ಕಮಲ ಅಥವಾ ಪದ್ಮಾ, ಇವೆರೆಡು ಧರ್ಮ ಹಾಗೂ ಸಮಯ ಎರಡನ್ನೂ ಮೀರಿದೆ ಎಂದು ತಿಳಿದಿರುವ ಶಕ್ತಿಶಾಲಿ ಸಂಕೇತಗಳಲ್ಲಿ ಒಂದು. ಶತಮಾನಗಳಿಂದ ಕಮಲವು ಪುನರ್ಜನ್ಮ, ಸೌಂದರ್ಯ, ಶುದ್ಧತೆ, ಆಧ್ಯಾತ್ನಿಕತೆ , ಜ್ಞಾನೋದಯ, ವಸ್ತು ಸಂಪತ್ತು ಇವೆಲ್ಲದ್ದಕ್ಕೂ ಸಮನಾರ್ಥಕವಾಗಿದೆ. ಪುರಾಣದ ಪ್ರಕಾರ, ಲಕ್ಷ್ಮೀ ದೇವಿ ಕಮಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಬೌದ್ಧ ಧರ್ಮದ ಬಗ್ಗೆ ಹೇಳುವುದಾದರೆ, ಬುದ್ಧ ಎಲ್ಲಿ ಕಾಲಿಟ್ಟರೂ ಅಲ್ಲಿ ಕಮಲ ಅರಳಿತು ಎಂದು ಹೇಳಲಾಗುತ್ತದೆ.

ಪದ್ಮಾಸನ ಮಾಡುವ ಮೊದಲು ಏನು ತಿಳಿದುಕೊಳ್ಳಬೇಕು..!
ಪದ್ಮಾಸನವು ಧ್ಯಾನಸ್ಥ ಭಂಗಿಯಾಗಿದೆ. ಬೆಳಿಗ್ಗೆ ಈ ಭಂಗಿಯನ್ನು ಅಭ್ಯಾಸ ಮಾಡಿದರೆ ಉತ್ತಮ. ನೀವು ಸಂಜೆ ಧ್ಯಾನ ಮಾಡಲು ಸಾಧ್ಯವಿಲ್ಲ ಎಂಬ ಯಾವ ನಿಯಮವು ಇಲ್ಲ. ಈ ಆಸನವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು ಎಂದು ಕಡ್ಡಾವವಲ್ಲ. ಆದರೆ ಯೋಗಾ, ಆಸನಗಳನ್ನು ಮಾಡುವುದಕ್ಕೂ ಮುನ್ನ 4 ರಿಂದ ಕನಿಷ್ಠ 6 ಗಂಟೆಗಳ ಮುಂಚಿತವಾಗಿ ಊಟ ಮಾಡಿರಬೇಕು.
ಪದ್ಮಾಸನ ಮಾಡುವುದು ಹೇಗೆ?
ನೆಲದ ಮೇಲೆ ಎರಡೂ ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ, ಬಲಮೊಣಕಾಲನ್ನು ಬಗ್ಗಿಸಿ ಎಡ ತೊಡೆಯ ಮೇಲೆ ಇಡಿ. ನಂತರ ಕಾಲಿನ ಹಿಮ್ಮಡಿಯ ಕಿಬ್ಬೊಟ್ಟೆಗೆ ಹತ್ತಿರವಾಗಿರುವಂತೆ ಗಮನವಿರಲಿ. ಎಡ ಮೊಣಕಾಲಿನ ಜತೆ ಮೇಲೆ ಹೇಳಿದಂತೆ ಪುನರಾವರ್ತನೆ ಮಾಡಿ.ಎರಡು ಕಾಲುಗಳನ್ನು ಕತ್ತರಿ ಆಕಾರದಲ್ಲಿ ಇರಿಸಿ, ಪಾದಗಳನ್ನು ಮೇಲ್ಮುಖವಾಗಿ ಎದುರು ಬದುರು ತೊಡೆಗಳ ಮೇಲಿಟ್ಟು ಕೈಗಳನ್ನು ಮುದ್ರೆಯೊಂದಿಗೆಮೊಣಕಾಲಿನ ಮೇಲಿಡಿ. ತಲೆ ಹಾಗೂ ಬೆನ್ನೆಲುಬು ನೇರವಾಗಿರಲಿ. ದೀರ್ಘವಾದ ಆಳವಾದ ಉಸಿರಾಟವಿರಲಿ. ನಿಮ್ಮ ತಲೆ ನೇರವಾಗಿರಬೇಕು. ಮತ್ತು ಬೆನ್ನುಮೂಳೆಯ ಎಲ್ಲಾ ಸಮಯದಲ್ಲೂ ನೇರವಾಗಿರಬೇಕು ಎಂಬುದು ನೆನಪಿನಲ್ಲಿರಲಿ. ಉದ್ದ ಮತ್ತು ಆಳವಾಗಿ ಉಸಿರಾಡಿ.

ಗಮನಿಸಿ.. ಮುದ್ರೆಗಳು ಶಕ್ತಿಯ ಹರಿವನ್ನು ಸಕ್ರೀಯಗೊಳಿಸುತ್ತದೆ. ಮತ್ತು ಪದ್ಮಾಸನ ದೊಂದಿಗೆ ಅಭ್ಯಾಸ ಮಾಡಿದಾಗ, ಅವುಗಳ ಪರಿಣಾಮ ಗುಣಿಸಲ್ಪಡುತ್ತವೆ. ಪ್ರತಿ ಮುದ್ರಾ ವಿಭಿನ್ನವಾಗಿರುತ್ತದೆ.
ಪದ್ಮಾಸನದಲ್ಲಿ ಮುದ್ರೆಗಳು
ಮುದ್ರೆಗಳು ದೇಹದಲ್ಲಿನ ಶಕ್ತಿ ಸಂಚಾರವನ್ನು ಚುರುಕುಗೊಳಿಸುತ್ತವೆ. ಮುದ್ರೆಗಳನ್ನು ಪದ್ಮಾಸನದಲ್ಲಿ ಮಾಡುವುದರಿಂದ ಅತ್ತು್ತಮ ಪರಿಣಾಮ ಸಿಗಬಹುದುದಾಗಿದೆ. ಪದ್ಮಾಸನದಲ್ಲಿ ಚಿನ್ಮಯ ಮುದ್ರೆ, ಅಥವಾ ಬ್ರಹ್ಮ ಮುದ್ರೆ ಗಳೊಂದಿಗೆ ಧ್ಯಾನವನ್ನು ಆಳವಾಗಿಸಬಹುದು. ಈ ಮುದ್ರೆಗಳನ್ನು ದೀರ್ಘ ಉಸಿರಾಟದೊಂದಿಗೆ ಅಭ್ಯಾಸ ಮಾಡುತ್ತಾ ದೇಹದಲ್ಲಿ ಉಂಟಾಗುವ ಶಕ್ತಿ ಸಂಚಲವನ್ನು ಗಮನಿಸಿ.
ಮುನ್ನೇಚ್ಚರಿಕೆಗಳು
ಈ ಆಸನವನ್ನು ಅಭ್ಯಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮುನ್ನೇಚ್ಚರಿಕೆ ಕ್ರಮಗಳು. ನಿಮಗೆ ಮೊಣಕಾಲು ಅಥವಾ ಪಾದ ಗಾಯವಾಗಿದ್ದರೆ ಈ ಆಸನ ಮಾಡುವುದನ್ನು ತಪ್ಪಿಸಿ. ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಈ ಆಸನವನ್ನು ಅಭ್ಯಾಸ ಮಾಡಿ.

ಪದ್ಮಾಸನ ಯೋಗಾ ಪ್ರಯೋಜನಗಳು
1.ಈ ಆಸನವು ಮನಸ್ಸನ್ನು ಸಡಿಲಗೊಳಿಸುತ್ತದೆ. ಮತ್ತು ಮೆದಳನ್ನು ಶಾಂತಗೊಳಿಸುತ್ತದೆ.
2. ಇನ್ನು ಬೆನ್ನು , ಸೊಂಟ, ಹೊಟ್ಟೆ, ಮತ್ತು ಗಾಳಿ ಗುಳ್ಳೆಯನ್ನು ಸಕ್ರೀಯಗೊಳಿಸುತ್ತದೆ.
3. ಮೊಣಕಾಲುಗಳು ಮತ್ತು ಕಣಕಾಲುಗಳು ಉತ್ತಮ ವಿಸ್ತರಣೆಯನ್ನು ಪಡೆಯುತ್ತವೆ.
4.ಈ ಆಸನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
5.ಈ ಆಸನವು ಸೊಂಟವನ್ನು ಸಡಿಲಗೊಳಿಸುತ್ತದೆ.
6. ಈ ಆಸನವನ್ನು ನಿಯಮಿತ ಅಭ್ಯಾಸದಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಏಕಾಗ್ರತೆ ಹೆಚ್ಚುತ್ತದೆ.
7. ಜೀರ್ಣಶಕ್ತಿ ಹೆಚ್ಚುತ್ತದೆ
8.ಗರ್ಭಿಣಿ ಮಹಿಳೆಯರಿಗೆ ಪ್ರಸವದ ಸಮಯದಲ್ಲಿ ಸಹಕಾರಿ
9. ಮನಸ್ಸು ಪ್ರಶಾಂತವಾಗುತ್ತದೆ.
ಪದ್ಮಾಸನದ ಹಿಂದಿನ ವಿಜ್ಞಾನ!
ನಿಮಗೆ ಆತಂಕ ಇದಾಗಲೆಲ್ಲಾ ಹಿಂಜರಿಕೆ ಇಲ್ಲದೇ, ಪದ್ಮಾಸನವನ್ನು ಮಾಡಿ. ಅದು ನಿಮ್ಮನ್ನು ಶಕ್ತಿಗತಗೊಳಿಸುತ್ತದೆ. ಈ ಆಸನವು ಹಲವಾರು ದೈಹಿಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳನ್ನು ಕಾಣಬಹುದು. ಇದು ಅತ್ಯುತ್ತಮ ಧ್ಯಾನಸ್ಥ ಭಂಗಿಗಳಲ್ಲಿ ಒಂದಾಗಿದೆ. ಈ ಆಸನವು ನಿಮ್ಮ ಪಾದಗಳ ಜೋಡಣೆಯು ಸುಂದರವಾದ ಕಮಲದ ದಳಗಳನ್ನು ಹೋಲುತ್ತದೆ. ಏಕೆಂದರೆ ಕಮಲವು ಮಣ್ಣಿನಲ್ಲಿ ಅರಳಿದಂತೆಯೇ, ನಿಮ್ಮ ಪ್ರಾಪಂಚಿಕ ಜೀವನದ ಕೊಳಕು ಮತ್ತು ಮಣ್ಣನ್ನು ಪ್ರತಿ ನಿಧಿಸುತ್ತದೆ. ಈ ಆಸನವು ನಿಮ್ಮನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ.