ಕಿತ್ತಳೆ ಹಣ್ಣು ಎಷ್ಟು ರುಚಿಕರವೋ, ಹಾಗೇ ಅದು ಆರೋಗ್ಯದ ದೃಷ್ಟಿಯಿಂದ ಅಷ್ಚೇ ಉಪಯುಕ್ತವಾದದ್ದು. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಇದು ರಕ್ತ ಶುದ್ಧಿ ಸೇರಿದಂತೆ ಬಾಯಿ ವಾಕರಿಕೆಯನ್ನು ದೂರ ಮಾಡಿ, ಲವಲವಕೆಯನ್ನು ಹೆಚ್ಚಿಸುತ್ತದೆ.

ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು
ಕಿತ್ತಳೆ ಹಣ್ಣಿನ ಸೇವನೆಯಿಂದ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ಕಾಣಬಹುದು. ಇದು ಪೋಷಕಾಂಶಗಳಿದ್ದ ಸಮೃದ್ಧವಾಗಿದೆ. ಕಿತ್ತಳೆ ಹಣ್ಣು ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. ಮೂಳೆ ನಷ್ಟವನ್ನು ತಡೆಯುತ್ತದೆ. ಹಾಗೂ ಹೃದ್ರೋಗ ಮತ್ತು ಪಾರ್ಶ್ವವಾಯು ನಿಂದ ರಕ್ಷಿಸುತ್ತದೆ.
ಚಿಕ್ಕ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತಿದ್ದರೆ ಅಥವಾ ಚರ್ಮದ ಯಾವುದೇ ಸಮಸ್ಯೆಗಳಿದ್ದರೆ ಕಿತ್ತಳೆ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮಗೆ ವಯಸ್ಸಾಗಿದ್ದರೆ, ವಯಸ್ಸಾದವರಂತೆ ನೀವು ಕಾಣುತ್ತಿದ್ದರೆ, ಚರ್ಮದ ಹೊಳಪಿಗಾಗಿ ನೀವು ಈ ಹಣ್ಣನ್ನು ಸೇವಿಸಬಹುದು.
ಕಿತ್ತಳೆ ಹಣ್ಣು ನಾರಿನ ಉತ್ತಮ ಮೂಲವಾಗಿದ್ದು, ಅದು ನಿಮ್ಮ ಹೊಟ್ಟೆ ಹಾಗೂ ಕರುಳಿನ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಫೈಬರ್ ಸಮೃದ್ಧವಾಗಿರುವ ಕಿತ್ತಳೆಯ ಹೊಟ್ಟೆಯ ಹುಣ್ಣು ಮತ್ತು ಮಲಬದ್ಧತೆಯಂತಹ ಕಾಯಿಲೆಗಳಿಂದ ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

ಕಣ್ಣಿನ ಆರೋಗ್ಯಕ್ಕೂ ಕಿತ್ತಳೆ ಹಣ್ಣಿನ ಜ್ಯೂಸ್ ಉತ್ತಮ ಎಂದು ಹೇಳಲಾಗುತ್ತದೆ. ಹಾಗಾಗಿ ಕಿತ್ತಳೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದನ್ನು ಅಗತ್ಯವಿರುತ್ತದೆ. ಕಾಲಜನ್ ನಿಮ್ಮ ಕೂದಲಿಗೆ ಶಕ್ತಿ ಮತ್ತು ರಚನೆ ಒದಗಿಸುತ್ತದೆ. ವಿಟಮಿನ್ ಭರಿತ ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆದೆ. ಕಿತ್ತಳೆ ಹಣ್ಣಿನಲ್ಲಿ ಥಯಾಮಿನ್, ರಿಬೋಪ್ಲವಿನ್, ನಿಯಾಸಿನ್, ವಿಟಮಿನ್ ಬಿ- ೬ , ಫೊಲೇಟ್ . ಆಮ್ಲ, ರಂಜಕ, ಮೆಗ್ನೇಶಿಯಂ , ಮ್ಯಾಗನೀಸ್ , ಸೆಲೆನಿಯಮ್ , ಮತ್ತು ತಾಮ್ರ ಇರುತ್ತದೆ. ಅದರಲ್ಲೂ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಕಿತ್ತಳೆ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.
ನಾವು ವಯಸ್ಸಾದಂತೆ ನಮ್ಮ ಕಣ್ಣುಗಳು ಸಹ ಹಾನಿಯಾಗುತ್ತವೆ. ಆದರೆ ಕಿತ್ತಳೆ ಹಣ್ಣಿನಲ್ಲಿ ರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ. ಆದ್ದರಿಂದ ದೃಷ್ಟಿ ಚೆನ್ನಾಗಿರಬೇಕೆಂದು ಬಯಸುವವರು ಪ್ರತಿ ದಿನ ಕಿತ್ತಳೆ ತಿನ್ನಿರಿ.

ಮೆದುಳಿನ ಬೆಳವಣಿಗೆಗೆ ಕಿತ್ತಳೆ ಹಣ್ಣಿನಲ್ಲಿ ಫೋಲೇಟ್ ಮತ್ತು ಫೋಲಿಕ್ ಆಮ್ಲವು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಾಸ್ತವವಾಗಿ, ಇದರಲ್ಲಿರುವ ಪೋಷಕಾಂಶಗಳು ಗರ್ಭಿಣಿ ಮಹಿಳೆಯರಿಗೆ ಆರೋಗ್ಯಕರ. ಇದು ಮಗುವಿನ ನರ ವೈಜ್ಞಾನಿಕ ಕಾಯಿಲೆ ಬರದಂತೆ ತಡೆಗಟ್ಟುತ್ತದೆ. ಕಿತ್ತಳೆ ಹಣ್ಣು ಸೇವಿಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
ತ್ವಚೆಯ ಆರೋಗ್ಯಕ್ಕೆ ಕಿತ್ತಳೆ ರಸ, ಹಾಗೂ ಸಿಪ್ಪೆ..!
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಾಡದೇ ಅದರಿಂದ ಫೇಸ್ ಮಾಸ್ಕ್ ತಯಾರಿಸಿದರೆ ತ್ವಚೆಯ ಹೊಳಪನ್ನು ಹೆಚ್ಚಿಸಬಹುದು.
ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಬೇಕು. ಈ ಫೇಸ್ ಪ್ಯಾಕ್ ಮುಖದ ತ್ವಚೆಯನ್ನು ಬಿಗಿಗೊಳಿಸುತ್ತದೆ. ಮತ್ತು ಇದನ್ನು ಪ್ರತಿದಿನ ಸ್ನಾನ ಮಾಡುವ ಮೊದಲು ಮಾಡಿಕೊಂಡರೆ ಮುಖವು ಇಡೀ ದಿನ ತಾಜಾತನದಿಂದ ಕೂಡಿರುತ್ತದೆ.
ಮಾನವನ ಚರ್ಮವು ಅತ್ಯಂತ ಸೂಕ್ಷ್ಮವಾದದ್ದಾಗಿದೆ. ಅದನ್ನು ಕಾಪಾಡಿಕೊಳ್ಳುವುದೂ ಸವಾಲೇ ಸರಿ. ಆದ್ದರಿಂದ ನಾವು ನಮ್ಮ ಚರ್ಮಕ್ಕೆ ಏನನ್ನಾದರೂ ಪ್ರಯೋಗಗಳನನ್ನು ಮಾಡುವ ಮಾದಲು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ. ಕೂದಲಿನ ಸಮಸ್ಯೆ ಇರಬಹುದು ಅಥವಾ ಚರ್ಮದ ಸಮಸ್ಯೆಯೇ ಇರಬಹುದು. ಅದನ್ನು ಚರ್ಮರೋಗತಜ್ಞರ ಸಲಹೆಯನ್ನು ತೆಗೆದುಕೊಂಡು ಮುಂದುವರಿಯುವುದು ಉತ್ತಮ.
ಹಾಲಿನೊಂದಿಗೆ ಕಿತ್ತಳೆ ರಸವನ್ನು ಮಿಶ್ರಣ ಮಾಡಿ ಹತ್ತಿಯನ್ನು ತೆಗೆದುಕೊಂಡು ಅದರಲ್ಲಿ ಅದ್ದಿ ಮುಖಕ್ಕೆ ಉಜ್ಜಬೇಕು. ಈ ರೀತಿ ಮಾಡುವುದರಿಂದ ಧೂಳಿನಿಂದ ಮುಖ ಹಾಳಾಗುವುದನ್ನು ಅಥವಾ ಮುಖ ಕಲುಷಿತಗೊಳ್ಳುವುದನ್ನು ತಡೆಯಬಹುದು.

ಕಿತ್ತಳೆ ಹಣ್ಣಿನ ರಸ, ನಿಂಬೆ ರಸ ಮತ್ತು ಮೊಸರನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಅಂದ ಇನ್ನಷ್ಟು ಹೆಚ್ಚಾಗುತ್ತದೆ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಅರ್ಧ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯಬೇಕು, ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಮುಖದಲ್ಲಿ ಕಪ್ಪುಕಲೆ, ಮೊಡವೆ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ.
ಜೇನಿನೊಂದಿಗೆ ಕಿತ್ತಳೆ ರಸ ಮತ್ತು ನೀರನ್ನು ಮಿಶ್ರಣ ಮಾಡಿಕೊಳ್ಳಬೇಕು. ಶ್ಯಾಂಪೂ ಹಾಕಿದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಟ್ಟು ನೀರಿನಿಂದ ತೊಳೆದುಕೊಂಡರೆ ಕೂದಲಿಗೆ ಇದು ಹೇರ್ ಕಂಡೀಷನರ್ ತರಹ ಕೆಲಸ ಮಾಡುತ್ತದೆ.
ಕಿತ್ತಳೆ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದರೊಂದಿಗೆ ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿ ಅದನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ಮಾಡುವುದರಿಂದ ಮುಖವನ್ನು ಮೊಡವೆ, ಕಲೆಗಳಿಂದ ಮುಕ್ತಿಗೊಳಿಸಬಹುದು.
ಕಿತ್ತಳೆ ಸಿಪ್ಪೆ ಮತ್ತು ನಿಂಬೆ ರಸವನ್ನು ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ ತಲೆಹೊಟ್ಟು ನಿವಾರಣೆಯಾಗುತ್ತದೆ ಆದರೆ ಇದನ್ನು ಶ್ಯಾಂಪೂ ಹಾಕುವ 25 ನಿಮಿಷಕ್ಕಿಂತ ಮೊದಲು ಮಾಡಬೇಕು.
ಕಿತ್ತಳೆ ಸಿಪ್ಪೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಕೂದಲು ಮತ್ತು ನೆತ್ತಿಗೆ ಹಚ್ಚಿಕೊಲ್ಳುವುದರಿಂದ ಕೂದಲು ಸ್ವಚ್ಛವಾಗುತ್ತದೆ. ಇದನ್ನು 30 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.