ಸಮಯದ ಜತೆಗೆ ಸ್ಪರ್ಧೆಯೂ ಹೆಚ್ಚುತ್ತಿದೆ. ಪ್ರತಿಯೊಬ್ಬರು ಉತ್ತಮವಾಗಿರಲೂ ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಯಶಸ್ಸಿನ ಸ್ಟೆಪ್ ಹತ್ತಲು ನಿರಂತರವಾಗಿ ಚಲಿಸುತ್ತಿರುತ್ತಾನೆ. ಈ ಕಾರಣಕ್ಕಾಗಿಯೇ ಹಲವು ಜನರು ವ್ಯಾಯಾಮ ಹಾಗೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಬರುಬರುತ್ತಾ ಒತ್ತಡ ಕ್ರಮೇಣ ಖಿನ್ನತೆ , ದುಃಖ ಇತ್ಯಾದಿಗಳ ರೂಪ ಪಡೆಯುತ್ತದೆ.
ಅನೇಕ ಜನರು ಒತ್ತಡ ನಿವಾರಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ವ್ಯಾಯಾಮ, ಮನಸ್ಥಿತಿಯನ್ನು ರಿಫ್ರೆಶ್ ಮಾಡಲು, ಚಲನಚಿತ್ರ ನೋಡುವುದು, ವಾಕಿಂಗ್ ಮಾಡುವುದು ಇತ್ಯಾದಿ. ಆದ್ರೆ ಎಲ್ಲಾ ಚಟುವಟಿಕೆಗಳನ್ನು ಕೆಲವು ಕ್ಷಣಗಳು ಮಾತ್ರ ನಿಮ್ಮ ಜತೆಗಿರುತ್ತವೆ. ವ್ಯಾಯಾಮ ಆರೋಗ್ಯ ವನ್ನು ಕಾಪಾಡಲು ಖಂಡಿತವಾಗಿ ನೆರವಾಗುತ್ತದೆ. ಆದ್ರೆ ಕೆಲವು ಜನರಿಗೆ ಇದ್ರಿಂದ ಹೆಚ್ಚಿನ ಫಲಿತಾಂಶ ದೊರೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಗೆ ಸಹಾಯ ಮಾಡುತ್ತೆ ಧ್ಯಾನ. ಧ್ಯಾನದಲ್ಲಿ ಹಲವು ವಿಧಗಳಿವೆ. ಅದರಲ್ಲೂ ಮೈಂಡ್ ಫುಲನೆಸ್ ಧ್ಯಾನ (ಸಾವಧಾನತೆ ಧ್ಯಾನ) ಎಂದರೇನು..? ಇದರಿಂದ ಆಗುವ ಪ್ರಯೋಜನಗಳೇನು? ಮಾಹಿತಿ ಇಲ್ಲಿದೆ.

ಮೈಂಡ್ ಫುಲ್ ನೆಸ್ ಧ್ಯಾನ ಮಾಡುವುದು ಹೇಗೆ..?
ಈ ಧ್ಯಾನ ಮಾಡಲು ಮೊದಲು ಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರಿದಂಲೂ ತೊಂದರೆ ಯಾಗಬಾರದು.
ಮರದ ಬಳಿ ಅಥವಾ ಮನೆಯಲ್ಲಿಯೇ ಕುಳಿತು ಧ್ಯಾನ ಮಾಡಬಹುದು. ನೀವು ಮನೆಯಲ್ಲಿ ಧ್ಯಾನ ಮಾಡುತ್ತಿದ್ದರೆ, ಸ್ವಚ್ಛವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವು ದಿಂಬುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಪ್ರತಿ ದಿನ ಧ್ಯಾನ ಮಾಡಲು ಸ್ವಲ್ಪ ಸಮಯ ಮೀಸಲಿಡಿ.. ಪ್ರಾರಂಭದ ದಿನದಲ್ಲಿ 10 ನಿಮಿಷ ಧ್ಯಾನ ಮಾಡಿದರೆ ಸಾಕು, 1 ಗಂಟೆಕ್ಕಿಂತ ಹೆಚ್ಚು ಸಮಯ ಇದಕ್ಕಾಗಿ ಇಡಬೇಡಿ. ಇದ್ಕಕಾಗಿ ನೀವು ಅಲರ್ಮ್ ಇಡಬಹುದು. ಧ್ಯಾನ ಮಾಡುವಾಗ ನಿಮ್ಮ ವಾಚ್ ನ್ನು ಪದೇ ಪದೇ ನೋಡುವುದು ತಪ್ಪುತ್ತದೆ. ಮೃದು ವಾಗಿರುವ ಅಲರ್ಮ್ ಸೆಟ್ ಮಾಡಿ.
ಕಮಲದ ಭಂಗಿಯಲ್ಲಿ ಕುಳಿತುಕೊಳ್ಳಬೇಕಾ?
ಕಮಲದ ಭಂಗಿಯಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಆದ್ರೆ ಹಾಗೇನೂ ಇಲ್ಲ. ನೀವು ಕುರ್ಚಿ ಮೇಲೆ ಕುಳಿತು ಸಹ ಧ್ಯಾನ ಮಾಡಬಹುದು. ಧ್ಯಾನ ಮಾಡುವಾಗ ಯಾವುದೇ ಆಲೋಚನೆಗಳು ನಿಮ್ಮ ಚಿತ್ತವನ್ನು ಬೇರೆ ಕಡೆಗೆ ವಹಿಸದಂತೆ ಗಮನ ಹರಿಸಿ. ಧ್ಯಾನದ ಸಮಯದಲ್ಲಿ ನಿಧಾನವಾಗಿ ಉಸಿರನ್ನು ತೆಗೆದುಕೊಂಡು, ಉಸಿರು ಬಿಡಿ. ಉಸಿರಾಟ ನಿಮ್ಮ ಶ್ವಾಸಕೋಶಕ್ಕೆ ಉತ್ತಮವಾದದ್ದು ಎಂದು ಹೇಳಲಾಗುತ್ತದೆ.

ಮೈಂಡ್ ಫುಲ್ ನೆಸ್ ಧ್ಯಾನದಿಂದಾಗುವ ಪ್ರಯೋಜನಗಳು!
ಪ್ರತಿಯೊಂದು ಸಮಸ್ಯೆಗೂ ಮುಖ್ಯ ಕಾರಣ ಒತ್ತಡ. ಹಾಗಾಗಿ ಒತ್ತಡವನ್ನು ನಿವಾರಿಸಲು ಈ ಧ್ಯಾನ ನೆರವಾಗುತ್ತದೆ. ಇದ್ರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ,
ಇದನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಆತಂಕ ಹಾಗೂ ದುಃಖವನ್ನು ನಿವಾರಿಸಬಹುದು. ಈ ಧ್ಯಾನ ಮಾಡುವ ಜನರು ಭವಿಷ್ಯದ ಚಿಂತೆ ಹೊರೆತುಪಡಿಸಿ ವರ್ತಮಾನದ ಬಗ್ಗೆ ಯೋಚಿಸಿರುತ್ತಾರೆ.
ಈ ಧ್ಯಾನ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಅಂತಲೇ ಹೇಳಬಹುದು. ಮಹಿಳೆಯರ ದೈಹಿಕ ಹಾಗೂ ಮಾನಸಿಕ ವಿಷಗಯಗಳನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಸಂಧಿವಾತ ರೋಗಿಗಳು ಈ ಧ್ಯಾನ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸ್ನಾಯು ನೋವನ್ನು ನಿವಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಈ ಧ್ಯಾನದ ವೇಳೆ ಆಗುವ ತೊಂದರೆಗಳು..!
ಮೈಂಡ್ ಫುಲ್ ನೆಸ್ ಧ್ಯಾನ ಮಾಡುವಾಗ ಕೆಲವು ತೊಂದರೆಗಳಾಗುತ್ತವೆ. ಧ್ಯಾನದ ಸಮಯದಲ್ಲಿ ಕೆಲವು ಆಲೋಚನೆಗಳು, ನಿಮ್ಮ ಮನಸ್ಸಿನಲ್ಲಿ ವೇಗವಾಗಿ ಚಲಿಸಲು ಪ್ರಾರಂಭಿಸುತ್ತವೆ. ಈ ಪ್ರಕ್ರಿಯೆಯಿಂದ ಭಯಪಡಬೇಡಿ. ಅಥವಾ ನೀವು ತಲ್ಲಣವಾಗಬೇಡಿ. ಆ ಆಲೋಚನೆಗಳನ್ನು ನಗು ಮುಖದಿಂದಲೇ ನೋಡುತ್ತಲೇ ಇರಿ. ಮತ್ತು ನಿಮ್ಮ ದೇಹದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆ ಸೂಕ್ಷ್ಮವಾಗಿ ಗಮನಿಸಿ.
ನೀವು ಧ್ಯಾನ ಮಾಡುವಾಗ ದೇಹದಲ್ಲಿ ಎಲ್ಲಿಯಾದರೂ ತುರಿಕೆ ಅಥವಾ ನೋವು ಆಗಬಹುದು. ಇದು ನೈಸರ್ಕಿಗ ಕ್ರಿಯೆ.
ನೀವು ಒಂದೇ ಸ್ಥಾನದಲ್ಲಿ ದೀರ್ಘಕಾಲ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಹಾಸಿಗೆಯ ಮೇಲೆ ಮಲಗುವ ಮೂಲಕ ಈ ಧ್ಯಾನವನ್ನು ಮಾಡಬಹುದು. ಆಗ ಗಮನವೆಲ್ಲಾ ನಿಮ್ಮ ದೇಹದ ಮೇಲೆ ಇರಬೇಕು.

ಧ್ಯಾನ ಮಾಡುವುದಕ್ಕೂ ಮುನ್ನ ಮುನ್ನಚ್ಚರಿಕೆ ಕ್ರಮಗಳು..!
ಊಟ, ಉಪಹಾರ ಸೇವಿಸಿದ ಮೇಲೆ ಧ್ಯಾನ ಮಾಡಬೇಡಿ.
ಘರ್ಷಣೆ, ಗದ್ದಲ ವಿರುವ ಸ್ಥಳದಲ್ಲಿ ಧ್ಯಾನ ಮಾಡುವುದನ್ನು ತಪ್ಪಿಸಬೇಕು,
ಸಾಧ್ಯಾವಾದರೇ, ಪ್ರಕೃತಿಯ ಹತ್ತಿರದಲ್ಲಿ ಧ್ಯಾನ ಮಾಡುವುದು ಉತ್ತಮ.
ಧ್ಯಾನ ಮಾಡಿದ ಕೂಡಲೇ ಯಾವುದೇ ರೀತಿಯ ಶ್ರಮವಿರುವ ಕೆಲಸ ಮಾಡಬೇಡಿ.