ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಮಂಡಿ ನೋವು ಕಾಣಿಸಿಕೊಳ್ಳುತ್ತಿದೆ. ಅಂಗಾಗಳಲ್ಲಿ ನೋವು ಕಾಣಿಸುವುದು ಸಾಮಾನ್ಯವಾಗಿಬಿಟ್ಟಿದೆ. ಸ್ನಾಯು ನೋವು ಬಂದರೆ ಇನ್ನು ಕೆಲವು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಮಂಡಿ ನೋವು , ಸ್ನಾಯು ನೋವಿಗೆ ವಯಸ್ಸಾದವರು ಸಮಸ್ಯೆಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಆದರೆ ಇದು ಹಲವು ಜನರು ಮಂಡಿ ನೋವು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ನಾಯು ನೋವು ಸಮಸ್ಯೆ ಅನಿರೀಕ್ಷಿತವಾಗಿ ಕಾಡುವ ಸಮಸ್ಯೆ. ಮಂಡಿ ನೋವಿಗೆ ಕೆಲ ಮಾನಸಿಕ ಕಾರಣಗಳಿರಬಹುದು. ಹಾಗಾಗಿ ಈ ನೋವಿಗೆ ಕಾರಣಗಳು ಏನು..? ಇಲ್ಲಿದೆ ಡಿಟೇಲ್ಸ್

- ಒತ್ತಡ
ಅತಿಯಾಗಿ ಒತ್ತಡ ತೆಗೆದುಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಸ್ನಾಯುಗಳಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಅತಿಯಾದ ಒತ್ತಡ ತೆಗೆದುಕೊಂಡರೆ ಸ್ನಾಯುಗಳ ಊತ, ಹಾಗೂ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಒತ್ತಡ ಎದುರಿಸುತ್ತಿರುವವರು ಬಹು ಬೇಗನೆ ಸ್ನಾಯು ನೋವಿಗೆ ಒಳಗಾಗುತ್ತಾರೆ. ಕೆಲವೊಂದು ಸಲ ದೈಹಿಕ ಕೆಲಸ ಹಾಗೂ ವ್ಯಾಯಾಮ ದಿಂದ ಬರಬಹುದು.
2. ಪೋಷಕಾಂಶಗಳ ಕೊರೆತ ಕಾರಣವಿರಬಹುದು
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಬೇಕಾಗುವಂತಹ ವಿಟಮಿನ್ ಮತ್ತು ಖನಿಜಾಂಶಗಳು ನಾವು ತಿನ್ನುವಂತಹ ಆಹಾರದಿಂದ ದೇಹಕ್ಕೆ ಲಭ್ಯವಾಗುವುದು. ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತದೆ. ಮೆದಳನ್ನು ತೀಕ್ಷ್ಣಗೊಳಿಸುತ್ತದೆ. ಮತ್ತು ದೇಹವನ್ನು ಆರೋಗ್ಯವಾಗಿ ಕಾಪಾಡುತ್ತದೆ. ಪ್ರಮುಖ ಪೋಷಕಾಂಶಗಳ ಕೊರತೆ ಇದ್ದರೆ ಸ್ನಾಯು ಸೆಳೆತವು ಉಂಟಾಗುವ ಸಾಧ್ಯತೆ ಹೆಚ್ಚು. ವಿಟಮಿನ್ ಡಿ ಸ್ನಾಯುಗಳಿಗೆ ಬೇಕಾಗಿರುವ ಪ್ರಮುಖ ಪೋಷಕಾಂಶವಾಗಿದೆ.
3. ನಿದ್ರೆ ನಿರ್ಲಕ್ಷಸದಿರಿ
ನಿದ್ರೆ ಕೂಡಾ ಸ್ನಾಯುಗಳ ನೋವಿಗೆ ಕಾರಣವಿರಬಹುದು. ಮಾನವನ ದೇಹಕ್ಕೆ ನಿದ್ರೆ ಇಲ್ಲದಿದ್ದರೆ ನಾನಾ ಅನಾರೋಗ್ಯ ಸಮಸ್ಯೆ ಕಾಡಬಹುದು. ಪ್ರತಿ ದಿನ ೭-೮ ಗಂಟೆಗಳ ಕಾಲ ನಿದ್ರೆ ಮಾಡಿದರೆ ಉತ್ತಮ. ನಿದ್ರೆಯ ವೇಳೆ ಸ್ನಾಯುಗಳು ಸರಿಯಾಗಿ ಪುನಶ್ಚೇತನಗೊಳ್ಳುತ್ತವೆ. ದೇಹಕ್ಕೆ ಸರಿಯಾದ ನಿದ್ರೆ ಸಿಗದೇ ಇದ್ದಾಹಗಗ ಆಯಾಸ ಹಾಗೂ ನಿಶಸ್ತಿ ಕಾಡಬಹುದು. ಇದು ಆಲೋಚನಾ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.
4. ಅನಾರೋಗ್ಯ ಸಮಸ್ಯೆ
ಕೆಲವೊಂದು ಸಲ ಆರೋಗ್ಯ ಸಮಸ್ಯೆಗಳು ಕಾರಣವಿರಬಹುದು. ರಕ್ತಹೀನತೆ, ಡರ್ಮಟೊಮಿಯೊಸಿಟಿಸ್, ಲೂಪಸ್ ಮತ್ತು ಲೈಮ್ ನಂತಹ ಕಾಯಿಲೆಗಳು ಸ್ನಾಯು ಸೆಳತಕ್ಕೆ ಕಾರಣವಾಗುತ್ತದೆ. ಹಾಗಾಗಿ ದೀರ್ಘಕಾಲದಿಂದ ನಿಮಗೆ ಸ್ನಾಯು ಸಮಸ್ಯೆ ಇದ್ದರೆ ಸೂಕ್ತ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಸ್ನಾಯು ನೋವು ನಿವಾರಿಸುವುದು ಹೇಗೆ?
ಹಲವು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮನೆ ಮದ್ದು ಉಪಯೋಗಿಸಿ ಸುಲಭವಾಗಿ ಸ್ನಾಯು ನೋವು ನಿವಾರಿಸಬಹುದು.
1. ಮಸಾಜ್ ಮಾಡಿ, ಸ್ನಾಯು ನೋವಿಗೆ ಮಸಾಜ್ ಅತ್ಯಂತ ಪರಿಣಾಮಕಾರಿ ಮದ್ದು, ಇದು ರಕ್ತಸಂಚಲನ ನೆರವಾಗುತ್ತದೆ. ವೇಗವಾಗಿ ನೋವು ನಿವಾರಣೆಯಾಗಲು ಸಾಧ್ಯವಾಗುತ್ತದೆ. ನೋವಿರುವ ಜಾಗಕ್ಕೆ ಮಸಾಜ್ ಮಾಡಿ.
2. ಸ್ಮಾಯು ನೋವು ನಿವಾರಣೆಗೆ ಐಸ್ ಪ್ಯಾಕ್ ಕೂಡಾ ಒಂದು. ಐಸ್ ಪ್ಯಾಕ್ ಬಳಸಿಕೊಂಡು ನಿಧಾನವಾಗಿ ನೋವಿರುವ ಜಾಗಕ್ಕೆ ಇಟ್ಟು ಬಿಟ್ಟರೆ ತುಸು ಪರಿಹಾರ ಸಿಗಬಹುದು. ಐಸ್ ಪ್ಯಾಕ್ ನ್ನು ತಪ್ಪಿರುವ ಜಾಗಕ್ಕೆ ನಿಧಾನವಾಗಿ ನೀಡಿದರೆ ಆಗ ರಕ್ತ ಸಂಚಾರವು ಕಡಿಮೆ ಆಗಿ ನೋವು ಈ ಭಾಗದಲ್ಲಿನ ನೋವು ಉರಿಯೂತ ಕಡಿಮೆಯಾಗುತ್ತದೆ. ಐಸ್ ಪ್ಯಾಕ್, ಐಸ್ ಮಸಾಜ್, ಜೆಲ್ ಪ್ಯಾಕ್, ಕೆಮಿಕಲ್ ಕೋಲ್ಡ್ ಪ್ಯಾಕ್ , ವಾಮೊ ಕೂಲಂಟ್ ಸ್ಟ್ರೇ ಗಳು ನೋವಿನಿಂದ ಆರಾಮ ನೀಡುತ್ತವೆ.
3. ಬಿಸಿ ನೀರಿನ ಸ್ನಾನ ಮಾಡುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು. ಸ್ನಾಯುಗಳು ಹಿಡಿದುಕೊಂಡಿದ್ದರೆ ಬಿಸಿ ನೀರಿನ ಸ್ನಾನ ಮಾಡಿ. ಸ್ನಾಯು ನೋವಿನಿಂದ ಆರಾಮ ನೀಡುತ್ತದೆ. ಸ್ನಾಯು ನೋವಿಗೆ ಇದು ಸುಲಭವಾದ ಮನೆ ಮದ್ದಾಗಿದೆ. ಸ್ನಾಯುವಿನ ನೋವನ್ನು ಬೇಗ ನಿವಾರಿಸುತ್ತದೆ.
4. ದೇಹದಲ್ಲಿ ಮೆಗ್ನೆಶಿಯಂ ಅಂಶವು ಕಡಿಮೆ ಇದ್ದರೆ, ಆಗ ಸ್ನಾಯು ಸೆಳೆತ ಮತ್ತು ಸ್ನಾಯುಗಳು ಬಿಗಿಯಾಗುವುದು. ಇದರಿಂದ ಮೆಗ್ನೆಶಿಯಂ ಸಪ್ಲಿಮೆಂಟ್ ಸೇವಿಸಿ. ಮೆಗ್ನೆಶಿಯಂ ಅಧಿಕವಾಗಿ ಇರುವಂತಹ ಆಹಾರ ಸೇವಿಸಬೇಕು. ಎಳ್ಳು, ಬೀಜಗಳು, ಸೂರ್ಯಕಾಂತಿ ಬೀಜಗಳು, ಬಾದಾಮಿ ಮತ್ತು ಗೋಡಂಬಿ, ಅಗಸೆ ಬೀಜಗಳು, ಬಸಳೆ, ಕಪ್ಪು ಅವರೆ ಸೇವಿಸಬೇಕು.
5. ಪುದಿನಾ ಎಣ್ಣೆಯೂ ಮಂಡಿ ಹಾಗೂ ಸ್ನಾ.ಯು ನೋವಿಗೆ ಸೂಕ್ತವಾದದ್ದು. ಸ್ನಾಯು ನೋವಿಗೆ ಪುದಿನಾ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಇದರಲ್ಲಿನ ತಂಪುದಾಯಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದಿನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆ ಮದ್ದಾಗಿದೆ.