ಪ್ರಕೃತಿ ಚಿಕಿತ್ಸೆ ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ನೈತಿಕ ಆಧ್ಯಾತ್ಮಿಕ ಮಟ್ಟದ ಸೃಜನಶೀಲತೆಯ ಸಾಮರಸ್ಯವನ್ನು ನಿರ್ಮಿಸುತ್ತದೆ. ರೋಗ ತಡೆಗಟ್ಟುವಿಕೆ ಹಾಗೂ ರೋಗ ನಿರೋಧಖ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.. ರೋಗಗಳನ್ನು ಗುಣಪಡಿಸಲು ವಿಷವನ್ನು ತೆಗೆದು ಹಾಕಲು ನೆರವಾಗುತ್ತದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ
ಇಂದಿನ ಕಾಲದಲ್ಲಿ ಕೈಗಾರೀಕರಣ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಮಾನವ ಜೀವನದ ಮೇಲೆ ಪ್ರಭಾವ ಬೀರಿದೆ.ಉತ್ತಮ ಆರೋಗ್ಯ ಪಡೆಯುವುದು ಒಂದೇ ದಿನದ ಕೆಲಸವಲ್ಲ, ಇದಕ್ಕಾಗಿ ನಿಮ್ಮ ಪ್ರಯತ್ನ. ಸ್ವಯಂ ನಿಯಂತ್ರಣ ಮತ್ತು ಇಚ್ಛಾಶಕ್ತಿ ಅಗತ್ಯವಿರುತ್ತದೆ.
ಆರೋಗ್ಯಕರ ದೇಹ ಹಾಗೂ ಮನಸ್ಸು ಎರಡು ಮುಖ್ಯ. ಇದು ನಮ್ಮ ಪ್ರೀತಿ ಪಾತ್ರರೊಡನೆ ಜನ್ಮಜಾತ ಸಂಭಾಷಣೆ ರಚಿಸಲು ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯವು ಮನುಷ್ಯನಿಗೆ ಸ್ವಭಾವತಃ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಯಾಂತ್ರಿಕ ಜೀವನಶೈಲಿ ಯಲ್ಲೇ ತುಂಬಾ ಬ್ಯುಸಿಯಾಗಿರುತ್ತಾನೆ. ಪ್ರಕೃತಿಯಿಂದ ಸಂಪೂರ್ಣವಾಗಿ ದೂರವಿರುತ್ತಾನೆ. ಉತ್ತಮ ಆರೋಗ್ಯ ನಿಮ್ಮದಾಗಲು ಪ್ರಕೃತಿ ಚಿಕಿತ್ಸೆಯು ಉತ್ತಮ ಆರೋಗ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಸಂಧಿವಾತ, ಪಾರ್ಶ್ವವಾಯು, ಮಧುಮೇಹ, ಅನೇಕ ರೋಗಗಳನ್ನು ನಿಯಂತ್ರಿಸುತ್ತದೆ.
ಪ್ರಕೃತಿ ಚಿಕಿತ್ಸೆಯು ನೈಸರ್ಗಿಕವಾಗಿ ಗುಣಪಡಿಸುವ ಚಿಕಿತ್ಸೆಯಾಗಿದ್ದು, ಇದರಲ್ಲಿ ಹಲವು ಔಷಧೀಯ ಗುಣಗಳನ್ನು ಕಾಣಬಹುದಾಗಿದೆ. ಪ್ರಕೃತಿ ಚಿಕಿತ್ಸೆಯು ಅನೇಕ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.ಈ ಚಿಕಿತ್ಸೆಯ ಮುಖ್ಯ ಉದ್ದೇಶವೆಂದರೆ ಜನರು ತಮ್ಮ ದಿನಚರಿಯನ್ನು ಬದಲಾಯಿಸುವ ಮೂಲಕ ಆರೋಗ್ಯವಾಗಿರುವುದನ್ನು ಕಲಿಸುವುದು, ಪ್ರಕೃತಿ ಚಿಕಿತ್ಸೆ ದೇಹವನ್ನು ಸಧೃಡಗೊಳಿಸುತ್ತದೆಯಲ್ಲದೇ, ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ.

ಪ್ರಕೃತಿ ಚಿಕಿತ್ಸೆ ತುಂಬಾ ಪ್ರಾಚೀನ ಚಿಕಿತ್ಸಾ ವಿಧಾನವಾಗಿದೆ. ಇದು ದೇಹಕ್ಕೆ ಯಾವುದೇ ಹಾನಿ ಮಾಡದೇ, ರೋಗಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತದೆ. ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡುತ್ತದೆ. ಸಕಾರಾತ್ಮಕ ಚಿಂತೆನಯನ್ನು ಪ್ರೋತ್ಸಾಹಿಸುವದಲ್ಲದೇ, ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಯಾವ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಂಧಿವಾತ, ಸಿಸ್ಟಿಕಾ, ಮೈಗ್ರೇನ್ , ಬೊಜ್ಜು , ಮಧುಮೇಹ , ಅಧಿಕ ರಕ್ತದೋತ್ತಡ , ಉಸಿರಾಟದ ಕಾಯಿಲೆ , ಅಸ್ತಮಾ, ಮೂಲವ್ಯಾಧಿ, ಗ್ಯಾಸ್ ಸಮಸ್ಯೆ, ಆ್ಯಸಿಡಿಟಿ , ಪೆಪ್ಟಿಕ್ ಹುಣ್ಣು , ಪಿತ್ತಜನಕಾಂಗದ ಸಮಸ್ಯೆ , ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾಗಿದೆ.
ಪ್ರಕೃತಿ ಚಿಕಿತ್ಸೆಯು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ಯಾವುದೇ ರೋಗವನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸುವುದನ್ನು ತಡೆಯುವುದನ್ನು ಎದುರಿಸಲು ಪರಿಣಾಮಕಾರಿ ಮಾರ್ಗವಾಗಿದೆ. ನೈಸರ್ಗಿಕ ಔಷಧಿಗಳು ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಪ್ರಕೃತಿ ಚಿಕಿತ್ಸೆಯು ಸ್ವಯಂ ಅರಿವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ರೋಗಿಗಳು ತಮ್ಮ ದೇಹವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಪ್ರಕೃತಿ ಚಿಕಿತ್ಸೆಯು ಯೋಚಿಸುವ ವಿಧಾನವನ್ನು ಬದಲಾಯಿಸುತ್ತದೆ. ಭಾವನಾತ್ಮಕ ಹಾಗೂ ದೈಹಿಕ. ಆಧ್ಯಾತ್ಮಿಕ ಯೋಗಕ್ಷೇಮದ ಸಂಯೋಜನೆಯನ್ನು ಒತ್ತಿ ಹೇಳುತ್ತದೆ. ಆಧ್ಯಾತ್ಮಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳು ಮಹತ್ವವನ್ನು ಗುರುತಿಸಲು ಆಲೋಚನಾ ವಿಧಾನವನ್ನು ಬದಲಾಯಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.