ಸಾಮಾನ್ಯವಾಗಿ ಮಕ್ಕಳಿಗೆ ಆಟವಾಡುವುದು , ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಂದ್ರೆ ಅಚ್ಚುಮೆಚ್ಚು. ಅಂತಹ ಸಂದರ್ಭದಲ್ಲಿ ಅನೇಕ ರೀತಿಯ ಬ್ಯಾಕ್ಟೇರಿಯಾಗಳು, ವೈರಸ್ ಗಳು ಮಕ್ಕಳಿಗೆ ಒಡ್ಡಿಕೊಳ್ಳಬಹುದು. ಇದರಿಂದ ಹೆಚ್ಚಿನ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ನಿಮ್ಮ ಮಗುವಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದ್ದರೆ, ವೈರಲ್ ನಂತಹ ಅನೇಕ ಸೋಂಕುಗಳ ವಿರುದ್ಧ ಹೋರಾಡಬಹುದು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಮತೋಲಿತ ಆಹಾರವನ್ನು ನೀಡುವುದು ಉತ್ತಮ ಪರಿಹಾರವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಅತ್ಯಗತ್ಯವಾಗಿದೆ. ವಿಶೇಷವಾಗಿ ಮಕ್ಕಳು ಬೇಗ ಸೋಂಕಿಗೆ ತುತ್ತಾಗುತ್ತಾರೆ. ಇದರಿಂದ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. ಮಕ್ಕಳ ರೋಗ ನಿರೋಧಕ ಶಕ್ತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಒಳ್ಳೆಯದು.

ಮಕ್ಕಳು ನಿದ್ರೆ ಮಾಡುವಂತೆ ಪ್ರಯತ್ನಿಸಿ
ನಿಮ್ಮ ಮನೆಯಲ್ಲಿ ನವಜಾತ ಶಿಶು, ಇದ್ದೆ ಅದನ್ನು ಎಚ್ಚರವಾಗಿರಿಸಬೇಡಿ. ಸಂಪೂರ್ಣವಾಗಿ ನಿದ್ರೆ ಮಾಡುವಂತೆ ಪ್ರಯತ್ನಿಸಿ. ಏಕೆಂದರೆ ನವಜಾತ ಶಿಶು ಗಳಿಗೆ 18 ಗಂಟೆಗಳ ನಿದ್ರೆ ಅಗತ್ಯವಿರುತ್ತದೆ. ಅದೇ ಸಮಯದಲ್ಲಿ ಚಿಕ್ಕ ಮಕ್ಕಳಿಗೆ 12 ರಿಂದ 13 ಗಂಟೆಗಳ ಕಾಲ ನಿದ್ರೆ ಅಗತ್ಯ. ಮಕ್ಕಳ ನಿದ್ರೆ ಪೂರ್ಣಗೊಳ್ಳದಿದ್ದರೆ, ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ಮೀತಿ ಮೀರಿದ ಔಷಧಿ ಸೇವನೆಯಿಂದ ಮಕ್ಕಳನ್ನು ರಕ್ಷಿಸಿ
ನಿಮ್ಮ ಮಕ್ಕಳಿಗೆ ಕೆಮ್ಮ ಹಾಗೂ ಶೀತ ಬಂದಾಗ, ನೀವು ಔಷಧಿ ನೀಡುವುದು ಸಹಜ. ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ವೈದ್ಯಕೀಯ ಸಲಹೆಯಿಲ್ಲದೇ, ಯಾವುದೇ ಮೆಡಿಸಿನ್ ಅನ್ನು ನೀಡಬೇಡಿ. ಹಾಗೇ ಮಾಡುವುದರಿಂದ ಹಾನಿಕರಕ. ಬದಲಾಗಿ ಮಕ್ಕಳಿಗೆ ಸಾಮಾನ್ಯ ಕೆಮ್ಮು, ಶೀತ ಸಮಸ್ಯೆ ಇದ್ದರೆ ಮನೆ ಮದ್ದನ್ನು ಉಪಯೋಗಿಸಬಹುದು.

ಸೋಕನ್ನು ಅವೈಡ್ ಮಾಡಿ
ಮಕ್ಕಳ ಸಣ್ಣ ಸಣ್ಣ ವಿಷಯಗಳ ಬಗ್ಗೆ ಗಮನ ಹರಿಸುವುದು ಸೂಕ್ತ. ಏಕೆಂದರೆ ಚಿಕ್ಕಂದಿನಿಂದಲೂ ನಿಮ್ಮ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ. ಮಕ್ಕಳ ವಸ್ತುಗಳನ್ನು ಕ್ಲಿನ್ ಮಾಡಿ, ತಿನ್ನುವ ಮೊದಲು ಕೈ ತೊಳೆಯಬೇಕು, ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು ಎಂದು ಬಾಲ್ಯದಿಂದಲೇ ಹೇಳುತ್ತಾ ಬನ್ನಿ.
ಧೂಮಪಾನ ಹೊಗೆಯಿಂದ ದೂರವಿರಿಸಿ
ಧೂಮಪಾನಿಗಳಿಗಿಂತ ಅವರ ಸಂಪರ್ಕದಲ್ಲಿರುವವರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ. ಹೊಗೆ ಅನೇಕ ವಿಷಕಾರಿ ವಸ್ತುಗಳು ಇರುತ್ತವೆ. ಇವು ಮಕ್ಕಳ ಹಾಗೂ ವಯಸ್ಕರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಇದು ದೇಹದ ಹಲವು ರೀತಿಯ ಜೀವ ಕೋಶಗಳನ್ನು ಕೊಲ್ಲುತ್ತದೆ. ಮಕ್ಕಳ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಮಕ್ಕಳಿಗೆ ಸಮತೋಲಿತ ಆಹಾರ ನೀಡಿ
ಮಕ್ಕಳು ಆಹಾರವನ್ನು ಚೆನ್ನಾಗಿ ಸೇವಿಸುತ್ತಿದ್ದಾರೆಯೇ ಎಂಬುದನ್ನು ಪೋಷಕರು ಗಮನ ಹರಿಸಬೇಕಾಗುತ್ತದೆ. ನಿಮ್ಮ ಮಗುವಿಗೆ ಎಲ್ಲಾ ರೀತಿಯ ಪೋಷಕಾಂಶ ದೊರೆಯಬೇಕು ಎಂಬುದನ್ನು ನೆನಪಿನಲ್ಲಿಡಿ. ಮಕ್ಕಳನ್ನು ಹೊರಗೆ ತಿನ್ನಲು ಬೀಡಬೇಡಿ. ಮನೆಯಲ್ಲಿ ಪೌಷ್ಟಿಕ ಆಹಾರವನ್ನು ತಯಾರಿಸಿ, ಮಕ್ಕಳಿಗೆ ನೀಡಬಹುದು. ತರಕಾರಿ, ಹಣ್ಣು , ಬಾದಾಮಿ ಸೇವಿಸಲು ಮಕ್ಕಳಿಗೆ ನೀಡಬಹುದು. ಇದು ನಿಮ್ಮ ಮಕ್ಕಳನ್ನು ಸೋಂಕಿನಿಂದ ದೂರವಿರಿಸುತ್ತದೆ. ಹಾಗೂ ರೋಗಗಳಿಂದ ಸುರಕ್ಷಿತವಾಗಿಡುತ್ತದೆ.

ನಿಮ್ಮ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗಲು ಪ್ರಮುಖ ಕಾರಣವೆಂದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು. ನಮ್ಮ ದೇಹವು ರೋಗ ನಿರೋಧಕ ಶಕ್ತಿ ದುರ್ಬಲಗೊಂಡಾಗ, ರೋಗಗಳ ಅಪಾಯ ಹೆಚ್ಚುತ್ತದೆ. ಕೆಲವು ಮಕ್ಕಳು ಆಗಾಗ್ಗೆ ಅನಾರೋಗ್ಯಕ್ಕೆ ಈಡಾಗುತ್ತಾರೆ. ಹವಾಮಾನ ಬದಲಾದಂತೆ ಶೀತ, ಕೆಮ್ಮು, ಜ್ವರ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ.ರೋಗ ನಿರೋಧಕ ಶಕ್ತಿ ದುರ್ಬಲಗೊಂಡಾಗ , ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಮಕ್ಕಳು ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ . ಅಂತಹ ಸಂದರ್ಭದಲ್ಲಿ ಮಕ್ಕಳು, ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ದಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಮಕ್ಕಳ ನಿರಂತರ ಕಾಯಿಲೆಗೆ ತುತ್ತಾಗುತ್ತಿದ್ದರೆ, ಇಲ್ಲಿ ನಾವು ಅಂತಹ ಕ್ರಮಗಳನ್ನು ಅನುಸರಿಸಬಹುದು.