ರುಚಿ ರುಚಿ ಅಣಬೆ ಅಡುಗೆ..! ಸಸ್ಯಾಹಾರಿಗಳಿಗೆ ಇದೇ ಚಿಕನ್..!

  • by

ಚಳಿಗಾಲಕ್ಕೆ ರುಚಿ ರುಚಿ ಅಣಬೆ ರೆಸಿಪಿಗಳು
ಅಣಬೆ/ಮಶ್ರೂಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಹಳ್ಳಿ ಕಡೆ ಒಂದು
ಗುಡುಗು ಬಂದ್ರೆ ಸಾಕು, ಮನೆ ಮಂದಿ ತೋಟ-ಗುಡ್ಡಗಳಲ್ಲಿ ಅಣಬೆ ಹುಡುಕಲು ಹೊರಡುತ್ತಾರೆ. ಆದ್ರೆ
ಸಿಟಿಯಲ್ಲಿ ಯಾವಾಗ ಬೇಕಾದ್ರೂ ಮಶ್ರೂಮ್ ಖರೀದಿಸಬಹುದು. ಮಶ್ರೂಮ್ ಮಸಾಲಾ ಮಾಡೋ
ಸುಲಭ ವಿಧಾನ ಇಲ್ಲಿದೆ.
ಅಣಬೆ/ಮಶ್ರೂಮ್ – 250 ಗ್ರಾಂ
ಆಲೂಗಡ್ಡೆ – 1
ಈರುಳ್ಳಿ – 1
ಟೊಮೆಟೋ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಎಣ್ಣೆ – ಸ್ವಲ್ಪ
ಉಪ್ಪು – ಸ್ವಲ್ಪ
ಅರಶಿನ ಪುಡಿ – 1 ಚಮಚ
ಖಾರದ ಪುಡಿ – 1 ಚಮಚ
ಗರಂ ಮಸಾಲ – 1/2 ಚಮಚ
ಧನಿಯಾ ಪುಡಿ – 1 ಚಮಚ
ಮೊಸರು – 1 ಚಮಚ
ಕಸೂರಿ ಮೇಥಿ – 1 ಚಮಚ
ನೀರು – 1 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪಲಾವ್ ಎಲೆ – 3
ಏಲಕ್ಕಿ – 3
ದಾಲ್ಚಿನಿ – 3 ತುಂಡು
ಲವಂಗ – 3

ಮಾಡುವ ವಿಧಾನ:

  • ಮೊದಲು ಅಣಬೆ ಮತ್ತು ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಕಟ್ ಮಾಡಿಟ್ಟುಕೊಳ್ಳಬೇಕು.
  • ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಾದ ಬಳಿಕ ತುಂಡರಿಸಿದ ಮಶ್ರೂಮ್ ಹಾಕಿ ಅದರ
    ಮೇಲೆ ಸ್ವಲ್ಪ ಉಪ್ಪು ಹಾಕಿ ಸುಮಾರು 10 ನಿಮಿಷ ಚೆನ್ನಾಗಿ ಹುರಿಯಿರಿ.
  • ಹಾಗೆಯೇ ಇನ್ನೊಂದು ಬಾಣಲೆಯಲ್ಲಿ ಕಟ್ ಮಾಡಿದ ಆಲೂಗಡ್ಡೆಯನ್ನು ಕಂದು ಬಣ್ಣ ಬರುವವರೆಗೆ
    ಹುರಿಯಿರಿ.
  • ನಂತರ ಹುರಿದ ಮಶ್ರೂಮ್ ಮತ್ತು ಆಲೂಗಡ್ಡೆಯನ್ನು ಬಾಣಲೆಯಿಂದ ತೆಗೆದು ಒಂದು ಪ್ಲೇಟ್‍ನಲ್ಲಿ
    ಬೇರೆ ಬೇರೆಯಾಗಿ ಹಾಕಿಡಿ.
  • ನಂತ್ರ ಬಾಣಲೆಗೆ 1 ಚಮಚದಷ್ಟು ಎಣ್ಣೆ ಹಾಕಿ ಮತ್ತೆ ಒಲೆಯ ಮೇಲಿಟ್ಟು, ಎಣ್ಣೆ ಬಿಸಿಯಾದಾಗ 2
    ಪಲಾವ್ ಎಲೆ, 1 ಸಣ್ಣ ದಾಲ್ಚಿನಿ ತುಂಡು, 3 ಏಲಕ್ಕಿ, 3 ಲವಂಗ ಹಾಗೂ ಸಣ್ಣಗೆ ಕಟ್ ಮಾಡಿದ
    ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ಈರುಳ್ಳಿ ಕಂದು ಬಣ್ಣಕ್ಕೆ ಬಂದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ಕಟ್ ಮಾಡಿದ ಟೊಮೆಟೋ ಹಾಕಿ ಮೃದುವಾಗುವವರೆಗೆ ಫ್ರೈ ಮಾಡಿ ಬಳಿಕ ರುಚಿಗೆ ತಕ್ಕಷ್ಟು
    ಉಪ್ಪು, 1 ಚಮಚ ಧನಿಯಾ ಪುಡಿ, ಖಾರದ ಪುಡಿ, ಅರಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ಈ ಮಿಶ್ರಣಕ್ಕೆ 1 ಚಮಚ ಮೊಸರು ಹಾಕಿ ಮತ್ತೆ ಮಿಕ್ಸ್ ಮಾಡಿ.
  • ಬಳಿಕ ಹುರಿದಿಟ್ಟ ಆಲೂಗಡ್ಡೆ ಹಾಗೂ ಮಶ್ರೂಮ್ ಹಾಕಿ ಮತ್ತೆ ಫ್ರೈ ಮಾಡಿ.
  • ಇವೆಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ ಒಂದು ಲೋಟ ನೀರು ಬೆರೆಸಿ 10 ನಿಮಿಷ ಕುದಿಯಲು ಬಿಡಿ.
  • ಹೀಗೆ ಕುದಿಯುತ್ತಿರುವ ವೇಳೆ ಕಸೂರಿ ಮೇಥಿ ಹಾಗೂ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ.
  • ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿದ ಬಳಿಕ ಒಲೆಯಿಂದ
    ಕೆಳಗಿಳಿಸಿ ಸರ್ವ್ ಮಾಡಿ.

ಮಶ್ರೂಮ್‌ ಅಥವಾ ಅಣಬೆ ಗ್ರೇವಿಯ ಟೇಸ್ಟ್‌ ಅಡಗಿರುವುದು ಅದಕ್ಕೆ ಹಾಕುವ
ಮಸಾಲೆಯಲ್ಲಿ. ಇಲ್ಲಿ ನಾವು ಟೇಸ್ಟಿ ಮಶ್ರೂಮ್‌ ಗ್ರೇವಿಯನ್ನು ಸುಲಭವಾಗಿ
ಮಾಡುವ  ರೆಸಿಪಿ  ನೀಡಿದ್ಧೇವೆ ನೋಡಿ:

300 ಗ್ರಾಂ ಅಣಬೆ (ಮಶ್ರೂಮ್)

  • ಈರುಳ್ಳಿ
  • ಒಂದೂವರೆ ಚಮಚ ಬೆಳ್ಳುಳ್ಳಿ ಪೇಸ್ಟ್
    *ಒಂದೂವರೆ ಚಮಚ ಶುಂಠಿ ಪೇಸ್ಟ್
    *1 ಕ್ಯಾಪ್ಸಿಕಂ
  • ಅರ್ಧ ಕಪ್ ನೀರು
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • 2 ಚಮಚ ಎಣ್ಣೆ
  • ಒಂದೂವರೆ ಚಮಚ ಕೊತ್ತಂಬರಿ ಪುಡಿ
  • ಅರ್ಧ ಚಮಚ ಮೆಂತೆ
  • 2 ಲವಂಗದ ಎಲೆ
  • 4 ಟೊಮೆಟೊ
  • ಹಸಿ ಮೆಣಸಿನಕಾಯಿ
  • ರುಚಿಗೆ ತಕ್ಕ ಉಪ್ಪು
  • 1 ಚಮಚ ಮೆಂತೆ
  • 3 ಹಸಿ ಮೆಣಸಿನಕಾಯಿ
  • 1 ಏಲಕ್ಕಿ
  • ಅರ್ಧ ಚಮಚ ಕಾಳು ಮೆಣಸಿನಕಾಯಿ
  • 1 ಚಮಚ ಜೀರಿಗೆ

ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ಅದಕ್ಕೆ ಕೊತ್ತಂಬರಿ ಬೀಜ, ಒಣ ಮೆಣಸು, ಕಾಳು ಮೆಣಸು, ಲವಂಗ,
ಏಲಕ್ಕಿ, ಮೆಂತೆ, ಚಕ್ಕೆ, ಜೀರಿಗೆ, ಮೊಗ್ಗು(mace) ಹಾಕಿ ರೋಸ್ಟ್ ಮಾಡಿ. ನಂತರ ಸ್ವಲ್ಪ ತಣ್ಣಗಾದ
ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪೌಡರ್ ಮಾಡಿ. ರಕಾರಿಯನ್ನು ಕತ್ತರಿಸಿ ಇಡಿ.

  • ಈಗ ದಪ್ಪ ತಳವಿರುವ ಪ್ಯಾನ್; ಬಿಸಿ ಮಾಡಿ, ಅದರಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ.
    ಈಗ ಲವಂಗದ ಎಲೆ ಹಾಕಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಶುಂಠಿ
    ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ. ಈಗ ಟೊಮೆಟೊ, ಹಸಿ ಮೆಣಸಿನಕಾಯಿ,
    ಕ್ಯಾಪ್ಸಿಕಂ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ಸೌಟ್;ನಿಂದ
    ಪೇಸ್ಟ್ ರೀತಿ ಮಾಡಿ, ಈಗ ಮಶ್ರೂಮ್ ಹಾಕಿ 5 ನಿಮಿಷ ಫ್ರೈ ಮಾಡಿ.
    *ಈಗ ಮಸಾಲೆ ಪೌಡರ್ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಒಂದು ಕಪ್ ನೀರು ಹಾಕಿ
    ಕುದಿಸಿ.
    ಉಪ್ಪು ಖಾರ, ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ಮಶ್ರೂಮ್; ಗ್ರೇವಿ ರೆಡಿ.

ಚಪಾತಿ ಅಥವಾ ರೊಟ್ಟಿಗೆ ಈ ಪಾಲಾಕ್-ಮಶ್ರೂಮ್ ಗ್ರೇವಿಯಿದ್ದರೆ ಬಾಯಿ ರುಚಿ ಹೆಚ್ಚುವುದು.
ಸಾಮಾನ್ಯವಾಗಿ ಪಾಲಾಕ್ ಮತ್ತು ಮಶ್ರೂಮ್ ಮಿಕ್ಸ್ ಮಾಡಿ ಅಡುಗೆ ಮಾಡುವುದು ತುಂಬಾ ವಿರಳ.
ಪಾಲಾಕ್ ಪನ್ನೀರ್ ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುತ್ತದೆ.

ಪ್ರತೀಬಾರಿ ಪಾಲಾಕ್ ಪನ್ನೀರ್ ಏಕೆ? ಪಾಲಾಕ್ ಮಶ್ರೂಮ್ ಟ್ರೈ ಮಾಡೋಣ

2 ಕಟ್ಟು ಪಾಲಾಕ್ ಸೊಪ್ಪು ಅಣಬೆ (2 ಪ್ಯಾಕೆಟ್) ಈರುಳ್ಳಿ 1 ಬೆಳ್ಳುಳ್ಳಿ 4-5 ಎಸಳು ಜೀರಿಗೆ ಅರ್ಧ
ಚಮಚ ಹಸಿ ಮೆಣಸಿನಕಾಯಿ 2-3 ಅರ್ಧ ಚಮಚ ಕರಿಮೆಣಸಿನ ಪುಡಿ ಗರಂ ಮಸಾಲ 1 ಚಮಚ ಬೆಣ್ಣೆ 1
ಚಮಚ

ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿ, ನಂತರ ಅದನ್ನು ಬಿಸಿ ನೀರಿನಿಂದ ತೆಗೆದು ತಣ್ಣೀರು
ಇರುವ ಪಾತ್ರೆಗೆ ಹಾಕಿ, ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಒಂದು ಬದಿಯಲ್ಲಿಡಿ. * ಈಗ
ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹಸಿ ಮೆಣಸಿನಕಾಯಿ ಹಾಕಿ, ನಂತರ ಈರುಳ್ಳಿ ಹಾಕಿ
ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಬೆಳ್ಳುಳ್ಳಿ ಹಾಕಿ ಮತ್ತೆ 2 ನಿಮಿಷ ಹುರಿಯಿರಿ, ಕರಿ ಮೆಣಸಿನ
ಪುಡಿ ಸೇರಿಸಿ, ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ, ಈಗ ಅಣಬೆ ಸೇರಿಸಿ, ರುಚಿಗೆ
ತಕ್ಕ ಉಪ್ಪು ಹಾಕಿ, ಗರಂ ಮಸಾಲ ಹಾಕಿ 5 ನಿಮಿಷ ಹುರಿಯಿರಿ. * ನಂತರ ಪಾಲಾಕ್ ಪೇಸ್ಟ್ ಹಾಕಿ ಮತ್ತೆ
3-4 ನಿಮಿಷ ಸೌಟ್ ನಿಂದ ಆಡಿಸಿ ಉಪ್ಪು ಸರಿಯಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ
ಮಶ್ರೂಮ್-ಪಾಲಾಕ್ ಗ್ರೇವಿ ರೆಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ