ಹಾಲು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಲು ಕೇವಲ ಸೇವಿಸಲು ಮಾತ್ರವಲ್ಲ , ಸೌಂದರ್ಯಕ್ಕೂ ಹೆಚ್ಚು ಬಳಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಚರ್ಮದ ಸಮಸ್ಯೆಗಲಿಗೆ ಚಿಕಿತ್ಸೆ ನೀಡಲು ಮತ್ತು ಚರ್ಮವನ್ನು ಪೋಷಿಸಲು ಹಾಲು ಹಾಗೂ ಜೇನುತುಪ್ಪವನ್ನು ಬಳಸಾಲಗುತ್ತಿತ್ತು. ಹಾಗಾಗಿ ಮಿಲ್ಕ್ ಬಾತ್ ಮಾಡುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ನೀವು ಸಹ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚುಸಲು ಬಯಸುವಿರಾ.. ಹಾಗಾದ್ರೆ ಹಾಲಿನ ಸ್ನಾನ ಉತ್ತಮ ಫಲಿತಾಂಶ ನೀಡಬಲ್ಲದ್ದು.
ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ತನ್ನ ಸೌಂದರ್ಯದಿಂದಲೇ ಇತಿಹಾಸದಲ್ಲಿ ಹೆಸರುವಾಸಿಯಾಗಿದ್ದಳು. ಪುರಾಣಗಳ ಪ್ರಕಾರ, ಆಕೆಯ ಸೌಂದರ್ಯದ ಹಿಂದಿನ ರಹಸ್ಯವೆಂದರೆ ಹಾಲಿನ ಸ್ನಾನವಂತೆ. ಅವಳು ತನ್ನನ್ನೇ ಹಾಲಿನಲ್ಲಿ ನೆನಸುತ್ತಿದ್ದಳು.ಅಲ್ಲದೇ ಹಾಲಿನ ಸ್ನಾನವನ್ನು ಕ್ಲಿಯೋಪಾತ್ರ ಮಾಡುತ್ತಿದ್ದಳಂತೆ. ಹಾಲಿನ ಸ್ನಾನ ಮಾಡುವುದು ಬ್ರಿಟಿಷ್ ರಾಣಿಯರಲ್ಲಿ ಜನಪ್ರಿಯ ಸಂಸ್ಕೃತಿಯಾಗಿದೆ ಎಂದು ಹೇಳಲಾಗುತ್ತದೆ.

ಹಾಲು ನಿಮ್ಮ ಚರ್ಮ ಹಾಗೂ ಕೂದಲನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ
ಹಾಲಿನ ಸ್ನಾನವು ಒಣ ಹಾಗೂ ಚರ್ಮ ಹಾಗೂ ಅಲರ್ಜಿಯನ್ನು ಗುಣಪಡಿಸುತ್ತದೆ. ಆದ್ದರಿಂದ ನೀವು ಶುಷ್ಕ ಚರ್ಮವನ್ನು ಹೊಂದಿದ್ದರೆ, ಅಥವಾ ದದ್ದುಗಳ ಸಮಸ್ಯೆ ಎದುರಿಸುತ್ತಿದ್ದರೆ, ಹಾಲಿನಿಂದ ತುಂಬಿದ ಟಬ್ ನಲ್ಲಿ ಸ್ನಾನ ಮಾಡುವುದು ಒಳ್ಳೆಯದು.
ನಿಮ್ಮ ಕೂದಲನ್ನು ಮೃದುಗೊಳಿಸುತ್ತದೆ..!
ಚರ್ಮವನ್ನು ಪೋಷಿಸುವುದರ ಜತೆಗೆ, ಹಾಲಿನ ಸ್ನಾನವು ನಿಮ್ಮ ಕೂದಲಿಗೆ ಅದ್ಭುತ ಪ್ರಯೋಜನಗಳನ್ನು ಒದಗಿಸುತ್ತದೆ. ನಿಮ್ಮ ಕೂದಲನ್ನು ಪೋಷಿಸುತ್ತದೆ. ಸಾಮಾನ್ಯ ಶಾಂಪೂ ಬಳಸಿ ಕೂದಲನ್ನು ತೊಳೆಯುವ ಮುನ್ನ ಹಾಲಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.

ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.
ಅಕಾಲಿಕ ವಯಸ್ಸಾಗುವಿಕೆಯನ್ನು ಹಾಲಿನ ಸ್ನಾನ ಮಾಡುವುದರಿಂದ ನಿವಾರಿಸಬಹುದು. ಹಾಲು ಪ್ರೋಟೀನ್ , ಖನಿಜಗಳನ್ನು ಹೊಂದಿರುತ್ತದೆ. ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ ಕಿರಿ ಕಿರಿಯನ್ನು ಕಡಿಮೆ ಮಾಡುತ್ತದೆ.
ಹಾಲು ವಿವಿಧ ಚರ್ಮದ ತೊಂದರೆಗಳು ಹಾಗೂ ಕಿರಿ ಕಿರಿಯನ್ನು ಶಮನಗೊಳಿಸುತ್ತದೆ. ನಯವಾದ ಚರ್ಮವನ್ನು ನೀಡುತ್ತದೆ. ಹಾಲು ಮತ್ತು ಜೇನು ಸ್ನಾನ ನಿಮ್ಮ ಚರ್ಮವನ್ನು ಮೃದುವಾಗಿರಿಸುವುದಲ್ಲದೇ, ಹಾಲಿನಲ್ಲಿರುವ ಪ್ರೋಟೀನ್ ಹಾಗೂ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಡೆಡ್ ಕೋಶಗಳನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗುತ್ತದೆ. ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಚರ್ಮದ ಸೋಂಕು ಹಾಗೂ ಎಸ್ಜಿಮಾದಂತಹ ಕಿರಿ ಕಿರಿಯಿಂದ ಬಳಲುತ್ತಿರುವ ಮಕ್ಕಳು ಹಾಗೂ ವಯಸ್ಕರು ಹಾಲು ಹಾಗೂ ಜೇನು ಮಿಶ್ರಿತ ಸ್ನಾನದಿಂದ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ಇದು ಚರ್ಮವನ್ನು ಪೋಷಿಸುವುದಲ್ಲದೇ, ಕಿರಿಕಿರಿ ಯಿಂದ ಚರ್ಮವನ್ನು ಶಮನಗೊಳಿಸುತ್ತದೆ. ಜೇನುತುಪ್ಪ ಆಂಟಿ ಬ್ಯಾಕ್ಟೇರಿಯಲ್ ಹಾಗೂ ಆಂಟಿ ಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಕಿರಿ ಕಿರಿಯನ್ನು ನಿವಾರಿಸುತ್ತದೆ.
ಹಾಲು ವಿವಿಧ ಚರ್ಮದ ತೊಂದರೆಗಳು ಹಾಗೂ ಕಿರಿ ಕಿರಿಯನ್ನು ಶಮನಗೊಳಿಸುತ್ತದೆ. ನಯವಾದ ಚರ್ಮವನ್ನು ನೀಡುತ್ತದೆ. ಹಾಲು ಮತ್ತು ಜೇನು ಸ್ನಾನ ನಿಮ್ಮ ಚರ್ಮವನ್ನು ಮೃದುವಾಗಿರಿಸುವುದಲ್ಲದೇ, ಹಾಲಿನಲ್ಲಿರುವ ಪ್ರೋಟೀನ್ ಹಾಗೂ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಡೆಡ್ ಕೋಶಗಳನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗುತ್ತದೆ. ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
ವಿಶ್ರಾಂತಿ ದೊರೆಯುತ್ತದೆ…!
ಜೇನು ಹಾಗೂ ಹಾಲಿನ ಸ್ನಾನ ಮಾಡುವುದರಿಂದ ವಿಶ್ರಾಂತಿ ಹಾಗೂ ಮನಸ್ಸು ಶಾಂತಗೊಳ್ಳಲು ನೆರವಾಗು್ತದೆ. ಜೇನುತುಪ್ಪ ಚರ್ಮದ ಕೋಶಗಳನ್ನು ಒಳಗಿನಿಂದ ಶುದ್ಧಗೊಳಿಸುತ್ತದೆ. ಹಾಲಿನ ಸ್ನಾನ ಮಾಡುವಾಗ ಜೇನುತುಪ್ಪ ಜತೆಗೆ ಲ್ಯಾವೆಂಡರ್ ಸಾರಭೂತ ತೈಲದಂತಹ ಇನ್ನೂ ಅನೇಕ ಪದಾರ್ಥಗಳನ್ನು ಸೇರಿಸಿ ಸ್ನಾನ ಮಾಡಬಹುದು.

ಹಾಲು ಹಾಗೂ ಜೇನುತುಪ್ಪದ ಸ್ನಾನ ಮಾಡುವುದು ಹೇಗೆ?
ಪದಾರ್ಥಗಳು
1 ಕಪ್ ಬೆಚ್ಚಗಿನ ನೀರು
1 ಕಪ್ ಜೇನುತುಪ್ಪ
2 ಕಪ್ ಹಾಲು
1ಯ2 ಸಮುದ್ರದ ಉಪ್ಪು
3 ಟೀ ಸ್ಪೂನ್ ಅಡಿಗೆ ಸೋಡಾ
ವಿಧಾನ..!
ನೀರನ್ನು ಕುದಿಸಿ ಜೇನುತುಪ್ಪ ಸೇರಿಸಿ. ಜೇನುತುಪ್ಪ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ. ಮತ್ತು ಬೆರೆಸಿಕೊಳ್ಳಿ. ಇದಕ್ಕೆ ಅಡಿಗೆ ಸೋಡಾ, ಉಪ್ಪು ಸೇರಿಸಿ. ಸ್ನಾನ ಮಾಡುವ ನೀರಿಗೆ ಹಾಲು , ಜೇನುತುಪ್ಪ. ಇವೆಲ್ಲವುಗಳ ಮಿಶ್ರಣ ಸೇರಿಸಿ.