ಹಣ ಸೇವಿಂಗ್ ಮಾಡುವುದದ್ದರೆ ಒಂದು ಕಲೆ ಇದ್ದಂತೆ. ಹಣ ಕೈಯಲ್ಲಿ ನಿಲ್ಲುವುದಿಲ್ಲ, ಬೇಗನೇ ಖರ್ಚಾಗುತ್ತದೆ ಎಂದು ಇವತ್ತಿನ ದಿಗಳಲ್ಲಿ ಹಲವರು ದೂರುತ್ತಾರೆ. ಉಳಿತಾಯ ಎಂಬುದು ಅರ್ಥಿಕ ಸ್ವಾತಂತ್ರ್ಯದ ಮೊದಲ ಹೆಜ್ಜೆಯಾಗಿದೆ. ಹೆಚ್ಚು ಹೆಚ್ಚು ಹಣವನ್ನು ಗಳಿಸಿದ್ರು, ನೀವು ಹಣ ಉಳಿಸುವುದನ್ನು ಕಲಿಯುವರೆಗೂ ನಿಮ್ಮ ಸಮಸ್ಯೆಗಳು ನಿಲ್ಲುವುದಿಲ್ಲ.
ನೀವು ಕ್ರಮೇಣ ಹಣವನ್ನು ಉಳಿಸಲು ಅಥವಾ ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದಾಗ, ಕೆಲವು ವರ್ಷಗಳ ನಂತರ, ಉಳಿಸಿದ ಪ್ರತಿ ಪೈಸೆಯೂ, ವಾಪಸ್ ಬರುತ್ತದೆ. ಹೆಚ್ಚು ಹಣ ಸಂಪಾದಿಸಲು ನೆರವಾಗುತ್ತದೆ. ಹಲವು ಮಂದಿ ಹೆಚ್ಚು ಶ್ರೀಮಂತರಾಗಲು ಇದೇ ರಹಸ್ಯವಾಗಿದೆ.

ಖರ್ಚಿನ ಪ್ಟಟಿಯನ್ನು ಮಾಡಿ!
ಚಿಕ್ಕ ಖರ್ಚಿನಿಂದ ಹಿಡಿದೂ ದೊಡ್ಡದವರೆಗೆ ಖರ್ಚು ಮಾಡಬಹುದಾದ ಪಟ್ಟಿ ಮಾಡಿ. ಇದ್ರಿಂದ ನೀವು ಗಳಿಸುವ ಹಣ ಹಾಗೂ ಖರ್ಚಿನ ಮಧ್ಯೆ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಕಾರು ಖರಿದಿಸಬೇಕು, ಮನೆ ನಿರ್ಮಿಸಬೇಕು. ಮಗುವಿಗೆ ಶಿಕ್ಷಣ ಕೊಡಬೇಕು, ಮಕ್ಕಳ ಮದುವೆಗಾಗಿ ಹಣವನ್ನು ಸಂಗ್ರಹಿಸಬೇಕಾಗಿದ್ದರೆ, ಅದೆಲ್ಲವನ್ನು ಬರೆಯಿರಿ. ಗುರಿ ನಮ್ಮೆದುರಿಗಿದ್ದರೆ ಹಣ ಉಳಿಸುವುದು ಸುಲಭವಾಗುತ್ತದೆ.
ಕ್ರಿಡಿಟ್ ಕಾರ್ಡ್ ಖರ್ಚು ನಿಯಂತ್ರಣದಲ್ಲಿರಲಿ!
ಕೆಲವು ಜನರು ಯಾವುದೇ ಖರ್ಚಿರಲಿ ಕ್ರೆಡಿಟ್ ಕಾರ್ಡ್ ಮೇಲೆ ಅವಲಂಬಿತರಾಗಿರುತ್ತಾರೆ, ಇದು ಒಳ್ಳೆಯದಲ್ಲ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಈಗಾಗ್ಲೇ ಹೊಂದಿರುವ ಮೊತ್ತಕ್ಕಿಂತಲೂ, ನೀವು ನಿರೀಕ್ಷಿಸಿದಷ್ಟು ಆದಾಯವನ್ನು ಕ್ರಿಡಿಟ್ ಕಾರ್ಡ್ ನಿಂದಲೇ ಖರ್ಚಾಗುತ್ತದೆ. 1 ತಿಂಗಳಿಗೆ ನಿಮ್ಗೆ ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ.

ಸಾಲ ಮಾಡಬೇಡಿ..!
ನಿಮ್ಮ ಹೆಸರಿನ ಮೇಲೆ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳಬೇಡಿ. ನೀವು ಸಾಲ ತೆಗೆದುಕೊಂಡಿದ್ದರೂ ಸಹ, ಅದನ್ನು ಆದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಿ. ನೀವು ಹೆಚ್ಚು ಹಣವನ್ನು ಹೊಂದಿದ್ದರೆ, ಯಾವುದೇ ದೊಡ್ಡ ವಸ್ತುವನ್ನು ಖರೀದಿಸುವ ಬದಲು. ಮೊದಲು ನೀವು ತೆಗೆದುಕೊಂಡ ಸಾಲವನ್ನು ಹಿಂತುರುಗಿಸಿ.
ಎಮರ್ಜೆನ್ಸಿ ಫಂಡ್
ಹಣ ಉಳಿತಾಯದ ಜತೆಗೆ ಆರ್ಥಿಕ ಭದ್ರತೆಯ ಬಗ್ಗೆ ಕಾಳಜಿ ಮಹಿಸುವುದು ಕೂಡಾ ಮುಖ್ಯವಾಗುತ್ತದೆ. ಮೊದಲು ನಿಮಗಾಗಿ ಎಮರ್ಜೆನ್ಸಿ ಫಂಡನ್ನು ಮಾಡಿಟ್ಟುಕೊಳ್ಳಬೇಕು. ಯಾವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ, ಹಣದ ಅವಶ್ಯಕತೆ ಇದ್ದಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಎಮೆರ್ಜೆನ್ಸಿ ಹಣ ಸೇವಿಂಗ್ ಮಾಡುವುದರಿಂದ ಬೇರೆಯವರಿಂದ ಸಾಲ ಪಡೆಯುವುದು ತಪ್ಪುತ್ತದೆ.
ಇಂಡೆಕ್ಷನ್ ಸ್ಟೌವ್ ಬಳಸಿ
ಎಲ್ ಪಿ ಜಿ ಗ್ಯಾಸ್ ತುಂಬಾ ಅಗ್ಗವಾದುದ್ದಲ್ಲ. ಹಾಗಾಗಿ ಇಂಡಕ್ಷನ್ ಸ್ಟೌವ್ ಬಳಸಿದರೆ ಅಡುಗೆ ಅನಿಲ ಉಳಿತಾಯ ಮಾಡಬಹುದು. ಅಡುಗೆ ಮಾಡುವಾಗ , ಅನೇಕ ಭಕ್ಷ್ಯಗಳನ್ನು ತಯಾರಿಸುವಾಗ ಅಡುಗೆ ಅನಿಲದ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಇದರ ಬದಲು, ಇಂಡೆಕ್ಷನ್ ಸ್ಟೌವ್ ಬಳಕೆ ಮಾಡಬಹುದು. ಎಲ್ ಪಿಜಿ ಗ್ಯಾಸ್ ದುಬಾರಿಯಿಂದ ಹಣವನ್ನು ಉಳಿಸಬಹುದು.

ಮೊಬೈಲ್ ಹಾಗೂ ಇಂಟರ್ನೆಟ್!
ಮೊಬೈಲ್ ಹಾಗೂ ಇಂಟರ್ನೆಟ್ ಇಂದು ಎಲ್ಲರಿಗೂ ಅವಶ್ಯಕವಾಗಿದೆ. ಅದ್ರೆ ಜನರು ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ನೀವು ಪೋಸ್ಟ್ ಪ್ಯಾಡ್ ಪ್ಲ್ಯಾನ್ ಬಳಕೆ ಮಾಡುತ್ತಿದ್ದರೆ, ಪ್ರಿಪೇಡ್ ತೆಗೆದುಕೊಳ್ಳುವುದು ಉಚಿತ. ಇಂಚರ್ನೆಟ್ ಕನೆಕ್ಷನ್ ಇದ್ದಾಗ ವಾಟ್ಸ ಪ್ ನಂತಹ ಅಪ್ಲಿಕೇಶನ್ ಬಳಕೆ ಮಾಡಬೇಕು.ಇದು ಸಮತೋಲನವನ್ನು ಉಳಿಸಲು ನೆರವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಉಚಿತ ವೈಫೈ ಎಲ್ಲಾ ಕಡೆ ಲಭ್ಯವಿರುತ್ತದೆ. ಇದನ್ನು ಬಳಸಬೇಕು. ನಮ್ಮ ತಿಂಗಳ ಅಗತ್ಯಕ್ಕೆ ಅನುಗುಣವಾಗಿ ಇಂಟರ್ನೆಟ್ ರಿಜಾರ್ಚ್ ಮಾಡಬೇಕು.
ವಿದ್ಯುತ್ ಉಳಿಸಿ, ಹಣ ಉಳಿಸಿ..!
ವಿದ್ಯುತ್ ಬಿಲ್ ನಲ್ಲಿಯೂ ಕಡಿಮೆ ಮಾಡಿ ಹಣ ಉಳಿತಾಯ ಮಾಡಬಹುದು. ಕೆಲವೊಮ್ಮೆ ಸೋಮಾರಿತನದಿಂದ ನಮ್ಮಲ್ಲಿ ಹಲವರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ತಪ್ಪು. ಟ್ಯೂಬ್ ಲೈಟ್ ಹಾಗೂ ಫ್ಯಾನ್ ಅವಶ್ಯಕತೆ ಇಲ್ಲದಿದ್ದರೆ ಬಳಸಲು ಹೋಗಬೇಡಿ. ಮನೆಯಿಂದ ಹೊರಗಡೆ ಹೋಗುವಾಗ ರೂಂ ನಲ್ಲಿರುವ ಎಲ್ಲಾ ಲೈಟ್ಸ್ ಗಳನ್ನು ಆಫ್ ಮಾಡಿ ಹೋಗಬೇಕು.ನಿಮ್ಮ ಮೊಬೈಲ್ ಚಾರ್ಟ್ ಆಗಿದ್ದರೆ, ಚಾರ್ಜರ್ ತೆಗೆಯಿರಿ.
ನಿಮ್ಮ ಬಳಿ ಹಣವಿಲ್ಲದಿದ್ದರೆ, ಯಾವುದೇ ಕೆಲಸ, ಅಥವಾ ಪ್ಲ್ಯಾನ್ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಭವಿಷ್ಯಕ್ಕಾಗಿ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಸಹ ಎಲ್ಲಾ ಹಣವನ್ನು ಖರ್ಚು ಮಾಡುವ ಅಭ್ಯಾಸ ಹೊಂದಿದ್ದರೆ, ಇಲ್ಲಿ ನಾವು ನಿಮ್ಗೆ ಕೆಲವು ವಿಧಾನಗಳನ್ನು ತಿಳಿಸುತ್ತಿದ್ದೇವೆ. ಅದನ್ನು ನೀವು ಅಳವಡಿಸಿಕೊಳ್ಳುವ ಮೂಲಕ ಹಣವನ್ನು ಉಳಿತಾಯ ಮಾಡಬಹುದು.