ಕೇವಲ ಮಹಿಳೆಯರು ಅಷ್ಟೇ ಅಲ್ಲ, ಪುರುಷರು ಸಹ ಮಗು ಜನನ ನಂತರ (ಪಿಪಿಡಿ) ಖಿನ್ನತೆಯಿಂದ ಬಳಲುತ್ತಾರೆ. ಮೊದಲ ಬಾರಿಗೆ ತಂದೆಯಾಗಿರುವ ಸಾಕಷ್ಟು ಜನ ಪುರುಷರು ಜವಾಬ್ದಾರಿ ನಿಭಾಯಿಸುವುದು, ಮಗುವನ್ನು ನೋಡಿಕೊಳ್ಳುವುದು ಸ್ವಲ್ಪ ಕಷ್ವವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಾಯಿ ಮಾತ್ರವಲ್ಲದೇ, ತಂದೆ ಕೂಡಾ ಖಿನ್ನತೆಗೆ ಬಲಿಪಶುವಾಗಬಹುದು. ಏನಿದು PPD ಖಿನ್ನತೆ? ಇಲ್ಲಿದೆ ಡಿಟೇಲ್ಸ್.

ಪುರುಷರಲ್ಲಿ ‘ಪ್ರಸವ’ ನಂತರ ಖಿನ್ನತೆಗೆ ಕಾರಣಗಳು ಯಾವುವು?
ಪ್ರಸವಾನಂತರ ಪುರುಷರಲ್ಲೂ PPD (postpartum depression) ಖಿನ್ನತೆಯ ಲಕ್ಷಣಗಳು ಕಂಡು ಬರುತ್ತವೆ. ಖಿನ್ನತೆ ಪುರುಷರಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ.. ಅರ್ಧದಷ್ಟು ಮಂದಿ ಈ ಸಮಸ್ಯೆಗೆ ತುತ್ತಾಗುತ್ತಾರೆ. ಇದನ್ನು ಗುಣಪಡಿಸಿಕೊಳ್ಳಲು ಮುಂದಾಗದಿದ್ದರೆ, ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದೇ ಹೋದರೆ, ಮಕ್ಕಳ ಮೇಲೆ ಹಿಂಸಾತ್ಮಕ ವರ್ತನೆ ತೋರಬಹುದು. ಮಕ್ಕಳನ್ನು ಬಯಸದ ದಂಪತಿ ಅನಿರೀಕ್ಷಿತವಾಗಿ ಪಾಲಕರಾಗುವ ಪರಿಸ್ಥಿತಿ ಎದುರಾದಾಗ ಒತ್ತಡವನ್ನು ಸಹಿಸಿಕೊಳ್ಳುವುದಿಲ್ಲ.
ಹೆಚ್ಚು ಒತ್ತಡಕ್ಕೆ ಒಳಗಾಗುವ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಇದು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಪೇರೆಂಟಿಗ್ ಒಂದು ಬಹುದೊಡ್ಡ ಜವಾಬ್ದಾರಿ.. ಪುರುಷರು ಯಾವಾಗಲೂ ಸವಾಲಿಗೆ ಸಿದ್ಧರಿರುವುದಿಲ್ಲ. ಹೀಗಾಗಿ ಹೆಚ್ಚಿನ ಕುಟುಂಬಗಳಲ್ಲಿ ನವ ಜಾತ ಶಿಶುವನ್ನು ಸಂಭಾವಳಿಸಲು ಜನರು ಇರುವುದಿಲ್ಲ. ಇದು ಹೆತ್ತವರ ಮೇಲೆ ಮತ್ತಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಗು ಮನೆಗೆ ಬಂದಾಗ, ತಮ್ಮ ಹೆಂಡತಿಯನ್ನು ಸಂಪೋರ್ಟ್ ಮಾಡಲು ಆಗುವುದಿಲ್ಲ. ಇದನ್ನು ನಿಭಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ ಖಿನ್ನತೆ ತೀವ್ರವಾಗಿದ್ದರೆ, ಕುಟುಂಬದ ಬ್ಯಾಕ್ ಗ್ರ್ಯಾಂಡ್ ಪರಿಶೀಲಿಸಬೇಕು.
ಖಿನ್ನತೆಗೆ ಕಾರಣಗಳಿವು!
ಕೆಲಸದ ಒತ್ತಡ..
ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಅಸಮರ್ಥತೆ
ಅತಿಯಾಗಿ ಓಡುವುದು
ಒತ್ತಡ ಮತ್ತು ವಿಶ್ರಾಂತಿ ಕೊರತೆ

PPD ಖಿನ್ನತೆಯ ಲಕ್ಷಣಗಳು!
ಹೆಚ್ಚಾಗಿ ಪುರುಷರಲ್ಲಿ ಪಿಪಿಡಿ ಖಿನ್ನತೆಯ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದಿಲ್ಲ. ಕೋಪ, ಹತಾಶೆ , ಕಿರಿಕಿರಿ ಮನೋಭಾವ ಅಂಥವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಹೆಚ್ಚಾಗಿ ವ್ಯಕ್ತಪಡಿಸುತ್ತಾರೆ. ಅದೇ ರೀತಿಯಲ್ಲಿ ಅವರು ಗಿರಣಿ ಜೀವನವನ್ನು ನಡೆಸುವಾಗ ಮತ್ತು ಮನೆ ಮತ್ತು ಕಚೇರಿಯನ್ನು ಬ್ಯಾಲೆನ್ಸ್ ಮಾಡಲು ವಿಫಲರಾಗುತ್ತಾರೆ. ತಮಗಾಗಿ ಹೆಚ್ಚು ಸಮಯವನ್ನು ಅವಕಾಶವನ್ನು ಪಡೆಯುವುದಿಲ್ಲ. ಇದ್ರಿಂದ ತೊಂದರೆಯಾಗುತ್ತದೆ. ಇತರ ರೋಗ ಲಕ್ಷಣಗಳು ತಿಳಿದುಕೊಳ್ಳುವುದಾದರೆ.
ಕೋಪ ಮತ್ತು ಕಿರಿಕಿರಿ
ಅತಿಯಾಗಿ ಖಿನ್ನತೆ
ಜನರಿಂದ ದೂರವಿರುವುದು.. ಏಕಾಂಗಿಯಾಗಿ ಸಮಯ ಕಳೆಯುವುದು.
ವೈಯಕ್ತಿಕ ಸಂಬಂಧಗಳ ಮೇಲೆ ಪರಿಣಾಮ
ಕೆಲಸದಲ್ಲಿ ಆಸಕ್ತಿಯ ಕೊರತೆ
ನಿದ್ರಾಹೀನತೆ ಇತ್ಯಾದಿ.

ಚಿಕಿತ್ಸೆಯೇನು.. ?
ಪುರುಷರಲ್ಲಿ ಪ್ರಸವಾನಂತರ ಖಿನ್ನತೆಗೆ ಪೋಷಕರು ಒತ್ತಡವನ್ನು ನಿಭಾಯಿಸಲು ಅಸಮರ್ಥತೆಯಿಂದ ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆ ಮಾರ್ಗವೇನು ಇಲ್ಲಿದೆ ಡಿಟೇಲ್ಸ್. ಇದಕ್ಕಾಗಿ ಕುಟುಂಬದ ಸದಸ್ಯರು ಅಂತಹ ಪುರುಷರನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಮಗುವಿನ ತಾಯಿ ತಂದೆಗೆ ಸಾಕಷ್ಟು ಬೆಂಬಲ ನೀಡಬೇಕು. ವಾಸ್ತವವಾಗಿ ನವಜಾತ ಶಿಶುವಿನ ಆರೈಕೆ ಮತ್ತು ಲಾಲನೆ -ಪಾಲನೆ ಬಗ್ಗೆ ಸಮಾಲೋಚನೆ ಯನ್ನು ಪ್ರಾರಂಭಿಸಬೇಕು. ಅಲ್ಲದೇ ಮಗುವಿನ ಪಾಲನೆಗೆ ನಿಮ್ಮ ಪೋಷಕರು ಹಾಗೂ ಒಡಹುಟ್ಟಿದವರ ಸಹಾಯ ಪಡೆದುಕೊಳ್ಳಬಹುದು. ನಿಮ್ಮ ಮಗುವನ್ನು ಯಾರಾದರೂ ನೋಡಿಕೊಳ್ಳುವುದಕ್ಕೆ ನೇಮಿಸಿ. ಇಲ್ಲದಿದ್ದರೆ, ಮನೆ ಕೆಲಸಗಾರರನ್ನು, ಶೂಶ್ರಕಿಯರ ಸಹಾಯ ಪಡೆಯಿರಿ. ಒತ್ತಡ ಕಡಿಮೆಯಾಗುತ್ತದೆ, ಬೇರೆ ಕೆಲಸ ಮಾಡಲು ಸಮಯ ಸೀಗುತ್ತದೆ.
ಮೊದಲಿಗೆ ನಿಮಗಾಗಿ ಸಮಯ ಮಿಸಲಿಡಿ. ಉತ್ತಮ ನಿದ್ರೆ ಮಾಡಿ.
ಮಕ್ಕಳ ಆರೈಕೆಯಲ್ಲಿ ಕುಟುಂಬ ಸದಸ್ಯರ ಸಹಾಯ ಪಡೆಯಿರಿ.
ಮಗುವಿನ ಜವಾಬ್ದಾರಿಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಆಸಕ್ತಿದಾಯಕ ವಿಷಯಗಳ ಕಡೆ ಗಮನ ಕೊಡಿ.
ಮಗು ನಿದ್ರೆ ಮಾಡುತ್ತಿರುವಾಗ, ನಿಮಗಾಗಿ ಸಮಯ ದೊರೆಯುತ್ತದೆ.
ನಿಮಗೆ ಹೆಚ್ಚಿನ ಸಮಸ್ಯೆ ಇದ್ದರೆ, ಕೌನ್ಸಲರ್ ಭೇಟಿಯಾಗಿ ಸಹಾಯ ಪಡೆಯಿರಿ.
ಖಿನ್ನತೆ ನಿವಾರಣೆಗೆ ಔಷಧಿಗಳ ಬಳಕೆಗೆ ಸೂಚಿಸಲಾಗುತ್ತದೆ. ಪಾಲಕರು ವೃತ್ತಿಪರ ಮನಃಶಾಶ್ತ್ರಜ್ಞರನ್ನು ಸಂಪರ್ಕಿಸಬೇಕು. ಖಿನ್ನತೆಯ ಶಮನಕಾರಿ ಔಷಧಿ, ಚಿಕಿತ್ಸೆಯು ಕೆಲವು ಸಲ ಅಡ್ಡ ಪರಿಣಾಮ ಬೀರುತ್ತದೆ. ಕುಟುಂಬದ ಸದಸ್ಯರು ಖಿನ್ನತೆಗೆ ಒಳಗಾದ ಪುರುಷ ಅಥವಾ ಮಹಿಳೆಯರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಇದೇ ಸಮಸ್ಯೆಗೆ ಪರಿಹಾರ ಎಂದೇ ಹೇಳಬಹುದು.