ್ನು ಬಿಸಿ ನೀರಿನಲ್ಲಿ ಇಟ್ಟು, 5 ನಿಮಿಷ ಹಾಗೇ ಬಿಡಿ. ನಂತರ ಸ್ವಲ್ಪ ತಣ್ಣಗಾದ ಬಳಿಕ ನೋವು ಇರುವ ಜಾಗಕ್ಕೆ ಹಚ್ಚಿ. ಗಿಡ ಮೂಲಕೆಗಳು ನೋವು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶುಂಠಿ, ರೋಸ್ಮರಿ, ಬೆಳ್ಳುಳ್ಳಿ, ಈರುಳ್ಳಿ, ಸೇರಿದಂತೆ ಗಿಡಮೂಲಿಕೆಗಳು ಹಾಗೂ ಮಸಾಲೆ ಗಳು ವಿಶೇಷವಾಗಿ ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬೆನ್ನು ನೋವು ನಿವಾರಿಸಲು, ಗಿಡಮೂಲಿಕೆ ಮಸಾಲೆ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.